ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ಸಡನ್ ಆಗಿ ತೆರೆದುಕೊಂಡ ಕಾರಿನ ಡೋರ್‌ಗೆ ಡಿಕ್ಕಿ ಹೊಡೆದು ಯುವ ಕ್ರಿಕೆಟಿಗ ಫರೀದ್ ಖಾನ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾದ ಕ್ರಿಕೆಟಿಗನ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಸ್ತೆ ಅಪಘಾತ ಪ್ರಕರಣಗಳಲ್ಲಿ ಹೆಚ್ಚಾಗಿ ಯಾರೋ ಮಾಡಿದ ಅನಾಹುತಕ್ಕೆ ಇನ್ಯಾರೋ ಬಲಿಯಾಗುವುದು ಇತ್ತೀಚೆಗೆ ಸಾಮಾನ್ಯ ಎನಿಸಿದೆ. ವಾಹನವನ್ನು ಚಲಾಯಿಸುತ್ತಾ ಮನೆಯಿಂದ ಹೊರಟ ವ್ಯಕ್ತಿ ವಾಪಾಸ್ ಮನೆಗೆ ಬರುತ್ತಾನೆ ಎಂಬ ಯಾವ ಗ್ಯಾರಂಟಿಗಳು ಇರುವುದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ಯಾರದೋ ತಪ್ಪಿಗೆ ಯುವ ಕ್ರಿಕೆಟಿಗರೊಬ್ಬರು ಬಲಿಯಾಗಿದ್ದಾರೆ. ಸಡನ್ ಆಗಿ ತೆರೆದುಕೊಂಡ ಕಾರಿನ ಡೋರ್‌ಗೆ ಡಿಕ್ಕಿ ಹೊಡೆದು ಜಮ್ಮು ಕಾಶ್ಮೀರದ ಯುವ ಕ್ರಿಕೆಟಿಗ ಫರೀದ್ ಖಾನ್ ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ಈ ದುರಂತ ನಡೆದಿದ್ದು, ಈ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಯಾವುದೇ ಸೂಚನೆ ನೀಡದೇ ಡೋರ್ ತೆಗೆದ ಕಾರು ಚಾಲಕ

ಯಾವುದೇ ವಾಹನಗಳಿರಲ್ಲಿ ಅದರಲ್ಲೂ ಕಾರುಗಳು ರಸ್ತೆಯಲ್ಲಿರುವಾಗ ತಮ್ಮ ಕಾರಿನ ಬಲಭಾಗದ ಡೋರ್‌ಗಳನ್ನು(ರಸ್ತೆ ಪಕ್ಕದ) ಒಳಗಿನಿಂದ ಕುಳಿತು ತೆರೆಯುವ ವೇಳೆ ಹಿಂದೆ ಮುಂದೆ ಯಾವುದಾದರೂ ವಾಹನಗಳು ಬರುತ್ತಿವೆಯೋ ಎಂಬುದನ್ನು ಗಮನಿಸಿ ಡೋರ್ ತೆಗೆಯಬೇಕಾಗಿದ್ದು ಒಂದು ಜವಾಬ್ದಾರಿಯುತ ಕರ್ತವ್ಯ. ಏಕೆಂದರೆ ಹಿಂದಿನಿಂದ ಬರುತ್ತಿರುವ ವಾಹನಗಳಿಗೆ ಇವರು ಕಾರ್ ಡೋರನ್ನು ಸಡನ್ ಆಗಿ ತೆಗೆದು ಬಿಡುತ್ತಾರೆ ಎಂಬ ಯಾವ ಸೂಚನೆಗಳು ಇರುವುದಿಲ್ಲ. ಆದರೆ ಕೆಲವು ವಾಹನ ಸವಾರರು ಮಾಡುವ ಎಡವಟ್ಟಿನಿಂದ ಇನ್ಯಾರೋ ಜೀವ ಬಿಡಬೇಕಾಗುತ್ತದೆ. ಇಲ್ಲೂ ಅದೇ ರೀತಿಯಾಗಿದೆ.

ಕಾರು ಚಾಲಕನ ಎಡವಟ್ಟಿಗೆ ಉಸಿರು ಚೆಲ್ಲಿದ ಯುವ ಕ್ರಿಕೆಟಿಗ

ಕಾರಿನ ಚಾಲಕ ಯಾವುದೇ ಸೂಚನೆಗಳಿಲ್ಲದೇ ಹಿಂದೆ ಮುಂದೆ ನೋಡದೆ ಒಳಗಿನಿಂದ ಕಾರಿನ ಡೋರನ್ನು ಒಮ್ಮೆಗೆ ತೆಗೆದಿದ್ದಾನೆ. ಆದರೆ ಸ್ಕೂಟರ್‌ನಲ್ಲಿ ವೇಗವಾಗಿ ಹೋಗುತ್ತಿದ್ದ ಕ್ರಿಕೆಟರ್‌ ಫರೀದ್‌ ಖಾನ್ ಅವರಿಗೆ ಇದರ ಅರಿವಿಲ್ಲ. ಪರಿಣಾಮ ಕಾರಿನ ಡೋರ್‌ಗೆ ಫರೀದ್ ಖಾನ್ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದು ಅವರು ರಸ್ತೆಗೆ ಬಿದ್ದಿದ್ದಾರೆ. ಘಟನೆಯಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಭಯಾನಕ ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ನಡೆಯುವ ವೇಳೆ ಫರೀದ್ ಖಾನ್ ಅವರು ಪೂಂಛ್‌ನ ಸ್ಥಳೀಯ ರಸ್ತೆಯಲ್ಲಿ ತಮ್ಮ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ರಸ್ತೆ ಬದಿ ಕಾರು ನಿಲ್ಲಿಸಿದ್ದ ವ್ಯಕ್ತಿ ಯಾವುದೇಸ ಸೂಚನೆಗಳಿಲ್ಲದೇ ಹಠಾತ್ ಆಗಿ ಕಾರಿನ ಡೋರ್ ತೆಗೆದಿದ್ದು, ಕಾರು ಚಾಳಕನ ನಿರ್ಲಕ್ಷ್ಯಕ್ಕೆ ಯುವ ಕ್ರಿಕೆಟಿಗನ ಜೀವ ಬಲಿಯಾಗಿದೆ. ಘಟನೆ ಸ್ಥಳೀಯ ಸಮುದಾಯದಲ್ಲಿ ತೀವ್ರ ಬೇಸರವನ್ನು ಉಂಟು ಮಾಡಿದೆ. ಇದೊಂದು ಎಚ್ಚರಿಕೆಯ ಗಂಟೆಯಾಗಿದ್ದು, ಮುಂದಾದರು ವಾಹನ ಸವಾರರು ಕಾರಿನ ಡೋರ್‌ಗಳನ್ನು ತೆರೆಯುವ ವೇಳೆ ಹಿಂದೆ ಮುಂದೆ ನೋಡುವುದರಿಂದ ಇತರರ ಜೀವಕ್ಕೆ ಆಗುವ ಅಪಾಯವನ್ನು ತಡೆಯಬಹುದಾಗಿದೆ.

ಇದನ್ನೂ ಓದಿ: ಕೊಳಲು ವಾದನಕ್ಕೆ ಬೆರಗಾದ ಕಂದ: ಅಂಬೆಗಾಲಿಡುತ್ತಲೇ ಸಂಗೀತಗಾರನ ಬಳಿ ಬಂದ

ಇದನ್ನೂ ಓದಿ: 2ನೇ ಕ್ಲಾಸ್ ಮಗು ಬಿಟ್ಟು ಬೀಗ ಹಾಕಿ ಹೋದ ಶಿಕ್ಷಕರು: ಹೊರಬರಲು ಯತ್ನಿಸಿ ಕಿಟಕಿಯಲ್ಲಿ ತಲೆ ಸಿಲುಕಿಸಿಕೊಂಡ ಬಾಲಕಿ

Scroll to load tweet…