Work Life Balance: ಕೆಲಸ ಹಾಗೂ ಜೀವನ ಎರಡನ್ನೂ ಸಮತೋಲನಗೊಳಿಸುವುದೇ ಇಂದಿನ ಅನೇಕರ ಸವಾಲಾಗಿದೆ. ಹೀಗಿರುವಾಗ ವೃತ್ತಿ ಹಾಗೂ ಜೀವನ ಎರಡನ್ನೂ ಸಮಾನವಾಗಿ ಬ್ಯಾಲೆನ್ಸ್ ಮಾಡದ ಪತಿ ವಿರುದ್ಧ ಕಿಡಿಕಾರ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಕುಟುಂಬಕ್ಕೆ ಸಮಯ ಕೊಡದ ಗಂಡನ ವಿರುದ್ಧ ಪತ್ನಿಯ ಆಕ್ರೋಶ
ಬೆಂಗಳೂರು: ಅನೇಕರು ಮನೆ ಮಠ ಬಿಟ್ಟು ಕೆಲಸ ಮಾಡ್ತಾರೆ. ಕಚೇರಿ ನೀಡಿದ ಟಾರ್ಗೆಟ್ ಬೆನ್ನಟ್ಟುವಷ್ಟರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕುಟುಂಬದ ಜೊತೆ ಮಾತುಕತೆ ನಡೆಸಲು ಯಾವುದೇ ಸಮಯವೇ ಇರುವುದಿಲ್ಲ. ಕೆಲಸ ಹಾಗೂ ಜೀವನ ಎರಡನ್ನೂ ಸಮತೋಲನಗೊಳಿಸುವುದೇ ಇಂದಿನ ಅನೇಕರ ಸವಾಲಾಗಿದೆ. ಹೀಗಿರುವಾಗ ವೃತ್ತಿ ಹಾಗೂ ಜೀವನ ಎರಡನ್ನೂ ಸಮಾನವಾಗಿ ಬ್ಯಾಲೆನ್ಸ್ ಮಾಡದ ಪತಿ ವಿರುದ್ಧ ಕಿಡಿಕಾರ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಪತ್ನಿ ಗಂಡನ ದೀರ್ಘ ಕೆಲಸದ ಸಮಯದ ಬಗ್ಗೆ ದೂರುತ್ತಾ ಅವನ ಮೇಲೆ ರೇಗುತ್ತಿರುವುದನ್ನು ಕಾಣಬಹುದು. ವೀಡಿಯೋದಲ್ಲಿ ಕಾಣುವಂತೆ ಪತಿ ವಾರಕ್ಕೆ 72 ಗಂಟೆಗಳ ಕಾಲ ಕೆಲಸ ಮಾಡಿದ ನಂತರ ಮನೆಗೆ ಮರಳಿರುವಂತೆ ಕಾಣುತ್ತಿದ್ದು, ಕೋಪಗೊಂಡ ಪತ್ನಿ, ತನ್ನ ಪತಿ ಮನೆಯಲ್ಲಿ 16 ಗಂಟೆಗಳ ಕಾಲ ಮಾತ್ರ ಕಳೆಯುತ್ತಿದ್ದಾನೆ. ನಾನು ಹೇಗೆ ಒಬ್ಬಳೇ ಮನೆಯನ್ನು ಮ್ಯಾನೇಜ್ ಮಾಡಲಿ ಎಂದು ಆಕೆ ಹೇಳುವುದನ್ನು ಕೇಳಬಹುದು. ಮತ್ತೊಂದೆಡೆ ಪತಿ ಬಹಳ ಸುಸ್ತಾದಂತೆ ಕಾಣುತ್ತಿದ್ದು, ಪತ್ನಿಯ ಮಾತಿಗೆ ಆತ ಪ್ರತಿಕ್ರಿಯಿಸುವಷ್ಟು ತಾಳ್ಮೆ ಆತನಿಗೆ ಇದ್ದಂತೆ ಕಾಣುತ್ತಿಲ್ಲ. ಆ ದೃಶ್ಯ ನೋಡಿದರೆನೇ ಆತ ಆಗಷ್ಟೇ ಮನೆಗೆ ಬಂದಂತೆ ಕಾಣುತ್ತಿದೆ. ಆತ ಇನ್ನೂ ಬಟ್ಟೆ ಬದಲಾಯಿಸದೇ ಫಾರ್ಮಲ್ ಧಿರಿಸಿನಲ್ಲಿ ಇರುವುದನ್ನು ಕಾಣಬಹುದು. ಅಲ್ಲದೇ ಆಗಷ್ಟೇ ಆತ ಐಡಿ ಕಾರ್ಡನ್ನು ಕತ್ತಿನಿಂದ ತೆಗೆಯುವುದನ್ನು ಕಾಣಬಹುದು.
ಹೆಂಡ್ತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನೆಟ್ಟಿಗರು
ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ವೇಗವಾಗಿ ವೈರಲ್ ಆಗಿದ್ದು, ಅನೇಕರು ಪತ್ನಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇನ್ನೂ ಅನೇಕರು ಆಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮನೆಗೆ ತಲುಪಿದ ಕೂಡಲೇ ಈ ರೀತಿ ಮಾಡಿದ ರೀತಿಗೆ ಕೆಲವರು ಅಸಮಾಧಾನಗೊಂಡಿದ್ದರೆ ಮತ್ತೆ ಕೆಲವರು ಆಕೆ ತನ್ನ ಗಂಡನ ಜೊತೆ ಕೆಲ ಸಮಯ ಕಳೆಯುವುದಕ್ಕೆ ಬಯಸುವುದು ತಪ್ಪಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಅನೇಕರು ಭಾರತದಲ್ಲಿ ಇರುವ ದುರ್ಬಲ ಕಾರ್ಮಿಕ ನಿಯಮಗಳ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
INDIANS ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಇದು ದುಃಖಕರ ಆದರೆ ಅವಳನ್ನು ನೋಡಿ ಅವಳು ತನ್ನ ಗಂಡನ ಸಮಯವನ್ನು ಕೇಳುತ್ತಿದ್ದಾಳೆ. ಇಲ್ಲಿ ನಾವು ಪುರುಷ ಅಥವಾ ಮಹಿಳೆಯನ್ನು ಟೀಕಿಸಬಾರದು, ಆದರೆ ದೀರ್ಘ ಕೆಲಸದ ಸಮಯವನ್ನು ಟೀಕಿಸಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳು ತನ್ನ ಗಂಡನೊಂದಿಗೆ ಸ್ವಲ್ಪ ಸಮಯ ಕೇಳುತ್ತಿದ್ದಾಳಷ್ಟೇ ಅದು ಹೇಗೆ ತಪ್ಪಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ವಿಚಾರದಲ್ಲಿ ಆಕೆಯದ್ದು ತಪ್ಪಿಲ್ಲ, ಆದರೆ ಅವಳ ಮಾತಿನ ಧ್ವನಿ ಮತ್ತು ಸಮಯ ತಪ್ಪಾಗಿದೆ. ಅವಳು ಇದನ್ನು ನಂತರ ಮೃದುವಾದ ಸ್ವರದಲ್ಲಿ ಹೇಳಬಹುದಿತ್ತು. ಅವನು ಈಗಾಗಲೇ ದಣಿದಂತೆ ಕಾಣುತ್ತಾನೆ. ಇಬ್ಬರಿಗೂ ಕೆಟ್ಟ ಭಾವನೆ ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳು ತನ್ನ ಗಂಡನೊಂದಿಗೆ ಸಮಯ ಕಳೆಯಲು ಬಯಸುವುದರಲ್ಲಿ ತಪ್ಪಿಲ್ಲ, ಆದರೆ ಅವಳ ಮಾತಿನ ರೀತಿ ಹಾಗೂ ಸಮಯ ತಪ್ಪಾಗಿದೆ. ಮತ್ತು ಅವಳು ತನ್ನ ದಣಿದ ಗಂಡನನ್ನು ಆ ರೀತಿ ರೆಕಾರ್ಡ್ ಮಾಡಬಾರದು. ಅವನನ್ನು ನೋಡಿ ಅವನು ಹೊಂದಿರುವ ಜವಾಬ್ದಾರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾನೆ ಮತ್ತು ಅವನು ತುಂಬಾ ದಣಿದಂತೆ ಕಾಣುತ್ತಾನೆ. ಸಮಸ್ಯೆಯನ್ನು ಪರಿಹರಿಸಲು ಇದಕ್ಕಿಂತ ಉತ್ತಮವಾದ ಮಾರ್ಗವಿದೆ ಎಂದು ನನಗೆ ಖಚಿತವಾಗಿದೆ . ಎತ್ತರದ ಧ್ವನಿಯಿಂದ ಅಲ್ಲ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಚೆನ್ನೈನ ಝೂನಿಂದ ತಪ್ಪಿಸಿಕೊಂಡಿದ್ದ 5 ವರ್ಷದ ಸಿಂಹ ಸುರಕ್ಷಿತವಾಗಿ ಪತ್ತೆ
ಇದನ್ನೂ ಓದಿ: ಹಸಿವು ಬಡತನದಿಂದ ಬಳಲ್ತಿರುವ ಜನ: 15 ಪತ್ನಿಯರು 30 ಮಕ್ಕಳು ಆಫ್ರಿಕನ್ ರಾಜನ ಐಷಾರಾಮಿ ಜೀವನ
