ಭಾರತೀಯ ಜೀವ ವಿಮಾ ನಿಗಮದ (LIC) ಬೃಹತ್ ಜಾಹೀರಾತು ಬಿಲ್‌ಬೋರ್ಡ್ ಭಾರೀ ಮಳೆಗೆ ಕುಸಿದು ಆಟೋ ಮೇಲೆ ಬಿದ್ದಿದೆ. ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಜೀವ ಉಳಿಸುವ ವಿಮೆಯ ಜಾಹೀರಾತಿನಿಂದಲೇ ಜೀವಕ್ಕೆ ಆಪತ್ತು ಬಂದಿದ್ದಕ್ಕೆ ಅನೇಕರು ಅಚ್ಚರಿಪಟ್ಟಿದ್ದಾರೆ.
ಅಪತ್ಕಾಲಕ್ಕೆ ನೆರವಾಗಲಿ ಎಂದು ಅನೇಕರು ಲೈಫ್ ಇನ್ಶ್ಯುರೆನ್ಸ್ ಮಾಡಿಸ್ತಾರೆ. ಅನೇಕರು ಜೀವನಕ್ಕೊಂದು ವಿಮೆ ಮಾಡಿಸಲಿ ಎಂದು ಭಾರತೀಯ ಜೀವ ವಿಮಾ ನಿಗಮದ ಏಜೆಂಟರುಗಳು ಜನರಲ್ಲಿ ವಿಮೆ ಮಾಡ್ಸಿ ವಿಮೆ ಮಾಡ್ಸಿ ಎಂದು ತಲೆ ತಿನ್ನುವುದನ್ನು ನೋಡಬಹುದು. ಆದರೆ ಇಲ್ಲೊಂದು ಭಾರತೀಯ ಜೀವ ವಿಮಾ ನಿಗಮದ ಜಾಹೀರಾತಿನಿಂದಲೇ ವ್ಯಕ್ತಿಯೊಬ್ಬರು ಜೀವ ಕಳೆದುಕೊಳ್ಳುವಂತಹ ಘಟನೆ ಸಂಭವಿಸುವುದರಲ್ಲಿತ್ತು. ಆದರೆ ಆತನ ಅದೃಷ್ಟ ಚೆನ್ನಾಗಿತ್ತೋ ಏನೋ ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿದ್ದಾನೆ. ಅಸ್ಸಾಂನ ಸಿಲ್ಚಾರ್‌ನಲ್ಲಿ ಈ ಘಟನೆ ನಡೆದಿದೆ.
ಅಸ್ಸಾಂನ ಸಿಲ್ಚಾರ್‌ನಲ್ಲಿ ಆಗಿದ್ದೇನು?
ಬಹುತೇಕ ನಗರಗಳಲ್ಲಿ ಕೆಲ ಬ್ರಾಂಡ್‌ಗಳಿಗೆ ಸಂಬಂಧಿಸಿದ ಅಥವಾ ಬ್ಯುಸಿನೆಸ್‌ಗೆ ಸಂಬಂಧಿಸಿದ ಜಾಹೀರಾತುಗಳನ್ನು ಭಾರಿ ಗಾತ್ರದ ಬಿಲ್ ಬೋರ್ಡ್‌ಗಳಲ್ಲಿ ಪ್ರಕಟಿಸುವುದನ್ನು ನೀವು ನೋಡಿರಬಹುದು. ಅದೇ ರೀತಿ ಭಾರತೀಯ ಜೀವ ವಿಮಾ ನಿಗಮದ ಜಾಹಿರಾತಿನ ಭಾರಿ ಗಾತ್ರದ ಬಿಲ್ ಬೋರ್ಡನ್ನು ಅಸ್ಸಾಂನ ಸಿಲ್ಚಾರ್‌ನಲ್ಲಿ ಅಳವಡಿಸಲಾಗಿತ್ತು. ಆದರೆ ಸುರಿದ ಭಾರಿ ಮಳೆಗೆ ಈ ಬಿಲ್‌ಬೋರ್ಡ್ ವಾಹನ ಸವಾರರು ರಸ್ತೆಯಲ್ಲಿದ್ದಾಗಲೇ ರಸ್ತೆಗೆ ಕುಸಿದು ಬಿದ್ದಿದೆ. ಇದರಿಂದ ಆಟೋ ಚಾಲಕರೊಬ್ಬರು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಅನೇಕರು ಅದು ಲೈಫ್ ಇನ್ಶ್ಯುರೆನ್ಸ್‌ನ ಬಿಲ್‌ಬೋರ್ಡ್ ಎಂದು ತಿಳಿದು ಹಾಸ್ಯಮಯ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.
ವಾಹನಗಳು ಚಲಿಸುತ್ತಿದ್ದಾಗಲೇ ರಸ್ತೆ ಮೇಲೆ ಬಿದ್ದ ಭಾರಿ ಗಾತ್ರದ ಬಿಲ್‌ಬೋರ್ಡ್:
ಆಟೋದ ಮೇಲೆ ಈ ಬಿಲ್‌ಬೋರ್ಡ್ ಬಿದ್ದಿದ್ದು, ಆಟೋ ಚಾಲಕ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವುದನ್ನು ವೀಡಿಯೋದಲ್ಲಿ ನೋಡಬಹುದು. ವೀಡಿಯೋ ನೋಡಿದ ಒಬ್ಬರು, ಈ ವಿಡಿಯೋ ಇನ್ಶೂರೆನ್ಸ್ ಪಡೆಯುವುದಕ್ಕೆ ಸಹಾಯ ಮಾಡಿದೆ ಎಂದು ಇಬ್ಬರು ಕಾಮೆಂಟ್ ಮಾಡಿದ್ರೆ ಇನ್ನೊಬ್ರು ಆತ ವಿಮೆ ಮಾಡಿಸುವ ಮೊದಲೇ ವಿಮೆ ಪಾಲಿಸಿ ಸಿಗುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಎಲ್‌ಐಸಿ ಟ್ಯಾಗ್ ಲೈನ್ ಆದ 'ಜೀವನದ ಜೊತೆಗೆ ಹಾಗೂ ಜೀವನದ ನಂತರವೂ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಲೈಫ್ ಇನ್ಶ್ಯುರೆನ್ಸ್ ಏಕೆ ಅಗತ್ಯ ಎಂಬುದನ್ನು ಎಲ್‌ಐಸಿ ಈ ಮೂಲಕ ಹೇಳ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ರೀತಿ ನೂ ಮಾರ್ಕೆಟಿಂಗ್ ಮಾಡ್ಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಲ್‌ಐಸಿ ಪಾಲಿಸಿಯನ್ನು ಹೀಗೂ ಮಾರಾಟ ಮಾಡ್ಬಹುದು, ಇದೊಂದು ಹೈ ಲೆವೆಲ್ ಮಾರ್ಕೆಟಿಂಗ್ ಟ್ರಿಕ್ಸ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಅಪತ್ಕಾಲದಲ್ಲಿ ನೆರವಾಗುತ್ತದೆ ಎಲ್‌ಐಸಿ ಮಾಡಿಸಿ ಎಂದು ಹೇಳುವ ಜಾಹಿರಾತಿನ ಬಿಲ್‌ಬೋರ್ಡೇ ವ್ಯಕ್ತಿಗೆ ಅಪತ್ಕಾಲ ಸೃಷ್ಟಿಸಿದ್ದು ವಿಪರ್ಯಾಸವೇ ಸರಿ.
ಇದನ್ನೂ ಓದಿ: ರಾಜಸ್ಥಾನ ಬಳಿಕ ಮಧ್ಯಪ್ರದೇಶದಲ್ಲೂ ಕೆಮ್ಮಿನ ಸಿರಪ್ ದುರಂತ ಆರು ಮಕ್ಕಳು ಸಾವು
ಇದನ್ನೂ ಓದಿ: ಕಣ್ಣು ಮಿಟಿಕಿಸುವುದರೊಳಗೆ ಕಣ್ ಮುಂದಿದ್ದ ನೆಕ್ಲೇಸ್ ಮಾಯ: ಜ್ಯುವೆಲ್ಲರಿ ಶಾಪಲ್ಲಿ ದಂಪತಿ ಕೈಚಳಕ
ಇದನ್ನೂ ಓದಿ: ಮನೆಮುಂದೆ ನಾಯಿ ಕರೆತಂದು ಮಲಮೂತ್ರ ಮಾಡಿಸ್ತಿದ್ದ ಪೊಲೀಸ್: ಆಕ್ಷೇಪಿಸಿದ ಮಹಿಳೆಗೆ ಹೆಂಡ್ತಿ ಕರೆಸಿ ಹಲ್ಲೆ
ಇದನ್ನೂ ಓದಿ: 2 ವರ್ಷದ ಆರ್ಯತಾರಾ ಶಕ್ಯಾ ನೇಪಾಳದ ಹೊಸ ಕನ್ಯಾದೇವತೆಯಾಗಿ ಆಯ್ಕೆ
