Vidura Niti: ಗಂಡ-ಹೆಂಡ್ತಿಯಲ್ಲಿ 7 ಗುಣಗಳಿದ್ರೆ ಸಂಸಾರದಲ್ಲಿ ಜಗಳವೇ ಆಗಲ್ಲ
ಮಹಾಭಾರತದ ವಿದುರನ ನೀತಿಶಾಸ್ತ್ರವು ಸುಖಮಯ ಜೀವನಕ್ಕೆ ದಾರಿದೀಪವಾಗಿದೆ. ಈ ಲೇಖನದಲ್ಲಿ, ಗಂಡ-ಹೆಂಡತಿಯರ ನಡುವಿನ ಮನಸ್ತಾಪವನ್ನು ದೂರವಿಟ್ಟು, ನೆಮ್ಮದಿಯ ಜೀವನ ನಡೆಸಲು ಸಹಾಯ ಮಾಡುವ ಏಳು ಪ್ರಮುಖ ಸಪ್ತಸೂತ್ರಗಳನ್ನು ವಿವರಿಸಲಾಗಿದೆ.

ವಿದುರನ ನೀತಿಶಾಸ್ತ್ರ
ಚಾಣಕ್ಯ ನೀತಿಯಂತೆ ವಿದುರನ ನೀತಿಶಾಸ್ತ್ರಗಳು ಜೀವನಕ್ಕೆ ದಾರಿದೀಪವಾಗಿದೆ. ವಿದುರನ ನೀತಿಗಳು ಇಂದಿನ ಜನರ ಜೀವನಕ್ಕೆ ಅನ್ವಯಿಸುತ್ತವೆ. ವಿದುರ ಮಹಾಭಾರತದ ಧೃತರಾಷ್ಟ್ರನ ಮಂತ್ರಿ ಮತ್ತು ನೀತಿಶಾಸ್ತ್ರದ ವಿದ್ವಾಂಸರಾಗಿದ್ದರು. ವಿದುರ ಮಾತುಗಳು, ನೀತಿಗಳು ನೆಮ್ಮದಿ ಮತ್ತು ಸುಖಮಯ ಜೀವನಕ್ಕೆ ದಾರಿದೀಪವಾಗವೆ. ವಿದುರನ ಏಳು ನೀತಿಗಳನ್ನು ಅಳವಡಿಸಿಕೊಂಡ್ರೆ ಗಂಡ-ಹೆಂಡತಿ ನಡುವೆ ಮನಸ್ತಾಪವೇ ಉಂಟಾಗಲ್ಲ. ಆ ಏಳು ಸಪ್ತಸೂತ್ರಗಳು ಇಲ್ಲಿವೆ ನೀಡಿ
ಶ್ಲೋಕ ಮತ್ತು ಅರ್ಥ
ಅನರ್ಥಕಂ ವಿದೇಶಂ ಗೃಹೇಶುಂ ।
ಪಾಪೈಃ ಸಖ್ಯಂ ಪರದಾರಾಭಿಮರ್ಷನಮ್ ।
ದಶಂ ಸ್ತೇಯಂ ಪೈಶುನಂ ಮಧ್ಯಪಾನಂ
ನ ಸೇವಾತೇ ಯಃ ಸ ಸುಖೀ ಸದೇವ॥
ಶ್ಲೋಕದ ಅರ್ಥ: ವ್ಯರ್ಥ ವಿದೇಶ ಪ್ರಯಾಣ, ಪಾಪಿ ಅಥವಾ ನೀಚ ಅಥವಾ ದುಷ್ಟರ ಸಹವಾಸ, ವ್ಯಭಿಚಾರ, ಮಾನಹಾನಿ, ಕಳ್ಳತನ, ಚಾಡಿ ಮತ್ತು ಮದ್ಯಪಾನ. ಈ ಕೆಲಸಗಳನ್ನು ಮಾಡದ ವ್ಯಕ್ತಿ ಜೀವನದಲ್ಲಿ ಸದಾ ನೆಮ್ಮದಿಯಾಗಿರುತ್ತಾನೆ.
ಗುಣ 1: ಅನಗತ್ಯ ವಿದೇಶ ಪ್ರಯಾಣ
ಯಾವುದೇ ಕಾರಣವಿಲ್ಲದೇ ಪದೇ ಪದೇ ಪ್ರವಾಸ ಮಾಡೋದರಿಂದ ಕುಟುಂಬದ ಜೊತೆಗಿನ ಬಾಂಧವ್ಯ ಕಡಿಮೆಯಾಗುತ್ತದೆ. ಇದರಿಂದ ಒಬ್ಬರಲ್ಲಿ ಒಂಟಿತನದಿಂದ ಕೆಟ್ಟ ಆಲೋಚನೆಗಳಿಂದ ಬರುತ್ತವೆ. ಅಗತ್ಯವಿಲ್ಲದಿದ್ದಾಗ ಮನೆಯಿಂದ ದೂರವಿರುವುದು ಸೂಕ್ತವಲ್ಲ ಎಂದು ವಿದುರ ನೀತಿಯಲ್ಲಿ ಹೇಳಲಾಗಿದೆ. ಇಷ್ಟು ಮಾತ್ರವಲ್ಲ ಸಂಗಾತಿ ಜೊತೆ ಕುಟುಂಬದಿಂದ ತಿರಸ್ಕಾರಕ್ಕೆ ಒಳಗಾಗುತ್ತೀರಿ.
ಗುಣ 2: ದುಷ್ಟರ ಸಹವಾಸ
ಸಹವಾಸದಿಂದ ಸನ್ಯಾಸಿಯೂ ಕೆಟ್ಟ ಎಂಬ ಮಾತಿದೆ. ಹಾಗಾಗಿ ಕೆಟ್ಟ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಜನರಿಂದ ಅಂತರ ಕಾಯ್ದುಕೊಳ್ಳಬೇಕೆಂದು ವಿದುರ ತಮ್ಮ ನೀತಿಯಲ್ಲಿ ತಿಳಿಸಿದ್ದು, ಕೆಟ್ಟ ಕೆಲಸ ಮಾಡುವ ವ್ಯಕ್ತಿಯ ನಡವಳಿಕೆ ಆತನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಈ ಕಾರಣದಿಂದ ಅಂತಹ ಜನರಿಂದ ದೂರವಿರುವುದು ಉತ್ತಮ.
ಗುಣ 3: ವ್ಯಭಿಚಾರ
ವಿದುರ ನೀತಿ ಪ್ರಕಾರ ವ್ಯಭಿಚಾರ ಅತ್ಯಂತ ದೊಡ್ಡ ಪಾಪ. ವಿವಾಹಿತ ಇನ್ನೊಬ್ಬ ಮಹಿಳೆ ಅಥವಾ ವಿವಾಹಿತೆ ಪರ ಪುರುಷನನ್ನು ಕೆಟ್ಟ ದೃಷ್ಟಿಯಿಂದ ನೋಡುವುದುಯ ಪಾಪದ ಕೆಲಸ. ವ್ಯಭಿಚಾರ ಅಥವಾ ಅಕ್ರಮ ಸಂಬಂಧ ಇಡೀ ಕುಟುಂಬ ನಾಶ ಮಾಡುತ್ತದೆ ಹಾಗೂ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ.
ಗುಣ 4: ಮಾನಹಾನಿ
ವಿದುರರ ಪ್ರಕಾರ, ಇತರರ ಬಗ್ಗೆ ನಕಾರಾತ್ಮಕ ಕಥೆ ಅಥವಾ ಸುಳ್ಳು ಸುದ್ದಿ ಹರಡಿಸೋದು ಸಹ ಪಾಪದ ಕೆಲಸವಾಗಿದೆ. ಈ ಚಟ ನಿಮ್ಮ ಸಂಬಂಧವನ್ನು ದುರ್ಬಲಗೊಳಿಸಿ, ಮನಸ್ಸಿನ ನೆಮ್ಮದಿಯನ್ನು ನಾಶ ಮಾಡುತ್ತದೆ. ಇದರಿಂದ ಸಂಸಾರದಲ್ಲಿ ಕಲಹವನ್ನುಂಟು ಮಾಡುತ್ತದೆ.
ಗುಣ 5: ಕಳ್ಳತನ
ಜೀವನದಲ್ಲಿ ಕಳ್ಳತನ ಮಾಡುವ ವ್ಯಕ್ತಿ ಎಂದಿಗೂ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ತಾನೆಲ್ಲಿ ಸಿಕ್ಕಿ ಬೀಳ್ತೀನಿ ಅನ್ನು ಭಯ ಅವನಲ್ಲಿರುತ್ತದೆ. ಜೀವನದಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣ ಮಾತ್ರ ನಿಜವಾದ ಸಂತೋಷವನ್ನು ತರುತ್ತದೆ. ಈ ಕಳ್ಳತನದಿಂದ ಐಷಾರಾಮಿ ಸೌಲಭ್ಯಗಳನ್ನು ನಿಮ್ಮದಾಗಿಸಿಕೊಂಡರೂ ಜೀವನದಲ್ಲಿ ಯಾವಾಗಲೂ ಆತಂಕವಿರುತ್ತದೆ.
ಗುಣ 6: ಗಾಸಿಪ್
ಗಾಸಿಮ್ ಮಾಡುವುದು ತುಂಬಾನೇ ಅಪಾಯ. ನೀವು ಹೇಳಿದ ಒಂದು ಸುಳ್ಳು ಮುಂದೊಂದು ದಿನ ನಿಮ್ಮನ್ನೇ ಸುಡುತ್ತದೆ. ಕಲಿಯುಗದಲ್ಲಿ ಮಾಡಿದ ಪಾಪಕ್ಕೆ ಫಲಗಳನ್ನು ನೋಡಿದ ನಂತರವೇ ಮರಣ ಸಂಭವಿಸುತ್ತದೆ. ಹಾಗಾಗಿ ಯಾರ ಬಗ್ಗೆಯೂ ತಪ್ಪು ಸಂದೇಶಗಳನ್ನು ಹರಡಬಾರದು ಎಂದು ವಿದುರರು ಹೇಳುತ್ತಾರೆ.
ಇದನ್ನೂ ಓದಿ: Vidur Niti: ಮನುಷ್ಯನನ್ನ ಸಾವಿಗೆ ಹತ್ತಿರ ತೆಗೆದುಕೊಂಡು ಹೋಗುವ 5 ನಡವಳಿಕೆ, ನಿಮ್ಮಲ್ಲಿದ್ರೆ ಇಂದೇ ಬದಲಿಸಿಕೊಳ್ಳಿ
ಗುಣ 7: ಮದ್ಯಪಾನ
ಮದ್ಯಪಾನ ಅಥವಾ ಯಾವುದೇ ಮಾದಕ ಪದಾರ್ಥ ಸೇವನೆ ವ್ಯಕ್ತಿಯ ಬುದ್ಧಿಶಕ್ತಿ, ಆರೋಗ್ಯ ಮತ್ತು ಖ್ಯಾತಿಯನ್ನು ಹಾಳು ಮಾಡುತ್ತದೆ. ಮಾದಕ ವಸ್ತುಗಳಿಂದ ದೂರವಿರುವ ವ್ಯಕ್ತಿಯು ಶಾಶ್ವತವಾಗಿ ಸಂತೋಷವಾಗಿರುತ್ತಾನೆ ಎಂದು ವಿದುರ ನೀತಿ ಹೇಳುತ್ತದೆ.
ಇದನ್ನೂ ಓದಿ: ವಿದುರ ನೀತಿಯ ಪ್ರಕಾರ ಈ 5 ರೀತಿಯ ಜನರಿಂದ ದೂರವಿರಿ, ನಿಮಗೆ ಯಶಸ್ಸು ಸಿಗಲಿದೆ