Extra marital affair : ವಿವಾಹೇತರ ಸಂಬಂಧಗಳ ಸಂಖ್ಯೆ ಹೆಚ್ಚಾಗ್ತಿದೆ. ಒಂದು ಪ್ರಕರಣದಲ್ಲಿ ಗಂಡನೇ ಪತ್ನಿಗೆ ಇನ್ನೊಂದು ಮದುವೆ ಮಾಡೋಕೆ ಮುಂದಾದ್ರೆ ಇನ್ನೊಂದು ಘಟನೆಯಲ್ಲಿ 9 ಮಕ್ಕಳ ತಾಯಿ, ಬಾಯ್ ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. 

ತಾಳಿ ಕಟ್ಲಾ ಅಂತ ಹುಡುಗಿ ಪರ್ಮಿಷನ್ ತೆಗೆದುಕೊಂಡು ಮದುವೆ ಆಗೋ ಸ್ಥಿತಿ ಒಂದ್ಕಡೆ ಆದ್ರೆ, ಮದುವೆ ಆಗಿ ಮಕ್ಕಳಾದ್ರೂ ಅನೇಕ ಪುರುಷರಿಗೆ ಪತ್ನಿ ಓಡಿ ಹೋದ್ರೆ ಎನ್ನುವ ಭಯ ಕಾಡ್ತಿದೆ. ಯಾವಾಗ, ಯಾರ ಜೊತೆ ಪತ್ನಿ ಓಡಿ ಹೋಗ್ತಾಳೋ ಎನ್ನುವ ಆತಂಕದಲ್ಲಿ ಅನೇಕ ಪುರುಷರಿದ್ದಾರೆ. ಎಲ್ಲ ಮಹಿಳೆಯರನ್ನು ಇಲ್ಲಿ ದೂಷಿಸ್ತಿಲ್ಲ. ಇಂಥ ಅನೇಕ ಘಟನೆ ಬೆಳಕಿಗೆ ಬರ್ತಿರೋದ್ರಿಂದ ಪುರುಷರಿಗೆ ಆತಂಕ ಕಾಡ್ತಿದೆ. ಉತ್ತರ ಪ್ರದೇಶದ ಪತಿಯೊಬ್ಬ, ಪತ್ನಿ ಕಾಟಕ್ಕೆ ಬೇಸತ್ತಿದ್ದಾನೆ. ಸುಧಾರಿಸೋಕೆ ನೋಡಿ ಸೋತ ಗಂಡ, ಪತ್ನಿಯನ್ನು ಆಕೆ ಬಾಯ್ ಫ್ರೆಂಡ್ ಜೊತೆ ಮದುವೆ (Marriage) ಮಾಡ್ಸಿ, ನಮ್ಮ ಪ್ರಾಣ ಉಳಿಸಿ ಅಂತಿದ್ದಾನೆ.

ಬಾಯ್ ಫ್ರೆಂಡ್ (boyfriend) ಜೊತೆ ಹೆಂಡ್ತಿ ಒಳಗೆ, ಮಕ್ಕಳು ಹೊರಗೆ : ಘಟನೆ ಉತ್ತರ ಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಸಂತೋಷ್ ಎಂಬಾತ ತನ್ನ ಪತ್ನಿ ಪೂಜಾ ಗುಪ್ತಾ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಸಂತೋಷ್ ಕೆಲ್ಸಕ್ಕೆ ಹೋಗ್ತಿದ್ದಂತೆ ಪಕ್ಕದ ಮನೆ ಹುಡುಗ ರಾಜೇಶ್ ವರ್ಮಾ ಜೊತೆ ಪತ್ನಿ ಪ್ರೇಮದಾಟ ಶುರುವಾಗುತ್ತಂತೆ. ಮನೆಯಲ್ಲಿರೋ ಮಕ್ಕಳನ್ನು ಹೊರಗೆ ಕಳಿಸಿ, ಬಾಯ್ ಫ್ರೆಂಡನ್ನು ಮನೆಯೊಳಗೆ ಕರೀತಾಳಂತೆ ಪತ್ನಿ. ಇದು ನನಗೆ ನನ್ನ ಮಕ್ಕಳಿಂದ್ಲೇ ಗೊತ್ತಾಗಿದ್ದು ಅಂತಾನೆ ಸಂತೋಷ. ಮಕ್ಕಳ ಹೇಳಿಕೆ ಪರೀಕ್ಷೆ ಮಾಡೋಕೆ ಸಂತೋಷ ಮನೆಗೆ ಬಂದಿದ್ದಾನೆ. ಪತ್ನಿ ಪೂಜಾ, ಬಾಯ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.

ಗಂಡನ ಮೇಲೆ ಆರೋಪ : ಪತ್ನಿ ಹಾಗೂ ರಾಜೇಶ್ ವರ್ಮಾ ಒಟ್ಟಿಗಿರೋದನ್ನು ನೋಡಿ ಸಂತೋಷ್ ಕೂಗಾಡಿದ್ರೆ ಅವನ ವಿರುದ್ಧವೇ ಪೂಜಾ ತಿರುಗಿ ಬಿದ್ದಿದ್ದಾಳೆ. ಬೀದಿಗೆ ಬಂದ ಗಂಡನ ಮೇಲೆ ಕೂಗಾಡಿದ್ದಾಳೆ. ಇದನ್ನು ಅಲ್ಲಿದ್ದವರ್ಯಾರೋ ವಿಡಿಯೋ ಮಾಡಿ, ಸೋಶಿಯಲ್ ಮೀಡಿಯಾಕ್ಕೆ ಪೋಸ್ಟ್ ಮಾಡಿದ್ದಾರೆ.

ಸರ್ಕಾರಿ ನೌಕರನಾದರೂ ಪ್ರೀತಿಸಿದ ಹುಡುಗಿಯೊಂದಿಗೆ ಓಡಿಬಂದು ಮದುವೆಯಾದ ಯುವಕ!

ಜೀವ ಬೆದರಿಕೆ : ಇಷ್ಟೇ ಆಗಿದ್ರೆ ಓಕೆ. ತನ್ನ ಬಂಡವಾಳ ಗೊತ್ತಾಗ್ತಿದ್ದಂತೆ ಸಂತೋಷ್ ಹಾಗೂ ಮಕ್ಕಳ ಕಥೆ ಮುಗಿಸೋದಾಗಿ ಪೂಜಾ ಜೀವ ಬೆದರಿಕೆ ಹಾಕಿದ್ದಾಳಂತೆ. ಸಮಸ್ಯೆ ಪರಿಹರಿಸೋಕೆ ಪ್ರಯತ್ನಿಸಿದ್ರೆ ನನಗೆ ಜೀವ ಬೆದರಿಕೆ ಹಾಕಿದ್ದಾಳೆ. ಮನೆಯಲ್ಲಿ ಇರೋಕೆ ಭಯ. ಮಕ್ಕಳ ಜೀವಕ್ಕೂ ಅಪಾಯ ಇದೆ ಅಂತ ಸಂತೋಷ್ ಪೊಲೀಸರ ಮುಂದೆ ನೋವು ತೋಡಿಕೊಂಡಿದ್ದಾನೆ.

ಪತ್ನಿ – ಬಾಯ್ ಫ್ರೆಂಡ್ ಮದುವೆ ಮಾಡ್ಸಿ : ನಾನು ನನ್ನ ಮಕ್ಕಳು ಸುರಕ್ಷಿತವಾಗಿರ್ಬೇಕು ಅಂದ್ರೆ ಪತ್ನಿ ಇಚ್ಛೆ ಈಡೇರಬೇಕು. ಬಾಯ್ ಫ್ರೆಂಡ್ ಜೊತೆ ಅವಳ ಮದುವೆ ಮಾಡಿಸಿ ಅಂತ ಸಂತೋಷ್ ಪೊಲೀಸರಿಗೆ ಮನವಿ ಕೂಡ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

ದಿವ್ಯಾಳ 7 ತಿಂಗಳಿಗೊಂದು ಲವ್; ಹೊಸ ಪ್ರೇಮಿಯ ಎದೆಗೆ ಚಾಕು ಇರಿದ ಮಾಜಿ ಲವ್ವರ್!

ಒಂಭತ್ತು ಮಕ್ಕಳನ್ನು ಬಿಟ್ಟು ಪಪ್ಪು ಜೊತೆ ಓಡಿ ಹೋದ ನೀಲಂ : ದೆಹಲಿಯ ಜಲಾಲ್ಪುರ ಗ್ರಾಮದಲ್ಲಿ ಓಂಪಾಲ್ ಪತ್ನಿ 53 ವರ್ಷದ ನೀಲಂ 32 ವರ್ಷದ ಪಪ್ಪು ಜೊತೆ ಓಡಿ ಹೋಗಿದ್ದಾಳೆ. ನೀಲಂಗೆ ಒಂಭತ್ತು ಮಕ್ಕಳು. ಓಂಪಾಲ್ ದೆಹಲಿಯಲ್ಲಿ ಕೂಲಿ ಕೆಲ್ಸ ಮಾಡ್ತಿದ್ರೆ ನೀಲಂ ಊರಿನಲ್ಲಿ ಮಕ್ಕಳನ್ನು ನೋಡ್ಕೊಂಡಿದ್ಲು. ಆಕೆ ದೊಡ್ಡ ಮಗನ ವಯಸ್ಸು 30 ವರ್ಷ. ಚಿಕ್ಕವಳ ವಯಸ್ಸು 10 ವರ್ಷ. ನೀಲಂ ಹತ್ತು ವರ್ಷದ ಮಗಳನ್ನೂ ತನ್ನ ಜೊತೆ ಕರ್ಕೊಂಡು ಹೋಗಿದ್ದಾಳೆ. ಹಿಂದೊಮ್ಮೆ ಓಡಿ ಹೋಗಿದ್ದ ನೀಲಂಳನ್ನು ವಾಪಸ್ ಕರೆ ತಂದಿದ್ರು. ಆದ್ರೀಗ ಮತ್ತೆ ಓಡಿ ಹೋಗಿದ್ದಾಳೆ. ಅವಳ ಹೆಸರಿನಲ್ಲಿದ್ದ ಜಮೀನಿನ ದಾಖಲೆ, ಆಭರಣವನ್ನೂ ತೆಗೆದುಕೊಂಡು ಹೋಗಿರೋ ನೀಲಂ, ಪಪ್ಪು ಜೊತೆ ಮುಂದಿನ ಜೀವನ ನಡೆಸೋದಾಗಿ ಕೋರ್ಟ್ ನಲ್ಲಿ ಹೇಳಿದ್ದಾಳೆ.