ಮದುವೆಯಾದ ಅಥವಾ ಮದುವೆಗೆ ಸಿದ್ಧವಾಗಿರುವ ಯುವತಿಯರು ಗೂಗಲ್‌ನಲ್ಲಿ ಏನು ಹುಡುಕುತ್ತಾರೆ ಎಂಬ ಅಂಶವನ್ನು ಗೂಗಲ್ ಡೇಟಾ ಬಹಿರಂಗಪಡಿಸಿದೆ. ತಮ್ಮ ಗಂಡನ ಹೃದಯ ಗೆಲ್ಲುವುದು, ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಅಡುಗೆ, ಮಗು ಹಾಗೂ ಅತ್ತೆಯೊಂದಿಗಿನ ಸಂಬಂಧದ ಬಗ್ಗೆ ಹೆಚ್ಚಾಗಿ ಹುಡುಕಾಟ ನಡೆಸುತ್ತಾರೆ.
ಗೂಗಲ್ ಎನ್ನುವುದು ಈಗ ಬಹುತೇಕ ಮಂದಿಯ ಜೀವನದ ಅವಿಭಾಜ್ಯ ಅಂಗವಾಗಿದೆ. ಏನು ಪ್ರಶ್ನೆ ಇದ್ದರೂ ಗೂಗಲ್ ಇದ್ಯಲ್ಲಾ ಎನ್ನುವ ಉತ್ತರ. ಇದೇ ಕಾರಣಕ್ಕೆ ಚಿಕ್ಕಪುಟ್ಟ ವಿಷಯ ಕೂಡ ತಲೆಯ ಒಳಗೆ ಹಾಕಿಕೊಳ್ಳುವ ಗೋಜಿಗೇ ಹೋಗುವುದು ಹೆಚ್ಚಿನವರು. ಒಂದಷ್ಟು ಹೊತ್ತು ಇಂಟರ್ನೆಟ್ ಇಲ್ಲ ಎಂದು ಪರದಾಡುವವರೇ ಇಲ್ಲ. ಅಂಥ ಪರಿಸ್ಥಿತಿ ಬಂದುಬಿಟ್ಟಿದೆ. ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ ಕಾರಣವೊಡ್ಡಿ ನೇಪಾಳದಲ್ಲಿ ಏನಾಗ್ತಿದೆಯೆಂದು ಗೊತ್ತಲ್ಲ, ಅದೇ ಸ್ಥಿತಿ ಬಹುತೇಕ ಎಲ್ಲೆಡೆಯೂ ಆಗಿಬಿಟ್ಟಿದೆ. ಸೋಷಿಯಲ್ ಮೀಡಿಯಾದ ಜೊತೆ ಗೂಗಲ್ ಕೂಡ ಬೇಕೇ ಬೇಕು.
ಪತಿಯ ಬಗ್ಗೆ ಕುತೂಹಲ
ಇನ್ನು ಮದುವೆ ಫಿಕ್ಸ್ ಆಗುತ್ತಿದ್ದಂತೆಯೇ ಅಥವಾ ಮದುವೆಯಾಗುತ್ತಿದ್ದಂತೆಯೇ ಯುವತಿಯರು ಮೊದಲು ಗೂಗಲ್‌ನಲ್ಲಿ ಏನು ಹುಡುಕುತ್ತಾರೆ ಎನ್ನುವ ಅಂಶ ಈಗ ಬಯಲಾಗಿದೆ. Google ನೀಡಿರುವ ಮಾಹಿತಿ ಪ್ರಕಾರ, ವಿವಾಹಿತ ಮಹಿಳೆಯರು ಅಥವಾ ಮದುವೆಯಾಗಲು ಹೊರಟವರು ಹೆಚ್ಚಾಗಿ ತಮ್ಮ ಭಾವಿ ಜೀವನದ ಕನಸನ್ನು ಕಾಣುವವರು, ಅಲ್ಲಿ ಮುಖ್ಯವಾಗುವುದು ಗಂಡ. ಅದಕ್ಕಾಗಿಯೇ ತಮ್ಮ ಗಂಡನ ಹೃದಯವನ್ನು ಹೇಗೆ ಗೆಲ್ಲಬಹುದು, ಅವರ ಆಯ್ಕೆ ಏನು ಮತ್ತು ಗಂಡಸರು ಏನು ಇಷ್ಟಪಡುತ್ತಾರೆ ಮತ್ತು ಇಷ್ಟಪಡುವುದಿಲ್ಲ ಎಂಬುದರ ಬಗ್ಗೆ ಹೆಚ್ಚು ಹುಡುಕುತ್ತಾರಂತೆ. ಇದು ಒಂದು ವರ್ಗವಾದರೆ ಅದೇ ಇನ್ನೊಂದಿಷ್ಟು ಯುವತಿಯರು, ತಮ್ಮ ಗಂಡಂದಿರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ, ಅವರನ್ನು ಹೆಂಡತಿ ಗುಲಾಮ್' ಮಾಡುವುದು ಹೇಗೆ ಎಂದೂ ಸರ್ಚ್ ಮಾಡುತ್ತಾರಂತೆ!
ಇದನ್ನೂ ಓದಿ: ಸ್ನಾನ ಮಾಡುವೆ ಎನ್ನುತ್ತಲೇ ಕ್ಯೂಟ್ ವಿಡಿಯೋಶೂಟ್ ಮಾಡಿಸಿಕೊಂಡ Namratha Gowda
ಮಗು, ಅಡುಗೆ ಬಗ್ಗೆಯೂ ಸರ್ಚ್
ಇನ್ನು ಹಲವರು, ಮಗು ಮಾಡಿಕೊಳ್ಳಲು ಸೂಕ್ತ ಸಮಯ ಯಾವುದು? ಮದುವೆಯ ಬಳಿಕ ಗಂಡನನ್ನು ಸದಾ ಸುಖವಾಗಿ ಇಡುವುದು ಹೇಗೆ ಎನ್ನುವ ಜೊತೆಗೆ, ಮದುವೆಯಾದ ಮೇಲೆ ಏನೇ ಅಂದ್ರೂ, ಎಷ್ಟೇ ದೊಡ್ಡ ಪೋಸ್ಟ್ನಲ್ಲಿ ಇದ್ದರೂ ಬಹುತೇಕರಿಗೆ ಅಡುಗೆ ಮಾಡಲೇಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಅದೇ ಕಾರಣಕ್ಕೆ, ಅಡುಗೆಯ ಬಗ್ಗೆಯೂ ಸಾಕಷ್ಟು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಾರೆ ಎಂದು ಗೂಗಲ್ ಡಾಟಾ ಹೇಳುತ್ತದೆ. ಅಷ್ಟಕ್ಕೂ ಟಾಪ್ 1 ನಲ್ಲಿ ಇರುವುದು ಮಾತ್ರ ತಮ್ಮ ಗಂಡನಿಗೆ ಸಂಬಂಧಿಸಿದ ಅನೇಕ ವಿಷಯಗಳು.
ಅತ್ತೆಯ ಬಗ್ಗೆ ಮಾಹಿತಿ
ಮಹಿಳೆಯರು ತಮ್ಮ ಗಂಡನ ಕುಟುಂಬದಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ಸ್ವಲ್ಪ ಸಮಯದಲ್ಲೇ ಕುಟುಂಬದ ಭಾಗವಾಗುವುದು ಹೇಗೆ ಎಂದು ತಿಳಿಯಲು ಉತ್ಸುಕರಾಗಿರುತ್ತಾರೆ. ಅವಳು ತನ್ನ ಕುಟುಂಬದ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬಹುದು ಎಂದು ತಿಳಿಯಲು ಆಸಕ್ತಿ ಹೊಂದಿದ್ದಾರೆ. ಅದೇ ಸಮಯದಲ್ಲಿ, ಕೆಲವು ಮಹಿಳೆಯರು ತಮ್ಮ ಅತ್ತೆಯನ್ನು ಸಂತೋಷವಾಗಿರಿಸಲು ವಿವಿಧ ಮಾರ್ಗಗಳನ್ನು ಹುಡುಕುತ್ತಾರೆ ಎಂದು ಅಂಕಿ ಅಂಶ ಹೇಳುತ್ತದೆ.
ಇದನ್ನೂ ಓದಿ: Amruthadhaare ತರ್ಲೆ ಆಕಾಶ್ ಕ್ಯೂಟ್ ವಿಡಿಯೋ ವೈರಲ್: ಮರಿ ಡುಮ್ಮಣ್ಣನ ಡಾನ್ಸ್ ನೋಡಿ....
