- Home
- Entertainment
- TV Talk
- ಸಂತೋಷ್- ಹರೀಶ್ ಗೆ ಕಾನೂನಿನ ಮೂಲಕವೇ ತಿರುಗೇಟು ಕೊಟ್ಟ ಶ್ರೀನಿವಾಸ್…. ಇದು Actually ಚೆನ್ನಾಗಿರೋದು
ಸಂತೋಷ್- ಹರೀಶ್ ಗೆ ಕಾನೂನಿನ ಮೂಲಕವೇ ತಿರುಗೇಟು ಕೊಟ್ಟ ಶ್ರೀನಿವಾಸ್…. ಇದು Actually ಚೆನ್ನಾಗಿರೋದು
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇಲ್ಲಿವರೆಗೆ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದ ಶ್ರೀನಿವಾಸ್ ಇದೀಗ ತಮ್ಮ ಮಕ್ಕಳಾದ ಸಂತೋಷ್- ಹರೀಶ್ ಎದುರು ತಿರುಗಿ ಬಿದ್ದಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ. ಇದನ್ನು ನೋಡಿ ಜನ ಇದು ಚೆನ್ನಾಗಿರೋದು ಎನ್ನುತ್ತಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ (Lakshmi Nivasa) ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇಲ್ಲಿವರೆಗೆ ಅಪ್ಪ -ಅಮ್ಮನನ್ನು ಎಷ್ಟು ಸಾಧ್ಯವೋ ಅಷ್ಟು ಕೀಳಾಗಿ ಕಂಡು, ಅವರನ್ನೇ ಮನೆಯಿಂದ ಹೊರ ಹೋಗುವಂತೆ ಮಾಡಿದ ಸಂತೋಷ್ ಮತ್ತು ಹರೀಶನಿಗೆ ಇದೀಗ ಶ್ರೀನಿವಾಸ್ ಸಖತ್ ಆಗಿ ತಿರುಗೇಟು ಕೊಟ್ಟಿದ್ದಾರೆ.
ಅಷ್ಟಕ್ಕೂ ಸೀರಿಯಲ್ ನಲ್ಲಿ ಅಂತದ್ದು ಆಗಿರೋದು ಏನು? ಈಗಾಗಲೇ ಲಕ್ಷ್ಮೀ ಮತ್ತು ಶ್ರೀನಿವಾಸರು ಮನೆ ಬಿಟ್ಟು ಹೊರಗೆ ಹೋಗಿದ್ದಾರೆ, ಸಂತೋಷ್ ಕದ್ದು ಕಟ್ಟುತ್ತಿದ್ದ ತನ್ನ ಮನೆ ಗೃಹಪ್ರವೇಶ ಮಾಡಿ ಅಲ್ಲಿ ನೆಲೆಸಿದರೆ, ಹರೀಶ ಹೆಂಡತಿಯ ಮನೆಯಲ್ಲಿ ಆರಾಮಾಗಿದ್ದಾನೆ.
ಇದೀಗ ಶ್ರೀನಿವಾಸ್ ಮತ್ತು ಲಕ್ಷ್ಮೀ ವೆಂಕಿ ಮತ್ತು ಭಾವನಾ ನೆರವಿನಿಂದ ತಮ್ಮ ಸೈಟಲ್ಲಿ ಒಂದು ಶೆಡ್ ರೀತಿ ಮನೆ ಕಟ್ಟಿ, ಅಲ್ಲೇ ಒಂದು ಗ್ಯಾರೇಜ್ ಓಪನ್ ಮಾಡಿದ್ದರೆ. ಆದ್ರೆ ಅದಕ್ಕೂ ಅಡ್ಡ ಕಾಲು ಹಾಕಿದ್ದಾರೆ ಈ ಸಂತೋಷ್ ಮತ್ತು ಹರೀಶ್.
ಹೊಸ ಮನೆ ಪೂಜೆ ನಡೆಯುತ್ತಿದ್ದರೆ ಅಲ್ಲಿಗೆ ಹರೀಶ್ ಜೊತೆ ಬರುವ ಸಂತೋಷ್, ಇದು ನಿಮ್ಮ ಜಾಗ ಅಂದ್ರೆ, ಆ ಜಾಗದಲ್ಲಿ ನಮಗೂ ಪಾಲು ಬೇಕು. ಇಲ್ಲಾಂದ್ರೆ ಸುಮ್ನೆ ಇರಲ್ಲ, ಆದಷ್ಟು ಬೇಗ ನಮ್ಮ ಪಾಲಿನ ಜಾಗ ನಮಗೆ ಕೊಟ್ಟುಬಿಡಿ ಎನ್ನುತ್ತಾನೆ. ಇಲ್ಲಿವರೆಗೆ ಏನೂ ಮಾತನಾಡದೆ ಸುಮ್ಮನಿದ್ದ ಶ್ರೀನಿವಾಸ್ ಇದೀಗ ತಮ್ಮ ಮಕ್ಕಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಮಕ್ಕಳ ವಿರುದ್ಧ ಕೋರ್ಟ್ (family court) ಮೆಟ್ಟಿಲೇರಿದ ಶ್ರೀನಿವಾಸ್, ನನ್ನ ಮಕ್ಕಳು ತಂದೆ ತಾಯಿ ವಯಸ್ಸಾದ ಸಮಯದಲ್ಲಿ ನೋಡಿಕೊಳ್ಳೋದು ಬಿಟ್ಟು ದೂರ ಹೋಗೊ ಪ್ರಯತ್ನ ಮಾಡುತ್ತಾರೆ. ಅಪ್ಪ, ಅಮ್ಮನಿಗೆ ಮೋಸ ಮಾಡಿ ತಾವು ಮಾತ್ರ ಚೆನ್ನಾಗಿ ಬದುಕಬೇಕು ಎಂದು ಬಯಸೋದು ಎಷ್ಟು ಸರಿ ಎಂದು ಕೋರ್ಟ್ ನಲ್ಲಿ ಕೇಳುತ್ತಾರೆ ಶ್ರೀನಿವಾಸ್.
ಅಷ್ಟೇ ಅಲ್ಲ, ಇವರು ಹುಟ್ಟಿದಾಗಿನಿಂದ ನಾನು ಅವರಿಗಾಗಿ ಎಷ್ಟು ಖರ್ಚು ಮಾಡಿದ್ದೆನೋ, ಅಷ್ಟೂ ಹಣವನ್ನು ಅವರಿಂದ ನನಗೆ ವಾಪಾಸ್ ಕೊಡಿಸಬೇಕು ಎಂದು ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತಿರುವ ಪ್ರೊಮೋ ಇದೀಗ ಬಿಡುಗಡೆಯಾಗಿತ್ತು, ಇದನ್ನು ನೋಡಿ ವೀಕ್ಷಕರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ.
ಕೊನೆಗೂ ಮಕ್ಕಳ ಕುತಂತ್ರದ ವಿರುದ್ಧ ತಿರುಗಿ ಬಿದ್ದ ಶ್ರೀನಿವಾಸ್ ನಡೆಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ, ಈ ವಾರದ ಚಪ್ಪಾಳೆ ನಮ್ಮ ಶ್ರೀನಿವಾಸ್ ಗೆ, ಈವಾಗ ಈ ಸೀರಿಯಲ್ ಗೊಂದು ಕಳೆ ಬಂತು, ಮಕ್ಕಳಿಗ್ ಆಸೆ ಇರಬೇಕು, ಆದರೆ ದುರಾಸೆ ಇರಬಾರದು…ಸರಿಯಾದ ಸಂದೇಶ ಕೊಟ್ಟಿದ್ದೀರಿ, ಇದು ಸಮಾಜಕ್ಕೆ ಮಾದರಿ, ತುಂಬಾ ಒಳ್ಳೆಯ ಮೆಸೇಜ್ ಕೊಟ್ಟಿದ್ದೀರಾ ತಂದೆ-ತಾಯಿನ ಕೇವಲವಾಗಿ ನೋಡೋ ಮಕ್ಕಳಿಗೆ ಸರಿಯಾದ ಪಾಠ ಇದು ನೂರಕ್ಕೆ ನೂರು ಸರಿಯಾದ ನಿರ್ಧಾರ ಎಂದು ಜನ ಕಾಮೆಂಟ್ ಮಾಡಿದ್ದಾರೆ.