ಮದುವೆ ಬಗ್ಗೆ ಅತಿದೊಡ್ಡ ಹಿಂಟ್ ಕೊಟ್ಟ ರಮೋಲಾ: ನಟಿ ಮಾತಿಗೆ ಫ್ಯಾನ್ಸ್ ತಲೆಯಲ್ಲಿ ಹುಳು
'ಭರ್ಜರಿ ಬ್ಯಾಚುಲರ್ಸ್' ಶೋ ಮೂಲಕ ಜನಪ್ರಿಯರಾದ ರಮೋಲಾ ಮತ್ತು ಬುಲೆಟ್ ರಕ್ಷಕ್ ಜೋಡಿ ಇತ್ತೀಚೆಗೆ ಬಟ್ಟೆ ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮದುವೆಯ ಕುರಿತ ಪ್ರಶ್ನೆಗೆ ನಟಿ ರಮೋಲಾ 'ಕಾದು ನೋಡಿ' ಎಂದು ನಿಗೂಢವಾಗಿ ಉತ್ತರಿಸಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಭರ್ಜರಿ ಬ್ಯಾಚುಲರ್ಸ್ ಕ್ಯೂಟ್ ಜೋಡಿ...
ಈ ಬಾರಿಯ ಭರ್ಜರಿ ಬ್ಯಾಚುಲರ್ಸ್ ಷೋನಲ್ಲಿ ಹವಾ ಸೃಷ್ಟಿಸಿದ್ದ ಜೋಡಿಗಳಲ್ಲಿ ಒಂದು ರಮೋಲಾ ಮತ್ತು ಬುಲೆಟ್ ರಕ್ಷಕ್ ಅವರದ್ದು. ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಬಿಗ್ಬಾಸ್ ಬಳಿಕ ಸಕತ್ ಫೇಮಸ್ ಆದವರು. ಬಿಗ್ಬಾಸ್ ಬಗ್ಗೆ ಹೇಳಿಕೆ ನೀಡಿ ಕಾಂಟ್ರವರ್ಸಿಗೆ ಒಳಗಾಗಿದ್ದರೂ ಇದೀಗ ಅವರಿಗೆ ಸಕತ್ ಡಿಮಾಂಡ್ ಕೂಡ ಇದೆ. ಇದೀಗ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭರ್ಜರಿ ಬ್ಯಾಚುಲರ್ಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಅವರಿಗೆ, ಸೀತಾರಾಮ ವಿಲನ್ ಚಾಂದನಿ ಅರ್ಥಾತ್ ನಟಿ ರಮೋಲಾ ಜೋಡಿಯಾಗಿದ್ದರು. ಇದಾಗಲೇ ಇವರಿಬ್ಬರೂ ಸಾಕಷ್ಟು ಲವ್ಸಾಂಗ್ಗಳನ್ನೂ ಮಾಡಿದ್ದರು.
ಲವ್ಸೀನ್ ಬಗ್ಗೆ ಮಾತನಾಡಿದ್ದ ರಕ್ಷಕ್
ಆರಂಭದಲ್ಲಿ ಲವ್ ಸೀನ್ಗೆ ಹಿಂದೇಟು ಹಾಕುತ್ತಿದ್ದ ರಕ್ಷಕ್ (Bullet Rakshak) ಅವರಿಗೆ ಆ ಬಗ್ಗೆ ಚೆನ್ನಾಗಿ ಕಲಿಸಿಕೊಟ್ಟವರು ರಮೋಲಾ. ಕೊನೆಗೆ ಈ ಷೋನಲ್ಲಿ ಅತ್ಯಂತ ಹೆಚ್ಚು ಮುತ್ತು ಕೊಟ್ಟಿರೋ ಜೋಡಿ ಎನ್ನಿಸಿಕೊಂಡದ್ದು ಇದೇ ಜೋಡಿ. ಈ ಬಗ್ಗೆ ಮಾತನಾಡಿದ್ದ ರಕ್ಷಕ್, ತಮಗೆ ಮುತ್ತು ಕೊಡಲು ಇಷ್ಟವಿಲ್ಲದಿದ್ದರೂ ಬಲವಂತದಿಂದ ಕೊಡಿಸಿದ್ರು ಎಂದಿದ್ದರು. 'ನನಗೆ ಮುತ್ತು ಕೊಡಲು ಇಷ್ಟವಿರಲಿಲ್ಲ. ನಾನು ಸುಮ್ಮನೇ ಇದ್ದೆ. ಬಲವಂತದಿಂದ ಕೊಡಿಸಿದ್ರು. ಮುತ್ತು ಕೊಡುವುದು ಎಂದರೆ ನನಗೆ ಸಿಕ್ಕಾಪಟ್ಟೆ ನಾಚಿಕೆ. ನನಗೆ ಆರಂಭದಲ್ಲಿ ರೊಮ್ಯಾಂಟಿಕ್ ಡಾನ್ಸ್ ಮಾಡಿಸಿದ್ರು. ಮೊದಲಿಗೆ ಇವರನ್ನು (ರಮೋಲಾ) ರನ್ನು ಟಚ್ ಮಾಡಲೂ ನಾಚಿಕೆ ಆಗ್ತಿತ್ತು. ಅಂಥದ್ದರಲ್ಲಿ ಮುತ್ತು ಕೊಟ್ಟಿದ್ದೇನೆ ಎಂದರೆ ಅರ್ಥಮಾಡಿಕೊಳ್ಳಿ. ರಮೋಲಾ (Ramola) ನನ್ನನ್ನು ಎಷ್ಟು ಚೇಂಜ್ ಮಾಡಿದ್ದಾರೆ' ಎಂದು ಹೇಳಿದ್ದರು.
ಬಟ್ಟೆ ಅಂಗಡಿಯಲ್ಲಿ ರಮೋಲಾ ಮತ್ತು ರಕ್ಷಕ್
ಇದೀಗ ರಮೋಲಾ ಮತ್ತು ರಕ್ಷಕ್ ಬಟ್ಟೆ ಅಂಗಡಿಯೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಇವರು ಬಟ್ಟೆ ಖರೀದಿ ಮಾಡವುದನ್ನು ನೋಡಿದವರು ಬಿಟ್ಟಾರೆಯೆ? ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ. ಇದು ರಮೋಲಾ ಅವರಿಗೆ ಸ್ವಲ್ಪ ಇರುಸು ಮುರುಸು ತರಿಸಿದೆ. ಆದರೂ ನಗುಮುಖ ಮಾಡಿಕೊಂಡು ಕಾದು ನೋಡಿ ಎಂದು ಕನ್ನಡದಲ್ಲಿ ಹೇಳಿದ್ದಾರೆ. ಸ್ವಲ್ಪ ಜೋರಾಗಿ ಹೇಳಿ ಎಂದಾಗ Wait and See ಎಂದು ಹೇಳಿದ್ದಾರೆ.
ಒಳಗೊಳಗೇ ನಕ್ಕ ರಕ್ಷಕ್
ಪಕ್ಕದಲ್ಲಿಯೇ ಇದ್ದ ರಕ್ಷಕ್ ಇವರ ಪ್ರಶ್ನೆನೂ ಸಾಕು, ಉತ್ತರಿಸೋದೂ ಸಾಕು ಎನ್ನುವಂತೆ ಮೊಬೈಲ್ನಲ್ಲಿ ಬಿಜಿಯಾಗಿರುವುದನ್ನು ನೋಡಬಹುದು. ಆದರೆ ರಮೋಲಾ ಅವರು ಉತ್ತರಿಸುವಾಗ ಮಾತ್ರ ಒಳಗೊಳಗೆ ಮುಗುಳು ನಗುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದ್ದು, ಈ ಬಗ್ಗೆ ನೆಟ್ಟಿಗರು ಕೂಡ ಅವರ ಕಾಲೆಳೆದಿದ್ದಾರೆ. ಆದರೆ ಫ್ಯಾನ್ಸ್ ಮಾತ್ರ ರಮೋಲಾ ಮದುವೆಯ ಬಗ್ಗೆ ಏನು ಹೇಳಿದ್ದಾರೆ ಎಂದು ಅರ್ಥವಾಗದೇ ಹುಳು ಬಿಟ್ಟುಕೊಂಡಿದ್ದಾರೆ.
ನಟಿ ಕುರಿತು
ಇನ್ನು ನಟಿ ರಮೋಲಾ ಕುರಿತು ಹೇಳುವುದಾದರೆ, ಇವರು ಕನ್ನಡತಿ ಸೀರಿಯಲ್ನಿಂದ ಫೇಮಸ್ ಆದವರು. ಇದರಲ್ಲಿ ವಿಲನ್ ಆಗಿ ನಟಿಸಿ, ಕೆಲವೇ ಸಮಯದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಆದರೆ ಕಿರುತೆರೆಯನ್ನು ತೊರೆದು ವರ್ಷ ಕಳೆದ ಬಳಿಕ ರೀ ಎಂಟ್ರಿ ಕೊಟ್ಟರು.
ಮಾಡೆಲ್ ಆಗಿದ್ದ ರಮೋಲಾ
ಮಾಡೆಲ್ ಆಗಿದ್ದ ರಮೋಲಾ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ರಮೋಲಾ ಅವರ ವಿಲನ್ ಪಾತ್ರವೂ ಕೊಂಚ ಡಿಫರೆಂಟ್ ಆಗಿಯೇ ಇತ್ತು. ಅಂದಹಾಗೆ ರಮೋಲಾ ಅವರು, ಬೆಲ್ಲಿ ಡ್ಯಾನ್ಸ್ ಎಕ್ಸ್ಪರ್ಟ್. ಅದನ್ನು ಈ ವಿಡಿಯೋ ನೋಡಿದರೆ ತಿಳಿಯಬಹುದು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಭಾಗವಹಿಸಿದ್ದರು. ನ್ಯೂಸ್ ಕನ್ನಡಬೀಟ್ಗೆ ನೀಡಿರುವ ಸಂದರ್ಶನ ಇಲ್ಲಿದೆ…
ಇದನ್ನೂ ಓದಿ: Bharjari Bachelors: ರಕ್ಷಕ್ಗೆ ಅದಿಲ್ಲ, ಅದಕ್ಕೇ ಹಗ್ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್