ಭಾರತೀಯರಿಗೆ ಚಾಟ್GPT ಗೋ ಉಚಿತ ಆಫರ್ ಘೋಷಿಸಿದ ಓಪನ್ಎಐ, ಯಾವುದೇ ಶುಲ್ಕವಿಲ್ಲ
ಭಾರತೀಯರಿಗೆ ಚಾಟ್GPT ಗೋ ಉಚಿತ ಆಫರ್ ಘೋಷಿಸಿದ ಓಪನ್ಎಐ, ಯಾವುದೇ ಶುಲ್ಕವಿಲ್ಲ, ಬಹುತೇಕರು ಇದೀಗ ಎಐ ಅವಲಂಬಿತರಾಗಿದ್ದಾರೆ. ಇದರ ನಡುವೆ ಓಪನ್ಎಐ, ಎಐ ಚಾಟ್‌ಬಾಟ್ ಸೇರಿದತೆ ಹಲವು ಎಐ ಸೊಲ್ಯೂಶನ್ ಉಚಿತವಾಗಿ ನೀಡುತ್ತಿದೆ. ಎಷ್ಟು ದಿನ ಈ ಸೇವೆ ಉಚಿತವಾಗಿ ಸಿಗಲಿದೆ?

ಚಾಟ್‍ಜಿಪಿಟಿ ಗೋ ಉಚಿತ
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಅತ್ಯಂತ ಪ್ರಮುಖ ಹಾಗೂ ಅತ್ಯವಶ್ಯಕವಾಗಿ ಹೊರಹೊಮ್ಮಿದೆ. ಹಲವು ಕ್ಷೇತ್ರಗಳು ಎಐ ಬಳಸಿಕೊಂಡಿದೆ. ಬಹುತೇಕರು ಎಐ ಮೇಲೆ ಅವಲಂಬಿತರಾಗದ್ದಾರೆ. ಇದಕ್ಕಾಗಿ ಮಾಸಿಕ ಚಂದ, ವಾರ್ಷಿಕ ಚಂದಾ ನೀಡುತ್ತಿದ್ದಾರೆ. ಆದರೆ ಅತೀ ಜನಪ್ರಿಯ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಓಪನ್ ಎಐ ಇದೀಗ ಭಾರತೀಯರಿಗೆ ಮೆಗಾ ಆಫರ್ ನೀಡಿದೆ. ಚಾಟ್ಜಿಪಿಟಿ ಗೋ ಎಐಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ.
ಯಾವಾಗಿನಿಂದ ಆಫರ್ ಆರಂಭ?
ಚಾಟ್GPT ಗೋ ಉಚಿತ ಆಫರ್ ಮುಂದಿನ ತಿಂಗಳು ಅಂದರೆ ನೆವೆಂಬರ್ 4 ರಿಂದ ಆರಂಭಗೊಳ್ಳುತ್ತಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚಾಟ್GPT ಗೋ ವರ್ಶನ್ ಲಾಂಚ್ ಮಾಡಲಾಗಿತ್ತು. ವಿಶೇಷ ಅಂದರೆ ಭಾರತದಲ್ಲೇ ಮೊದಲ ಬಾರಿಗೆ ಈ ಗೋ ವರ್ಶನ್ ಆರಂಭ ಮಾಡಲಾಗಿತ್ತು. ಇದೀಗ 90 ಬೇರೆ ಬೇರೆ ದೇಶ ಹಾಗೂ ಮಾರ್ಕೆಟ್‌ಗಳಲ್ಲಿ ಗೋ ವರ್ಶನ್ ಸಕ್ರಿಯವಾಗಿದೆ.
ಎಷ್ಟು ದಿನ ಚಾಟ್‌ಜಿಪಿಟಿ ಎಐ ಉಚಿತ?
ಓಪನ್ಎಐ ಈ ಆಫರ್ ಕೇವಲ ಭಾರತೀಯರಿಗಾಗಿ ನೀಡಿದೆ. ಚಾಟ್ಜಿಪಿಟಿ ಗೋ ಭಾರತೀಯರಿಗೆ ಒಂದು ವರ್ಷಗಳ ಕಾಲ ಉಚಿತವಾಗಿ ನೀಡುತ್ತಿದೆ. ಹೀಗಾಗಿ ಬರೋಬ್ಬರಿ 12 ತಿಂಗಳು ಯಾವುದೇ ಶುಲ್ಕವಿಲ್ಲದೆ ಚಾಟ್‍ಜಿಪಿಟಿ ಗೋ ಬಳಸಲು ಸಾಧ್ಯವಿದೆ. ಅಪ್‌ಡೇಟೆಡ್ ಹಾಗೂ ಪರಿಪೂರ್ಣ ವರ್ಶನ್ ಉಚಿತವಾಗಿ ಸಿಗಲಿದೆ.
ಎಷ್ಟು ದಿನ ಚಾಟ್‌ಜಿಪಿಟಿ ಎಐ ಉಚಿತ?
ಭಾರತೀಯರಿಗೆ ಅಡ್ವಾನ್ಸ್ ವರ್ಶನ್ ಉಚಿತ
ಭಾರತೀಯರಿಗೆ ಅಡ್ವಾನ್ಸ್ ವರ್ಶನ್ ಉಚಿತ
ಭಾರತೀಯರಿಗೆ ಉಚಿತ ಎಐ ವರ್ಶನ್ ನೀಡಲಾಗುತ್ತಿದೆ. ಒಂದು ವರ್ಷಗಳ ಕಾಲ ಅಡೆ ತಡೆ ಇಲ್ಲದ ಬಳಬಹುದು. ಅತ್ಯಾಧುನಿಕ ವರ್ಶನ್ ಟೂಲ್ ಬಳಸುವ ಮೂಲಕ ತಮ್ಮ ದೈನಂದಿನ ಹಾಗೂ ವೃತ್ತಿಪರತೆಯಲ್ಲಿ ಮತ್ತಷ್ಟು ದಕ್ಷತೆ ಸಾಧಿಸಲು ಸಾಧ್ಯವಿದೆ ಎಂದು ಚಾಟ್GPT ಉಪಾಧ್ಯಕ್ಷ ನಿಕ್ ಟರ್ಲೇ ಹೇಳಿದ್ದಾರೆ.
ಚಾಟ್GPT ಗೋ ಪ್ಲಾನ್ ಮಾಸಿಕ ಚಂದಾ 399 ರೂಪಾಯಿ
ಚಾಟ್GPT ಗೋ ಪ್ಲಾನ್ ಮಾಸಿಕ ಚಂದಾ 399 ರೂಪಾಯಿ
ಸದ್ಯ ಓಪನ್ಎಐ ಭಾರತದಲ್ಲಿ ಚಾಟ್GPT ಗೋ ವರ್ಶನ್ ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಿಸಿದೆ. ನವೆಂಬರ್ 4 ರಿಂದ ಉಚಿತವಾಗುತ್ತಿದೆ. ಆದರೆ ಕಳೆದ ಆಗಸ್ಟ್ ತಿಂಗಳಿನಿಂದ ಈವರೆಗೂ ಪ್ರತಿ ತಿಂಗಳು ಗೋ ವರ್ಶನ್ ಪೆಡಯುಲ 399 ರೂಪಾಯಿ ಮಾಸಿಕ ಕಂತು ನೀಡಬೇಕು.