ಚೀನಾ ಅಧ್ಯಕ್ಷರ ಜೊತೆಗಿನ ಭೇಟಿಯ ನಂತರ ಕಿಮ್ ಜಾಂಗ್ ಉನ್ ಕುಳಿತಿದ್ದ ಜಾಗವನ್ನು ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಇದರ ಹಿಂದಿನ ನಿಗೂಢತೆಯನ್ನು ಈ ಲೇಖನ ಚರ್ಚಿಸುತ್ತದೆ.
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಲಸ್ಕಾ ಭೇಟಿ ವೇಳೆ ಮಲಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಶೇಖರಣೆ ಸುದ್ದಿ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಚೀನಾ ಭೇಟಿ ವೇಳೆ ಸಿಬ್ಬಂದಿ ಅವರು ಕುಳಿತಿದ್ದ ಜಾಗ ಸ್ವಚ್ಛಗೊಳಿಸಿದ ಘಟನೆ ನಡೆದಿದೆ.
ಪುಟಿನ್, 2017ರಿಂದಲೂ ವಿದೇಶಿಗಳಿಗೆ ತೆರಳಿದಾಗ ಮಲಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಸಂಗ್ರಹಿಸಿ ರಷ್ಯಾಗೆ ತರುತ್ತಾರೆ. ಇದರ ಹಿಂದೆ ಅವರಿಗಿರುವ ಆರೋಗ್ಯ ಸಮಸ್ಯೆ ವಿದೇಶಿ ರಾಷ್ಟ್ರಗಳಿಗೆ ತಿಳಿಯಬಾರದು ಎನ್ನುವ ಕಾರಣವಿದೆ ಎನ್ನುವ ವದಂತಿಯಿದೆ. ಇದೀಗ ಕಿಮ್ ವಿಚಾರದಲ್ಲಿಯೂ ಅಂತಹದ್ದೇ ಬೆಳವಣಿಗೆ ನಡೆದಿದೆ.
ಚೀನಾ ಅಧ್ಯಕ್ಷ ಕ್ಸಿ ಜತೆಗೆ ಸಭೆ ಮುಗಿದ ನಂತರ ಕಿಮ್ ಕೂಡ ಅಲ್ಲಿಂದ ತೆರಳಿದ್ದಾರೆ. ಬಳಿಕ ಅವರ ಇಬ್ಬರ ಸಹಾಯಕರು ತರಾತುರಿಯಲ್ಲಿ ಆ ಜಾಗ ಸ್ವಚ್ಛಗೊಳಿಸಿದ್ದಾರೆ. ಅದರಲ್ಲಿ ಒಬ್ಬರು ಕಿಮ್ ಕುಳಿತಿದ್ದ ಕುರ್ಚಿ, ಅದರ ಹಿಂದಿನ ಭಾಗವನ್ನು ಪಾಲಿಶ್ ಮಾಡಿದ್ದರೆ. ಮತ್ತೊಬ್ಬರು ಕಿಮ್ ಕುಡಿದ ನೀರಿನ ಲೋಟ ಕೊಂಡೊಯ್ಯದಿದ್ದಾರೆ. ಈ ಮೂಲಕ ಕಿಮ್ ಕುಳಿತಿದ್ದ ಜಾಗದಲ್ಲಿ ಯಾವುದೇ ಕುರುಹು ಉಳಿಯದಂತೆ ಸಂಪೂರ್ಣ ನಾಶಪಡಿಸಿದ್ದಾರೆ.
ಇದನ್ನೂ ಓದಿ: ಚೀನಾ, ಉತ್ತರ ಕೊರಿಯಾ ಜೊತೆ ಸೇರಿ ಅಮೆರಿಕ ವಿರುದ್ಧ ರಷ್ಯಾ ಪಿತೂರಿಗೆ ಟ್ರಂಪ್ ಶಾಂತಿ ಮಂತ್ರ!
ರೈಲಿನಲ್ಲೇ ಪ್ರಯಾಣಿಸುವ ಕಿಮ್ ಜಾಂಗ್ ಉನ್
ಉ.ಕೊರಿಯಾ ಬಳಿ ಅತ್ಯಾಧುನಿಕ ವಿಮಾನಗಳಿಲ್ಲ. ಜೊತೆಗೆ ಕಿಮ್‌ಗೆ ವಿಮಾನ ಪ್ರಯಾಣ ಭಯ. ಹೀಗಾಗಿ 2011ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ದೇಶದೊಳಗೆ ದೂರ ಪ್ರದೇಶಕ್ಕೆ ಸಂಚರಿಸಲು, ಮಿತ್ರ ದೇಶಗಳಾದ ರಷ್ಯಾ, ಚೀನಾ, ವಿಯೆಟ್ನಾಂಗೆ ಸಂಚರಿಸಲು ಅವರು ರೈಲನ್ನೇ ಬಳಸುತ್ತಾರೆ
ಇದನ್ನೂ ಓದಿ: ಅಮೆರಿಕ ತಲುಪಬಲ್ಲ ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ಪ್ರದರ್ಶಿಸಿದ ಚೀನಾ; 20 ಸಾವಿರ ಕಿ.ಮೀ.ಗೂ ದೂರ ಪ್ರಯಾಣಿಸುತ್ತೆ!
