MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ದುಷ್ಟ ಶಕ್ತಿಯೊಳಗೆ ದುರ್ಗಾ- ಹಿತಾಳ ಒಯ್ಯಲು ಬಂದ ಮಹಿಷಾಸುರ: Naa Ninna Bidalaare ರೋಚಕ ಸಂಚಿಕೆ

ದುಷ್ಟ ಶಕ್ತಿಯೊಳಗೆ ದುರ್ಗಾ- ಹಿತಾಳ ಒಯ್ಯಲು ಬಂದ ಮಹಿಷಾಸುರ: Naa Ninna Bidalaare ರೋಚಕ ಸಂಚಿಕೆ

ಮಾಳವಿಕಾ ಕಳುಹಿಸಿದ ಮಹಿಷಾಸುರನಿಂದ ಹಿತಾಳ ಪ್ರಾಣಕ್ಕೆ ಕುತ್ತು ಬರುತ್ತದೆ. ಸಂಜೀವಿನಿ ತರಲು ಹೋದ ದುರ್ಗಾಳ ಪ್ರಯತ್ನ ವಿಫಲವಾದಾಗ, ಸ್ವತಃ ದೇವಿಯೇ ಪ್ರತ್ಯಕ್ಷಳಾಗಿ ಮಹಿಷಾಸುರನನ್ನು ಸಂಹರಿಸಿ ಹಿತಾಳನ್ನು ಕಾಪಾಡುತ್ತಾಳೆ.

1 Min read
Suchethana D
Published : Oct 22 2025, 06:41 PM IST
Share this Photo Gallery
  • FB
  • TW
  • Linkdin
  • Whatsapp
17
ವೀಕ್ಷಕರಿಗೆ ರೋಮಾಂಚನ
Image Credit : Instagram

ವೀಕ್ಷಕರಿಗೆ ರೋಮಾಂಚನ

ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್​​ ವಾಸ್ತವಕ್ಕಿಂತ ಬಹುದೂರದ ಸ್ಟೋರಿ ಹೊಂದಿದ್ದರೂ, ವೀಕ್ಷಕರು ಮಾತ್ರ ಸಕತ್​ ಇಂಟರೆಸ್ಟಿಂಗ್​ ಆಗಿ ನೋಡುವುದು ಇದೆ. ಇದೇ ಕಾರಣಕ್ಕೆ ಈ ಸೀರಿಯಲ್​ ಟಿಆರ್​ಪಿಯಲ್ಲಿಯೂ ಮುಂದಿದೆ.

27
ಮಹಿಷಾಸುರನ ಆಗಮನ
Image Credit : Instagram

ಮಹಿಷಾಸುರನ ಆಗಮನ

ಇದೀಗ ಹಿತಾಳ ಪ್ರಾಣವನ್ನು ಕಸಿಯಲು ಮಾಳವಿಕಾ ಜಾದೂ ಶಕ್ತಿಯಿಂದ ಮಹಿಷಾಸುರನನ್ನು ಕಳುಹಿಸಿದ್ದಾಳೆ. ಆತ ಬಂದು ಹಿತಾಳ ಪ್ರಾಣ ತೆಗೆಯಲು ಮುಂದಾಗಿದ್ದಾನೆ.

Related Articles

Related image1
Brahmagantu Serial: ಅಕ್ಕನ ಮಾತು ಕೇಳಿ ದೀಪಾಗೆ ಬಡಿಯಿತು ಸಿಡಿಲು! ತ್ಯಾಗಮಯಿ, ಗಂಡನನ್ನು ಬಿಟ್ಟು ಕೊಡ್ತಾಳಾ?
Related image2
Karna Serial: ಕರ್ಣನ ಮದ್ವೆಯಾಗ್ತಿದ್ದಂತೆಯೇ ಅಳುತ್ತಲೇ ಧಗಧಗಿಸುವ ಬೆಂಕಿಯ ಒಳಹೊಕ್ಕ ನಿಧಿ!
37
ದುರ್ಗಾ- ಶರತ್​ಗೆ ಅಪಘಾತ
Image Credit : Instagram

ದುರ್ಗಾ- ಶರತ್​ಗೆ ಅಪಘಾತ

ಇತ್ತ ಸಂಜೀವಿನಿ ತರಲು ಹೊರಟ ದುರ್ಗಾ ಮತ್ತು ಶರತ್​ಗೆ ಅಪಘಾತ ಮಾಡಿಸಲಾಗಿದೆ. ಶರತ್​ ಪ್ರಜ್ಞೆ ಕಳೆದುಕೊಂಡಿದ್ದಾನೆ. ದುರ್ಗಾಳಿಗೆ ಸಿಕ್ಕಾಪಟ್ಟೆ ಪೆಟ್ಟಾಗಿದೆ.

47
ಮೃತ್ಯುಂಜಯ ಹೋಮ
Image Credit : Instagram

ಮೃತ್ಯುಂಜಯ ಹೋಮ

ಅದೇ ಇನ್ನೊಂದೆಡೆ, ಮೃತ್ಯುಂಜಯ ಹೋಮ ನಡೆಯುತ್ತಿದೆ. ಅಲ್ಲಿ ಅಂಬಿಕಾ ತಂಗಿ ಮತ್ತು ಹಿತಾಳ ಪ್ರಾಣಕ್ಕಾಗಿ ಪ್ರಾರ್ಥಿಸುತ್ತಿದ್ದಾಳೆ. ಆದರೆ ಆಕಾಶ ಕೆಂಪಾಗುತ್ತಿದ್ದಂತೆಯೇ ಅಲ್ಲಿ ಅನಾಹುತ ಸಂಭವಿಸುತ್ತಿರುವುದು ತಿಳಿಯುತ್ತದೆ.

57
ದುಷ್ಟಶಕ್ತಿಗೆ ದುರ್ಗಾ ಕಂಗಾಲು
Image Credit : Instagram

ದುಷ್ಟಶಕ್ತಿಗೆ ದುರ್ಗಾ ಕಂಗಾಲು

ಇನ್ನೇನು ದುರ್ಗಾ ಓಡಿ ಬಂದು ಸಂಜೀವಿನಿಯನ್ನು ಹಿತಾಳಿಗೆ ತಿನ್ನಿಸಬೇಕು ಎನ್ನುವಷ್ಟರಲ್ಲಿಯೇ ದುಷ್ಟಶಕ್ತಿ ಬಂದು ಆಕೆಯನ್ನು ಎಳೆದೊಯ್ಯುತ್ತದೆ. ಮಹಿಷಾಸುರ ಸಂಹರಿಸಲು ಬರುತ್ತಾನೆ.

67
ಮಾಳವಿಕಾ ಖುಷಿ
Image Credit : Instagram

ಮಾಳವಿಕಾ ಖುಷಿ

ಮಾಳವಿಕಾ ಖುಷಿಯಾಗಿದ್ದಾಳೆ. ಆದರೆ ದುರ್ಗಾಳ ಅಪ್ಪ ಶಂಭು ಮತ್ತು ಅಂಬಿಕಾ ದೇವಿಯನ್ನು ಪ್ರಾರ್ಥಿಸುತ್ತಾ ಹಿತಾಳ ಪ್ರಾಣಭಿಕ್ಷೆ ಬೇಡುತ್ತಿದ್ದಾರೆ.

77
ಮಹಿಷಾಸುರನ ವಧೆ
Image Credit : Instagram

ಮಹಿಷಾಸುರನ ವಧೆ

ಆಗ ದೇವಿಯೇ ಬಂದು ಮಹಿಷಾಸುರನ ವಧೆ ಮಾಡುತ್ತಾಳೆ. ಮಹಿಷಾಸುರ ಸಂಹಾರ ಆಗಿದ್ದು ನೋಡಿ ಮಾಳವಿಕಾಗೆ ಗಾಬರಿಯಾಗುತ್ತದೆ. ಅಲ್ಲಿ ಏನಾಗುತ್ತಿದೆ ಎಂದು ಆಕೆಗೆ ತಿಳಿಯುವುದಿಲ್ಲ. ಒಟ್ಟಿನಲ್ಲಿ ಹಿತಾಳ ಪ್ರಾಣ ಉಳಿಯುತ್ತದೆ

ವಿಡಿಯೋಗಾಗಿ ಇದರ ಮೇಲೆ ಕ್ಲಿಕ್​  ಮಾಡಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನಾ ನಿನ್ನ ಬಿಡಲಾರೆ ಧಾರಾವಾಹಿ
ಕನ್ನಡ ಧಾರಾವಾಹಿ
ಟಿವಿ ಶೋ
ಮನರಂಜನಾ ಸುದ್ದಿ
ಜೀ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved