Chikkamagaluru online job fraud on Telegram:ಚಿಕ್ಕಮಗಳೂರು (ಸೆ.29): ಅಂತರ್ಜಾಲದಲ್ಲಿ ವರ್ಕ್‌ಫ್ರಮ್ ಹೋಂ ಕುರಿತಾದ ಆಕರ್ಷಕ ಜಾಹೀರಾತನ್ನು ನಂಬಿದ ಚಿಕ್ಕಮಗಳೂರಿನ ಮಹಿಳೆಯೊಬ್ಬರು ₹2,57,600 ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು. ತನಿಖೆ ನಡೆಸಲಾಗುತ್ತಿದೆ.
ಚಿಕ್ಕಮಗಳೂರು (ಸೆ.29): ಅಂತರ್ಜಾಲದಲ್ಲಿ ವರ್ಕ್‌ಫ್ರಮ್ ಹೋಂ ಕುರಿತಾದ ಆಕರ್ಷಕ ಜಾಹೀರಾತನ್ನು ನಂಬಿದ ಚಿಕ್ಕಮಗಳೂರಿನ ಮಹಿಳೆಯೊಬ್ಬರು ₹2,57,600 ಕಳೆದುಕೊಂಡಿರುವ ಘಟನೆ ನಡೆದಿದೆ.
ವಂಚಿಸಿದ್ದು ಹೇಗೆ?
ಸೈಬರ್ ವಂಚಕರು ಟೆಲಿಗ್ರಾಂ ಆ್ಯಪ್ ಮೂಲಕ 'ವರ್ಕ್‌ಫ್ರಮ್ ಹೋಂ ಮಾಡಲು ಇಚ್ಛಿಸುವವರು ಈ ಲಿಂಕ್ ಕ್ಲಿಕ್ ಮಾಡಿ' ಎಂದು ಜಾಹೀರಾತು ಕಳುಹಿಸಿದ್ದರು. ಈ ಆಮಿಷಕ್ಕೆ ಬಲಿಯಾದ ಮಹಿಳೆ ಲಿಂಕ್ ಕ್ಲಿಕ್ ಮಾಡಿ, ವಂಚಕರ ಸೂಚನೆಗಳನ್ನು ಪಾಲಿಸಿದ್ದಾರೆ.
ಮೊದಲಿಗೆ, ವಂಚಕರು ಸಣ್ಣ ಟಾಸ್ಕ್‌ಗಳನ್ನು ನೀಡಿ, ವಿಶ್ವಾಸ ಗಳಿಸಲು ₹1000 ಮತ್ತು ₹1300 ಪಾವತಿಸಿದ್ದಾರೆ. ನಂತರ, 'ಹಣ ಇನ್ವೆಸ್ಟ್ ಮಾಡಿದರೆ ದುಪ್ಪಟ್ಟು ಲಾಭ' ಎಂದು ಆಮಿಷ ಒಡ್ಡಿ, ಹಂತಹಂತವಾಗಿ ₹2,57,600 ಪಡೆದುಕೊಂಡು ಮೋಸ ಮಾಡಿದ್ದಾರೆ.
ಇದನ್ನೂ ಓದಿ: 'ಬಾಹ್ಯಾಕಾಶದಲ್ಲಿ ಸಿಲುಕಿದ್ದೇನೆ ಆಮ್ಲಜನಕ ಖರೀದಿಗೆ ಹಣ ಬೇಕು..' ಆನ್‌ಲೈನ್ ಪ್ರೇಮಿ ಮಾತು ನಂಬಿ 6 ಲಕ್ಷ ಕಳ್ಕೊಂಡ 80 ವರ್ಷದ ವೃದ್ಧೆ!
ವಂಚನೆಗೊಳಗಾದ ಮಹಿಳೆ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ತನಿಖೆಗೆ ಒಳಪಡಿಸಿದ್ದು, ಸೈಬರ್ ವಂಚಕರನ್ನು ಪತ್ತೆಹಚ್ಚುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಇಂತಹ ಆನ್‌ಲೈನ್ ಜಾಹೀರಾತುಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
