ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್, ವಿದೇಶಿ ಸಾಂಸ್ಕೃತಿಕ ಪ್ರಭಾವವನ್ನು ತಡೆಯಲು ಮೂರು ಇಂಗ್ಲಿಷ್ ಪದಗಳ ಬಳಕೆಯನ್ನು ನಿಷೇಧಿಸಿದ್ದಾರೆ. ಈ ಪದಗಳಿಗೆ ಸ್ಥಳೀಯ ಪರ್ಯಾಯಗಳನ್ನು ಸೂಚಿಸಿದ್ದು, ನಿಯಮ ಉಲ್ಲಂಘಿಸಿದರೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಿಮ್ ಜಾಂಗ್-ಉನ್ ಅಚ್ಚರಿ ಆದೇಶ
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಅಚ್ಚರಿ ಆದೇಶವನ್ನು ಹೊರಡಿಸಿದ್ದಾರೆ ಮೂರು ಇಂಗ್ಲಿಪ್ ಪದಗಳ ಬಳಕೆಯನ್ನು ನಿಷೇಧಿಸಿರುವ ಕಿಮ್ ಜಾಂಗ್-ಉನ್, ವಿದೇಶಿ ಸಾಂಸ್ಕೃತಿಕ ಒಳನುಸುಳುವಿಕೆಯನ್ನು ತಡೆಗಟ್ಟಲು ಈ ಆದೇಶ ಹೊರಡಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಉತ್ತರ ಕೊರಿಯಾದ ಭಾಷೆ ಮತ್ತು ಶಬ್ದಕೋಶ ಉತ್ತೇಜಿಸುವ ಕ್ರಮ ಇದಾಗಿದೆ ಕಿಮ್ ಜಾಂಗ್-ಉನ್ ಹೇಳಿಕೊಂಡಿದ್ದಾರೆ.
ಕಿಮ್ ಜಾಂಗ್-ಉನ್ ನಿಷೇಧಿಸಿರುವ ಮೂರು ಪದಗಳು
"ಹ್ಯಾಂಬರ್ಗರ್," "ಐಸ್ ಕ್ರೀಮ್," ಮತ್ತು "ಕರೋಕೆ" (ice-cream, hamburger, karaoke) ಈ ಮೂರು ಪದಗಳನ್ನು ನಿಷೇಧಿಸಲಾಗಿದೆ. ಹ್ಯಾಂಬರ್ಗರ್ ಅನ್ನೋದು ಮಾಂಸದಿಂದ ತಯಾರಿಸಲಾದ ಆಹಾರವಾಗಿದೆ.
ಬದಲಿಯಾಗಿ ಬಳಸಲು ಸೂಚಿಸಿದ ಪದಗಳು ಹೀಗಿವೆ
- ಹ್ಯಾಂಬರ್ಗರ್ ಬದಲಾಗಿ ದಹಿನ್-ಗೋಗಿ ಗಿಯೊಪ್ಪಾಂಗ್ ಬಳಕೆ ಮಾಡಬೇಕು.
- ಐಸ್ ಕ್ರೀಮ್ ಬದಲಾಗಿ ಎಸುಕಿಮೊ ಬಳಕೆ ಮಾಡಬೇಕು.
- ಕ್ಯಾರಿಯೋಕೆ ಬದಲಾಗಿ ಆನ್-ಸ್ಕ್ರೀನ್ ಪಕ್ಕವಾದ್ಯ ಯಂತ್ರಗಳು (on-screen accompaniment machines) ಎಂದು ಕರೆಯಬೇಕು.
ಪದಗಳನ್ನ ನೆನಪಿಟ್ಟುಕೊಳ್ಳಲು ಆದೇಶ
ಸರ್ಕಾರದ ತರಬೇತಿ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಗುರುತಿಸಲ್ಪಟ್ಟ ಈ ಪದಗಳು ಮತ್ತು ಘೋಷಣೆಗಳನ್ನು ಮಾರ್ಗದರ್ಶಿಗಳು ನೆನಪಿಟ್ಟುಕೊಳ್ಳಬೇಕಾಗುತ್ತದೆ ಎಂದು ಆದೇಶ ಮಾಡಲಾಗಿದೆ. ಈ ಹಿಂದೆ ವಿದೇಶಿ ಚಲನಚಿತ್ರ, ವೆಬ್ ಸಿರೀಸ್ ವೀಕ್ಷಣೆ ಮತ್ತು ಶೇರ್ ಮಾಡಿಕೊಳ್ಳುವುದನ್ನು ನಿಷೇಧಿಸಿತ್ತು. ಒಂದು ನಿಯಮ ಪಾಲನೆ ತಪ್ಪಿದ್ರೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಇದನ್ನೂ ಓದಿ: ಭಾರತದ ಆರ್ಥಿಕತೆಗೆ ಪೆಟ್ಟು ನೀಡಲು ಬೆಂಗಳೂರು ಮೇಲೆ ಕಣ್ಣಿಟ್ಟ ಡೊನಾಲ್ಡ್ ಟ್ರಂಪ್
ವಿಚಿತ್ರ ಆದೇಶಗಳು
ಇಷ್ಟು ಮಾತ್ರವಲ್ಲ ಉತ್ತರ ಕೊರಿಯಾದಲ್ಲಿ ವಿದೇಶಿ ಮಾಧ್ಯಮಗಳ ಪ್ರಸಾರವನ್ನು ಸಹ ತಡೆಹಿಡಿಯಲಾಗಿದೆ. ಇದೊಂದು ದಬ್ಬಾಳಿಕೆಯ ಪ್ರವೃತ್ತಿ ಎಂದು ವಿಶ್ವಸಂಸ್ಥೆ ಕಳವಳವನ್ನು ವ್ಯಕ್ತಪಡಿಸಿತ್ತು. ವರದಿಗಳ ಪ್ರಕಾರ, ದಕ್ಷಿಣ ಕೊರಿಯಾದ ನಾಟಕಗಳನ್ನು ನೋಡುವುದು, ವಿದೇಶಿ ಸಂಗೀತವನ್ನು ಕೇಳುವುದು ಅಥವಾ ನಿಷೇಧಿತ ಚಲನಚಿತ್ರಗಳನ್ನು ಹಂಚಿಕೊಳ್ಳುವದನ್ನು ಸಹ ಇಲ್ಲಿ ನಿಷೇಧಿಸಲಾಗಿದೆ.
ಇದನ್ನೂ ಓದಿ: ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?