BBK12: ಕಿಚ್ಚ ಸುದೀಪ್ ತಲೆಗೆ ಹುಳ ಬಿಟ್ಟ Bigg Boss: ಅದೊಂದು ಪ್ರಶ್ನೆಯಾಗಿಯೇ ಉಳೀತು!
ಬಿಗ್ ಬಾಸ್ ಕನ್ನಡ 12 ಶೋ ಶುರುವಾಗಿದೆ. ಈ ಬಾರಿಯಂತೂ ಅದ್ದೂರಿಯಾಗಿ ಮನೆ ನಿರ್ಮಾಣ ಮಾಡಲಾಗಿದೆ. ಒಂದು ಕಡೆ ನಾಡಿನ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ, ಇಡೀ ನಾಡು ಹಬ್ಬ ಆಚರಿಸುತ್ತಿದೆ. ಬಿಗ್ ಬಾಸ್ ಶೋನಲ್ಲಿ ಅರಮನೆ ಇದೆ. ಅರಮನೆ ಟೂರ್ ಮಾಡಿಸಿದ ಕಿಚ್ಚ ಸುದೀಪ್‌ಗೆ ದೊಡ್ಡ ಡೌಟ್ ಶುರುವಾಗಿದೆ.

ಕಿಚ್ಚ ಸುದೀಪ್ ಮಾತಿಗೆ ತಲೆಬಾಗಿದ ವಾಹಿನಿ
“ಮುಂದಿನ ಸೀಸನ್‌ನಲ್ಲಿ ಕನ್ನಡಕ್ಕೆ ಆದ್ಯತೆ ಕೊಟ್ಟರೆ ಮಾತ್ರ ನಾನು ಬಿಗ್ ಬಾಸ್ ಶೋ ನಿರೂಪಣೆ ಮಾಡ್ತೀನಿ” ಎಂದು ಕಿಚ್ಚ ಸುದೀಪ್ ಅವರು ವಾಹಿನಿ ಹಾಗೂ ಆಡಳಿತ ಮಂಡಳಿಗೆ ಷರತ್ತು ಹಾಕಿದ್ದರು. ಅದಕ್ಕೆ ವಾಹಿನಿ ಕೂಡ ತಲೆ ಬಾಗಿತ್ತು. ಈಗ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಿದ್ದಾರೆ.
ಬಿಗ್ ಬಾಸ್‌ನಲ್ಲಿ ಮೈಸೂರು ದಸರಾ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಲೋಗೋದಲ್ಲಿಯೂ ಕೂಡ ಕನ್ನಡದಲ್ಲಿ 12 ನಂಬರ್‌ನ್ನು ಬರೆಯಲಾಗಿತ್ತು. ಮೈಸೂರು, ದಸರಾವನ್ನು ಇಲ್ಲಿ ತರಲಾಗಿದೆ. ನಮ್ಮ ನಾಡನ್ನು ಪ್ರತಿಬಿಂಬಿಸುವ ಫೋಟೋಗಳನ್ನು ಅರಮನೆಯ ಗೋಡೆ ಮೇಲೆ ಬರೆಯಲಾಗಿದೆ. ಬಿಗ್ ಬಾಸ್ ಮನೆ ಎಂಟ್ರಿಯಾಗುವಾಗಲೇ, ಅರಮನೆಯ ಛಾಯೆ ಕಾಣುವುದು.
ಕಿಚ್ಚ ಸುದೀಪ್ ಏನಂದ್ರು?
ದೊಡ್ಮನೆಯೊಳಗಡೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಅವರಿಗೆ ಹೊಸ ಮನೆಯೇ ದೊಡ್ಡ ಸರ್ಪ್ರೈಸ್ ಕೊಟ್ಟಿದೆ. ಎಲ್ಲೆಲ್ಲೂ ಕನ್ನಡತನ ಎದ್ದು ಕಂಡಿದೆ. ಕಿಚ್ಚ ಸುದೀಪ್ ಅವರು “ನಮ್ಮ ಶ್ರೀಮಂತವಾಗಿರೋ ಕರ್ನಾಟಕವನ್ನು ಒಂದೇ ಕಡೆಯೇ ನೋಡಿದರೆ ಹೇಗಿರುತ್ತದೆ ಅಂತ ನೀವು ನೋಡಬೇಕು ಅಂದರೆ ಈ ಬಾರಿ ನೀವು ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ನೋಡಿ. ಒಂದು ಅರಮನೆಯನ್ನು ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ಆಗುತ್ತವೆ, ಆಗಿವೆ. ಈ ಮನೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಈ ಬಾರಿ ಎಷ್ಟೋ ಯುದ್ಧಗಳು ನಡೆಯೋದಿದೆ. ನಮ್ಮ ನಾಡಿನಲ್ಲಿ ದಸರಾ ಹಬ್ಬ ಶುರುವಾಗಿ ಒಂದು ವಾರ ಕಳೆದಿದೆ. ಈ ಬಿಗ್ ಬಾಸ್ ಮನೆಯಲ್ಲಿ ಅಸಲಿ ಹಬ್ಬ ಈಗ ಶುರುವಾಗಲಿದೆ” ಎಂದು ಹೇಳಿದ್ದಾರೆ.
ಕಲ್ಲಿನ ರಥ, ಜಲ್ಲಿಕಟ್ಟು, ಟಿಪ್ಪು...
ಇಡೀ ಮನೆ ಮೈಸೂರು ಅರಮನೆ ರೀತಿಯಲ್ಲಿ ಡಿಸೈನ್ ಆಗಿದೆ. ಯಕ್ಷಗಾನದ ಫೋಟೋ ಇದೆ. ಹುಲಿಯ ಜೊತೆಗೆ ಟಿಪ್ಪು ಸುಲ್ತಾನ್ ಹೋರಾಡುವ ಫೋಟೋ ಕೂಡ ಇದೆ. ಅಂಬಾರಿ ಹೋರುವ ಆನೆಯ ಫೋಟೋ, ಕಲ್ಲಿನ ರಥ ಕೂಡ ಇದೆ. ಅಲ್ಲಿರುವ ಆನೆಗೆ ಭೀಮ ಎಂದರೆ ಸೊಂಡಿಲು ಅಲ್ಲಾಡಿಸುವುದು. ಇನ್ನು ವಾಶಿಂಗ್ ರೂಮ್ ಏರಿಯಾದಲ್ಲಿ ಕೂಡ ಅರಣ್ಯ ಇರುವಂತೆ ಡಿಸೈನ್ ಮಾಡಲಾಗಿದೆ.
ಎಲ್ಲವೂ ಇದೆ.
ಅಡುಗೆ ಮನೆ, ಲಿವಿಂಗ್ ಏರಿಯಾ, ಗಾರ್ಡನ್ ಏರಿಯಾ, ಸ್ವಿಮ್ಮಿಂಗ್ ಪೂಲ್, ಕಿಚನ್ ಹೀಗೆ ಈ ಮನೆ ಭವ್ಯವಾಗಿದೆ. ಆದರೆ ಕಿಚ್ಚ ಸುದೀಪ್ ಅವರಿಗೆ ಒಂದು ಡೌಟ್ ಶುರುವಾಗಿದೆ.
ಕಳಪೆ, ಜೈಲು ಇದೆಯಾ?
ಕಿಚ್ಚ ಸುದೀಪ್ ಅವರಿಗೆ ಒಂದು ಡೌಟ್ ಶುರುವಾಗಿದೆ. ಈ ಮನೆಯಲ್ಲಿ ಸೆರೆಮನೆಯೇ ಇಲ್ಲ. ಪ್ರತಿ ವಾರಾಂತ್ಯದಲ್ಲಿ ಸ್ಪರ್ಧಿಗಳೆಲ್ಲರೂ ಕೂಡ, ತಮ್ಮಲ್ಲಿ ಯಾರು ಉತ್ತಮರು? ಯಾರು ಕಳಪೆ ಎಂದು ಮತ ಹಾಕಿ ಆಯ್ಕೆ ಮಾಡಬೇಕು.
ಸುದೀಪ್‌ಗೆ ಇರೋ ಡೌಟ್ ಏನು?
ಕಳಪೆಗೆ ಹೆಚ್ಚು ಮತ ಪಡೆದವರು ಜೈಲಿಗೆ ಹೋಗುತ್ತಾರೆ. ಈ ವಿಚಾರವಾಗಿ ದೊಡ್ಡ ಜಗಳ ಆಗುವುದು. ಆದರೆ ಈ ಬಾರಿ ಜೈಲು ಇಲ್ಲದಿರೋದು ಕಿಚ್ಚ ಸುದೀಪ್‌ಗೂ ಡೌಟ್ ತಂದಿದೆ. ಏನೋ ಟ್ವಿಸ್ಟ್ ಇಟ್ಟಿದ್ದಾರೆ ಎಂದು ಕಿಚ್ಚ ಸುದೀಪ್ ಸುಳಿವು ನೀಡಿದ್ದಾರೆ.