- Home
- Entertainment
- TV Talk
- Karna Serial: ಕರ್ಣನ ಮದ್ವೆಯಾಗ್ತಿದ್ದಂತೆಯೇ ಅಳುತ್ತಲೇ ಧಗಧಗಿಸುವ ಬೆಂಕಿಯ ಒಳಹೊಕ್ಕ ನಿಧಿ!
Karna Serial: ಕರ್ಣನ ಮದ್ವೆಯಾಗ್ತಿದ್ದಂತೆಯೇ ಅಳುತ್ತಲೇ ಧಗಧಗಿಸುವ ಬೆಂಕಿಯ ಒಳಹೊಕ್ಕ ನಿಧಿ!
ಕರ್ಣನು ನಿತ್ಯಾಳನ್ನು ಮದುವೆಯಾಗಿದ್ದು, ನಿಧಿಗೆ ತೀವ್ರ ಆಘಾತವಾಗಿದೆ. ಈ ನಡುವೆ ಮನೆಗೆ ಬೆಂಕಿ ಬಿದ್ದಾಗ, ಕರ್ಣ ಕೊಟ್ಟ ಗೊಂಬೆಗಾಗಿ ನಿಧಿ ಬೆಂಕಿಯೊಳಗೆ ನುಗ್ಗುತ್ತಾಳೆ. ಕರ್ಣ ಅವಳನ್ನು ರಕ್ಷಿಸುತ್ತಾನಾದರೂ, ಆ ಗೊಂಬೆಯ ಹಿಂದಿನ ರಹಸ್ಯ ಮಾತ್ರ ಅವರಿಬ್ಬರಿಗೇ ತಿಳಿದಿದೆ.

ರೋಚಕ ತಿರುವಿನಲ್ಲಿ ಕರ್ಣ
ಕರ್ಣ ಸೀರಿಯಲ್ (Karna Serial) ರೋಚಕ ತಿರುವಿನಲ್ಲಿ ಸಾಗಿದೆ. ನಿಧಿ ಮತ್ತು ಕರ್ಣ ಇನ್ನೇನು ಮದುವೆಯಾಗುತ್ತಾರೆ ಎಂದು ವೀಕ್ಷಕರು ಅಂದುಕೊಳ್ಳುತ್ತಿರುವಷ್ಟರಲ್ಲಿಯೇ ನಿತ್ಯಾಳನ್ನು ಮದುವೆಯಾಗಿದ್ದಾನೆ ಕರ್ಣ.
ಮದುವೆ ಆಗೇ ಇಲ್ಲ
ಆದರೆ ಇದು ಸಮಾಜದ ಕಣ್ಣಿಗಷ್ಟೇ ಮದುವೆ. ಆದರೆ ಅಸಲಿಗೆ ಕರ್ಣ ನಿತ್ಯಾಳ ಕುತ್ತಿಗೆಗೆ ಖುದ್ದು ತಾಳಿ ಕಟ್ಟಲಿಲ್ಲ. ನಾಲ್ಕು ಗೋಡೆಗಳ ನಡುವೆ ನಡೆದದ್ದೇ ಬೇರೆ. ಅಲ್ಲಿ ನಿತ್ಯಾ ತನ್ನ ಕುತ್ತಿಗೆಗೆ ತಾನೇ ತಾಳಿ ಕಟ್ಟಿಕೊಂಡಿದ್ದಾಳೆ. ಆದರೆ ಈ ವಿಷಯ ಅವರಿಬ್ಬರಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ.
ಗರ್ಭಿಣಿ ನಿತ್ಯಾ
ಅದೇ ಇನ್ನೊಂದೆಡೆ ಅದಾಗಲೇ ನಿತ್ಯಾ ಗರ್ಭಿಣಿ ಕೂಡ ಆಗಿದ್ದಾಳೆ. ಇದು ಕೂಡ ಇಬ್ಬರಿಗೇ ಗೊತ್ತಿರುವ ವಿಷಯ. ಆದರೆ, ಪ್ರೀತಿಯ ಕನಸನ್ನು ಕಂಡಿದ್ದ ನಿಧಿಯ ಪಾಡು ಮಾತ್ರ ಯಾರಿಗೂ ಬೇಡ. ಕರ್ಣನ ಜೊತೆ ಸಪ್ತಪದಿ ತುಳಿಯುವ ಖುಷಿಯಲ್ಲಿದ್ದ ನಿಧಿಗೆ ಆಕಾಶವೇ ಕುಸಿದ ಅನುಭವವಾಗಿದೆ. ಅವಳಿಗೆ ಜೀವನವೇ ಬೇಡವಾಗಿದೆ.
ಬೆಂಕಿಯೊಳಗೆ ನುಗ್ಗಿದ ನಿಧಿ
ಇದೇ ಸಂದರ್ಭದಲ್ಲಿ, ಮನೆಗೆ ಮನೆಗೆ ಬೆಂಕಿ ಬಿದ್ದಿದೆ. ಆದರೆ ಅದರಲ್ಲಿ ಕರ್ಣ ತನಗೆ ಕೊಟ್ಟಿದ್ದ ಗೊಂಬೆಗಾಗಿ ಜೀವನದ ಹಂಗನ್ನೇ ಬಿಟ್ಟು ನಿಧಿ ಧಗಧಗಿಸುವ ಮನೆಯೊಳಕ್ಕೆ ನುಗ್ಗಿದ್ದಾಳೆ.
ನಿಧಿಯ ಕಾಪಾಡಿದ ಕರ್ಣ
ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ನಿಧಿಗೆ ಏನೂ ಆಗಲು ನಾನು ಬಿಡುವುದಿಲ್ಲ ಎಂದ ಕರ್ಣ ಮನೆಯೊಳಕ್ಕೆ ನುಗ್ಗಿ ನಿಧಿಯನ್ನು ಕಾಪಾಡಿದ್ದಾನೆ. ಎಲ್ಲರೂ ನಿಧಿಗೆ ಬೈದಿದ್ದಾರೆ. ಆ ಗೊಂಬೆಗಾಗಿ ಹೀಗೆ ಮಾಡಿದ್ದಾ ಎಂದು ಪ್ರಶ್ನಿಸಿದ್ದಾರೆ.
ಗೊಂಬೆಯ ರಹಸ್ಯ
ಆದರೆ ಯಾರ ಎದುರೂ ಆ ಗೊಂಬೆಯ ರಹಸ್ಯವನ್ನು ಹೇಳುವುದು ಕರ್ಣನಿಗೂ ಸಾಧ್ಯವಿಲ್ಲ, ನಿಧಿಗೂ ಸಾಧ್ಯವಿಲ್ಲ. ನಿತ್ಯಾಗೆ ಇನ್ನೂ ಕರ್ಣ ಮತ್ತು ನಿಧಿಯ ಪ್ರೀತಿಯ ಬಗ್ಗೆಯೂ ತಿಳಿದಿಲ್ಲ. ಆದರೆ, ತಂಗಿಯ ಪರವಾಗಿ ನಿಂತಿರೋ ನಿತ್ಯ ಮಾತ್ರ ಏನೇ ಬಂದರೂ ಅವಳು ಇಷ್ಟಪಟ್ಟಿದ್ದು, ಅವಳಿಗೆ ಕೊಡುತ್ತೇನೆ ಎಂದಿದ್ದಾಳೆ. ಮುಂದೇನಾಗುತ್ತೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.