ಈ ಪಟ್ಟೆಗಳು ನಿಮ್ಮ ಹೊಟ್ಟೆಯ ಒಳಭಾಗವನ್ನು ಕಲ್ಲಂಗಡಿಯ ಹೊರಭಾಗವನ್ನು ಹೋಲುವಂತೆ ಮಾಡುತ್ತದೆ. ಬರೀ ಕಣ್ಣಿಗೆ ಕಾಣದ ಇವು ಎಂಡೋಸ್ಕೋಪಿ ಸಮಯದಲ್ಲಿ ಮಾತ್ರ ನೋಡಬಹುದು.
ಕಲ್ಲಂಗಡಿ ಹೊಟ್ಟೆ ಎಂದರೆ ಕಲ್ಲಂಗಡಿಯ ತರಹ ಇರುವ ಹೊಟ್ಟೆಯಲ್ಲ. ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ "ಹೊಟ್ಟೆಯ ಒಳಪದರದಲ್ಲಿರುವ ರಕ್ತನಾಳಗಳು ದುರ್ಬಲಗೊಂಡು ರಕ್ತಸ್ರಾವವಾಗಿ, ಲಂಬವಾದ ಪಟ್ಟೆಗಳು ರೂಪುಗೊಳ್ಳುವುದೇ" ಕಲ್ಲಂಗಡಿ ಹೊಟ್ಟೆ. ಈ ಪಟ್ಟೆಗಳು ನಿಮ್ಮ ಹೊಟ್ಟೆಯ ಒಳಭಾಗವನ್ನು ಕಲ್ಲಂಗಡಿಯ ಹೊರಭಾಗವನ್ನು ಹೋಲುವಂತೆ ಮಾಡುತ್ತದೆ. ಬರೀ ಕಣ್ಣಿಗೆ ಕಾಣದ ಇವು ಎಂಡೋಸ್ಕೋಪಿ ಸಮಯದಲ್ಲಿ ಮಾತ್ರ ನೋಡಬಹುದು. ಎಂಡೋಸ್ಕೋಪಿ ಎಂದರೆ ಸಣ್ಣ ಕ್ಯಾಮೆರಾದೊಂದಿಗೆ ತೆಳುವಾದ ಟ್ಯೂಬ್ ಬಳಸಿ ನಿಮ್ಮ ದೇಹದೊಳಗೆ ನೋಡಲು ಅನುವು ಮಾಡಿಕೊಡುವ ಒಂದು ವಿಧಾನ. ಕಲ್ಲಂಗಡಿ ಹೊಟ್ಟೆಗೆ ಗ್ಯಾಸ್ಟ್ರಿಕ್ ಆಂಟ್ರಲ್ ವಾಸ್ಕ್ಯೂಲರ್ ಎಕ್ಟಾಸಿಯಾ (GAVE) ಎಂದೂ ಕರೆಯಲಾಗುತ್ತದೆ. ನೆನಪಿಡಿ..ಯಾರಿಗಾದರೂ ಕಲ್ಲಂಗಡಿ ಹೊಟ್ಟೆ ಬರಬಹುದು.
ಲಕ್ಷಣಗಳು ಮತ್ತು ಕಾರಣಗಳು
ಹೊಟ್ಟೆ ನೋವು
ಮಲದಲ್ಲಿ ರಕ್ತ (ಮಲ)
ಆಯಾಸ
ಆಂತರಿಕ ರಕ್ತಸ್ರಾವ
ಕಬ್ಬಿಣದ ಕೊರತೆಯ ರಕ್ತಹೀನತೆ
ವಾಕರಿಕೆ
ರಕ್ತ ವಾಂತಿ
ಕೆಲವು ಸಂದರ್ಭಗಳಲ್ಲಂತೂ ಕಲ್ಲಂಗಡಿ ಹೊಟ್ಟೆ ಇರುವ ವ್ಯಕ್ತಿಯು ಯಾವುದೇ ಲಕ್ಷಣಗಳನ್ನು ಅನುಭವಿಸುವುದಿಲ್ಲ. ಕಲ್ಲಂಗಡಿ ಹೊಟ್ಟೆ ಏಕೆ ಬರುತ್ತದೆ ಮತ್ತು ಇನ್ನು ಕೆಲವರಿಗೆ ಏಕೆ ಬರುವುದಿಲ್ಲ ಎಂದು ವಿಜ್ಞಾನಿಗಳಿಗೆ ನಿಖರವಾಗಿ ತಿಳಿದಿಲ್ಲ. ಆದರೆ ಕಲ್ಲಂಗಡಿ ಹೊಟ್ಟೆಯು ಕೆಲವು ಆರೋಗ್ಯ ಸಮಸ್ಯೆಗಳಿರುವ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆಯಂತೆ ಉದಾಹರಣೆಗೆ ಆಟೋಇಮ್ಯೂನ್ ರೋಗಗಳು, ಅಟ್ರೋಫಿಕ್ ಜಠರದುರಿತ, ಮಧುಮೇಹ, ಹೃದಯ ರೋಗ, ಮೂತ್ರಪಿಂಡ ವೈಫಲ್ಯ, ಯಕೃತ್ತಿನ ಸಿರೋಸಿಸ್, ಮೆಟಾಬಾಲಿಕ್ ಸಿಂಡ್ರೋಮ್.
ಇದಕ್ಕಿರುವ ಚಿಕಿತ್ಸೆ
ವೈದ್ಯರಿಗೆ ನಿಮಗೆ ಕಲ್ಲಂಗಡಿ ಹೊಟ್ಟೆಯಿದೆ ಎಂದು ಅನುಮಾನ ಬಂದರೆ ಹೆಚ್ಚಿನ ಪರೀಕ್ಷೆಗಾಗಿ ಅವರು ನಿಮ್ಮನ್ನು ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗೆ ಹೇಳುತ್ತಾರೆ. ಅವರು ಕೆಲವು ಪರೀಕ್ಷೆ ಮಾಡಬಹುದು. ಕಲ್ಲಂಗಡಿ ಹೊಟ್ಟೆಗೆ ಚಿಕಿತ್ಸೆ ನೀಡಲು ಪೂರಕಗಳಿಂದ ಹಿಡಿದು ಶಸ್ತ್ರಚಿಕಿತ್ಸೆಯವರೆಗೆ ಹಲವಾರು ವಿಧಾನಗಳನ್ನು ಬಳಸುತ್ತಾರೆ. ನೀವು ಬಹಳಷ್ಟು ರಕ್ತವನ್ನು ಕಳೆದುಕೊಂಡಿದ್ದರೆ, ನಿಮಗೆ ತುರ್ತು ರಕ್ತ ವರ್ಗಾವಣೆಯ ಅಗತ್ಯವಿರಬಹುದು.
ಆರಂಭಿಕ ಹಂತದಲ್ಲಿ ಪತ್ತೆಯಾದರೆ, ಕಲ್ಲಂಗಡಿ ಹೊಟ್ಟೆಯನ್ನು ಐರನ್ ಸಪ್ಲಿಮೆಂಟ್ ಜೊತೆ ನಿರ್ವಹಿಸಲು ನಿಮಗೆ ಸಾಧ್ಯವಾಗಬಹುದು . ಆದರೆ ಈ ವಿಧಾನವು ಎಲ್ಲರಿಗೂ ಕೆಲಸ ಮಾಡುವುದಿಲ್ಲ. ನಿಮ್ಮ ಹೊಟ್ಟೆಯ ಒಳಪದರದಲ್ಲಿ ರಕ್ತಸ್ರಾವವನ್ನು ನಿಧಾನಗೊಳಿಸಲು ಕೆಲವು ಔಷಧಿಗಳನ್ನು ಶಿಫಾರಸು ಮಾಡಬಹುದು.
ಶಸ್ತ್ರಚಿಕಿತ್ಸೆ
ಕಲ್ಲಂಗಡಿ ಹೊಟ್ಟೆ ಇರುವವರು ಪೂರಕ ಆಹಾರಗಳು, ಔಷಧಿಗಳು ಅಥವಾ ಎಂಡೋಸ್ಕೋಪಿಕ್ ವಿಧಾನಗಳಿಗೆ ಪ್ರತಿಕ್ರಿಯಿಸದಿದ್ದರೆ ಭಾಗಶಃ ಗ್ಯಾಸ್ಟ್ರೆಕ್ಟಮಿ ಎಂನ ಸರ್ಜರಿ ಅಗತ್ಯವಾಗಬಹುದು. ಈ ಶಸ್ತ್ರಚಿಕಿತ್ಸೆಯು ನಿಮ್ಮ ಹೊಟ್ಟೆಯ ಪೀಡಿತ ಭಾಗಗಳನ್ನು ತೆಗೆದುಹಾಕುವುದನ್ನು ಒಳಗೊಂಡಿರುತ್ತದೆ . ಸಾಮಾನ್ಯವಾಗಿ, ಕಲ್ಲಂಗಡಿ ಹೊಟ್ಟೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಜನರಿಗೆ ರಕ್ತ ವರ್ಗಾವಣೆಯ ಅಗತ್ಯವಿರುವುದಿಲ್ಲ. ಕಲ್ಲಂಗಡಿ ಹೊಟ್ಟೆಯನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ಇದೊಂದೇ ಏಕೈಕ ಮಾರ್ಗವಾಗಿದೆ.
ಕಲ್ಲಂಗಡಿ ಹೊಟ್ಟೆಯನ್ನು ತಡೆಯಬಹುದೇ?
ಕಲ್ಲಂಗಡಿ ಹೊಟ್ಟೆಯಲ್ಲಿ ನೋವು ಏಕೆ ಬರುತ್ತದೆ ಎಂದು ತಜ್ಞರಿಗೆ ನಿಖರವಾಗಿ ತಿಳಿದಿಲ್ಲವಾದ್ದರಿಂದ ಅದನ್ನು ತಡೆಯಲು ನೀವು ಏನೂ ಮಾಡಲು ಸಾಧ್ಯವಿಲ್ಲ. ಯಾವುದೇ ಆತಂಕಕಾರಿ ಲಕ್ಷಣಗಳು ಕಂಡುಬಂದರೆ ನಿಮ್ಮ ವೈದ್ಯರೊಂದಿಗೆ ಮಾತನಾಡುವುದು ಉತ್ತಮ. ಆರಂಭಿಕ ಚಿಕಿತ್ಸೆಯು ರಕ್ತಸ್ರಾವವು ಉಲ್ಬಣಗೊಳ್ಳುವ ಮೊದಲೇ ನಿಲ್ಲಿಸಬಹುದು. ಸಾಮಾನ್ಯವಾಗಿ ಇದು 70 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ತಪ್ಪಿಸಬೇಕಾದ ಆಹಾರಗಳು
ಮಸಾಲೆಯುಕ್ತ ಆಹಾರಗಳು, ಆಮ್ಲೀಯ ಆಹಾರಗಳು, ಕೆಫೀನ್, ಆಲ್ಕೋಹಾಲ್. ನಿಮ್ಮ ಚಿಕಿತ್ಸೆ ಮುಗಿಯುವವರೆಗೆ, ಮೊಟ್ಟೆ, ತೋಫು, ಸೂಪ್‌ಗಳು, ಸ್ಮೂಥಿಗಳು ಮತ್ತು ಕಡಿಮೆ ಕೊಬ್ಬಿನ ಮಾಂಸಗಳಂತಹ ಸೌಮ್ಯ ಆಹಾರಗಳನ್ನು ಪ್ರಯತ್ನಿಸಿ.
ವೈದ್ಯರನ್ನು ಯಾವಾಗ ನೋಡಬೇಕು?
ವಾಕರಿಕೆ ಅಥವಾ ಆಯಾಸ ಸೇರಿದಂತೆ ಹೊಸ ಲಕ್ಷಣಗಳನ್ನು ನೀವು ಗಮನಿಸಿದಾಗಲೆಲ್ಲಾ ವೈದ್ಯರಿಗೆ ತಿಳಿಸಬೇಕು. ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ. ರಕ್ತದ ವಾಂತಿಯಂತಹ ತೀವ್ರ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಹತ್ತಿರದಲ್ಲಿರುವ ವೈದ್ಯರನ್ನು ಸಂಪರ್ಕಿಸಿ. ರಕ್ತದ ನಷ್ಟ ಮತ್ತು ಇತರ ತೊಡಕುಗಳನ್ನು ತಡೆಗಟ್ಟಲು ಸಾಧ್ಯವಾದಷ್ಟು ಬೇಗ ಕಾರಣವನ್ನು ಕಂಡುಹಿಡಿಯುವುದು ಮುಖ್ಯ.
