ಕಾವೇರಿ-ಮಲ್ಲಿ ಕಿತಾಪತಿಯಿಂದ ಆರಂಭ ಪ್ರೇಮದಾರಂಭ; ಕಣ್ಣೀರಿಟ್ಟು ಭೂಮಿಕಾ ಹೇಳಿದ್ದೇನು?
ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಮಲ್ಲಿ ಮತ್ತು ಕಾವೇರಿ ಪ್ಲಾನ್ ಮಾಡುತ್ತಾರೆ. ವಠಾರದ ಕರೆಂಟ್ ಕಡಿತಗೊಳಿಸಿದಾಗ, ಕತ್ತಲಲ್ಲಿ ಹೆದರಿದ ಭೂಮಿಕಾ ಬಳಿ ಗೌತಮ್ ಕ್ಯಾಂಡಲ್ ಹಿಡಿದು ಬರುತ್ತಾನೆ, ಇದರಿಂದ ಇಬ್ಬರ ನಡುವೆ ಮತ್ತೆ ಪ್ರೀತಿ ಚಿಗುರೊಡೆಯುತ್ತದೆ.

ಅಮೃತಧಾರೆ
ಮಲ್ಲಿ ಮಾಡಿದ ಪ್ಲಾನ್‌ನಿಂದ ಗೌತಮ್ ವಾಸವಾಗಿರುವ ವಠಾರಕ್ಕೆ ಭೂಮಿಕಾ ಬಂದಿದ್ದಾಳೆ. ಈಗಾಗಲೇ ಇಬ್ಬರ ಮುಖಾಮುಖಿಯಾಗಿದ್ದು, ಮತ್ತೆ ಪ್ರೀತಿಯ ಸೆಳೆಯ ಇಬ್ಬರಲ್ಲಿ ಪ್ರೇಮದ ಹೂವು ಅರಳಿದೆ. ಇದೀಗ ಇಬ್ಬರನ್ನು ಮತ್ತಷ್ಟು ಒಂದು ಮಾಡಲು ಕಾವೇರಿ ಜೊತೆ ಸೇರಿ ಮಲ್ಲಿ ಮತ್ತೊಂದು ಪ್ಲಾನ್ ಮಾಡಿದ್ದಾಳೆ.
ವಠಾರ
ಗೌತಮ್ ವಾಸವಾಗಿರುವ ವಠಾರದಲ್ಲಿಯೇ ವಾಸವಿರಲು ಭೂಮಿಕಾ ನಿರ್ಧರಿಸಿದ್ದಾಳೆ. ಮತ್ತೊಂದೆಡೆ ಈ ವಿಷಯ ಕೇಳಿ ಗೌತಮ್ ಖುಷಿಯಲ್ಲಿದ್ದಾನೆ. ಒಂದೇ ವಠಾರದಲ್ಲಿದ್ರೆ ಮಗ ಮತ್ತು ಪತ್ನಿಯನ್ನು ನೋಡಬಹುದು ಎಂದು ಸಂತೋಷದಲ್ಲಿ ಗೆಳೆಯ ಆನಂದ್‌ಗೂ ಈ ವಿಷಯವನ್ನು ತಿಳಿಸಿದ್ದಾನೆ.
ರಾತ್ರಿ ಕರೆಂಟ್ ಕಟ್
ಕಾವೇರಿ ಮನೆಗೆ ಬಂದಿರುವ ಮಲ್ಲಿ, ಏನಾದ್ರು ಮಾಡಿ ಇಬ್ಬರನ್ನು ಒಂದು ಮಾಡಬೇಕು ಎಂದು ಹೇಳಿದ್ದಾಳೆ. ಕತ್ತಲೆ ಅಂದ್ರೆ ಅಪ್ಪುಗೆ ಭಯ, ರಾತ್ರಿ ಕರೆಂಟ್ ಹೋದ್ರೆ ಅವನು ಕಿರುಚುತ್ತಾನೆ ಎಂದು ಮಲ್ಲಿ ಹೇಳುತ್ತಾಳೆ. ಕತ್ತಲೆ ಬೇಕು ಅಲ್ಲವಾ ಎಂದು ಇಡೀ ವಠಾರದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾಳೆ.
ಕ್ಯಾಂಡಲ್ ಹಿಡಿದು ಬಂದ ಗೌತಮ್
ಮನೆಯಲ್ಲಿ ಕರೆಂಟ್ ಹೋಗ್ತಿದ್ದಂತೆ ಅಪ್ಪು ಜೋರಾಗಿ ಕಿರುಚಿಕೊಂಡು ಮಲ್ಲಿಯನ್ನು ತಬ್ಬಿಕೊಳ್ಳುತ್ತಾನೆ. ಅತ್ತ ಕತ್ತಲಿನಲ್ಲಿ ಮೇಣದ ಬತ್ತಿ ಹುಡುಕುತ್ತಿರುವಾಗ ಮೇಲಿಂದ ಪಾತ್ರೆ ಬೀಳುತ್ತಿದ್ದಂತೆ ಭೂಮಿಕಾ ಸಹ ಹೆದರಿಕೊಂಡು ಕಿಚನ್‌ನಿಂದ ಹೊರಗೆ ಬರುತ್ತಿದ್ದಂತೆ ಕ್ಯಾಂಡಲ್ ಹಿಡಿದು ಗೌತಮ್ ಬಂದಿದ್ದಾನೆ.
ಇದನ್ನೂ ಓದಿ: Amruthadhaare: 'ಕರ್ಮ ರಿಟರ್ನ್ಸ್' ಎನ್ನೋದು ಸುಮ್ನೇನಾ? ಶಕುನಿ ಮಾಮಂಗೆ ದೇವ್ರೇ ಕಾಪಾಡ್ಬೇಕು!
ಪ್ರೀತಿಯ ಹೂ
ಕಾವೇರಿ ಮತ್ತು ಮಲ್ಲಿ ಮಾಡಿದ ಕಿತಾಪತಿಯಿಂದಾಗಿ ಗೌತಮ್-ಭೂಮಿಕಾ ಜೀವನದಲ್ಲಿ ಮತ್ತೊಮ್ಮೆ ಪ್ರೀತಿಯ ಹೂ ಅರಳುತ್ತಿದೆ. ಇಡೀ ದಿನ ಕ್ಯಾಂಡಲ್ ಹಿಡಿದು ಭೂಮಿಕಾ ಪಕ್ಕದಲ್ಲಿಯೇ ಗೌತಮ್ ಕುಳಿತಿದ್ದಾನೆ. ಬೆಳಗ್ಗೆ ನನ್ನನ್ನು ಇಲ್ಲಿಂದ ದೂರ ಕರೆದುಕೊಂಡು ಹೋಗುವಂತೆ ಗೌತಮ್ ಬಳಿ ಭೂಮಿಕಾ ಮನವಿ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: Amruthadhaare: ವಠಾರದ ಕರೆಂಟ್ ತೆಗೆದ ಮಲ್ಲಿ: ಕತ್ತಲಲ್ಲಿ ಕುಚ್ ಕುಚ್ ಆಗೋಯ್ತು- ಹೃದಯ ಬಡಿತನೂ ಜೋರಾಯ್ತು