ತಮಾಷೆಗಾಗಿ ಹಾಡಿದ ಹಾಡಿನಿಂದ ರಾತ್ರೋರಾತ್ರಿ ಸ್ಟಾರ್ ಆದ ನಿತ್ಯಶ್ರೀ ಕಥೆ. ಮಂಡ್ಯದ ಈಕೆಗೆ ಯಶ್ ಜೊತೆ ನಟಿಸುವ ಆಸೆಯಂತೆ. ಟ್ರೋಲ್ಗಳಿಗೂ ಆಹಾರವಾಗಿರುವ ಈಕೆಯ ಬಗ್ಗೆ ತಿಳಿಯಿರಿ.
ಅದೃಷ್ಟ ಎನ್ನುವುದು ಹಾಗೆನೇ. ಯಾವಾಗ, ಯಾರನ್ನು, ಯಾವ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಹೇಳುವುದೇ ಕಷ್ಟ. ತಾವು ಸೋಷಿಯಲ್ ಮೀಡಿಯಾ ಸ್ಟಾರ್ ಆಗಲಿ, ತಮ್ಮ ವಿಡಿಯೋ ವೈರಲ್ ಆಗಲಿ ಎಂದು ಎಷ್ಟೋ ಮಂದಿ ಹಗಲೂ ಇರುಳು ಕಷ್ಟಪಡುವುದು ಇದೆ. ಇನ್ನು ಕೆಲವು ಹೆಣ್ಣುಮಕ್ಕಳಂತೂ ಮಾನ ಮರ್ಯಾದೆಯನ್ನೂ ಬಿಟ್ಟು ಬಟ್ಟೆ ತೊಟ್ಟು ರೀಲ್ಸ್ ಮಾಡುವುದು ಇದೆ. ಮತ್ತೆ ಕೆಲವರು ಜೀವದ ಹಂಗನ್ನೂ ತೊರೆದು ಬೆಟ್ಟದ ಮೇಲೆ, ಸಮುದ್ರದ ನಡುವೆ, ರೈಲಿನ ಮಧ್ಯೆ... ಹೀಗೆ ಏನೇನೋ ಸರ್ಕಸ್ ಮಾಡಿ ರೀಲ್ಸ್ ಮಾಡುವುದು ಇದೆ. ಸ್ವಲ್ಪ ಯಾಮಾರಿದ್ರೂ ಜೀವ ಹೋಗುವುದು ಖಚಿತ... ಆದರೆ ಕೆಲವರು ಏನೂ ಮಾಡದೇ ತಮ್ಮ ಪಾಡಿಗೆ ತಾವು ಇದ್ದುಬಿಡುತ್ತಾರೆ. ಆದರೂ ಅವರು ರಾತ್ರೋ ರಾತ್ರಿ ಸ್ಟಾರ್ ಆಗುತ್ತಾರೆ. ಇದಾಗಲೇ ಹೀಗೆ ರಾತ್ರೋ ರಾತ್ರಿ ಸ್ಟಾರ್ ಆಗಿ ಕೆಲವು ದಿನಗಳು, ಕೆಲವು ತಿಂಗಳು ಭಾರಿ ಪ್ರಚಾರ ಪಡೆದುಕೊಂಡವರೂ ನಮ್ಮ ಕಣ್ಣಮುಂದೆಯೇ ಇದ್ದಾರೆ.
ತಮಾಷೆಗಾಗಿ ಹಾಡಿದ್ದು...
ಅಂಥವರಲ್ಲಿ ಒಬ್ಬರು ಹೂವಿನ ಬಾಣದಂತೆ... (Hoovina Baanadante) ಹಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿರೋ ಹುಡುಗಿ. ಸುಮ್ಮನೇ ಸ್ನೇಹಿತರು ಹೇಳಿದರು ಎನ್ನುವ ಕಾರಣಕ್ಕೆ ಹಾಡನ್ನು ತಮಾಷೆಯ ದನಿಯಲ್ಲಿ ಹಾಡಿದ ಹುಡುಗಿಗೆ ತಾವು ಇಷ್ಟೊಂದು ಫೇಮಸ್ ಆಗುವುದು ಕನಸಿನಲ್ಲಿಯೂ ಗೊತ್ತಿರಲು ಸಾಧ್ಯವೇ ಇಲ್ಲ ಬಿಡಿ. ಆದರೆ, ಈ ಹುಡುಗಿ ಯಾವ ಪರಿಯಲ್ಲಿ ಫೇಮಸ್ ಆದರು ಎಂದರೆ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ದಿಢೀರ್ ಏರಿಕೆ ಆಯಿತು. ಈ ಹುಡುಗಿಯ ಮುಗ್ಧತೆಗೆ ಮೆಚ್ಚಿ ಹಲವರು ಭೇಷ್ ಎಂದಿದ್ದರೆ, ಇನ್ನು ಟ್ರೋಲರ್ಸ್ಗೆ ಆಹಾರ ಬೇಕಲ್ಲ. ಈ ಹುಡುಗಿಯನ್ನು ಟೀಕಿಸುವಂತೆ ಮಾಡಿ ಅವರು ಹಾಡಿದ ಧಾಟಿಯಲ್ಲಿಯೇ ತಾವೂ ಟೀಕಿಸುತ್ತಾ ಹಾಡಿ ತಮ್ಮದೇ ವಿಡಿಯೋ ಮಾಡಿಕೊಂಡು ಫೇಮಸ್ ಆಗಲು ನೋಡುವ ವರ್ಗವೂ ಹೆಚ್ಚಾಗಿದೆ.
ಈಕೆ ಯಾರು, ಎಲ್ಲಿಯವರು?
ಅಂದಹಾಗೆ ವೈರಲ್ ಹುಡುಗಿ (Hoovina Baanadante Viral Girl) ಹೆಸರು ನಿತ್ಯಶ್ರೀ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಿತ್ಯಶ್ರೀ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. ಇವರ ಇನ್ಸ್ಟಾಗ್ರಾಮ್ನಲ್ಲಿ ಅಮ್ಮು ಗೌಡ ಎನ್ನುವ ಹೆಸರು ಕೂಡ ಇದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮ. ಈ ಬಿರುಗಾಳಿ ಚಿತ್ರದಲ್ಲಿ ಶ್ರೇಯಾ ಘೋಷಲ್ ಅವರು ಹಾಡಿದ ಈ ಹಾಡನ್ನು ತಮಾಷೆಗಾಗಿ ಸ್ನೇಹಿತರ ಎದುರು ಹಾಡಿದ್ದೆ. ಆದರೆ ಇದು ಇಷ್ಟೊಂದು ವೈರಲ್ ಆಗುತ್ತದೆ ಎಂದು ಗೊತ್ತೇ ಇರಲಿಲ್ಲ ಎನ್ನುತ್ತಾರೆ ನಿತ್ಯಶ್ರೀ. ಇದನ್ನು ಹಾಡಿದ್ದು ಮೈಸೂರಿನಲ್ಲಿ. ಡಿಗ್ರಿ ಪಡೆಯಲು ಮೈಸೂರಿಗೆ ಬಂದಿರೋ ನಿತ್ಯಶ್ರೀ ಇದಾಗಲೇ ಸುಂದರವಾಗಿ ಹಲವು ಹಾಡುಗಳನ್ನೂ ಹಾಡಿದ್ದಾರೆ. ಮೊದಲಿಗೆ ಹೂವಿನ ಬಾಣದಂತೆ ಹಾಡಿದ್ದು ತಮಾಷೆಗಾಗಿ ಎನ್ನುತ್ತಲೇ ಗಾಯಕಿ ಶ್ರೇಯಾ ಘೋಷಲ್ ಅವರ ಕ್ಷಮೆ ಕೋರಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ನಾನು ಉದ್ದೇಶಪೂರ್ವಕವಾಗಿ ಹಾಡಲಿಲ್ಲ. ಹೀಗೆ ಸ್ನೇಹಿತೆಯರ ಜೊತೆ ತಮಾಷೆಗಾಗಿ ಹಾಡಿದ್ದು ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: ಭಾವನಾಳ ಬಿಟ್ಟು ವಿಲನ್ ಜೊತೆ ಸಿದ್ದೇಗೌಡ್ರ ರೊಮಾನ್ಸ್! ಛೇ... ಇದೇನಿದು Lakshmi Nivasa ಟ್ವಿಸ್ಟ್?
ಯಶ್ ಜೊತೆ ನಟಿಸುವಾಸೆ
ಇದೇ ವೇಳೆ ಟ್ರೋಲ್ ಬಗ್ಗೆಯೂ ಮಾತನಾಡಿದ ಅವರು, ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ. ಆದರೆ ವೈರಲ್ ಆದನಿಂದ ತಮ್ಮನ್ನು ಎಲ್ಲರೂ ಗುರುತಿಸಿ ಸೆಲ್ಫಿ ತೆಗೆದುಕೊಳ್ಳಲು ಮುಂದೆ ಬರುತ್ತಿರುವುದು ಖುಷಿಯಾಗುತ್ತಿದೆ ಎಂದಿದ್ದಾರೆ. ತಮ್ಮ ತಂದೆಗೆ ನಾನು ನಟಿಯಾಗುವ ಆಸೆ ಇದೆ. ನನಗೂ ಆ್ಯಕ್ಟಿಂಗ್ ಆಸೆ ಇದೆ. ಆದರೆ ಮೊದಲಿಗೆ ಶಿಕ್ಷಣ ಮುಖ್ಯ ಎಂದಿರುವ ನಿತ್ಯಶ್ರೀ, ಶಿಕ್ಷಣದ ಜೊತೆ ಅವಕಾಶ ಸಿಕ್ಕರೆ ನಟನೆಯನ್ನೂ ಮಾಡುತ್ತೇನೆ. ನಟ ಯಶ್ ಅವರು ನನ್ನ ಫೆವರೆಟ್. ಅವರ ಜೊತೆ ಒಂದಾದರೂ ಸಿನಿಮಾದಲ್ಲಿ ಸೈಡ್ ರೋಲ್ ಆದರೂ ಮಾಡುವ ಆಸೆ ಎಂದು ಹೇಳಿದ್ದಾರೆ. ಇವರ ಆಸೆ ಬೇಗನೇ ಈಡೇರಲಿ ಎಂದು ನೆಟ್ಟಿಗರು ಹಾರೈಸುತ್ತಿದ್ದಾರೆ. ತಮಾಷೆಗಾಗಿ ಮಾಡಿದ್ದರಿಂದ ಯಾರ ಕ್ಷಮೆಯನ್ನೂ ಕೋರಬೇಡಮ್ಮಾ ಎಂದು ಹಲವರು ಹೇಳಿದ್ದರೆ, ತಾವು ಫೇಮಸ್ ಆಗಿಲ್ಲ ಎಂದು ನೊಂದುಕೊಳ್ಳುವ ಜೀವ ಟ್ರೋಲ್ ಮಾಡುವುದು ಇದೆ,, ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು ಎಂದು ಮತ್ತೆ ಕೆಲವರು ನಿತ್ಯಶ್ರೀಗೆ ಬುದ್ಧಿಮಾತನ್ನೂ ಹೇಳಿದ್ದಾರೆ.
ಇದನ್ನೂ ಓದಿ: Bigg Boss ಮೋಕ್ಷಿತಾ ಪೈ ಸದ್ದಿಲ್ಲದೇ ಮದುವೆಯಾದ್ರಾ? ನಟನ ಪರಿಚಯಿಸುತ್ತಲೇ ಮೌನ ಮುರಿದ ನಟಿ...
