Women's Health: ದಂಪತಿ ಬಹಳ ಸಮಯದಿಂದ ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೂ ಫಲಿತಾಂಶ ಸಿಗುತ್ತಿಲ್ಲವಾದರೆ ಡಾ. ಮಹಿಮಾ ಅವರು ಹೇಳಿರುವ ಈ ಮಾತುಗಳನ್ನು ಕೇಳಲೇಬೇಕು. ಏಕೆಂದರೆ ಅವರು ಇತ್ತೀಚೆಗೆ ಈ ವಿಷಯದ ಕುರಿತು ಪ್ರಮುಖ ಮಾಹಿತಿಯನ್ನು Instagram ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.  

ಅನೇಕ ದಂಪತಿ ದೀರ್ಘಕಾಲದಿಂದ ಗರ್ಭಧರಿಸಲು ಪ್ರಯತ್ನಿಸುತ್ತಾರೆ. ಆದರೆ ಗುಡ್ ನ್ಯೂಸ್ ಬರುವುದೇ ಇಲ್ಲ. ಇಂತಹ ಸಮಯದಲ್ಲಿ ಅಸ್ಪತ್ರೆಗೆ ತೆರಳಿದಾಗ ಆರಂಭಿಕ ಪರೀಕ್ಷೆಗಳಲ್ಲಿ ಏನೆಂದರೆ ಏನೂ ಗೊತ್ತಾಗಲ್ಲ. ಯಾವಾಗ ದೊಡ್ಡ ದೊಡ್ಡ ಪರೀಕ್ಷೆಗೆ ಒಳಪಡುತ್ತಾರೋ, ಆಗ ಹೆಚ್ಚಿನ ಜನರಿಗೆ ತಿಳಿದಿರದ ಸಮಸ್ಯೆಗಳು ರಿವೀಲ್ ಆಗ್ತವೆ. ಹೌದು, ಮಹಿಳೆಯೋರ್ವರು ಇತ್ತೀಚೆಗೆ ಸ್ತ್ರೀರೋಗತಜ್ಞೆ ಡಾ. ಮಹಿಮಾ ಅವರನ್ನು ಭೇಟಿ ಮಾಡಿದಾಗ ಇದೇ ರೀತಿ ಆಗಿದೆ. ಆಕೆ "ಕಳೆದ ಎಂಟು ತಿಂಗಳಿನಿಂದ ತಾನು ಗರ್ಭಧರಿಸಲು ಪ್ರಯತ್ನಿಸುತ್ತಿದ್ದೆ, ಆದರೆ ಯಾವುದೇ ರಿಸಲ್ಟ್ " ಬರಲಿಲ್ಲ ಎಂದು ವಿವರಿಸಿದ್ದಾಳೆ. ಆಗ ಸ್ತ್ರೀರೋಗತಜ್ಞರು ಅವಳನ್ನು ಪರೀಕ್ಷಿಸಿದಾಗ ಅನೇಕ ಮಹಿಳೆಯರಿಗೆ ತಿಳಿದಿರದ ಒಂದು ಕಾರಣ ತಿಳಿದಿದೆ. ಬನ್ನಿ, ಆ ಕಾರಣವೇನೆಂದು ವಿವರವಾಗಿ ನೋಡೋಣ..

ಸ್ತ್ರೀರೋಗ ತಜ್ಞೆ ಡಾ. ಮಹಿಮಾ ಹೇಳಿರುವ ಪ್ರಕಾರ

ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಸ್ತ್ರೀರೋಗ ತಜ್ಞೆ ಡಾ. ಮಹಿಮಾ ಅವರು ಹೇಳಿರುವ ಪ್ರಕಾರ, "ಮದುವೆಯಾಗಿ ಎರಡು ವರ್ಷಗಳಾಗಿವೆ ಎಂದು 26 ವರ್ಷದ ಮಹಿಳೆಯೊಬ್ಬರು ಇತ್ತೀಚೆಗೆ ತಮ್ಮ ಬಳಿಗೆ ಬಂದಿದ್ದರು. ಅವರು ಮತ್ತು ಅವರ ಪತಿ ಕಳೆದ ಎಂಟು ತಿಂಗಳಿನಿಂದ ಮಗು ಪಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ಪದೇ ಪದೇ ಪ್ರಯತ್ನಿಸಿದರೂ ಅವರಿಗೆ ಯಾವುದೇ ಫಲಿತಾಂಶ ಸಿಗಲಿಲ್ಲ" ಎಂದು ವಿವರಿಸಿದ್ದಾರೆ.

"ನಾನು ಆಕೆಯನ್ನು ಪರೀಕ್ಷಿಸಿದಾಗ ಅವಳ ಋತುಚಕ್ರವು ನಿಯಮಿತವಾಗಿತ್ತು. ಅಲ್ಟ್ರಾಸೌಂಡ್ ವರದಿಯೂ ಸಾಮಾನ್ಯವಾಗಿತ್ತು. ನಾನು ಅವಳ ಪತಿಯನ್ನು ಪರೀಕ್ಷಿಸಿದೆ ಮತ್ತು ಅವರ ವೀರ್ಯ ವರದಿಯೂ ಸಹ ಸಂಪೂರ್ಣವಾಗಿ ಸರಿಯಾಗಿತ್ತು. ಎರಡೂ ವರದಿಗಳಲ್ಲಿ ಯಾವುದೇ ಅಸಹಜತೆಗಳು ಇರಲಿಲ್ಲ. ಆದರೆ ತನ್ನ ಕುಟುಂಬದವರು ವೈದ್ಯರ ಬಳಿಗೆ ಹೋಗಬೇಡಿ. ಸಮಯ ಬಂದಾಗ ಎಲ್ಲವೂ ತನ್ನಷ್ಟಕ್ಕೆ ತಾನೇ ಆಗುತ್ತದೆ ಎಂದು ಪದೇ ಪದೇ ಹೇಳುತ್ತಿದ್ದರು" ಎಂದು ಆ ಮಹಿಳೆ ಹೇಳಿದರು.

ಕೊನೆ ಕೊನೆಗೆ ಆ ದಂಪತಿ ಮಗುವನ್ನು ಹೊಂದಲು ಹತಾಶರಾಗಿದ್ದರು ಎಂದು ಸ್ತ್ರೀರೋಗ ತಜ್ಞರು ವಿವರಿಸಿದ್ದಾರೆ. ಹಲವಾರು ಮನೆಮದ್ದುಗಳನ್ನು ಪ್ರಯತ್ನಿಸಿದರು. ತಮ್ಮ ಹಿರಿಯರ ಎಲ್ಲಾ ಸಲಹೆಗಳನ್ನು ಅನುಸರಿಸಿದರು. ಕೆಲವೊಮ್ಮೆ ಪ್ರಿಸ್ಕ್ರಿಪ್ಷನ್, ಕೆಲವೊಮ್ಮೆ ಔಷಧಿ, ಆದರೆ ಪ್ರತಿ ಬಾರಿಯೂ ಫಲಿತಾಂಶಗಳು ನಿರಾಶಾದಾಯಕವಾಗಿದ್ದವು. ಪ್ರತಿ ತಿಂಗಳು ಭರವಸೆಗಳು ಹುಟ್ಟಿಕೊಂಡವು. ನಂತರ ಭಗ್ನಗೊಂಡವು.

ಕೊನೆಗೆ "ನಾವು ಆ ಮಹಿಳೆಯ ಸಂಪೂರ್ಣ ಇತಿಹಾಸವನ್ನು ತೆಗೆದುಕೊಂಡು ಕೆಲವು ಪರೀಕ್ಷೆಗಳನ್ನು ನಡೆಸಿದ್ದೇವೆ. ಅಂತಿಮವಾಗೆ ಆಕೆಗೆ ವ್ಯಾಜಿನಿಸ್ಮಸ್ (Vaginismus) ಇತ್ತು ಎಂಬ ಕಾರಣವನ್ನು ನಾವು ಕಂಡುಕೊಂಡೆವು. ಯೋನಿಯ ಸುತ್ತಲಿನ ಸ್ನಾಯುಗಳು ತುಂಬಾ ಬಿಗಿಯಾದಾಗ, ಅನ್ಯೋನ್ಯತೆಯ ಸಮಯದಲ್ಲಿ ತೀವ್ರವಾದ ನೋವನ್ನು ಉಂಟುಮಾಡಿದಾಗ, ಲೈಂಗಿಕತೆಯನ್ನು ಹೊಂದಲು ಕಷ್ಟವಾದಾಗ ವ್ಯಾಜಿನಿಸ್ಮಸ್ ಉಂಟಾಗುತ್ತದೆ. ಇದು ಸಂಬಂಧಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಗರ್ಭಧಾರಣೆಯ ಸಮಸ್ಯೆಗಳಿಗೂ ಕಾರಣವಾಗಬಹುದು" ಎಂದು ವೈದ್ಯರು ಹೇಳುತ್ತಾರೆ.

ಭಯಪಡಬೇಡಿ, ಸರಿಯಾದ ವೈದ್ಯರ ಬಳಿ ತೆರಳಿ

ಸರ್‌ಪ್ರೈಸ್‌ ಅಂದ್ರೆ ಇದು ತುಂಬಾ ಸಾಮಾನ್ಯವಾದ ಸ್ಥಿತಿಯಾಗಿದೆ. ಆದರೆ ಇದರ ಬಗ್ಗೆ ಹೆಚ್ಚಾಗಿ ಚರ್ಚಿಸಲ್ಲ. ಆದ್ದರಿಂದ ಚಿಕಿತ್ಸೆ ನೀಡುವುದು ಕಷ್ಟಕರವಾಗುತ್ತದೆ. ಅನೇಕ ದಂಪತಿ ಇದನ್ನು ಯೋನಿ ಶುಷ್ಕತೆ ಎಂದು ಕನ್‌ಫ್ಯೂಸ್ ಆಗ್ತಾರೆ. ಇದು ಕೇವಲ ತಾತ್ಕಾಲಿಕ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ಇದು ಹಾಗಲ್ಲ. ಇದಕ್ಕೆ ಸರಿಯಾದ ಮತ್ತು ಸಕಾಲಿಕ ಚಿಕಿತ್ಸೆಯ ಅಗತ್ಯವಿರುತ್ತದೆ.

ಒಳ್ಳೆಯ ಸುದ್ದಿ ಏನೆಂದರೆ, ತಜ್ಞರು ತೀರ್ಮಾನಿಸುವಂತೆ ನಿಮಗೆ ಈ ಸಮಸ್ಯೆ ಇದ್ದರೂ ಸಹ ಸರಿಯಾದ ಬೆಂಬಲ ಮತ್ತು ಚಿಕಿತ್ಸೆಯಿಂದ ನೀವು ಗರ್ಭಿಣಿಯಾಗಬಹುದು. ಆದ್ದರಿಂದ ಭಯಪಡಬೇಡಿ ಮತ್ತು ಸರಿಯಾದವರ ಸಹಾಯವನ್ನು ಪಡೆಯಿರಿ.

ಇಲ್ಲಿದೆ ನೋಡಿ ವೈದ್ಯರ ವಿಡಿಯೋ 

View post on Instagram