Jio Data Add On Plan : ಡೇಟಾ ಬಳಕೆದಾರರಿಗೆ ಜಿಯೋ ಸಾಕಷ್ಟು ಆಫರ್ ನೀಡ್ತಿದೆ. ಜಿಯೋ ಅಗ್ಗದ ಆಡ್ ಆನ್ ಪ್ಲಾನ್ ಹೊಂದಿದೆ. 100 ಕ್ಕಿಂತ ಕಡಿಮೆ ಬೆಲೆಗೆ ಕೇವಲ 11 ರೂಪಾಯಿಗೆ ನೀವು ಈ ಪ್ಲಾನ್ ಪಡೆಯಬಹುದು. 

ಅಗ್ಗದ ಬೆಲೆಗೆ ಡೇಟಾ (data) ನೀಡೋ ಟೆಲಿಕಾಂ ಕಂಪನಿ (telecom company)ಗಳ ರೇಸ್ ನಲ್ಲಿ ಜಿಯೋ (jio) ಮುಂದಿದೆ. ಒಂದು ಕಾಲದಲ್ಲಿ ಕಡಿಮೆ ಬೆಲೆಗೆ ಡೇಟಾ ನೀಡಿ, ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಈಗ್ಲೂ ಗ್ರಾಹಕರಿಗೆ ಸಾಕಷ್ಟು ಆಫರ್ ನೀಡ್ತಿದೆ. ಉತ್ತಮ ಡೇಟಾ ನೀಡುವ ಅನೇಕ ಯೋಜನೆಯನ್ನು ಜಿಯೋ ಹೊಂದಿದೆ. ಡೇಟಾ ಖಾಲಿಯಾಯ್ತು ಅಂದ್ರೆ ಜಿಯೋ ಬಳಕೆದಾರರು ಟೆನ್ಷನ್ ಮಾಡ್ಕೊಳ್ಬೇಕಾಗಿಲ್ಲ 100 ರೂಪಾಯಿಗಿಂತ ಕಡಿಮೆ ಬೆಲೆಗೆ ಡೇಟಾ ಆಡ್ ಆನ್ ಪ್ಲಾನ್ ಖರೀದಿ ಮಾಡ್ಬಹುದು. ಕೈಗೆಟುಕುವ ಬೆಲೆಯಲ್ಲಿ ಜಿಯೋ ಸಾಕಷ್ಟು ಡೇಟಾ ಆಡ್ ಆನ್ ಪ್ಲಾನ್ ನೀಡ್ತಿದೆ. ಜಿಯೋದ ಆಡ್ ಆನ್ ಪ್ಲಾನ್ 11 ರೂಪಾಯಿಯಿಂದ ಶುರುವಾಗುತ್ತೆ. ಇದ್ರಲ್ಲಿ ಕೆಲ ಪ್ಲಾನ್ ನಿಮ್ಮ ಮೂಲ ಪ್ಲಾನ್ ವ್ಯಾಲಿಡಿಟಿಯವರೆಗೂ ಮಾನ್ಯವಾಗಿರುತ್ತೆ. ಮತ್ತೆ ಕೆಲವು ಅಂದೇ ಮುಕ್ತಾಯಗೊಳ್ಳುತ್ತೆ.

ಜಿಯೋದ ಡೇಟಾ ಆಡ್ ಆನ್ ಪ್ಲಾನ್ :

11 ರೂ. ಪ್ಯಾಕ್ : ಜಿಯೋದ ಅಗ್ಗದ ಪ್ಯಾಕ್ 11 ರೂಪಾಯಿ. ಈ ಪ್ಲಾನ್ ನಲ್ಲಿ ನೀವು 1 ಗಂಟೆಯವರೆಗೆ ಅನಿಯಮಿತ ಡೇಟಾ ಪಡೆಯಬಹುದು. ಕಡಿಮೆ ಇಂಟರ್ನ್ ನೆಟ್ ಸಾಕು, ಕೆಲವೇ ಗಂಟೆ ಸಾಕು ಎನ್ನುವವರು ಈ ಪ್ಲಾನ್ ಪಡೆಯಬಹುದು.

ಭಾರತೀಯರಿಗೆ ಚಾಟ್GPT ಗೋ ಉಚಿತ ಆಫರ್ ಘೋಷಿಸಿದ ಓಪನ್ಎಐ, ಯಾವುದೇ ಶುಲ್ಕವಿಲ್ಲ

29 ರೂ. ಪ್ಯಾಕ್ : ಜಿಯೋದ 29 ರೂಪಾಯಿ ಆಡ್ ಆನ್ ಪ್ಯಾಕ್ ನಲ್ಲಿ ನಿಮಗೆ 2GB ಡೇಟಾ ಸಿಗಲಿದೆ. ಇದು 2 ದಿನಗಳ ವ್ಯಾಲಿಡಿಟಿ ಹೊಂದಿದೆ. ಎರಡು ದಿನಗಳವರೆಗೆ ಹೆಚ್ಚಿನ ಡೇಟಾ ಪಡೆಯಬಹುದು. ವಿಡಿಯೋ ಡೌನ್ಲೋಡ್ ಅಥವಾ ಸಿನಿಮಾ ನೋಡುಗರಿಗೆ ಇದು ಬೆಸ್ಟ್ ಪ್ಯಾಕ್.

49 ರೂ. ಪ್ಯಾಕ್ : 49 ರೂಪಾಯಿ ಪ್ಯಾಕ್ ನಲ್ಲಿ ಅನಿಯಮಿತ ಡೇಟಾ ನಿಮಗೆ ಲಭ್ಯವಿದೆ. ಆದ್ರೆ ಇದ್ರ ವ್ಯಾಲಿಡಿಟಿ ಒಂದು ದಿನಕ್ಕೆ ಸೀಮಿತ. ಕೇವಲ ಒಂದು ದಿನ ಡೇಟಾ ಅಗತ್ಯವಿದೆ ಎನ್ನುವವರು ಇದನ್ನು ಖರೀದಿಸಬಹುದು.

69 ರೂ. ಪ್ಯಾಕ್ : ಜಿಯೋದ ಈ ಪ್ಲಾನ್ 7 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದ್ರಲ್ಲಿ ನಿಮಗೆ 6GB ಡೇಟಾ ಲಭ್ಯವಿದೆ. ಹೆಚ್ಚು ಡೇಟಾ ಬಯಸುವವರಿಗೆ ಇದು ಒಳ್ಳೆಯ ಪ್ಲಾನ್.

Best AI Finance Tools: ಎಐ ಹೇಳಿದಂತೆ ಕೇಳಿ, ಹಣ ಉಳಿತಾಯ ಖಚಿತ: ಇಲ್ಲಿದೆ ಸ್ಮಾರ್ಟ್ ಫೈನಾನ್ಸ್‌ ಟೂಲ್‌ಗಳ ಲಿಸ್ಟ್‌!

77 ರೂಪಾಯಿ ಪ್ಯಾಕ್ : ಇನ್ನು ಜಿಯೋ 100 ರೂಪಾಯಿ ಒಳಗೆ 77 ರೂಪಾಯಿಯ ಡೇಟಾ ಆಡ್ ಆನ್ ಪ್ಯಾಕ್ ನೀಡುತ್ತದೆ. ಈ 77 ರೂಪಾಯಿ ಪ್ಯಾಕ್ 5 ದಿನಗಳವರೆಗೆ ಮಾನ್ಯತೆ ಹೊಂದಿದೆ. ನಿಮಗೆ ಈ ಪ್ಲಾನ್ ನಲ್ಲಿ 3GB ಡೇಟಾ ಲಭ್ಯವಾಗುತ್ತದೆ. ಇದ್ರಲ್ಲಿ ಇನ್ನೊಂದು ವಿಶೇಷವಿದೆ. ಈ ಪ್ಯಾಕ್ ಖರೀದಿ ಮಾಡಿದ ಗ್ರಾಹಕನಿಗೆ ಜಿಯೋ ಟಿವಿ ಅಪ್ಲಿಕೇಶನ್ನಲ್ಲಿ 30 ದಿನಗಳ ಸೋನಿ ಲಿವ್ ಸಬ್ಸ್ಕ್ರೈಬ್ ಸಿಗಲಿದೆ. ಡೇಟಾ ಜೊತೆ ಟಿವಿ ಪ್ರೋಗ್ರಾಂ ವೀಕ್ಷಣೆ ಮಾಡುವವರಿಗೆ ಈ ಪ್ಯಾಕ್ ಒಳ್ಳೆಯದು.

100 ರೂಪಾಯಿ ಪ್ಯಾಕ್ : ಜಿಯೋ ನೂರು ರೂಪಾಯಿ ಡೇಟಾ ಆಡ್ ಆನ್ ಪ್ಯಾಕ್ ಕೂಡ ನೀಡುತ್ತದೆ. ಇದು ಏಳು ದಿನಗಳ ಮಾನ್ಯತೆ ಹೊಂದಿದೆ. ಗ್ರಾಹಕರಿಗೆ ಈ ಪ್ಯಾಕ್ ನಲ್ಲಿ 5GB ಡೇಟಾ ಸಿಗುತ್ತದೆ. ಇದು 90 ದಿನಗಳ ಜಿಯೋ ಹಾಟ್ಸ್ಟಾರ್ (ಮೊಬೈಲ್) ಸಬ್ಸ್ಕ್ರೈಬ್ ನೊಂದಿಗೆ ಬರುತ್ತದೆ. ಎಂಟರ್ಟೈನ್ಮೆಂಟ್ ಮತ್ತು ಡೇಟಾ ಎರಡೂ ಬೇಕು ಎನ್ನುವವರು ಈ ಪ್ಯಾಕ್ ಖರೀದಿ ಮಾಡ್ಬಹುದು.