ವಿಡಿಯೋ ವೈರಲ್: ಮೆಟ್ರೋದಲ್ಲಿ ಮಹಿಳೆಯೊಬ್ಬಳು ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಅಗಿದ್ದು ನೆಟ್ಟಿಗರು ಪುರುಷ ಪ್ರಯಾಣಿಕರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಈ ದೆಹಲಿ ಮೆಟ್ರೋದಲ್ಲಿ ನಡೆಯುವ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಮೆಟ್ರೋ ಪ್ರಯಾಣದಲ್ಲಿ ವ್ಯಕ್ತಿಯೊಬ್ಬ, ಮಹಿಳೆ ಸೊಂಟಕ್ಕೆ ಕೈ ಹಾಕಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆ ವ್ಯಕ್ತಿಯ ಕಪಾಳಕ್ಕೆ ಏಟು ನೀಡಿದ್ದಾರೆ. ಇತರೆ ಪ್ರಯಾಣಿಕರು, ವ್ಯಕ್ತಿಗೆ ಕ್ಷಮೆ ಕೇಳುವಂತೆ ಹೇಳುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಕೆಲವರು ಏಟು ತಿಂದ ವ್ಯಕ್ತಿಯ ಪರವಾಗಿಯೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ದೆಹಲಿ ಬಹುತೇಕ ಭಾಗಗಳಿಗೂ ಮೆಟ್ರೋ ರೈಲು ತಲುಪಿದೆ. ಹಾಗಾಗಿ ಪೀಕ್ ಅವರ್‌ಗಳಲ್ಲಿ ಮೆಟ್ರೋ ರೈಲುಗಳು ತುಂಬಿ ತುಳುಕುತ್ತಿರುತ್ತವೆ. ಮೆಟ್ರೋ ರೈಲಿನಲ್ಲಿ ಸೀಟ್ ಹಿಡಿಯಲು ಮಹಿಳೆಯರ ನಡುವೆ ಜಗಳ ನಡೆಯುತ್ತಿರುತ್ತದೆ. ಕೆಲವರು ಅನಾವಶ್ಯಕವಾಗಿ ಸಣ್ಣ ಸಣ್ಣ ವಿಚಾರಗಳಿಗೂ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ. ಇಂತಹ ಘಟನೆಗಳು ದೆಹಲಿ ಮೆಟ್ರೋದಲ್ಲಿ ಪ್ರತಿನಿತ್ಯ ನಡೆಯುತ್ತಿರುತ್ತವೆ.
ಮಹಿಳೆಯ ಆರೋಪ ಏನು?
ಇದೀಗ ಮಹಿಳೆಯೊಬ್ಬಳು ಪ್ರಯಾಣಿಕನ ಮೇಲೆ ಗಂಭೀರ ಆರೋಪ ಮಾಡಿದ್ದಾಳೆ. ತನ್ನ ಜೊತೆಯಲ್ಲಿದ್ದ ಮಹಿಳೆಗೆ ಆತ ಕೈ ಹಾಕಿದ್ದಾನೆ ಎಂದು ಆರೋಪಿಸಿ ಎಲ್ಲರ ಮುಂದೆ ಆತನ ಕಪಾಳಕ್ಕೆ ಹೊಡೆದಿದ್ದಾರೆ. ಸೀಟ್ ಖಾಲಿಯಿದ್ದು, ಪಕ್ಕಕ್ಕೆ ಸರಿದುಕೊಳ್ಳುವಂತೆ ಹೇಳಿದೆ. ಆದರೆ ಈ ವ್ಯಕ್ತಿ ನನ್ನೊಂದಿಗಿದ್ದ ಮಹಿಳೆಯ ಸೊಂಟ ಟಚ್ ಮಾಡಿ ಬಾ ಕುಳಿತುಕೋ ಎಂದು ಹೇಳುತ್ತಾನೆ. ಸಾರ್ವಜನಿಕ ಸ್ಥಳದಲ್ಲಿ ಹೀಗೆ ವರ್ತಿಸಲು ಈತನಿಗೆ ಎಷ್ಟು ಧೈರ್ಯ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಎಂಆರ್‌ಸಿಎಲ್ ತಂದಿಟ್ಟ ಸಂಕಷ್ಟ, ಮೆಟ್ರೋ ಟೋಕನ್‌ಗೆ ಗಂಟೆಗಟ್ಟಲೆ ಕ್ಯೂ ವಿದ್ಯಾರ್ಥಿಗಳ ಆಕ್ರೋಶ, ಇದಕ್ಕಿಂತ ಬಸ್ಸು ಲೇಸು
ಸಹ ಪ್ರಯಾಣಿಕರಿ ಹೇಳಿದ್ದೇನು?
ಸಹ ಪ್ರಯಾಣಿಕರು, ಆ ವ್ಯಕ್ತಿಯಿಂದ ತಪ್ಪಾಗಿದೆ ಬಿಟ್ಟುಬಿಡಿ ಎಂದು ಮಹಿಳೆಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಹಾಗೆ ಆ ವ್ಯಕ್ತಿಗೂ ಕ್ಷಮೆ ಕೇಳುವಂತೆ ಸಲಹೆ ನೀಡಿದ್ದಾರೆ. ಜನರು ಜಗಳ ಶಮನಗೊಳಿಸುತ್ತಿರೋ ಸಂದರ್ಭದಲ್ಲಿಯೇ ಮಹಿಳೆ ಮತ್ತೆ ಆ ವ್ಯಕ್ತಿಯ ಕಪಾಳಕ್ಕೆ ಹೊಡೆಯತ್ತಾರೆ. ನಾನು ಮಹಿಳೆಯ ಸೊಂಟಕ್ಕೆ ಕೈ ಹಾಕಿಲ್ಲ. ಪಕ್ಕದಲ್ಲಿ ಸೀಟ್ ಖಾಲಿಯಿರೋದನ್ನು ಹೇಳಿದೆ. ಇದನ್ನು ಮಹಿಳೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನೆಟ್ಟಿಗರಿಂದ ಪುರುಷ ಪ್ರಯಾಣಿಕರ ಬಗ್ಗೆ ಕಳವಳ
ಈ ವಿಡಿಯೋ ನೋಡಿದ ನೆಟ್ಟಿಗರು, ಮಹಿಳೆಯರು ಸಣ್ಣ ಸಣ್ಣ ವಿಚಾರಕ್ಕೂ ಗಲಾಟೆ ಮಾಡುತ್ತಾರೆ. ಆ ವ್ಯಕ್ತಿಯ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಮಹಿಳೆಗಿಲ್ಲ. ಸಾರ್ವಜನಿಕವಾಗಿ ಆ ವ್ಯಕ್ತಿಯನ್ನು ಅವಮಾನಿಸೋದರ ಜೊತೆಗೆ ಆತನ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಆ ವ್ಯಕ್ತಿ ಉದ್ದೇಶ ಸರಿಯಾಗಿದ್ದರೆ ಆತ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಒಂದಿಷ್ಟು ಮಂದಿ ಇತ್ತೀಚಿನ ದಿನಗಳಲ್ಲಿ ಪುರುಷರ ಮೇಲೆಯೂ ದೌ*ರ್ಜನ್ಯಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಖಿ ಸಾವಂತ್ ಮಾಜಿ ಪ್ರೇಮಿಗೆ ವಿಮಾನದಲ್ಲಿ ಥಳಿತ: ಆಂಟಿ ಕೊಟ್ಟ ಏಟಿಗೆ ಗಳಗಳನೇ ಕಣ್ಣೀರಿಟ್ಟ ದೀಪಕ್
