- Home
- Entertainment
- TV Talk
- Brahmagantu Serial: ‘ರಬ್ ನೇ ಬನಾದಿ ಜೋಡಿ’ ನೆನಪಿಸಿದ ಬ್ರಹ್ಮಗಂಟು…. ಹೆಂಡ್ತಿ ಮುಖ, ವಾಯ್ಸ್ ಗೊತ್ತಾಗಿಲ್ಲ ಅಂದ್ರೆ ಇವನೆಂತ ಗಂಡ!
Brahmagantu Serial: ‘ರಬ್ ನೇ ಬನಾದಿ ಜೋಡಿ’ ನೆನಪಿಸಿದ ಬ್ರಹ್ಮಗಂಟು…. ಹೆಂಡ್ತಿ ಮುಖ, ವಾಯ್ಸ್ ಗೊತ್ತಾಗಿಲ್ಲ ಅಂದ್ರೆ ಇವನೆಂತ ಗಂಡ!
ಜೀ ಕನ್ನಡ ವಾಹಿನಿಯ ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಈಗ ದಿಶಾ ಆಗಿ ಬದಲಾಗಿದ್ದಾರೆ. ಸ್ಟೈಲಿಶ್ ಅವತಾರದಲ್ಲಿರುವ ಹೆಂಡತಿ ತನ್ನ ಮುಂದೆ ಬಂದು ನಿಂತು ಮಾತನಾಡಿದ್ರು, ಗಂಡನಾದವನಿಗೆ ಆಕೆ ಯಾರು ಅನ್ನೋದೆ ಗೊತ್ತಾಗ್ತಿಲ್ಲ ಅನ್ನೋದೆ ವಿಚಿತ್ರ ಎನ್ನುತ್ತಿದ್ದಾರೆ ವೀಕ್ಷಕರು

ಬ್ರಹ್ಮಗಂಟು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿ ಭರ್ಜರಿಯಾಗಿ ಮೂಡಿ ಬರುತ್ತಿದೆ. ಸದ್ಯಕ್ಕಂತೂ ದಿಶಾ ಎಪಿಸೋಡ್ ನಿಂದಾಗಿ ಸೀರಿಯಲ್ ಮತ್ತಷ್ಟು ಇಟ್ರೆಸ್ಟಿಂಗ್ ಆಗಿ ಬರುತ್ತಿದೆ. ಆದರೂ ಜನರು ಇದೀಗ ಸೀರಿಯಲ್ ನಲ್ಲಿ ಚಿರು ಪಾತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ. ರಬ್ ನೇ ಬನಾದಿ ಜೋಡಿ ಸಿನಿಮಾ ನೆನಪಿಸಿಕೊಂಡಿದ್ದಾರೆ.
ದಿಶಾ ಆಗಿ ಬದಲಾದ ದೀಪ
ಅತ್ತಿಗೆ ಸೌಂದರ್ಯಳ ಅಹಂಕಾರವನ್ನು ಮುರಿಯಬೇಕು ಎನ್ನುವ ಕಾರಣದಿಂದ ದೀಪಾ ದಿಶಾ ಆಗಿ ಬದಲಾಗಿದ್ದಾರೆ. ತನ್ನ ಬಣ್ಣ, ಡ್ರೆಸ್ಸಿಂಗ್ ಎಲ್ಲವನ್ನೂ ಬದಲಾಯಿಸಿ, ಸ್ಟೈಲಿಶ್ ಲುಕ್ ನಲ್ಲಿ ದಿಶಾ ಆಗಿ ಎಂಟ್ರಿ ಕೊಟ್ಟಿದ್ದಾಳೆ. ಜೊತೆಗೆ ಸೌಂದರ್ಯನ ಮುಂದೆ ತನ್ನ ಪವರ್ ತೋರಿಸುತ್ತಿದ್ದಾರೆ.
ಗಂಡನಿಗೆ ಇನ್ನೂ ಹೆಂಡ್ತಿ ಬಗ್ಗೆ ಗೊತ್ತಾಗಿಲ್ಲ
ಆದರೆ ತನ್ನ ಎದುರೇ ಇರುವ ಹೆಂಡ್ತಿ ದೀಪಾಳನ್ನು ಮಾತ್ರ ಚಿರುಗೆ ಕಂಡು ಹಿಡಿಯಲು ಸಾಧ್ಯ ಆಗ್ತಾನೆ ಇಲ್ಲ. ದಿಶಾ ಇಂಗ್ಲಿಷ್ ಮಾತಿಗೆ ಸ್ಟೈಲ್ ಗೆ , ಸೋತಿದ್ದಾನೆ, ಅಷ್ಟೇ ಅಲ್ಲ ದಿಶಾ ಗತ್ತಿಗೆ ಕೋಪ ಕೂಡ ಮಾಡಿಕೊಂಡಿದ್ದಾರೆ. ತಮ್ಮ ಪ್ರಾಜೆಕ್ಟ್ ಗೆ ಹೇಗಾದರೂ ಈಕೆಯನ್ನು ಒಪ್ಪಿಸಬೇಕೆಂದು ಹರಸಾಹಸ ಮಾಡ್ತಿದ್ದಾನೆ.
ಟ್ರೋಲ್ ಮಾಡ್ತಿದ್ದಾರೆ ಜನ
ಇದನ್ನೆಲ್ಲಾ ನೋಡಿ ಜನ ಚಿರುನ ಟ್ರೋಲ್ ಮಾಡ್ತಿದ್ದಾರೆ. ಎಂಥ guldu ಗಂಡ.. ಹೆಂಡ್ತಿ ಮುಖ ವಾಯ್ಸ್ ಏನು ಗೊತ್ತಾಗಲ್ವಾ, ಜಗತ್ತಿನಲ್ಲೇ ಇಂಥ ಗಂಡ ಯಾರು ಇಲ್ಲಾ ಅನ್ಸುತ್ತೆ. ಹೆಂಡತಿನ ಕಂಡು ಹಿಡಿಯೋಕೆ ಆಗದೆ ಇರೋ ಗಂಡ. ಆಕೆ ಮಾತಮಾಡ್ತಿದ್ರೇನೆ ಗೊತ್ತಾಗುತ್ತೆ, ಯಾಕೆ ಈ ಥರ ಎಲ್ಲಾ ಸ್ಕ್ರಿಪ್ಟ್ ಬರಿತೀರಿ, ಡೈರೆಕ್ಟರ್ ಸರ್ ಏನಿದು ಕಥೆ ಎಂದಿದ್ದಾರೆ.
ಲಾಜಿಕ್ ಇಲ್ಲ ಎಂದ ವೀಕ್ಷಕರು
ದೀಪಾ ಆಗಿದ್ದಾಗ, ಅಷ್ಟೊಂದು ಕಪ್ಪಗಿದ್ದವಳು, ದಿಶಾ ಆದಾಗ ಇಷ್ಟೊಂದು ಬಿಳಿಯಾಗೋದಕ್ಕೆ ಸಾಧ್ಯಾನ? ಮೇಕಪ್ ಮಾಡಿದ್ರು, ಅಷ್ಟೊಂದು ಬಿಳಿಯಾಗಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ದೀಪಾ ಹಲ್ಲಿಗೆ ಕ್ಲಿಪ್ ಹಾಕುತ್ತಿದ್ದಳು, ದಿಶಾ ಹಲ್ಲಿಗೆ ಕ್ಲಿಪ್ ಇಲ್ಲ. ಹಾಗಿದ್ರೆ ದೀಪಾ ಹಾಕೋ ಕ್ಲಿಪ್ ನ ಅಗತ್ಯ ಏನು? ಯಾಕೆ ಲಾಜಿಕ್ ಇಲ್ಲದೇ ಇರೋ ಥರ ಕಥೆ ಬರಿತೀರಿ ಎಂದಿದ್ದಾರೆ.
ರಬ್ ನೆ ಬನಾದಿ ಜೋಡಿ
ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ರಬ್ ನೇ ಬನಾದಿ ಜೋಡಿ ಸಿನಿಮಾದ ಕಥೆಯಂತೆ ಆಗಿದೆ ಬ್ರಹ್ಮಗಂಟು. ಅಲ್ಲಿ ಹೆಂಡ್ತಿಗೆ ಮೀಸೆ ಇಲ್ಲದ ಗಂಡನ ಪರಿಚಯ ಸಿಗೋದಿಲ್ಲ, ಇಲ್ಲಿ ಬೆಳ್ಳಗಿರುವ ಹೆಂಡ್ತಿ ಪರಿಚರ ಗಂಡನಿಗೆ ಸಿಗ್ತಾ ಇಲ್ಲ.