ರಾಜಸ್ಥಾನದ ವಾರ್ಷಿಕ ಪುಷ್ಕರ್ ಜಾನುವಾರು ಮೇಳದಲ್ಲಿ 23 ಕೋಟಿ ಮೌಲ್ಯದ 'ಅನ್‌ಮೋಲ್‌' ಎಮ್ಮೆ ಮತ್ತು 15 ಕೋಟಿ ಮೌಲ್ಯದ 'ಶಹಬಾಜ್‌' ಕುದುರೆ ಪ್ರಮುಖ ಆಕರ್ಷಣೆಯಾಗಿವೆ. ಈ ದುಬಾರಿ ಜಾನುವಾರುಗಳನ್ನು ನೋಡಲು ದೇಶ-ವಿದೇಶಗಳಿಂದ ಜನರು ಆಗಮಿಸುತ್ತಿದ್ದು, ಇವುಗಳ ನಿರ್ವಹಣಾ ವೆಚ್ಚವೂ ಅಧಿಕವಾಗಿದೆ.

ನವದೆಹಲಿ: 23 ಕೋಟಿ ಮೌಲ್ಯದ ಎಮ್ಮೆ, 15 ಕೋಟಿ ಮೌಲ್ಯದ ಕುದುರೆ ಈ ಬಾರಿ ರಾಜಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಪುಷ್ಕರ್ ಜಾನುವಾರು ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿ ವರ್ಷ ನಡೆಯುವ ಪುಷ್ಕರ್‌ ಮೇಳದಲ್ಲಿ ಭಾರತದಲ್ಲೇ ಅತ್ಯಂತ ದುಬಾರಿ ಜಾನುವಾರುಗಳನ್ನು ಪ್ರದರ್ಶಿಸಲಾಗುತ್ತದೆ. ಇಂಥ ಜಾನುವಾರುಗಳನ್ನು ಖರೀದಿಸಲು, ನೋಡಲೆಂದೇ ಭಾರೀ ಸಂಖ್ಯೆಯಲ್ಲಿ ಜನ ದೇಶ-ವಿದೇಶಗಳಿಂದ ಆಗಮಿಸುವುದು ವಿಶೇಷ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

23 ಕೋಟಿಯ ಅನ್‌ಮೋಲ್‌

23 ಕೋಟಿ ಬೆಲೆ ಬಾಳುವ ರಾಜಸ್ಥಾನದ ಅನ್‌ಮೋಲ್‌ ಎಮ್ಮೆ ಮೇಳದ ಮತ್ತೊಂದು ವಿಶೇಷ. ಇದು ಮಾಮೂಲಿ ಎಮ್ಮೆ ಅಲ್ಲ, ಇದರ ತೂಕವೇ 1500 ಕೆ.ಜಿ. ಇದೆ. ಪ್ರತಿದಿನ ಸಾವಿರಾರು ರುಪಾಯಿ ವೆಚ್ಚ ಮಾಡಿ ಈ ಎಮ್ಮೆಗೆ ವಿಶೇಷ ಆಹಾರ ನೀಡಲಾಗುತ್ತದೆ. ಇದನ್ನು ಸಂತಾನೋತ್ಪತ್ತಿಗಾಗಿ ಬಳಸಲಾಗುತ್ತದೆ. ಇದರಿಂದಲೇ ಮಾಸಿಕ 4 ಲಕ್ಷ ರು. ವರೆಗೆ ಆದಾಯ ಬರುತ್ತದೆ. ಇನ್ನು ಉಜ್ಜೈನ್‌ ಮೂಲದ ಮತ್ತೊಂದು ಎಮ್ಮೆ ರಾಣಾಗೆ 25 ಲಕ್ಷ ರು. ವರೆಗೆ ಬಿಡ್‌ ಬಂದಿದೆ ಅಂತೆ. 600 ಕೆ,ಜಿ. ತೂಕದ, 8 ಅಡಿ ಉದ್ದ ಹಾಗೂ 5.5 ಅಡಿ ಎತ್ತರದ ಈ ಎಮ್ಮೆಯ ಆಹಾರಕ್ಕೆಂದೇ ನಿತ್ಯ 1500 ರು. ವೆಚ್ಚ ಮಾಡುತ್ತೇವೆ ಎನ್ನುತ್ತಾರೆ ಮಾಲೀಕರು.

ಇದನ್ನೂ ಓದಿ: Relationship: ಅವನಿಗಾಗಿ ಮಗಳನ್ನು ಕಳೆದುಕೊಂಡ್ಳು, ಮಗನ ಮೇಲೆ ತಂದೆಯಿಂದ ಗುಂಡು: ಕರುಳು ಹಿಂಡುವ 2 ಕಥೆಗಳು

15 ಕೋಟಿಯ ಶಹಬಾಜ್‌

ಚಂಡೀಗಢದ ಗೇರಿ ಗಿಲ್‌ ಅವರ ಎರಡೂವರೆ ವರ್ಷದ ಕುದುರೆ ಶಹಬಾಜ್‌ ಪುಷ್ಕರ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಹಲವು ಸ್ಪರ್ಧೆಗಳಲ್ಲಿ ಗೆದ್ದಿರುವ ಈ ಮಾರ್‌ವಾರಿ ತಳಿಯ ಕುದುರೆಗೆ ಈಗಾಗಲೇ ಗ್ರಾಹಕರು 15 ಕೋಟಿ ವರೆಗೆ ಬೆಲೆ ನಿಗದಿ ಮಾಡಿದ್ದಾರಂತೆ. ಅದೇ ರೀತಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿರುವ ಬಾದಲ್‌ ಕುದುರೆಗೂ ಭಾರೀ ಬೇಡಿಕೆ ಇದೆ. 11 ಕೋಟಿ ರು. ಕೊಟ್ಟು ಈ ಕುದುರೆ ಖರೀದಿಸಲು ಜನ ಮುಂದೆ ಬಂದಿದ್ದಾರೆ. ಆದರೆ, ಮಾಲೀಕರು ಮಾತ್ರ ಈ ಕುದುರೆ ಮಾರಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಮದುವೆಯಲ್ಲಿ ವಧು ಧರಿಸುವ ಚಿನ್ನಾಭರಣಕ್ಕೆ ಮಿತಿ ಹೇರಿದ ಗ್ರಾಮ; ನಿಯಮ ಉಲ್ಲಂಘಿಸಿದ್ರೆ 50 ಸಾವಿರ ದಂಡ

Scroll to load tweet…

Scroll to load tweet…