MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಬಿಹಾರ ರಾಜಕಾರಣದಲ್ಲಿ ಸಂಚಲನ; ಸ್ಪರ್ಧೆಯಿಂದ ಹಿಂದೆ ಸರಿದು NDA ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್

ಬಿಹಾರ ರಾಜಕಾರಣದಲ್ಲಿ ಸಂಚಲನ; ಸ್ಪರ್ಧೆಯಿಂದ ಹಿಂದೆ ಸರಿದು NDA ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್

Prashant Kishor Bihar election: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಪಕ್ಷ ಸಂಘಟನೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.

2 Min read
Author : Mahmad Rafik
Published : Oct 15 2025, 12:39 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ರಶಾಂತ್ ಕಿಶೋರ್
Image Credit : Jan Suraj FB

ಪ್ರಶಾಂತ್ ಕಿಶೋರ್

ಪಟನಾ: ಚುನಾವಣಾ ಚಾಣಕ್ಯ, ಜನ್ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ತಮ್ಮದು ಹೊಸ ರಾಜಕೀಯ ಪಕ್ಷ, ಹೆಚ್ಚಿನ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಶಾಂತ್ ಕಿಶೋರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

26
ಬಿಹಾರ ರಾಜಕಾರಣ
Image Credit : Jan Suraj FB

ಬಿಹಾರ ರಾಜಕಾರಣ

ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್, ಬಿಹಾರ ರಾಜಕಾರಣದ ಕುರಿತು ಮಾತನಾಡಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪ್ರತಿನಿಧಿಸುವ ರಾಘೋಪುರ ವಿಧಾನಸಭಾ ಕ್ಷೇತ್ರದಿಂದ ಪ್ರಶಾಂತ್ ಕಿಶೋರ್ ಸ್ಪರ್ಧಿಸುತ್ತಾರೆ ಎಂದು ವರದಿಯಾಗಿತ್ತು. ಸೋಮವಾರ ಜನ ಸುರಾಜ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗಿದೆ. 2ನೇ ಪಟ್ಟಿಯ 65 ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಶಾಂತ್ ಕಿಶೋರ್ ಹೆಸರು ಇರಲಿಲ್ಲ. ತೇಜಸ್ವಿ ಯಾದವ್ ವಿರುದ್ಧ ಜನ್ ಸುರಜ್ ಪಕ್ಷದಿಂದ ಚಂಚಲ್ ಸಿಂಗ್ ಸ್ಪರ್ಧೆ ಮಾಡುತ್ತಿದ್ದಾರೆ.

Related Articles

Related image1
ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಯಾರಿಗೆಲ್ಲಾ ಟಿಕೆಟ್?
Related image2
ಬಿಹಾರ ಚುನಾವಣೆ ರಣಕಣ: ಚಿರಾಗ್ ಪಾಸ್ವಾನ್ ಮುಂದಿಟ್ರು ಒಂದು ಬೇಡಿಕೆ!
36
ಪಕ್ಷ ಸಂಘಟನೆ
Image Credit : Jan Suraj FB

ಪಕ್ಷ ಸಂಘಟನೆ

ನಾನು ಸ್ಪರ್ಧೆ ಮಾಡಬಾರದು ಎಂದು ಪಕ್ಷ ನಿರ್ಧಾರ ತೆಗೆದುಕೊಂಡಿದ್ದು, ಇದಕ್ಕೆ ಬದ್ಧವಾಗಿದ್ದೇನೆ. ಪಕ್ಷದ ಹಿತಾಸಕ್ತಿ ಹಿನ್ನೆಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ನಾನು ಚುನಾವಣೆಗೆ ಸ್ಪರ್ಧಿಸಿದ್ರೆ ಪಕ್ಷ ಸಂಘಟನೆ ಕೆಲಸಗಳಿಂದ ದೂರವಾಗಬೇಕಾಗುತ್ತದೆ. ಆದ್ದರಿಂದ ವೈಯಕ್ತಿಕ ಚುನಾವಣೆಯಿಂದ ದೂರ ಉಳಿಯುತ್ತಿರೋದಾಗಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

46
ಪ್ರಶಾಂತ್ ಕಿಶೋರ್ ಗುರಿ ಏನು?
Image Credit : Jan Suraj FB

ಪ್ರಶಾಂತ್ ಕಿಶೋರ್ ಗುರಿ ಏನು?

ಚುನಾವಣೆಯೇ ನಾನೇ ನಿಖರವಾಗಿ ಇಷ್ಟೇ ಗೆಲ್ಲುತ್ತೇನೆ ಅಥವಾ ಇಲ್ಲಿಯೇ ಸೋಲು ಎಂದು ಹೇಳಲ್ಲ. 10ಕ್ಕಿಂತ ಅಧಿಕ 150ಕ್ಕಿಂತ ಕಡಿಮೆ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ನಮ್ಮ ಮುಂದಿದೆ. ಒಂದು ವೇಳೆ ನಮಗೆ ಹೆಚ್ಚು ಸೀಟ್ ಸಿಗದಿದ್ರೆ ನಾವು ಜನರ ವಿಶ್ವಾಸವನ್ನು ಸಂಪಾದಿಸಿಲ್ಲ ಎಂದರ್ಥ. ಆದರೆ ನಮ್ಮ ರಾಜಕೀಯದ ಪಯಣ ಮುಂದುವರಿಯುತ್ತದೆ ಎಂದು ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.

56
ಜೆಡಿಯು ಭವಿಷ್ಯ
Image Credit : Jan Suraj FB

ಜೆಡಿಯು ಭವಿಷ್ಯ

ಇದೇ ವೇಳೆ ಸಿಎಂ ನಿತೀಶ್ ಕುಮಾರ್ ಅವರ ಜೆಡಿ(ಯು) 25 ಕ್ಷೇತ್ರಗಳಲ್ಲಿ ಗೆಲ್ಲೋದು ಸಹ ಅನುಮಾನ. ಎನ್‌ಡಿಎ ಒಕ್ಕೂಟದಲ್ಲಿಯೂ ಎಲ್ಲವೂ ಸರಿಯಾಗಿಲ್ಲ. ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಜೆಡಿಯು ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಇನ್ನು ಚಿರಾಗ್ ಪಾಸ್ವಾನ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಅಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಿದ್ದರು. ಈ ಬಾರಿ ಕ್ಷೇತ್ರ ಹಂಚಿಕೆಗೂ ಮುನ್ನವೇ ಚಿರಾಗ್ ಪಾಸ್ವಾನ್ ಬಂಡಾಯ ಕಿಚ್ಚು ಹಚ್ಚಿದ್ದರು. ಈ ಕಿಚ್ಚು ಎನ್‌ಡಿಎಗೆ ಅಪಾಯಕಾರಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ ಚನಾವಣೆಗೆ ಬಿಜೆಪಿ-ಜೆಡಿಯು ಸೀಟು ಹಂಚಿಕೆ ಫೈನಲ್, ಇಬ್ಬರಿಗೂ ತಲಾ 101 ಕ್ಷೇತ್ರ

66
ಜನ್ ಸುರಾಜ್ ಗೆದ್ರೆ? ಮುಂದೇನು?
Image Credit : Jan Suraj FB

ಜನ್ ಸುರಾಜ್ ಗೆದ್ರೆ? ಮುಂದೇನು?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನ್ ಸುರಾಜ್ ಗೆದ್ರೆ ಇದು ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ. ಇದು ಪಕ್ಷದ ವಿಸ್ತರಣೆಗೆ ನಾಂದಿಯಾಗಲಿದೆ. ಈ ಗೆಲುವು ರಾಷ್ಟ್ರ ರಾಜಕಾರಣಕ್ಕೆ ಹೊಸ ದಿಕ್ಸೂಚಿಯಾಗಲಿದೆ ಎಂದು ಹೇಳಿದ್ದಾರೆ. ನವೆಂಬರ್ 6 ಮತ್ತು 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: Bihar Assembly Elections: ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟು ಬಳಿಕ ಹಿಂಪಡೆದ ಆರ್‌ಜೆಡಿ! ಹೈ ಡ್ರಾಮಾ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಹಾರ
ವಿಧಾನಸಭಾ ಚುನಾವಣೆ
ಚುನಾವಣೆ
ಎನ್‌ಡಿಎ
ನೀತೀಶ್ ಕುಮಾರ್
ಚಿರಾಗ್ ಪಾಸ್ವಾನ್
ಬಿಜೆಪಿ

Latest Videos
Recommended Stories
Recommended image1
Toxic: 'ರಾಯ'ನ ಜೊತೆ ಎಂಟ್ರಿ ಕೊಟ್ಟ 'ಟಿಕೆಟ್'! ಯಶ್ ಹಳೇ ವಿಡಿಯೋಗೂ ಸಿನಿಮಾಗೂ ಇದೆಯೇ ನಂಟು?
Recommended image2
ಪ್ರಾಮಿಸ್ ಉಳಿಸಿಕೊಳ್ಳಲು ಚೆನ್ನೈನಿಂದ ಮುಂಬೈಗೆ ಊಟ ತರಿಸಿದ ನಟ ಡಾರ್ಲಿಗ್ ಪ್ರಭಾಸ್; ಇದು ಸಾಧ್ಯವಾಗಿದ್ದು ಹೇಗೆ?
Recommended image3
ಓಡಿ ಹೋಗೋ ಜೋಡಿಗಳಿಗೆ ಹೊಸ ರೂಲ್ಸ್, ಪೋಷಕರಿಗೆ ತಿಳಿಸದೇ ಮದುವೆ ರಿಜಿಸ್ಟ್ರೇಶನ್‌ ಆಗಲ್ಲ
Related Stories
Recommended image1
ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಯಾರಿಗೆಲ್ಲಾ ಟಿಕೆಟ್?
Recommended image2
ಬಿಹಾರ ಚುನಾವಣೆ ರಣಕಣ: ಚಿರಾಗ್ ಪಾಸ್ವಾನ್ ಮುಂದಿಟ್ರು ಒಂದು ಬೇಡಿಕೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved