- Home
- Entertainment
- TV Talk
- Bigg Boss Kannada Season 12 ಶೋಗೆ ಬರ್ತಿರೋ ಸ್ಪರ್ಧಿಗಳಾರು? ಪಕ್ಕಾ ಮಾಹಿತಿ ಇಲ್ಲಿದೆ!
Bigg Boss Kannada Season 12 ಶೋಗೆ ಬರ್ತಿರೋ ಸ್ಪರ್ಧಿಗಳಾರು? ಪಕ್ಕಾ ಮಾಹಿತಿ ಇಲ್ಲಿದೆ!
ಕಲರ್ಸ್ ಕನ್ನಡವಾಹಿನಿಯಲ್ಲಿ ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನ 12ನೇ ಸೀಸನ್ ಬರುತ್ತಲಿದೆ. ಕಳೆದ ಹನ್ನೊಂದು ವರ್ಷಗಳಿಂದ ಕನ್ನಡಿಗರನ್ನು ಯಶಸ್ವಿಯಾಗಿ ರಂಜಿಸುತ್ತ ಬಂದಿರುವ ‘ಬಿಗ್ ಬಾಸ್’ ರಿಯಾಲಿಟಿ ಶೋ, ಈ ಬಾರಿ "Expect the Unexpected” ಎಂಬ ಥೀಮ್ ಇದೆ.

ಥೀಮ್ ಏನು?
"Expect the Unexpected” ಎಂಬ ಥೀಮ್‌ನಲ್ಲಿ ಹಲವು ಅನಿರೀಕ್ಷಿತಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಈ ಹಿಂದಿನ ಸೀಸನ್‌ನಲ್ಲಿ ಸ್ವರ್ಗ, ನರಕ ಬರುತ್ತಿತ್ತು.
ಎಲ್ಲಿ, ಯಾವಾಗ ನೋಡಬಹುದು?
ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರಾಂಡ್ ಒಪನಿಂಗ್ ಪ್ರಸಾರವಾಗದೆ. ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾಟ್‌ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ನೋಡಬಹುದು. ವಾರಾಂತ್ಯದಲ್ಲಿ ಮಾತ್ರ ಶನಿವಾರ, ಭಾನುವಾರ ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ.
ಅನಿರೀಕ್ಷಿತ ಟಾಸ್ಕ್ ಇರೋದು ಪಕ್ಕಾ
ಈ ಸೀಸನ್ ಹೇಗಿರಬಹುದು ಎನ್ನುವ ಕೂತೂಹಲ ಇದೆ. ಈ ಸೀಸನ್‌ನಲ್ಲಿ ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳು ಇರಲಿದ್ದಾರೆ. ಅಷ್ಟೇ ಅಲ್ಲದೆ ಅನಿರೀಕ್ಷಿತ ಟಾಸ್ಕ್‌ಗಳು ಇರಲಿವೆ. ಈಗ ನಾಡು ನವರಾತ್ರಿ ಹಬ್ಬದ ಹೊಸ್ತಿಲಲ್ಲಿದೆ. ಈಗ ಬಿಗ್ ಬಾಸ್ ಇನ್ನೊಂದಿಷ್ಟು ಮನರಂಜನೆ ತರಲಿದೆ.
ಉತ್ತರ ಕೊಟ್ಟ ಕಿಚ್ಚ ಸುದೀಪ್
‘ಬಿಗ್ ಬಾಸ್’ ಹೊಸ ಸೀಸನ್‌ನಲ್ಲಿ ‘Expect the Unexpected’ ಎಂಬ ಥೀಮ್ ಇರಲಿದೆ. ‘ಬಿಗ್ ಬಾಸ್ ಶೋ ಬಗ್ಗೆ ನಮಗೆ ಎಲ್ಲವೂ ಗೊತ್ತಿದೆ, ಅಲ್ಲಿ ಯಾವಾಗ ಏನು ಆಗುತ್ತದೆ ಎನ್ನೋ ಅರಿವೂ ನಮಗೆ ಚೆನ್ನಾಗಿದೆ ಅಂತ ಕೆಲವರು ಹೇಳುತ್ತಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು ಪ್ರೋಮೋ ಮೂಲಕ "ಓಹ್.. ಭ್ರಮೆ!" ಎಂದು ಉತ್ತರ ಕೊಟ್ಟಿದಾರೆ. ಈ ಸೀಸನ್‌ನ ಪ್ರೋಮೊಗಳು ಸೋಶಿಯಲ್ ಮೀಡಿಯಾದಲ್ಲಿ ‘ಹತ್ತು ಮಿಲಿಯನ್’ಗೂ ಹೆಚ್ಚು ವೀಕ್ಷಣೆ ತಂದಿದೆ. AI ತಂತ್ರಜ್ಞಾನ ಬಳಸಿ, ಈ ಪ್ರೋಮೋದಲ್ಲಿ ಕತೆ ಹೇಳಲಾಗಿದೆ. ಕಿಚ್ಚ ಸುದೀಪ್ ಅವರ ಹೊಸ ಲುಕ್, ಸ್ಟೈಲ್ ಸಾಕಷ್ಟು ಜನರ ಮನಸ್ಸು ಗೆದ್ದಿದೆ.
ಸ್ಪರ್ಧಿಗಳು ಯಾರು?
‘ಬಿಗ್ ಬಾಸ್’ ಮನೆಯ ಪ್ರತಿ ಕೋನವೂ, ಕೋಣೆ ಕೂಡ ಡಿಫರೆಂಟ್ ಇದೆ. ಈ ಮನೆಯ ಸದಸ್ಯರೂ ಈ ಸಲ ಡಿಫರೆಂಟ್ ಆಗಿದ್ದಾರೆ. ಕಲಾವಿದರು, ಗಾಯಕರು, ಹಾಸ್ಯಗಾರರು, ಕುಕ್ಸ್ ಮುಂತಾದ ವಿಭಾಗಗಳಿಂದ ವಿಭಿನ್ನ ವ್ಯಕ್ತಿತ್ವ ಇರುವ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಚಿನ್ನದ ನಾಣ್ಯ ಗೆಲ್ಲಿರಿ
ಈ ಮನೆಯೊಳಗೆ ನಡೆಯುವ ವಿಚಾರಗಳನ್ನು ಪ್ರತಿ ಕ್ಷಣ ಕೂಡ ಜಿಯೋ ಹಾಟ್‌ಸ್ಟಾರ್‌ನಲ್ಲಿ 24ಗಂಟೆ ಲೈವ್ ಚಾನೆಲ್‌ನಲ್ಲಿ ಪ್ರಸಾರ ಆಗುವುದು. ‘ಜೀತೋ ಧನ್ ಧನಾ ಧನ್’ ಸ್ಪರ್ಧೆ ಕೂಡ ಇದೆ. ಬಿಗ್ ಬಾಸ್ ಶೋ ಎಪಿಸೋಡ್ ಪ್ರಸಾರವಾಗುವ ವೇಳೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ, ಚಿನ್ನದ ನಾಣ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಯಾನ್
ಫಿನಾಲೆಯಲ್ಲಿ ಭಾಗವಹಿಸಬೇಕಾ?
ಫ್ಯಾನ್ ಝೋನ್‌ನಲ್ಲಿ ಆಕ್ಟಿವ್ ಆಗಿದ್ದರೆ, ಈ ಸೀಸನ್ ಅಂತ್ಯದಲ್ಲಿ ನಡೆಯುವ ಫಿನಾಲೆಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳಬಹುದು. ಈ ಬಾರಿ ಕೂಡ ನಿಮ್ಮಿಷ್ಟದ ಸ್ಪರ್ಧಿಗಳನ್ನು ಉಳಿಸುವುದಕ್ಕಾಗಿ ಮತ ಹಾಕಲು, ಜಿಯೋ ಹಾಟ್‌ಸ್ಟಾರ್ ಆಪ್‌ನಲ್ಲಿ ಮಾತ್ರ ಅವಕಾಶ ಇದೆ.