- Home
- News
- India News
- ಮದುವೆಯಲ್ಲಿ ವಧು ಧರಿಸುವ ಚಿನ್ನಾಭರಣಕ್ಕೆ ಮಿತಿ ಹೇರಿದ ಗ್ರಾಮ; ನಿಯಮ ಉಲ್ಲಂಘಿಸಿದ್ರೆ 50 ಸಾವಿರ ದಂಡ
ಮದುವೆಯಲ್ಲಿ ವಧು ಧರಿಸುವ ಚಿನ್ನಾಭರಣಕ್ಕೆ ಮಿತಿ ಹೇರಿದ ಗ್ರಾಮ; ನಿಯಮ ಉಲ್ಲಂಘಿಸಿದ್ರೆ 50 ಸಾವಿರ ದಂಡ
ಆರ್ಥಿಕ ಹೊರೆ ತಗ್ಗಿಸಲು ಮತ್ತು ಸಮಾನತೆ ತರಲು ಚಿನ್ನಾಭರಣ ಧರಿಸುವುದಕ್ಕೆ ಮಿತಿ ಹೇರಲಾಗಿದೆ. ಈ ಹೊಸ ನಿಯಮ ಉಲ್ಲಂಘಿಸಿದವರಿಗೆ 50,000 ರೂ. ದಂಡ ವಿಧಿಸಲಾಗುತ್ತದೆ. ಗ್ರಾಮದಲ್ಲಿ ಈ ನಿಯಮವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಚಿನ್ನಾಭರಣಗಳಿಗೆ ಮಿತಿ
ಡೆಹ್ರಾಡೂನ್: ಉತ್ತರಾಖಂಡದ ಕಂಧಾರ್ ಎಂಬ ಗ್ರಾಮದಲ್ಲಿ, ಆಭರಣಪ್ರಿಯ ಸ್ತ್ರೀಯರು ಶುಭಸಮಾರಂಭಗಳಲ್ಲಿ ಧರಿಸುವಚಿನ್ನಾಭರಣಗಳಿಗೆ ಮಿತಿ ಹೇರಲಾಗಿದೆ. ಈ ಮಿತಿ ಹೇರಿಕೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ಉದ್ದೇಶ ಸರಿಯಾಗಿದ್ರೂ, ಇದು ಇನ್ನೊಬ್ಬರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಕಿತ್ತುಕೊಳ್ಳುವ ನಿರ್ಧಾರ ಎಂಬ ವಾದವೂ ಕೇಳಿ ಬಂದಿದೆ.
ಯಾಕೆ ಈ ನಿಯಮ?
ಆಭರಣ ಖರೀದಿಗೆಂದು ಅಧಿಕ ವೆಚ್ಚ ಮಾಡಿ ಜನ ಸಾಲಗಾರರಾಗುವುದನ್ನು ತಪ್ಪಿಸಲು ಹಾಗೂ ಸಮಾಜದಲ್ಲಿ ಸಮಾನತೆ ತರಲು ಈ ಹೊಸ ನಿಯಮವನ್ನು ರೂಪಿಸಲಾಗಿದ್ದು, ಇದನ್ನು ಉಲ್ಲಂಘಿಸುವವರಿಗೆ ಭಾರೀ ಮೊತ್ತದ ದಂಡವನ್ನೂ ನಿಗದಿಪಡಿಸಲಾಗಿದೆ.
ಸರ್ವಾನುಮತದಿಂದ ಅಂಗೀಕಾರ
ಬಡ ಪರಿವಾರಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಸಮುದಾಯ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ನಿಯಮದ ಅನುಸಾರ, ಮದುವೆ ಹಾಗೂ ಇತರೆ ಶುಭಕಾರ್ಯಗಳಿಗೆ ಹಾಜರಾಗುವ ವಿವಾಹಿತ ಹೆಂಗಳೆಯರು ಕೇವಲ 3 ಬಗೆಯ ಆಭರಣ ತೊಡಬಹುದಾಗಿದೆ. ಅವುಗಳು ಮೂಗುತಿ, ಕಿವಿಯೋಲೆ, ಮಾಂಗಲ್ಯ ಸರ. ಉಳಿದೆಲ್ಲಾ ಆಡಂಬರದ ಆಭರಣ ನಿರ್ಬಂಧಿಸಲಾಗಿದೆ. ಒಂದೊಮ್ಮೆ ಈ ನಿಯಮವನ್ನು ಉಲ್ಲಂಘಿಸಿದರೆ, ಅಂಥವರ ಮೇಲೆ 50,000 ರು. ದಂಡ ವಿಧಿಸಲಾಗುವುದು.
ಇದನ್ನೂ ಓದಿ: ಸಂದರ್ಶನದ ವೇಳೆ ಒಳ್ಳೆಯ ಅಭ್ಯರ್ಥಿಯಾಗಿದ್ರೂ ತಿರಸ್ಕರಿಸಿದ್ದಕ್ಕೆ ಕಾರಣ ಹೇಳಿದ ಮ್ಯಾನೇಜರ್ ಪೋಸ್ಟ್ ವೈರಲ್
ಉದ್ದೇಶವೇನು?
ಮದುವೆಯಂತಹ ಸಮಾರಂಭಗಳು ಪವಿತ್ರ ಆಚರಣೆಗಳೇ ಹೊರತು ತೋರಿಕೆಗಾಗಿ ಮಾಡುವ ಆಡಂಬರವಲ್ಲ ಎಂಬುದು ಗ್ರಾಮಸ್ಥರ ನಿಲುವು. ಅನ್ಯರನ್ನು ನೋಡಿಕೊಂಡು, ಅವರನ್ನು ಮೀರಿಸುವಂತೆ ಮಿಂಚುವ ಸ್ತ್ರೀಸಹಜ ಹಂಬಲದಿಂದ ಪರಿವಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ಜತೆಗೆ ಇದರಿಂದ ಸಮಾಜದಲ್ಲಿ ಜನರ ನಡುವಿನ ಅಂತರವೂ ಹೆಚ್ಚುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಈ ನಿಯಮ ರೂಪಿಸಲಾಗಿದೆ. ಈ ಮೂಲಕ ಕಂಧಾರ್ ಗ್ರಾಮಸ್ಥರು ಹೊಸ ರೀತಿಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ.
ಇದನ್ನೂ ಓದಿ: ಡಿಮಾರ್ಟ್ ಶಾಪಿಂಗ್‌ಗೆ ಹೋದ ಗಂಡನಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ ಹೆಂಡತಿ!