ಇದು ತುಂಬಾ ಹಳೆಯದಾದಾಗ ಸ್ವಲ್ಪ ಪ್ರಮಾಣದ ಸೀಸವು ನಿಮ್ಮ ಆಹಾರಕ್ಕೆ ಸೋರಿಕೆಯಾಗಲು ಪ್ರಾರಂಭಿಸುತ್ತದೆ ಎಂದು ಡಾ. ವೋರಾ ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ.

ನಮಗೆಲ್ಲರಿಗೂ ತಿಳಿದಿರುವಂತೆ ತರಕಾರಿ, ಹಾಲು, ಕಾಳು, ಬೇಳೆ ಮತ್ತು ಮಸಾಲೆಗಳಂತಹ ಅನೇಕ ರೀತಿಯ ಪದಾರ್ಥಗಳು ಸ್ವಲ್ಪ ಸಮಯದ ನಂತರ ರುಚಿಯನ್ನು ಕಳೆದುಕೊಳ್ಳುತ್ತವೆ. ಆದರೆ ಅಡುಗೆಮನೆಯಲ್ಲಿರುವ ಪಾತ್ರೆಗಳು ಸಹ ಕಾಲಾನಂತರದಲ್ಲಿ ತಮ್ಮ ರುಚಿಯನ್ನು ಕಳೆದುಕೊಳ್ಳುತ್ತವೆ. ಅವುಗಳಲ್ಲಿ ಒಂದು ಪ್ರೆಶರ್ ಕುಕ್ಕರ್. ಪ್ರೆಶರ್ ಕುಕ್ಕರ್ ಬಹುತೇಕ ಪ್ರತಿಯೊಬ್ಬರ ಮನೆಯ ಅಡುಗೆಮನೆಯಲ್ಲಿಯೂ ಇರುತ್ತದೆ. ಇದು ನೋಡಲು ಚೆನ್ನಾಗಿಯೇ ಕಾಣುತ್ತಿದ್ದರೂ ಹಳೆಯ ಪ್ರೆಶರ್ ಕುಕ್ಕರ್ ನಿಮ್ಮ ಅಡುಗೆಮನೆಯಲ್ಲಿರುವ ಅತ್ಯಂತ ಕೆಟ್ಟ ವಸ್ತುಗಳಲ್ಲಿ ಒಂದಾಗಿರಬಹುದು. ಯಾಕೆ ಅಂತೀರಾ, ಮುಂದೆ ಓದಿ ನಿಮಗೇ ಗೊತ್ತಾಗುತ್ತದೆ.

ಡಾ. ಮನನ್ ವೋರಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಳೆಯ ಕುಕ್ಕರ್ ಅನ್ನು ಬದಲಾಯಿಸುವುದು ಏಕೆ ಅಗತ್ಯ ಎಂದು ವಿವರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಸಲಹೆಯು ಅಂತರ್ಜಾಲದಲ್ಲಿ ಜನರ ಗಮನ ಸೆಳೆದಿದ್ದು, ವಿಡಿಯೋ ವೈರಲ್ ಆದ ನಂತರ ಜನರು ಈ ವಿಷಯದ ಕುರಿತು ಬಹಳಷ್ಟು ಚರ್ಚಿಸುತ್ತಿದ್ದಾರೆ.

ವಿಷಕಾರಿಯಾಗಬಹುದೇ ಹಳೆಯ ಪ್ರೆಶರ್ ಕುಕ್ಕರ್?
ಪ್ರೆಶರ್ ಕುಕ್ಕರ್ ತುಂಬಾ ಹಳೆಯದಾದಾಗ ಸ್ವಲ್ಪ ಪ್ರಮಾಣದ ಸೀಸವು ನಿಮ್ಮ ಆಹಾರಕ್ಕೆ ಸೋರಿಕೆಯಾಗಲು ಪ್ರಾರಂಭಿಸುತ್ತದೆ ಎಂದು ಡಾ. ವೋರಾ ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ. ನಿಜವಾದ ಅಪಾಯವೆಂದರೆ ಸೀಸವು ದೇಹದಿಂದ ಸುಲಭವಾಗಿ ಹೊರಬರುವುದಿಲ್ಲ. ಬದಲಿಗೆ ಅದು ನಿಧಾನವಾಗಿ ರಕ್ತ, ಮೂಳೆಗಳು ಮತ್ತು ಕಾಲಾನಂತರದಲ್ಲಿ ಮೆದುಳಿನಲ್ಲಿ ಸಂಗ್ರಹವಾಗುತ್ತದೆ. ಒಟ್ಟಾರೆಯಾಗಿ ಮಾನವ ಆಹಾರದಲ್ಲಿ ಸೀಸ ಕಂಡುಬಂದರೆ, ಆ ಆಹಾರವು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ನರಮಂಡಲ, ಮೆದುಳು ಮತ್ತು ಇತರ ಅಂಗಗಳಿಗೆ ಹಾನಿ ಮಾಡುತ್ತದೆ. ಇದರಿಂದಾಗಿ ಸ್ಮರಣಶಕ್ತಿಯೂ ನಷ್ಟವಾಗಬಹುದು. ಆದ್ದರಿಂದ ಸರಿಯಾದ ಸಮಯದಲ್ಲಿ ಪ್ರೆಶರ್ ಕುಕ್ಕರ್ ಅನ್ನು ಬದಲಾಯಿಸುವುದು ಬುದ್ಧಿವಂತರ ಲಕ್ಷಣ.

ಮಕ್ಕಳ ಯೋಗಕ್ಷೇಮಕ್ಕಾಗಿ ಪ್ರೆಶರ್ ಕುಕ್ಕರ್ ಬದಲಾಯಿಸಿ
ಮಕ್ಕಳ ಯೋಗಕ್ಷೇಮಕ್ಕಾಗಿ ಸರಿಯಾದ ಸಮಯದಲ್ಲಿ ಪ್ರೆಶರ್ ಕುಕ್ಕರ್ ಅನ್ನು ಬದಲಾಯಿಸುವುದು ಮುಖ್ಯ ಎಂದು ಡಾ. ವೋರಾ ಹೇಳಿದರು. ವಾಸ್ತವವಾಗಿ, ಹಳೆಯ ಪ್ರೆಶರ್ ಕುಕ್ಕರ್‌ನಿಂದ ಸೋರಿಕೆಯಾಗುವ ಸೀಸವು ಮಕ್ಕಳಿಗೆ ಹೆಚ್ಚು ಹಾನಿಕಾರಕವಾಗಿದೆ. ಇದು ಮೆದುಳಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಅವರ ಐಕ್ಯೂ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೊರಗಿನಿಂದ ಉತ್ತಮವಾಗಿ ಕಾಣುತ್ತಿದ್ದರೂ, ವರ್ಷಗಳಿಂದ ಕುಟುಂಬಗಳಲ್ಲಿ ಇರುವ ಹಳೆಯ ಕುಕ್ಕರ್ ವಾಸ್ತವವಾಗಿ ಹಾನಿಕಾರಕವಾಗಲು ಇದೇ ಕಾರಣ.

ಪ್ರೆಶರ್ ಕುಕ್ಕರ್ ಅನ್ನು ಯಾವಾಗ ಬದಲಾಯಿಸಬೇಕು?
ಪ್ರೆಶರ್ ಕುಕ್ಕರ್ ಹಳೆಯದಾಗಿದೆ ಎಂದು ನೀವು ಗುರುತಿಸಬಹುದಾದ ಕೆಲವು ಪ್ರಮುಖ ಚಿಹ್ನೆಗಳ ಬಗ್ಗೆ ಡಾ. ವೋರಾ ಹೇಳಿದ್ದಾರೆ.
- ನಿಮ್ಮ ಕುಕ್ಕರ್ 10 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದ್ದರೆ, ಅದನ್ನು ಬದಲಾಯಿಸುವ ಸಮಯ ಇದು.
- ಪ್ರೆಶರ್ ಕುಕ್ಕರ್ ಒಳಗೆ ಗೀರುಗಳು, ಕಪ್ಪು ಕಲೆಗಳು ಅಥವಾ ಬಣ್ಣದಲ್ಲಿ ಬದಲಾವಣೆಯನ್ನು ನೀವು ನೋಡಿದರೆ, ಅದರಿಂದ ಸೀಸ ಸೋರಿಕೆಯಾಗುವ ಸಾಧ್ಯತೆಯಿದೆ.
- ಪ್ರೆಶರ್ ಕುಕ್ಕರ್‌ನ ಮುಚ್ಚಳ ಅಥವಾ ಶಿಳ್ಳೆ ಸಡಿಲವಾಗಿ ಕಂಡುಬಂದರೆ, ಅದು ಇನ್ನು ಮುಂದೆ ಬಳಕೆಗೆ ಸೂಕ್ತವಲ್ಲ ಎಂದು ಅರ್ಥಮಾಡಿಕೊಳ್ಳಿ.
- ನಿಮ್ಮ ಆಹಾರವು ಲೋಹೀಯ ರುಚಿಯನ್ನು ಹೊಂದಲು ಪ್ರಾರಂಭಿಸಿದರೆ, ನೀವು ಪ್ರೆಶರ್ ಕುಕ್ಕರ್ ಅನ್ನು ಬದಲಾಯಿಸಬೇಕಾಗಿದೆ ಎಂಬುದರ ದೊಡ್ಡ ಸಂಕೇತವಾಗಿದೆ.

ಹೀಗಿತ್ತು ಜನರ ಪ್ರತಿಕ್ರಿಯೆ
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಜೊತೆಗೆ 4,000 ಕ್ಕೂ ಹೆಚ್ಚು ಲೈಕ್ಸ್ ಮತ್ತು ಅನೇಕ ಕಾಮೆಂಟ್ಸ್ ಬಂದಿವೆ. ಬಳಕೆದಾರರು ಹೇಳಿರುವ ಪ್ರಕಾರ, "ನಾನು ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್ ಬಳಸುತ್ತಿದ್ದೇನೆ... ಅಲ್ಯೂಮಿನಿಯಂ ಒಂದನ್ನು ಬಿಟ್ಟಿದ್ದೇನೆ", "ನನ್ನ ಅಲ್ಯೂಮಿನಿಯಂ ಕುಕ್ಕರ್ 25 ವರ್ಷಗಳಿಗಿಂತ ಹಳೆಯದು ಮತ್ತು ನಾನು ಅದರಲ್ಲಿ ಆಹಾರವನ್ನು ಬೇಯಿಸುತ್ತೇನೆ. ಅದು ಸುರಕ್ಷಿತವೇ?" "ಅಲ್ಯೂಮಿನಿಯಂ ಬಿಡಿ, ಸ್ಟೇನ್‌ಲೆಸ್ ಸ್ಟೀಲ್ ಬಳಸಿ. ನೀವು ಅದನ್ನು ತಲೆಮಾರುಗಳವರೆಗೆ ಬಳಸಬಹುದು." ಎಂದರೆ, ಮತ್ತೆ ಹೆಚ್ಚಿನ ತಾಯಂದಿರು ವೈದ್ಯರ ವಿಡಿಯೋವನ್ನು ಒಪ್ಪುವುದಿಲ್ಲ ಎಂದು ಹೇಳೋದೇ…

View post on Instagram