ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಲೇಖನ ನಿಮಗಾಗಿಯೇ. ಏಕೆಂದರೆ ತೂಕ ಇಳಿಕೆ ಸಮಯದಲ್ಲಿ ಎಲ್ಲವನ್ನೂ ಕುರುಡಾಗಿ ನಂಬುವುದು ಬುದ್ಧಿವಂತರ ಲಕ್ಷಣವಲ್ಲ. 

Weight Loss Myths: ತೂಕ ಇಳಿಸುವ ಭರಾಟೆಯಲ್ಲಿ ಜನರು ಸಾಮಾನ್ಯವಾಗಿ ತಮ್ಮ ಮನಸ್ಸಿನಲ್ಲಿ ಅನೇಕ ತಪ್ಪು ಕಲ್ಪನೆಗಳನ್ನು ಹೊಂದಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಧಾನಗಳಿವೆ. ಇದಕ್ಕೆ Rapid weight loss ಎಂದು ಹೇಳಲಾಗುತ್ತದೆ. ಇದನ್ನು ಬಹುತೇಕರು ಒಪ್ಪಿಕೊಳ್ಳುತ್ತಾರೆ ಕೂಡ. ಆದರೆ ನಿಮಗೆ ಗೊತ್ತಾ, ಈ ವಿಧಾನದಿಂದ ಜೀರ್ಣಾಂಗ ವ್ಯವಸ್ಥೆ ಮಾತ್ರವಲ್ಲ, ದೇಹದ ಇತರ ಭಾಗಗಳು ಸಹ ಗಂಭೀರ ಹಾನಿಗೊಳಗಾಬಹುದು. ಆದ್ದರಿಂದ ಈ ಕುರಿತು ಕೆಲವು ಮಿಥ್ಯೆಗಳು ಮತ್ತು ಅದರ ಹಿಂದಿನ ಸತ್ಯದ ಬಗ್ಗೆ ತಿಳಿಯೋಣ ಬನ್ನಿ (Common Weight Loss Misconceptions)

ಪೂರಕಗಳ ಸೇವನೆ (Taking supplements)
ಪ್ರತಿಯೊಬ್ಬರೂ ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಆದ್ದರಿಂದ ಇಂದು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಪೂರಕಗಳು ಲಭ್ಯವಿದೆ, ಜನರು ವೈದ್ಯಕೀಯ ಸಲಹೆಯಿಲ್ಲದೆ ಅವುಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ. ನೀವು ಸಹ ಈ ತಪ್ಪನ್ನು ಮಾಡುತ್ತಿದ್ದರೆ ಜಾಗರೂಕರಾಗಿರಬೇಕು. ಅವುಗಳಲ್ಲಿ ಇರುವ ಗುಪ್ತ ಪದಾರ್ಥಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು FDA ವರದಿ ಹೇಳುತ್ತದೆ. ಏಕೆಂದರೆ ಅಂತಹ ಪದಾರ್ಥಗಳಲ್ಲಿ ಖಿನ್ನತೆ ಮತ್ತು ರಕ್ತದೊತ್ತಡದ ಔಷಧಿಗಳನ್ನು ಬೆರೆಸುವ ಪ್ರಕರಣಗಳು ಸಹ ಬೆಳಕಿಗೆ ಬಂದಿವೆ.

ಕೊಬ್ಬು ರಹಿತ ಆಹಾರ (Fat-free diet)
ಕೊಬ್ಬು ರಹಿತ ಆಹಾರ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು ಎಂಬ ಮಿಥ್ಯೆಯನ್ನು ಅನೇಕ ಜನರು ನಂಬುತ್ತಾರೆ. ನೀವು ಸಹ ಅಂತಹ ಜನರಲ್ಲಿ ಒಬ್ಬರಾಗಿದ್ದರೆ, ಅನೇಕ ಕೊಬ್ಬು ರಹಿತ ಉತ್ಪನ್ನಗಳು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತವೆ ಮತ್ತು ಅವುಗಳ ಸೇವನೆಯು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವುದಿಲ್ಲ. ಅಲ್ಲದೆ, ಸಂಸ್ಕರಿಸಿದ ಪದಾರ್ಥ(Processed food)ಕ್ಕೆ ಸಕ್ಕರೆ ಸೇರಿಸುವುದರಿಂದ ತೂಕ ಇಳಿಸುವ ಬದಲು, ಅದು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ.

ಹೆಚ್ಚಿನ ವ್ಯಾಯಾಮ (More exercise)
ಹೆಚ್ಚು ವ್ಯಾಯಾಮ ಮಾಡುವುದರಿಂದ ತೂಕ ಇಳಿಕೆ ವೇಗವಾಗಿ ಆಗುತ್ತದೆ ಎಂದು ನೀವು ನಂಬುತ್ತೀರಾ ?. ಹೌದು ಎಂದಾದರೆ, ಇದು ಕೂಡ ನಿಜವಲ್ಲ ಮತ್ತು ಈ ವಿಚಾರದಲ್ಲೂ ನೀವು ಸರಿಯಾಗಬೇಕು. ಅತಿಯಾದ ವ್ಯಾಯಾಮವು ಸ್ನಾಯುಗಳ ಒತ್ತಡಕ್ಕೆ ಕಾರಣವಾಗಬಹುದು. ಇದು ಗಾಯ ಅಥವಾ ತೀವ್ರ ನೋವಿಗೆ ಕಾರಣವಾಗಬಹುದು. ಅಲ್ಲದೆ, ಇದನ್ನು ಮಾಡುವುದರಿಂದ ಹಾರ್ಮೋನುಗಳ ಬದಲಾವಣೆಗಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿ(Weak immune system)ಯಂತಹ ಸಮಸ್ಯೆಗಳು ಉಂಟಾಗಬಹುದು.

ಆಹಾರ ಸೇವನೆ ಕಡಿಮೆ ಮಾಡುವುದು (Reducing food intake)
ಅರ್ಧಕ್ಕಿಂತ ಹೆಚ್ಚು ಜನರು ಕಡಿಮೆ ತಿನ್ನುವುದರಿಂದ ತೂಕ ಬೇಗನೆ ಕಡಿಮೆಯಾಗುತ್ತದೆ ಎಂದು ನಂಬುತ್ತಾರೆ. ಇದು ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಊಟವನ್ನು ಬಿಡುವುದು ಅಥವಾ ಆಹಾರವನ್ನು ಕಡಿಮೆ ಮಾಡುವುದು ಬುದ್ಧಿವಂತ ಹೆಜ್ಜೆಯಲ್ಲ. ಆದ್ದರಿಂದ, ಈ ರೀತಿ ಏನಾದರೂ ಮಾಡುವ ಮೊದಲು ಖಂಡಿತವಾಗಿಯೂ ಆಹಾರ ತಜ್ಞರನ್ನು ಸಂಪರ್ಕಿಸಿ.

ಕಾರ್ಬೋಹೈಡ್ರೇಟ್ಸ್ ಬಿಟ್ಟುಬಿಡಿ (Skip the carbohydrates)
ತೂಕ ಇಳಿಸಿಕೊಳ್ಳಲು ಕಾರ್ಬೋಹೈಡ್ರೇಟ್‌ಗಳನ್ನು ತ್ಯಜಿಸುವುದು ಕೂಡ ಒಂದು ದೊಡ್ಡ ಮಿಥ್ಯೆ. ದೇಹವು ಕಾರ್ಬೋಹೈಡ್ರೇಟ್‌ಗಳ ಸೇವನೆಯಿಂದ ಶಕ್ತಿಯನ್ನು ಪಡೆಯುತ್ತದೆ. ಆದ್ದರಿಂದ ನೀವು ಅದಕ್ಕೆ ಆರೋಗ್ಯಕರ ಆಯ್ಕೆಗಳನ್ನು ತೆಗೆದುಕೊಳ್ಳಬಹುದು, ಅಂದರೆ ನೀವು ಅದನ್ನು ಹೇಗೆ ತೆಗೆದುಕೊಳ್ಳುತ್ತಿದ್ದೀರಿ ಎಂಬುದು ಮುಖ್ಯ. ನೀವು ಅದನ್ನು ತ್ಯಜಿಸಬೇಕಾದರೆ, ಕೃತಕ ಸಕ್ಕರೆ ಕಂಡುಬರುವ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ (Refined carbohydrates) ಗಳನ್ನು ತ್ಯಜಿಸುವುದು ಉತ್ತಮ, ಅಂದರೆ ಕಾರ್ಬೋಹೈಡ್ರೇಟ್‌ಗಳು ಸಂಪೂರ್ಣವಾಗಿ ನಿಮ್ಮ ಶತ್ರುವಲ್ಲ.