Aishwarya Salimath Ramachari Serial: ‘ರಾಮಾಚಾರಿ’ ಧಾರಾವಾಹಿಯಿಂದ ನಟಿ ಐಶ್ವರ್ಯಾ ಸಾಲೀಮಠ ಅವರು ಹೊರಗಡೆ ಬಂದಿದ್ದಾರೆ. ಇದಕ್ಕೆ ಕಾರಣ ಬೇರೆಯೇ ಇದೆ. ಹಾಗಾದರೆ ಏನದು?
‘ರಾಮಾಚಾರಿ’ ಧಾರಾವಾಹಿಯಲ್ಲಿ ವಿಶಾಖ ಪಾತ್ರಕ್ಕೆ ಭಾರೀ ಬೇಡಿಕೆ ಇತ್ತು. ರಾಮಾಚಾರಿ ಮನೆಯಲ್ಲಿ ವಿಶಾಖಳೇ ಹೈಲೈಟ್ ಆಗಿದ್ದಳು. ಹೀಗಿರುವಾಗ ಸೀರಿಯಲ್‌ನಲ್ಲಿ ಈಗ ಈ ಪಾತ್ರವೇ ಇಲ್ಲದಂತಾಗಿದೆ. ಇದಕ್ಕೆ ಕಾರಣ ಏನು ಎಂದು ನಟಿ ಐಶ್ವರ್ಯಾ ಸಾಲೀಮಠ ಅವರು ಹೇಳಿದ್ದಾರೆ.
ಅಧಿಕೃತವಾಗಿ ಹೇಳಿದ್ದ ಐಶ್ವರ್ಯಾ ಸಾಲೀಮಠ
ಗರ್ಭಿಣಿಯಾಗಿದ್ದಕ್ಕೆ ಐಶ್ವರ್ಯಾ ಸಾಲೀಮಠ ಅವರು ‘ರಾಮಾಚಾರಿ’ ಧಾರಾವಾಹಿಯಿಂದ ಹೊರಗಡೆ ಬಂದಿದ್ದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇದರ ಹಿಂದಿನ ಕಾರಣ ಬೇರೆಯೇ ಇದೆ. ಈ ವಿಷಯವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ರಿವೀಲ್ ಮಾಡಿದ್ದಾರೆ. ಸೀರಿಯಲ್‌ನಲ್ಲಿ ವಿಶಾಖ ಕಾಣಿಸದೆ ಕೆಲವು ತಿಂಗಳುಗಳು ಕಳೆದಿತ್ತು. ತಿಂಗಳಿನ ಹಿಂದೆ ಯುಟ್ಯೂಬ್ ಚಾನೆಲ್‌ನಲ್ಲಿ ‘ರಾಮಾಚಾರಿ’ ಧಾರಾವಾಹಿಯಲ್ಲಿ ಕೊನೆಯ ದಿನ ಎಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಆಗ ಐಶ್ವರ್ಯಾ ಅವರು ಸೀರಿಯಲ್‌ನಿಂದ ಹೊರಬಂದಿರೋ ವಿಷಯ ಬಯಲಾಗಿತ್ತು.
ಅಸಲಿ ಕಾರಣ ಏನು?
ಗಣೇಶ ಚತುರ್ಥಿಯಂದು ತಾವು ಅಮ್ಮನಾಗುತ್ತಿರುವ ಸಿಹಿ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದರು. ಇದಕ್ಕಾಗಿಯೇ ವಿಶೇಷ ಫೋಟೋಶೂಟ್ ಕೂಡ ಮಾಡಲಾಗಿತ್ತು. ಗರ್ಭಿಣಿ ಆಗಿರೋದಿಕ್ಕೆ ರಾಮಾಚಾರಿ ಧಾರಾವಾಹಿಯನ್ನು ಬಿಟ್ಟರು ಅಂತ ಅನೇಕರು ಅಂದುಕೊಂಡಿದ್ದರು. ಆದರೆ ಸತ್ಯ ಇದಲ್ಲ. “ರಾಮಾಚಾರಿ ಧಾರಾವಾಹಿಯಲ್ಲಿ ನನಗೆ ಅಷ್ಟು ಕಾಲ್‌ಶೀಟ್ ಇರಲಿಲ್ಲ, ಕ್ಯಾರೆಕ್ಟರ್ ಕಮ್ಮಿ ಇತ್ತು. ಹೀಗಾಗಿ ಸೀರಿಯಲ್ ಬಿಟ್ಟೆ” ಎಂದು ಐಶ್ವರ್ಯಾ ಸಾಲೀಮಠ ಅವರು ಹೇಳಿದ್ದಾರೆ.
ರಾಮಾಚಾರಿ ಧಾರಾವಾಹಿ ಕಥೆ ಏನು?
ಸದ್ಯ ರಾಮಾಚಾರಿ ಧಾರಾವಾಹಿಯಲ್ಲಿ ( Ramachari Serial ) ಈಗ ಮಾನ್ಯತಾ, ರಾಮಾಚಾರಿ, ಮುರಾರಿ, ಚಾರುಲತಾ, ರುಕ್ಮಿಣಿ ಮೇಲೆಯೇ ಕಥೆ ಸಾಗುತ್ತಿದೆ. ಮಗಳು ಚಾರುಳನ್ನು ರಾಮಾಚಾರಿಯಿಂದ ದೂರ ಮಾಡಲು ಮಾನ್ಯತಾ ಸದ್ಯ ಪ್ರಯತ್ನಪಡುತ್ತಿದ್ದಾಳೆ. ಈ ನಿಟ್ಟಿನಲ್ಲಿ ರಾಮಾಚಾರಿ ಎಂದು ತಿಳಿದು ಕೃಷ್ಣನ ಹತ್ಯೆ ಕೂಡ ಆಗಿದೆ.
ಈ ಧಾರಾವಾಹಿ ಕಥೆ ಏನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ 2022ರ ಜನವರಿಯಿಂದ ʼರಾಮಾಚಾರಿʼ ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಸೀರಿಯಲ್ ಪ್ರಸಾರ ಆಗುತ್ತ 3 ವರ್ಷಗಳಿಗೂ ಅಧಿಕ ಟೈಮ್ ಆಗಿದೆ. ನಟಿ ಮೌನ ಗುಡ್ಡೇಮನೆ ಅವರು ಚಾರುಲತಾ ಆಗಿ, ರಿತ್ವಿಕ್ ಕೃಪಾಕರ್ ಅವರು ರಾಮಾಚಾರಿ ಹಾಗೂ ಕೃಷ್ಣನಾಗಿ ( ದ್ವಿಪಾತ್ರ ) ನಟಿಸುತ್ತಿದ್ದಾರೆ. ಗುರುದತ್, ಸಿರಿಜಾ, ಶಂಕತ್ ಅಶ್ವತ್ಥ್, ಅಂಜಲಿ, ಝಾನ್ಸಿ ಸುಬ್ಬಯ್ಯ, ಶಾರದಾ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದರು. ಇದು ಪಕ್ಕಾ ಪುರುಷ ಪ್ರಧಾನ ಕಥೆ. ಹೀರೋ ರಾಮಾಚಾರಿ ಪೌರೋಹಿತ, ಸಾಫ್ಟ್‌ವೇರ್ ಉದ್ಯಮಿ ಕೂಡ ಹೌದು. ಚಾರುಲತಾಗೆ ತಾಯಿ ಮಾನ್ಯತಾ ರೀತಿಯೇ ಹಣದ ಆಸೆ. ರಾಮಾಚಾರಿ, ಚಾರುಲತಾ ಪರಿಚಯವಾಗುತ್ತದೆ. ಆರಂಭದಲ್ಲಿ ರಾಮಾಚಾರಿಯನ್ನು ದ್ವೇಷಿಸಿದ ಚಾರು, ಆಮೇಲೆ ಅವಳನ್ನು ಪ್ರೀತಿಸಿ ಮದುವೆ ಆಗುತ್ತಾಳೆ. ಇವರಿಬ್ಬರಿಗೂ ಲವ್ ಆಗುವುದು, ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗತಿ ಇಲ್ಲದ ರಾಮಾಚಾರಿ ಜೊತೆ ಮಗಳು ಬದುಕೋದು ಮಾನ್ಯತಾಗೆ ಇಷ್ಟವಿಲ್ಲ. ಇವರಿಬ್ಬರನ್ನು ದೂರ ಮಾಡಲು ಮಾನ್ಯತಾ ಪ್ರಯತ್ನ ಮಾಡುತ್ತಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು? ಕೆ ಎಸ್ ರಾಮ್‌ಜೀ ಅವರು ಈ ಧಾರಾವಾಹಿಯ ನಿರ್ದೇಶನ, ನಿರ್ಮಾಣ ಮಾಡುತ್ತಿದ್ದಾರೆ.
