- Home
- Entertainment
- TV Talk
- BBK 12: ಹದಿನೈದು ದಿನದ ಹಿಂದೆ ಸೂರಜ್‌ನ ಆ ವಿಡಿಯೋ ನೋಡಿದ್ದೆ: ಲವ್ ಬಗ್ಗೆ Rashika Shetty ಮಾತು
BBK 12: ಹದಿನೈದು ದಿನದ ಹಿಂದೆ ಸೂರಜ್‌ನ ಆ ವಿಡಿಯೋ ನೋಡಿದ್ದೆ: ಲವ್ ಬಗ್ಗೆ Rashika Shetty ಮಾತು
Bigg Boss Kannada Season 12: ಸೂರಜ್ ಸಿಂಗ್ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಾಗಲೇ, ಗಂಡು ಮಕ್ಕಳಿಗೆ ಹೊಟ್ಟೆಕಿಚ್ಚಾದ್ರೆ, ಹೆಣ್ಣು ಮಕ್ಕಳಂತೂ ಹ್ಯಾಂಡ್‌ಸಮ್ ಅಂತ ದುರುಗುಟ್ಟಿ ನೋಡಿದ್ರು. ಹೆಣ್ಣು ಮಕ್ಕಳು ಯಾರಿಗೆ ಲೈನ್ ಹೊಡೆಯೋದು ಎಂದು ಮಾತನಾಡಿಕೊಂಡಿದ್ದಾರೆ.

ಹ್ಯಾಂಡ್‌ಸಮ್ ಹುಡುಗರಿಲ್ಲ
ಎಲ್ಲರೂ ಮಲಗಿದ ಮೇಲೆ ಅಶ್ವಿನಿ ಗೌಡ, ಜಾಹ್ನವಿ, ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಅವರು ಬೆಡ್ ಮೇಲೆ ಕೂತು ಮಾತನಾಡಿಕೊಂಡಿದ್ದಾರೆ. ಆ ಟೈಮ್‌ನಲ್ಲಿ ಇಲ್ಲಿರುವ ಹುಡುಗರಿಗೆ ಲೈನ್ ಹೊಡೆಯೋಕೆ ಏನು ಸಮಸ್ಯೆ ಆಗ್ತಿದೆ ಎಂದು ಮಾತನಾಡಿಕೊಂಡಿದ್ದಾರೆ.
ಅಂದೇ ವಿಡಿಯೋ ನೋಡಿದ್ದೆ
“ಬಿಗ್ ಬಾಸ್ ಮನೆಗೆ ಬರೋ ಹದಿನೈದು ದಿನದ ಹಿಂದೆ ಸೂರಜ್ ಪ್ರೊಫೈಲ್ ನೋಡಿದ್ದೆ, ಹ್ಯಾಂಡ್‌ಸಮ್, ವೆರಿ ಕ್ಯೂಟ್. ಆ ವಿಡಿಯೋದಲ್ಲಿ ಇರೋವನು ಇವನೇ ಅಂತ ಗೊತ್ತಿಲ್ಲ. ಆಮೇಲೆ ಬೇರೆಯವರ ಹಾರ್ಟ್ ಹರಿದು ಹಾಕಿದಾಗಲೇ ನನಗೆ ಅವನೇ ಅಂತ ಗೊತ್ತಾಯ್ತು, ಆಮೇಲೆ ಓಕೆ ಅಂತ ಮಾತನಾಡಿಸಿದೆ” ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ.
ಲವ್ ಆಂಗಲ್ ಶುರುವಾಯ್ತಾ?
ರಾಶಿಕಾ ಮಾತಿಗೆ, “ಅಶ್ವಿನಿ ಗೌಡ ಅವರು ಹೇಗೆ ಟೆಲಿಪತಿ ವರ್ಕ್ ಆಗತ್ತೆ ನೋಡಿ” ಎಂದಿದ್ದಾರೆ. “ಲವ್ ಮಾಡೋರು………..” ಅಂತ ಅಶ್ವಿನಿ ಹೇಳಿದಾಗ, “ಈ ಲಿಸ್ಟ್‌ನಲ್ಲಿ ಇಬ್ಬರು ಇದ್ದಾರೆ, ನನಗಿಂತ ಜಾಸ್ತಿ ಸ್ಪಂದನಾ ಇದ್ದಾಳೆ” ಎಂದು ರಾಶಿಕಾ ಹೇಳಿದ್ದಾರೆ. ಆಮೇಲೆ ಅಶ್ವಿನಿ ಗೌಡ ಅವರು “ಈ ಮನೆಯಲ್ಲಿ ಯಾರೂ ಕ್ಯೂಟ್ ಸ್ವೀಟ್ ಹುಡುಗ ಇರಲಿಲ್ಲ” ಎಂದಿದ್ದಾರೆ.
ಅಭಿ ಜೊತೆ ಮೂವ್ ಆಗಲ್ಲ
“ಅಭಿಷೇಕ್ ಶ್ರೀಕಾಂತ್ ಜೊತೆ ಅದೇನೋ ಮೂವ್ ಆಗಲ್ಲ, ಅಭಿಷೇಕ್ ಮೊದಲೇ ಸ್ವಲ್ಪ ಪರಿಚಯ ಇದ್ದ. ಅಭಿಯನ್ನು ಆ ಥರ ನೋಡೋಕೆ ಆಗಲ್ಲ, ಯೋಚನೆಯೇ ಬಂದಿಲ್ಲ” ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ.
ಧ್ರುವ ಅಂತೂ ಆಗಲ್ಲ, ಮಾಳು ಅಣ್ಣನ ಥರ ಆಗ್ತಾರೆ, ಗಿಲ್ಲಿ ಮೋಸ್ಟ್ ಹ್ಯಾಂಡ್‌ಸಮ್ ಬಾಯ್ ಎಂದು ಸ್ಪಂದನಾ ಸೋಮಣ್ಣ ಹೇಳಿದ್ದಾರೆ.
ಮುಂದೆ ಏನಾಗಲಿದೆ?
ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಬಂದಿದ್ದು, ಮುಂದಿನ ದಿನಗಳಲ್ಲಿ ಸ್ಪರ್ಧಿಗಳ ನಡುವೆ ಸ್ನೇಹ ಉಳಿದುಕೊಳ್ಳತ್ತಾ? ಲವ್ ಆಂಗಲ್ ಪಡೆದುಕೊಳ್ಳತ್ತಾ ಎಂದು ಕಾದು ನೋಡಬೇಕಿದೆ. ವೈಲ್ಡ್ ಕಾರ್ಡ್ ಎಂಟ್ರಿಗಳಿಂದ ಆಟದ ಸ್ವರೂಪ ಮಾತ್ರ ಬದಲಾಗೋದು ಗ್ಯಾರಂಟಿ ಎಂದುಕೊಳ್ಳಿ.