- Home
- News
- World News
- ಭಾರತಕ್ಕೆ ಶಾಕ್ ನೀಡಲು ಚಾಪೆ ಕೆಳಗೆ ನುಗ್ಗಿದ್ದ ಟ್ರಂಪ್‌ಗೆ ಆಘಾತ; ರಂಗೋಲಿ ಕೆಳಗೆ ನುಸಳಲು ಅಮೆರಿಕನ್ ಕಂಪನಿಗಳು ಪ್ಲಾನ್
ಭಾರತಕ್ಕೆ ಶಾಕ್ ನೀಡಲು ಚಾಪೆ ಕೆಳಗೆ ನುಗ್ಗಿದ್ದ ಟ್ರಂಪ್‌ಗೆ ಆಘಾತ; ರಂಗೋಲಿ ಕೆಳಗೆ ನುಸಳಲು ಅಮೆರಿಕನ್ ಕಂಪನಿಗಳು ಪ್ಲಾನ್
H1B visa fee increase impact: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್1ಬಿ ವೀಸಾ ಶುಲ್ಕವನ್ನು ಏರಿಸಿದ್ದರಿಂದ, ಅಮೆರಿಕದ ಕಂಪನಿಗಳಿಗೆ ಭಾರತೀಯರನ್ನು ನೇಮಿಸಿಕೊಳ್ಳುವುದು ದುಬಾರಿಯಾಗಿದೆ.

ಐಟಿ ವಲಯ
ಐಟಿ ವಲಯದಲ್ಲಿನ ವಿದೇಶಿಯರ ನೌಕರಿಗೆ ಕಡಿವಾಣ ಮತ್ತು ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ನೆಪದಲ್ಲಿ, ವಿದೇಶಿಗರಿಗೆ ನೀಡಲಾಗುವ ಎಚ್1ಬಿ ವೀಸಾ ಶುಲ್ಕವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರಿಕೆ ಮಾಡಿದ್ದಾರೆ.
ಅಮೆರಿಕದ ಕಂಪನಿ
ಈ ಶುಲ್ಕ ಏರಿಕೆ ಭಾರತೀಯರಿಗೆ ಮಾತ್ರವಲ್ಲ, ಅಮೆರಿಕದ ಕಂಪನಿಗಳಿಗೂ ಸಮಸ್ಯೆಯಾಗುತ್ತಿದೆ. ಆದಕಾರಣ ಅವುಗಳು ಕೆಲ ಸೇವಾ ವಲಯದ ಕೆಲಸಗಳನ್ನು ಭಾರತದಲ್ಲಿಯೇ ಮಾಡಲು ಮುಂದಾಗುವ ಸಾಧ್ಯತೆ ದಟ್ಟವಾಗುತ್ತಿದೆ.
ಕೌಶಲ್ಯಯುತ ದುಡಿಯುವ ವರ್ಗ
ಭಾರತದಲ್ಲಿ ಕೌಶಲ್ಯಯುತ ದುಡಿಯುವ ವರ್ಗವಿದೆಯಾದರೂ, ಅವರನ್ನು ಅಮೆರಿಕಕ್ಕೆ ಕರೆಸಿಕೊಳ್ಳಲು ಅಗತ್ಯವಾದ ಎಚ್1ಬಿ ವೀಸಾವನ್ನು ಟ್ರಂಪ್ ದುಬಾರಿಗೊಳಿಸಿದ್ದಾರೆ. ಇವುಗಳ ಹೊರೆ ಕಂಪನಿಗಳ ಮೇಲೆ ಬೀಳಲಿರುವ ಕಾರಣ, ಅವುಗಳು ವಿದೇಶಿಗರ ಬದಲು ಅಮೆರಿಕನ್ನರನ್ನು ನೇಮಿಸಿಕೊಳ್ಳುತ್ತಾರೆ ಎಂಬುದು ಟ್ರಂಪ್‌ರ ಲೆಕ್ಕಾಚಾರ.
ಪ್ರಾವೀಣ್ಯತೆಯ ಕೊರತೆ
ಅಮೆರಿಕನ್ನರಲ್ಲಿರುವ ಪ್ರಾವೀಣ್ಯತೆಯ ಕೊರತೆ ಹಾಗೂ ಅವರಿಗೆ ಅಧಿಕ ವೇತನ ಕೊಡಬೇಕಾಗಿರುವುದರಿಂದ ಅಮೆರಿಕದ ಕಂಪನಿಗಳು ಭಾರತೀಯರನ್ನೇ ನೆಚ್ಚಿಕೊಳ್ಳುವುದನ್ನು ಮುಂದುವರೆಸಿವೆ. ಪರಿಣಾಮವಾಗಿ, ಅವುಗಳು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಬೆಳವಣಿಗೆ(ಜಿಸಿಸಿ) ಸೇವೆಗಳನ್ನು ಭಾರತದಲ್ಲಿಯೇ ಮಾಡಿಸಲು ಮುಂದಾಗುತ್ತಿವೆ. ಹೀಗಾಗಲು ಇನ್ನೊಂದು ಪ್ರಮುಖ ಕಾರಣವೆಂದರೆ, ಕೃತಕ ಬುದ್ಧಿಮತ್ತೆ(ಎಐ)ಯ ವ್ಯಾಪಕ ಅಳವಡಿಕೆ.
ಇದನ್ನೂ ಓದಿ: ಕೋವಿಡ್ ಟೈಮ್‌ನಲ್ಲಿ ಲಸಿಕೆ ಉತ್ಪಾದನೆ ಮಾಡಿ ಜನರ ಜೀವ ಉಳಿಸಿದ್ದ ವ್ಯಕ್ತಿ ಆರ್‌ಸಿಬಿಗೆ ಹೊಸ ಬಾಸ್?
ರೋಹನ್ ಲೋಬೊ
ಈ ಬಗ್ಗೆ ಮಾತನಾಡಿರುವ ಡೆಲಾಯ್ಟ್ ಇಂಡಿಯಾದಲ್ಲಿ ಜಿಸಿಸಿ ಉದ್ಯಮದ ಅಧ್ಯಕ್ಷ ರೋಹನ್ ಲೋಬೊ, ‘ಹಲವು ಕಂಪನಿಗಳು ಜಿಸಿಸಿ ಸೇವೆಗಳನ್ನು ಭಾರತಕ್ಕೆ ಸ್ಥಳಾಂತರಿಸಲು ನೋಡುತ್ತಿವೆ. ಈ ಬಗ್ಗೆ ಯೋಜನೆಗಳೂ ಸಿದ್ಧವಿದೆ’ ಎಂದು ಹೇಳಿದ್ದಾರೆ. ಈ ಮೊದಲು ಸುಮಾರು 4 ಲಕ್ಷ ರು. ಇದ್ದ ಎಚ್1ಬಿ ವೀಸಾ ದರವನ್ನು ಟ್ರಂಪ್ 88 ಲಕ್ಷ ರು.ಗೆ ಏರಿಸಿದ್ದರು.
ಇದನ್ನೂ ಓದಿ: ಶೀಘ್ರ ಇಸ್ರೇಲ್-ಹಮಾಸ್ ಯುದ್ಧ ಅಂತ್ಯದತ್ತ? ಟ್ರಂಪ್‌ರಿಂದ 20 ಅಂಶ ಪ್ರಸ್ತಾಪ, ಹಮಾಸ್ ಉಗ್ರರು ಒಪ್ತಾರಾ?