ಪಾಕಿಸ್ತಾನ ಇನ್‌ಫ್ಲುಯೆನ್ಸರ್ ಜೊತೆ ಕೊಲಬರೇಶನ್, ಮಲಬಾರ್ ಗೋಲ್ಡ್‌ಗೆ ಮತ್ತೆ ಬಹಿಷ್ಕಾರ ಬಿಸಿ ಎದುರಾಗಿದೆ. ದೀಪಾವಳಿ ದಾಂತೆರಸ್ ಬೆನ್ನಲ್ಲೇ ಮಲಬಾರ್ ಗೋಲ್ಡ್ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಮಲಬಾರ್ ಗೋಲ್ಡ್ ಪಾಕಿಸ್ತಾನ ಪ್ರೀತಿ ಏನು?

ನವದೆಹಲಿ (ಅ.16) ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಇದರ ಜೊತೆ ಧಾಂತೆರಸ್ ಆಚರಣೆಯೂ ಬಂದಿದೆ. ಧಾಂತೆರಸ್ ಸಂಭ್ರಮದಲ್ಲಿ ಚಿನ್ನ ಖರೀದಿಸಿದರೆ ಆಯುರಾರೋಗ್ಯ ಐಶ್ವರ್ಯ ವೃದ್ಧಿಯಾಗಲಿದೆ ಅನ್ನೋ ನಂಬಿಕೆ ಇದೆ. ಈ ಸಂಭ್ರಮದಲ್ಲಿ ಕೇರಳ ಮೂಲದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಬಹಿಷ್ಕಾರ ಬಿಸಿ ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಲಬಾರ್ ಗೋಲ್ಡ್ ಪಾಕಿಸ್ತಾನ ಇನ್‌ಫ್ಲುಯೆನ್ಸರ್ ಅಲಿಷ್ಬಾ ಖಾಲೀದ್ ಜೊತೆ ಕೊಲಬರೇಶನ್ ಮಾಡಿಕೊಂಡಿರುವ ವಿಚಾರ ಇದೀಗ ಮತ್ತೆ ಕಾವು ಪಡೆದುಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾ ಮೂಲಕ ಆಲಿಷ್ಬಾ ಖಾಲೀದ್ ದೇಶ ವಿದೇಶಗಳಲ್ಲಿ ಮಲಬಾರ್ ಗೋಲ್ಡ್ ಪ್ರಚಾರ ಮಾಡಲಿದ್ದಾರೆ. ಇಷ್ಟಕ್ಕೆ ಬಹಿಷ್ಕಾರದ ಕೂಗು ಕೇಳಿಬಂದಿಲ್ಲ. ಇದರ ಹಿಂದೆ ಒಂದು ಬಲವಾದ ಕಾರಣವಿದೆ.

ಆಪರೇಶನ್ ಸಿಂದೂರ್ ಅಣಕಿಸಿದ್ದ ಆಲಿಷ್ಬಾ ಖಾಲೀದ್

ಪೆಹಲ್ಗಾಂ ಉಗ್ರ ದಾಳಿಗೆ ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತ ಆಪರೇಶನ್ ಸಿಂದೂರ್ ಕಾರ್ಯಾಚರಣೆ ನಡೆಸಿತ್ತು. ಪಾಕಿಸ್ತಾನ ಉಗ್ರ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ವೇಳೆ ಇದೇ ಆಲೀಷ್ಬಾ ಖಾಲೀದ್ ಸೋಶಿಯಲ್ ಮೀಡಯಾ ಮೂಲಕ ಪ್ರತಿಕ್ರಿಯೆ ನೀಡಿದ್ದರು ಭಾರತದ ನಡೆ ಅತ್ಯಂತ ಭೀಕರವಾಗಿತ್ತು. ಉಗ್ರ ದಾಳಿಯಲ್ಲಿ ಪಾಕಿಸ್ತಾನ ಪಾತ್ರದ ಕುರಿತು ಭಾರತ ದಾಖಲೆ ನೀಡಲು ವಿಫಲವಾಗಿದೆ. ಆದರೆ ಭಾರತ ರಾತ್ರಿ ವೇಳೆ ದಾಳಿ ಮಾಡಿದೆ. ಮಸೀದಿ, ಅಮಾಯಕ ನಾಗರೀಕರ ಗುರಿಯಾಗಿಸಿ ಭಾರತ ದಾಳಿ ಮಾಡಿದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳುವ ಭಾರತದ ಅಸಲಿಯತ್ತು ಬಯಲಾಗಿದೆ. ಪೋಸ್ಟ್ ಮಾಡಿದ್ದರು. ಬಳಿಕ ಭಾರತೀಯರ ಭಾರಿ ವಿರೋಧದ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿದ್ದರು.

ಕೋರ್ಟ್ ಮೆಟ್ಟೇಲಿರಿರುವ ಮಲಬಾರ್ ಗೋಲ್ಡ್

ಸೆಪ್ಟೆಂಬರ್ ತಿಂಗಳಲ್ಲಿ ಮಲಬಾರ್ ಗೋಲ್ಡ್ ವಿರುದ್ಧ ಭಾರಿ ಆಕ್ರೋಶ ಹೊರಬಿದ್ದಿತ್ತು. ಲಂಡನ್ ಮೂಲಕ ಪಾಕಿಸ್ತಾನಿ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ಜೊತೆ ಮಲಬಾರ್ ಆ್ಯಂಡ್ ಹೋಲ್ಡ್ ಕೊಲಬರೇಶನ್ ಮಾಡಿಕೊಂಡಿತ್ತು. ಹೀಗಾಗಿ ಸೆಪ್ಟೆಂಬರ್ ತಿಂಗಳಲ್ಲೇ ಮಲಬಾರ್ ಗೋಲ್ಡ್ ವಿರುದ್ದ ಬಹಿಷ್ಕರ ಕೂಗು ಕೇಳಿಬಂದಿತ್ತು. ಮಲಬಾರ್ ಗೋಲ್ಡ್ ಪಾಕಿಸ್ತಾನದ ಮೇಲೆ ಅನುಕಂಪವಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹಬ್ಬಿತ್ತು. ಹೀಗಾಗಿ ಬಾಂಬೆ ಹೈ ಕೋರ್ಟ್ ಮೆಟ್ಟೇಲಿರಿದ್ದ ಮಲಬಾರ್ ಗೋಲ್ಡ್ ಅರ್ಜಿ ಕುರಿತು ಮಹತ್ವದ ಆದೇಶ ನೀಡಲಾಗಿತ್ತು. ಮೆಟಾ ಹಾಗೂ ಗೂಗಲ್‌ಗೆ ಕೋರ್ಟ್ ಸೂಚನೆ ನೀಡಿತ್ತು. ಮಾನಹಾನಿಕರ ಪೋಸ್ಟ್‌ಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿತ್ತು.

ಲಂಡನ್‌ನಲ್ಲಿ ಮಲಬಾರ್ ಗೋಲ್ಡ್ ಕಾರ್ಯಕ್ರಮದಲ್ಲಿ ಲಂಡನ್ ಮೂಲದ ಪಾಕಿಸ್ತಾನ ಇನ್‌ಫ್ಲುಯೆನ್ಸರ್ ಅಲಿಷ್ಬಾ ಖಾಲೀದ್, ಬ್ರ್ಯಾಂಡ್ ಅಂಬಾಸಿಡರ್ ಕರೀನಾ ಕಪೂರ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ಕುರಿತು ರೀಲ್ಸ್‌ಗಳನ್ನು ಖಾಲೀದ್ ಪೋಸ್ಟ್ ಮಾಡಿದ್ದರು.

ಸೆಪ್ಟೆಂಬರ್‌ನಲ್ಲಿ ಆರಂಭಗೊಂಡ ಈ ವಿವಾದ ಇದೀಗ ದೀಪಾವಳಿ ಸಂಭ್ರಮದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ. ಧಾಂತೆರಸ್ ಕಾರಣದಿಂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್‌ನಿದ ಚಿನ್ನ ಖರೀದಿಸಬೇಡಿ, ಬಹಿಷ್ಕರಿಸಿ ಎಂದು ಮತ್ತೆ ಸೋಶಿಯಲ್ ಮೀಡಿಯಾಗಳ ಮೂಲಕ ಕೂಗು ಕೇಳಿಬರುತ್ತಿದೆ.