ಸೀರೆಯಲ್ಲಿ ನೀರೆ ಸಂಗೀತ ಶೃಂಗೇರಿ.. ಇರೋದು ಒಂದು ಹೃದಯ ಎಷ್ಟು ಸಲ ಕದಿತೀರಾ ಅಂದ್ರು ಜನ
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ಸುಂದರಿ ಬಿಗ್ ಬಾಸ್ ಸುಂದರಿ ಎಂದೇ ಖ್ಯಾತಿ ಪಡೆದ ನಟಿ ಸಂಗೀತ ಶೃಂಗೇರಿ ಹೊಸ ಫೋಟೊ ಶೂಟ್ ಸಖತ್ ಸೌಂಡ್ ಮಾಡ್ತಿದೆ. ಹಸಿರು ಸೀರೆಯುಟ್ಟು, ಹಸಿರು ಬಳೆ ಧರಿಸಿರುವ ಸಂಗೀತ ಬಿಗ್ ಬಾಸ್ ದಿನಗಳನ್ನು ನೆನಪಿಸಿದ್ದಾರೆ.

ಸಂಗೀತ ಶೃಂಗೇರಿ
ಕನ್ನಡ ಕಿರುತೆರೆ, ಹಿರಿತೆರೆ ಹಾಗೂ ಬಿಗ್ ಬಾಸ್ ಮೂಲಕ ಜನಮನ ಗೆದ್ದ ಸುಂದರಿ ಸಂಗೀತ ಶೃಂಗೇರಿ. ಇವರು ದೊಡ್ಮನೆಯಲ್ಲಿ ತಮ್ಮ ಸ್ಟೈಲ್, ಆಟ, ಟಫ್ ಕಾಂಪಿಟೀಶನ್ ಕೊಡುವ ಮೂಲಕ ಸದ್ದು ಮಾಡಿದ್ದರು. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಿಗ್ ಬಾಸ್ ಸೀಸನ್ 10ರ ಸಿಂಹಿಣಿ
ಬಿಗ್ ಬಾಸ್ ಸೀಸನ್ 10ರಲ್ಲಿ ಸಿಂಹಿಣಿ ಎಂದೇ ಖ್ಯಾತಿ ಪಡೆದಿದ್ದ ನಟಿ, ಎಲ್ಲಾ ಸ್ಪರ್ಧಿಗಳಿಗೂ ಕಠಿಣ ಸವಾಲು ನೀಡುವ ಮೂಲಕ ಟಾಪ್ 3ಗೆ ಬಂದಿದ್ದರು. ಇವರು ಮೊದಲ ರನ್ನರ್ ಅಪ್ ಕೂಡ ಹೌದು. ಬಿಗ್ ಬಾಸ್ ನಿಂದಾಗಿ ಲಕ್ಷಾಂತರ ಫ್ಯಾನ್ಸ್ ಕೂಡ ಹುಟ್ಟಿಕೊಂಡರು ಈ ಬೆಡಗಿಗೆ.
ಟ್ರೆಡಿಷನಲ್ ಗೂ ಸೈ, ಮಾಡರ್ನ್ ಗೂ ಸೈ
ನಟಿ ಸಂಗೀತ ಶೃಂಗೇರಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಪ್ರತಿದಿನ ಒಂದಲ್ಲ ಒಂದು ಫೋಟೊಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ, ಮಾಡರ್ನ್ ಗೂ ಸೈ, ಟ್ರೆಡಿಶನಲ್ ಲುಕ್ ಗೂ ಸೈ ಈ ಬೆಡಗಿ.
ಸೀರೆಯಲ್ಲಿ ಫುಲ್ ಮಿಂಚಿಂಗ್
ಇದೀಗ ಸಂಗೀತ ಶೃಂಗೇರಿ ಸೀರೆಯುಟ್ಟು ಫೋಟೊ ಪೋಸ್ಟ್ ಮಾಡಿದ್ದು, 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ, ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಕೆಂಪು ಬಣ್ಣದ ಬಾರ್ಡರ್ ಇರುವ ಹಸಿರು ಬಣ್ಣದ ಸೀರೆಯುಟ್ಟ ಸಂಗೀತಾ ರಾಣಿ ಥರ ಪೋಸ್ ಕೊಟ್ಟಿದ್ದಾರೆ.
ಮೆಚ್ಚಿಕೊಂಡ ಅಭಿಮಾನಿಗಳು
ಸಂಗೀತ ಫೋಟೊವನ್ನು ಮೆಚ್ಚಿಕೊಂಡ ಅಭಿಮಾನಿಗಳು ಇರೋದು ಒಂದೇ ಹಾರ್ಟ್ ನಮ್ ಹತ್ರ, ಎಷ್ಟು ಸಲ ಅಂತ ಎತ್ತಾಂಕೊಂಡು ಹೋಗ್ತೀರಾ? ಕರ್ನಾಟಕ ಕ್ರಶ್, ಅಪ್ಸರೆ, ಎನ್ನೆಷ್ಟು ಬಿಗ್ ಬಾಸ್ ಬಂದು ಹೋದ್ರೂ ನಿನ್ನಂಥ ಕಂಟೆಸ್ಟಂಟ್ ಮತ್ತೆ ಬರೋದಕ್ಕೆ ಸಾಧ್ಯಾನೆ ಇಲ್ಲ ಎಂದಿದ್ದಾರೆ.
ಕೈಯಲ್ಲಿ ಹಸಿರು ಬಳೆ
ಸಂಗೀತ ಫೋಟೊ ಶೂಟ್ ಗಾಗಿ ಸೀರೆ ಜೊತೆ ಕೈತುಂಬಾ ಹಸಿರು ಬಳೆ ಧರಿಸಿದ್ದು, ಇದು ಬಿಗ್ ಬಾಸ್ ದಿನಗಳಲ್ಲಿ ನೆನಪಿಸಿದೆ. ಬಿಗ್ ಬಾಸ್ ನಲ್ಲಿ ಒಂದು ಬಾರಿ ವಿನಯ್ ಜೊತೆ ಜಗಳವಾಡಿ, ಸಂಗೀತ ಹಸಿರು ಬಳೆ ಧರಿಸಿದ್ದ ತಮ್ಮ ಕೈಗಳನ್ನು ತೋರಿಸಿ, ವಿನಯ್ ಗೆ ಸವಲು ಹಾಕಿದ್ದರು. ಆ ಎಪಿಸೋಡ್ ಸಖತ್ ಟ್ರೆಂಡಿಂಗ್ ನಲ್ಲಿತ್ತು.
ಸಿನಿಮಾ ಯಾವಾಗ?
ದೊಡ್ಮನೆಯಿಂದ ಬಂದ ಬಳಿಕ ಸಂಗೀತಾ ಮಾರಿಗೋಲ್ಡ್ ಮೂವಿಯಲ್ಲಿ ನಟಿಸಿದ್ದರು. ಇದೀಗ ಹೊಸ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ತಮಿಳಿನಲ್ಲಿ ರಿಲೀಸ್ ಆಗಲಿದೆ. ಸದ್ಯ ಶೂಟಿಂಗ್ ನಡೆಯುತ್ತಿದೆ.