ಸಿಂದೂರ್ ಕಾರ್ಯಾಚರಣೆಯ ವಾಯುಪಡೆ ಅಧಿಕಾರಿಗಳು ಮತ್ತು ದೇಶಾದ್ಯಂತ 1,090 ಪೊಲೀಸ್ ಸಿಬ್ಬಂದಿಗೆ ಕೇಂದ್ರ ಸರ್ಕಾರವು ಶೌರ್ಯ ಮತ್ತು ಸೇವಾ ಪದಕಗಳನ್ನು ನೀಡಿ ಗೌರವಿಸಿತು

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ಭಾರತೀಯ ವಾಯುಪಡೆ (IAF) ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಸರ್ಕಾರವು ಶೌರ್ಯ ಮತ್ತು ಸೇವಾ ಪದಕಗಳನ್ನು ಘೋಷಿಸಿಸೆ. ಧೈರ್ಯ ಮತ್ತು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಲಾಗಿದೆ. ಆಪರೇಷನ್ ಸಿಂದೂರ ಕಾರ್ಯಚರಣೆಯಲ್ಲಿ ಮುರಿದ್ಕೆ ಮತ್ತು ಬಹಾವಲ್ಪುರ್‌ನಲ್ಲಿರುವ ಭಯೋತ್ಪಾದಕರ ಪ್ರಮುಖ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದ ವಾಯುಪಡೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಭಾಗಿಯಾದ ಒಂಬತ್ತು ವಾಯುಪಡೆ ಅಧಿಕಾರಿಗಳಿಗೆ ಭಾರತದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪದಕವಾದ ವೀರ ಚಕ್ರ ನೀಡಿ ಗೌರವಿಸಲಾಗುತ್ತಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಕನಿಷ್ಠ ಆರು ಪಾಕಿಸ್ತಾನಿ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು.

ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ನರ್ನದೇಶ್ವರ್ ತಿವಾರಿ, ಪಶ್ಚಿಮ ವಾಯುಪಡೆ ಕಮಾಂಡರ್ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಮತ್ತು ಡಿಜಿ ವಾಯು ಕಾರ್ಯಾಚರಣೆಗಳ ಏರ್ ಮಾರ್ಷಲ್ ಅವದೇಶ್ ಭಾರ್ತಿ ಸೇರಿದಂತೆ ನಾಲ್ವರು ಹಿರಿಯ ವಾಯುಪಡೆ ಅಧಿಕಾರಿಗಳು ಸಿಂದೂರ್ ಕಾರ್ಯಾಚರಣೆಯ ಸಮಯದಲ್ಲಿ ಅವರ ನಾಯಕತ್ವಕ್ಕಾಗಿ ಸರ್ವೋತ್ತಮ ಯುದ್ಧ ಸೇವಾ ಪದಕವನ್ನು ಪಡೆದುಕೊಂಡಿದ್ದಾರೆ.

Scroll to load tweet…
Scroll to load tweet…

13 ಭಾರತೀಯ ವಾಯುಪಡೆ ಅಧಿಕಾರಿಗಳಿಗೆ ವಿಶಿಷ್ಟ ಯುದ್ಧ ಸೇವಾ ಪದಕ

ದಾಳಿಗಳನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ಸ್ವಂತ ವಾಯುಪ್ರದೇಶವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ 13 ಭಾರತೀಯ ವಾಯುಪಡೆ ಅಧಿಕಾರಿಗಳಿಗೆ ವಿಶಿಷ್ಟ ಯುದ್ಧ ಸೇವಾ ಪದಕವನ್ನು ನೀಡಲಾಗಿದೆ. ಈ ಅಧಿಕಾರಿಗಳಲ್ಲಿ ಏರ್ ವೈಸ್ ಮಾರ್ಷಲ್ ಜೋಸೆಫ್ ಸುವಾರೆಸ್, ಎವಿಎಂ ಪ್ರಜ್ವಲ್ ಸಿಂಗ್ ಮತ್ತು ಏರ್ ಕಮೋಡೋರ್ ಅಶೋಕ್ ರಾಜ್ ಠಾಕೂರ್ ಸೇರಿದ್ದಾರೆ.

4 ಕೀರ್ತಿ ಚಕ್ರಗಳು, 4 ವೀರ ಚಕ್ರಗಳು ಮತ್ತು 8 ಶೌರ್ಯ ಚಕ್ರ

ಭಾರತೀಯ ಸೇನೆಯ ಇಬ್ಬರು ಹಿರಿಯ ಅಧಿಕಾರಿಗಳಿಗೂ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಸರ್ವೋತ್ತಮ ಯುದ್ಧ ಸೇವಾ ಪದಕವನ್ನು ನೀಡಲಾಯಿತು. ಶೌರ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ 4 ಕೀರ್ತಿ ಚಕ್ರಗಳು, 4 ವೀರ ಚಕ್ರಗಳು ಮತ್ತು 8 ಶೌರ್ಯ ಚಕ್ರಗಳು ಸೇರಿವೆ ಎಂದು ಭಾರತೀಯ ಸೇನಾ ಅಧಿಕಾರಿಗಳು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಪಡೆಗಳ ಸಿಬ್ಬಂದಿಗೆ 1,090 ಪೊಲೀಸ್ ಪದಕಗಳನ್ನು ಸರ್ಕಾರ ಘೋಷಿಸಿತು. ಇದರಲ್ಲಿ 233 ಶೌರ್ಯ ಪದಕಗಳು, 99 ರಾಷ್ಟ್ರಪತಿಯ ವಿಶಿಷ್ಟ ಸೇವಾ ಪದಕಗಳು ಮತ್ತು 758 ಪದಕಗಳು ಸೇರಿವೆ.

ಶೌರ್ಯ ಪದಕಗಳಲ್ಲಿ, 152 ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆಗಳಲ್ಲಿ ತೊಡಗಿರುವ ಸಿಬ್ಬಂದಿಗೆ, 54 ನಕ್ಸಲ್ ವಿರೋಧಿ ಕಾರ್ಯಾಚರಣೆಗಳಿಗೆ, ಮೂರು ಈಶಾನ್ಯದಲ್ಲಿ ಕರ್ತವ್ಯಗಳಿಗೆ ಮತ್ತು 24 ಇತರ ಪ್ರದೇಶಗಳಿಂದ ಬಂದವು. ನಾಲ್ವರು ಅಗ್ನಿಶಾಮಕ ಸಿಬ್ಬಂದಿ ಮತ್ತು ಒಬ್ಬ ಹೋಮ್ ಗಾರ್ಡ್ / ನಾಗರಿಕ ರಕ್ಷಣಾ ಅಧಿಕಾರಿಗೂ ಪ್ರಶಸ್ತಿಗಳು ಸಂದಾಯವಾಗಿದೆ.

Scroll to load tweet…