- Home
- Entertainment
- News
- Bigg Boss-12 ಸ್ಪರ್ಧಿಗಳು ರೆಡಿ: ಹೊಸ ಮನೆಯೂ ರೆಡಿ... ರಿಲೀಸ್ ಆಯ್ತು ಹೊಸ ಪ್ರೊಮೋ: ಫ್ಯಾನ್ಸ್ ಫುಲ್ ಖುಷ್
Bigg Boss-12 ಸ್ಪರ್ಧಿಗಳು ರೆಡಿ: ಹೊಸ ಮನೆಯೂ ರೆಡಿ... ರಿಲೀಸ್ ಆಯ್ತು ಹೊಸ ಪ್ರೊಮೋ: ಫ್ಯಾನ್ಸ್ ಫುಲ್ ಖುಷ್
ಈಗ ಏನಿದ್ರೂ ಕನ್ನಡದಲ್ಲಿಯೂ ಬಿಗ್ಬಾಸ್ (Bigg Boss 12) ಹವಾ ಜೋರಾಗಿಯೇ ನಡೆದಿದೆ. ಇದೇ 28ರಂದು ಆರಂಭವಾಗಿರುವ ಷೋ ಕುರಿತು ಹೊಸ ಪ್ರೊಮೋ ರಿಲೀಸ್ ಆಗಿದೆ. ಅದರಲ್ಲಿ ಏನಿದೆ ನೋಡಿ!

ಬಿಗ್ ಬಾಸ್ ಹವಾ ಜೋರು
ಈಗ ಏನಿದ್ರೂ ಕನ್ನಡದಲ್ಲಿಯೂ ಬಿಗ್ಬಾಸ್ (Bigg Boss 12) ಹವಾ ಜೋರಾಗಿಯೇ ನಡೆದಿದೆ. ಯಾರಾರು ಈ ಷೋಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಬಗ್ಗೆ ಇದಾಗಲೇ ಟೀಂ ಡೇಟ್ ಕೂಡ ಅನೌನ್ಸ್ ಮಾಡಿದೆ. ಸೆಪ್ಟೆಂಬರ್ 28ರಿಂದ ಷೋ ಆರಂಭವಾಗಲಿದೆ. ಮಾಮೂಲಿನಂತೆ ಕಲರ್ಸ್ ಕನ್ನಡದಲ್ಲಿಯೇ ಈ ಬಾರಿಯೂ ಈ ರಿಯಾಲಿಟಿ ಷೋ ನಡೆಯಲಿದೆ.
ಸ್ಪರ್ಧಿಗಳು ಯಾರು?
ಈ ಬಾರಿ ಯಾರು ಸ್ಪರ್ಧಿಸಲಿದ್ದಾರೆ ಎನ್ನುವ ಬಗ್ಗೆ ಆರಂಭಿಕ ಲಿಸ್ಟ್ ಕೂಡ ಬಿಡುಗಡೆಯಾಗಿದೆ. ಆದರೆ ಅಂತಿಮವಾಗಿ ಯಾರ್ಯಾರು ಇರಲಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಈ ಮಧ್ಯೆಯೇ ಹಲವು ಹೆಸರುಗಳು ಕೂಡ ಕೇಳಿಬರುತ್ತಿವೆ.
ವೀಕ್ಷಕರಿಗೆ ಹಲವು ಪ್ರಶ್ನೆ
ಈ ಮಧ್ಯೆ ಈ ಬಾರಿಯ ಬಿಗ್ ಬಾಸ್ (Bigg Boss) ಮನೆ ಹೇಗೆ ಇರಲಿದೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಇದಾಗಲೇ ಟ್ವೀಟ್ನಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಮೊದಲು ಬಿಗ್ ಬಾಸ್ ಮನೆ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇತ್ತು. ಆದರೆ ಅದನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿತ್ತು. ಕಳೆದ ಬಾರಿ ಕೆಲವರು ಈ ಮನೆಯ ವಿಚಾರಕ್ಕೆ ಅಪಸ್ವರ ತೆಗೆದಿದ್ದರು. ಈ ವಿಚಾರ ಕೋರ್ಟ್ಗೂ ಹೋಗಿತ್ತು.
ದೊಡ್ಮನೆ ವಿಡಿಯೋ ಶೇರ್
ಇದೀಗ ಸುದೀಪ್ ಅವರು, ಶೇರ್ ಮಾಡಿರುವ ವಿಡಿಯೋದಲ್ಲಿ 'ಈ ಬಾರಿ ದೊಡ್ಡ ಮತ್ತು ಉತ್ತಮ ವೇದಿಕೆ, ಮತ್ತು ಹೆಚ್ಚು ಬೆಚ್ಚಗಿನ ಮತ್ತು ಪ್ರಕಾಶಮಾನವಾದ ಬಿಗ್ ಬಾಸ್ ಮನೆ. ಈ ಸೀಸನ್ನಲ್ಲಿ ಬಹಳ ವಿಷಯಗಳಿವೆ’ ಎಂದು ತಿಳಿಸಿದ್ದಾರೆ.
ವೆಲ್ಕಮ್ ಮಾಡಲು ರೆಡಿನಾ?
ಇದೇ ವೇಳೆ ಕಲರ್ಸ್ ಕನ್ನಡ (Colors Kannada) ವಾಹಿನಿ ಇನ್ನೊಂದು ಪ್ರೊಮೋ ಬಿಡುಗಡೆ ಮಾಡಿದೆ. ಇದರಲ್ಲಿ 7 ಕೋಟಿ ಕನ್ನಡಿಗರು ರೆಡಿ, ಸ್ಪರ್ಧಿಗಳು ರೆಡಿ, ಎಲ್ಲರೂ ರೆಡಿ, ರೆಡಿನಾ ಎನ್ನುವ ಹೆಣ್ಣಿನ ದನಿ ಇದೆ. ಅದಕ್ಕೆ ಸುದೀಪ್ ಅವರು ನಾನು ರೆಡಿ, ನೀವು ವೆಲ್ಕಮ್ ಮಾಡಲು ರೆಡಿನಾ ಎನ್ನುತ್ತಲೇ ಗ್ಲಾಸ್ ಹಿಡಿದು ಬಂದಿದ್ದಾರೆ.
ಪ್ರೊಮೋ ರಿಲೀಸ್...
ಇದರ ಪ್ರೊಮೋ ರಿಲೀಸ್ ಆಗುತ್ತಲೇ ಬಿಗ್ಬಾಸ್ ಪ್ರೇಮಿಗಳು ಸಂತಸದಿಂದ ನಲಿದಾಡಿದ್ದಾರೆ. ಈ ಬಾರಿ ಯಾರು ಯಾರು ಮನೆಯಲ್ಲಿ ಇರಲಿದ್ದಾರೆ ಎನ್ನುವ ಕುತೂಹಲವಂತೂ ಇದ್ದೇ ಇದೆ. ಇದಾಗಲೇ ಎಲ್ಲರೂ ಸೆಲೆಕ್ಟ್ ಆಗಿದ್ದರೂ, ಸದ್ಯ ಅದನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ.
ವಿಭಿನ್ನ ಹೇರ್ಸ್ಟೈಲ್ನಲ್ಲಿ...
ಇದಾಗಲೇ ಸುದೀಪ್ ಅವರು ವಿಭಿನ್ನ ಹೇರ್ಸ್ಟೈಲ್ನಲ್ಲಿ ಗಮನ ಸೆಳೆದಿದ್ದಾರೆ. ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾಗಾಗಿ ಉದ್ದ ಕೂದಲು ಬಿಟ್ಟಿದ್ದಾರೆ. ಅವರ ಈ ಹೇರ್ ಸ್ಟೈಲ್ ಎಲ್ಲರಿಗೂ ಇಷ್ಟ ಆಗಿದೆ. ಅದೇ ಗೆಟಪ್ನಲ್ಲಿ ಅವರು ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ‘ರಿಯಾಲಿಟಿ ಶೋಗಳ ಬಾಸ್, ರಿಯಲ್ ಎಂಟರ್‌ಟೈನ್‌ಮೆಂಟ್‌ಗೆ ಒಂದೇ ಅಡ್ರೆಸ್. ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 28ಕ್ಕೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿತ್ತು.
ರಿಯಾಲಿಟಿ ಶೋಗಳ ಬಾಸ್, ರಿಯಲ್ ಎಂಟರ್‌ಟೈನ್‌ಮೆಂಟ್‌ಗೆ ಒಂದೇ ಅಡ್ರೆಸ್ | ಬಿಗ್ ಬಾಸ್ ಕನ್ನಡ ಸೀಸನ್ 12
ಬಿಗ್ ಬಾಸ್ GRAND OPENING | ಸೆಪ್ಟೆಂಬರ್ 28#BiggBossKannada12#BBK12#ColorsKannada#AdeBeruHosaChiguru#ಕಲರ್‌ಫುಲ್‌ಕತೆ#colorfulstory#KicchaSudeep#CKPromopic.twitter.com/za8qOPw7jp— Colors Kannada (@ColorsKannada) September 2, 2025
ವಿಶೇಷತೆ ಏನು?
ಒಟ್ಟಿನಲ್ಲಿ ಈ ಬಾರಿಯ ವಿಶೇಷತೆ ಏನು ಎನ್ನುವ ಕುತೂಹಲವಿದೆ. ಕೆಲವು ಬಿಗ್ಬಾಸ್ ಸೀಸನ್ಗಳು ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ. ಆದರೆ ಈ ಬಾರಿ ಜನರನ್ನು ಹಿಡಿದಿಡುವಲ್ಲಿ ಅದು ಯಶಸ್ವಿ ಆಗಲಿದೆಯೆ ಎನ್ನುವ ಪ್ರಶ್ನೆಯೂ ಇದೆ. ಇದಾಗಲೇ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡ್ತಿರೋ ಬಿಗ್ಬಾಸ್ ಟಾಪ್ 10ನಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಕೂಡ ಕನ್ನಡದ ಮೇಲೆ ಪ್ರಭಾವ ಬೀರುತ್ತಾ ನೋಡಬೇಕಿದೆ.