ಸ್ವಂತ ಮನೆಯನ್ನು ಖರೀದಿಸುವ ಕನಸನ್ನು ನನಸಾಗಿಸಿಕೊಂಡಿದ್ದಾನೆ ಆ ಯುವಕ. ಇದೇ ಈಗ ಇಂಟರ್ನೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಇಂತಹ ಪೋಸ್ಟ್‌ಗಳು ಮತ್ತು ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತವೆ. ಅದನ್ನು ಓದಿದ ನಮಗೂ ಒಂದು ರೀತಿ ಮೊಟಿವೇಶನ್ ಸಿಗುತ್ತದೆ. ಸದ್ಯ ಅಂತಹ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಅದರಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯನ್ನು 18000 ರೂ. ಮೊದಲನೆಯ ಸಂಬಳದೊಂದಿಗೆ ಹೇಗೆ ಖರೀದಿಸಿದೆ ಎಂದು ಹೇಳಿದ್ದಾನೆ.
ವೃತ್ತಿಯಲ್ಲಿ ತಾಂತ್ರಿಕ ತಜ್ಞ(Technical expert)ರಾಗಿರುವ ಬೆಂಗಳೂರಿನ ಯುವಕನೊಬ್ಬನಿಗೆ ಇಂಟರ್ನ್ ಆಗಿ ಕೆಲಸಕ್ಕೆ ಸೇರಿಕೊಂಡಾಗ ಸಿಗುತ್ತಿದ್ದದು ತಿಂಗಳಿಗೆ ಕೇವಲ 18,000 ರೂ.ಸಂಬಳ. ಆದರೆ ಈಗ ವಾರ್ಷಿಕ 24 ಲಕ್ಷ ರೂ.ಗಳಿಸುತ್ತಿದ್ದಾರೆ. ಇದು ಒಂದು ಕಡೆ ಸಾಧನೆಯಾದರೆ, ಇನ್ನೊಂದು ದೊಡ್ಡ ಸಾಧನೆಯಿದೆ. ಅದೇನಪ್ಪಾ ಅಂದ್ರೆ...ಸ್ವಂತ ಮನೆಯನ್ನು ಖರೀದಿಸುವ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಇದೇ ಈಗ ಇಂಟರ್ನೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಅತ್ಯಂತ ವಿಶೇಷವಾದ ವಿಷಯವೆಂದರೆ ಅವರು ಕೇವಲ 23 ನೇ ವಯಸ್ಸಿನಲ್ಲಿ ಇದನ್ನೆಲ್ಲಾ ಮಾಡಿದ್ದಾರೆ.
ಈ ಕುರಿತು 'ರೆಡ್ಡಿಟ್'ನಲ್ಲಿ ಪೋಸ್ಟ್ ಮಾಡಿ ಬರೆದಿರುವ ಆ ಯುವಕ, "ನಾನು ನಾಲ್ಕು ಜನರಿದ್ದ ಕುಟುಂಬದಿಂದ ಬಂದವನು. ಅಲ್ಲಿ ನನ್ನ ತಂದೆ ತಿಂಗಳಿಗೆ ಕೇವಲ 12 ರಿಂದ 15 ಸಾವಿರ ಗಳಿಸುತ್ತಿದ್ದರು. ಆ ಸಂಬಳದಲ್ಲಿ ಉಳಿತಾಯಕ್ಕೆ ಅವಕಾಶವಿರುವುದಿಲ್ಲ. ಆ ಸಮಯದಲ್ಲಿ ನಮಗೆ ನಮ್ಮ ಕನಸುಗಳು, ಒತ್ತಡ ಮತ್ತು ಓಡಾಟ ಮಾತ್ರ ಇತ್ತು.
ಕಾಲೇಜಿನಲ್ಲಿ ಪ್ರವೇಶ ಪಡೆಯುವುದು ಸುಲಭವಲ್ಲ, ಆದರೆ ಕಠಿಣ ಪರಿಶ್ರಮದಿಂದ ನಾನು ಟೈಯರ್ 1 ಕಾಲೇಜಿನಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದೆ. ನಂತರ ನನಗೆ ನನ್ನ ಮೊದಲ ಇಂಟರ್ನ್‌ಶಿಪ್ ಸಿಕ್ಕಿತು. ಕೊನೆಗೆ ನಾನು ತಿಂಗಳಿಗೆ 18 ಸಾವಿರ ರೂಪಾಯಿ ಪಡೆಯಲು ಪ್ರಾರಂಭಿಸಿದೆ. ನಾನು ನನ್ನ ಕಠಿಣ ಪರಿಶ್ರಮವನ್ನು ಮುಂದುವರಿಸಿದೆ. ಆ ನಂತರ ಪ್ರತಿ ತಿಂಗಳು 40 ರೂಪಾಯಿ ಸಂಬಳವನ್ನು ಪಡೆಯಲು ಪ್ರಾರಂಭಿಸಿದೆ" ಎಂದು ತಿಳಿಸಿದ್ದಾರೆ.
ಕಠಿಣ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಯಾರೋ ಸರಿಯಾಗಿ ಹೇಳಿದ್ದಾರೆ. ಏಕೆಂದರೆ ಆ ವ್ಯಕ್ತಿ "ಇಂದು ನಾನು ನನ್ನ ಮೊದಲ ಮನೆಯನ್ನು ಖರೀದಿಸಿದ್ದೇನೆ ಎಂದು ಹೇಳಿದ್ದಾರೆ. ಪೋಸ್ಟ್‌ನಲ್ಲಿ, ಅವರೇ ಹೇಳಿರುವಂತೆ "ಇಂದು, ನಾನು ಹೆಮ್ಮೆಯಿಂದ ಹೇಳಬಲ್ಲೆ, ನಾನು ನನ್ನ ಮೊದಲ ಮನೆಯನ್ನು ಖರೀದಿಸಿದ್ದೇನೆ. ಉಳಿತಾಯವು ಮನೆಯನ್ನು ಖರೀದಿಸುವಲ್ಲಿ ಕೊನೆಗೊಂಡಿದೆ ಮತ್ತು ಸಾಲವೂ ಇದೆ ಎಂಬುದು ನಿಜ, ಆದರೆ ಈಗ ಇದು ನನ್ನ ಮನೆ.
ಇದರೊಂದಿಗೆ, ನನ್ನ ಗಳಿಕೆಯಿಂದ ನಾನು ಮ್ಯಾಕ್‌ಬುಕ್ ಖರೀದಿಸಿದ್ದೇನೆ, ಐಫೋನ್, PS5 ಖರೀದಿಸಿದೆ. ಇಷ್ಟೇ ಅಲ್ಲ, ಇಂದು ನನ್ನ ನೆಚ್ಚಿನ ತಾಣಕ್ಕೂ ಭೇಟಿ ನೀಡಲು ಸಾಧ್ಯವಾಗಿದೆ. ಇದರ ಜೊತೆಗೆ, ನನ್ನ ಸಂಬಳ ವಾರ್ಷಿಕವಾಗಿ 24 ಲಕ್ಷ ರೂಪಾಯಿಗಳಾಗಿವೆ" ಎಂದು ತಿಳಿಸಿದ್ದಾರೆ.
"ಇಂದು ನಾನು SDE-2 ಆಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ. ಇಂದು ನನ್ನ ಬಳಿ ಏನೇ ಇದ್ದರೂ, ಇದೆಲ್ಲವೂ ಯಾವುದೇ ಬ್ಯಾಕಪ್ ಇಲ್ಲದೆ ಸಾಧ್ಯವಾಗಿದೆ, ಸ್ಥಿರತೆ ಮತ್ತು ನಂಬಿಕೆಯಿಂದ ಮಾತ್ರ" ಎಂದು ಆ ವ್ಯಕ್ತಿ ಹೇಳಿದ್ದಾರೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಮತ್ತು ಅನೇಕ ಜನರು ಈ ವ್ಯಕ್ತಿಯನ್ನು ಹೊಗಳುತ್ತಿದ್ದಾರೆ. ಬಳಕೆದಾರರು "ವಾವ್ ಸಹೋದರ, ಅದ್ಭುತ ಕೆಲಸ. ನಿಮ್ಮ ಮನೆ ತುಂಬಾ ಸುಂದರವಾಗಿದೆ" ಎಂದು ಬರೆದಿದ್ದಾರೆ, ಇನ್ನೊಬ್ಬ ಬಳಕೆದಾರರು "ಸ್ವತಃ ಸಂಪಾದಿಸಿದ ಎಲ್ಲವೂ ತುಂಬಾ ಸುಂದರವಾಗಿ ಕಾಣುತ್ತದೆ" ಎಂದು ಬರೆದಿದ್ದಾರೆ.