- Home
- Entertainment
- TV Talk
- BBK 12: ಕೊಳಕು ಎಂದು ರಕ್ಷಿತಾ ಗೌಡ ಮಾಡಿದ್ದ ದಾಲ್ ಬಿಟ್ರು, ಫ್ರೈ ತಿಂದ್ರು; ಅಶ್ವಿನಿ ಗೌಡ ವಿರುದ್ಧ ಆಕ್ರೋಶ
BBK 12: ಕೊಳಕು ಎಂದು ರಕ್ಷಿತಾ ಗೌಡ ಮಾಡಿದ್ದ ದಾಲ್ ಬಿಟ್ರು, ಫ್ರೈ ತಿಂದ್ರು; ಅಶ್ವಿನಿ ಗೌಡ ವಿರುದ್ಧ ಆಕ್ರೋಶ
Bigg Boss Kannada 12: ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ, ಜಾಹ್ನವಿ ಕೂಗಾಡಿದ್ದರು. ತಾವೇ ಗೆಜ್ಜೆ ಸೌಂಡ್ ಮಾಡಿ, ರಕ್ಷಿತಾ ಶೆಟ್ಟಿಗೆ ನಾಗವಲ್ಲಿ ಪಟ್ಟ ಕೊಟ್ಟು, ಆಮೇಲೆ ರಕ್ಷಿತಾರದ್ದೇ ತಪ್ಪು ಎಂದು ಕೂಗಾಡಿದ್ದರು. ಜಾಹ್ನವಿ, ಅಶ್ವಿನಿಯ ಇನ್ನೊಂದು ಕೆಲಸವ ರಿವೀಲ್ ಆಗಿದೆ.

ರಕ್ಷಿತಾ ಶೆಟ್ಟಿ ಜೊತೆ ಜಗಳ
ಬಿಗ್ ಬಾಸ್ ಮನೆಯಲ್ಲಿ ತುಳು ನಾಡಿನ ಹುಡುಗಿ ರಕ್ಷಿತಾ ಶೆಟ್ಟಿ ಅವರು ಇಡೀ ಮನೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಒಂದು ಕಡೆ ಜಾಹ್ನವಿ, ಅಶ್ವಿನಿ ಗೌಡ ವಿರುದ್ಧ ಸರಿಯಾಗಿ ನಿಂತು ಫೈಟ್ ಕೊಡ್ತಿರುವ ರಕ್ಷಿತಾ ಶೆಟ್ಟಿ ನೋಡಿ ವೀಕ್ಷಕರಂತೂ ಫುಲ್ ಖುಷಿಯಾಗಿದ್ದಾರೆ. ರಕ್ಷಿತಾ ಶೆಟ್ಟಿ ಹಾಡು ಹಾಡಿ, ಡ್ಯಾನ್ಸ್ ಮಾಡೋದಕ್ಕೆ ನಾಗವಲ್ಲಿ ಪಟ್ಟ ಕಟ್ಟಿ ಇಡೀ ಮನೆ ಮುಂದೆ ಅವರನ್ನು ನೆಗೆಟಿವ್ ಮಾಡಿದ್ದ ಜಾಹ್ನವಿ, ಅಶ್ವಿನಿ ಗೌಡ ಅವರ ಇನ್ನೊಂದು ಕೆಲಸವನ್ನು ಮಂಜುಭಾಷಿಣಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ತಪ್ಪು ತಿದ್ದುಕೊಳ್ತೀವಿ
ವೀಕೆಂಡ್ ಎಪಿಸೋಡ್‌ನಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದರು. ಅಶ್ವಿನಿ ಗೌಡ, ಜಾಹ್ನವಿಗೆ ಬುದ್ಧಿ ಹೇಳಿದ್ದರೂ ಕೂಡ ಅವರು ಮಾತ್ರ ಸುಮ್ಮನೆ ಇರಲಿಲ್ಲ, ಪಶ್ಚಾತ್ತಾಪ ಪಡಲಿಲ್ಲ ಎಂದು ಮಂಜುಭಾಷಿಣಿ ಅವರೇ ನೇರವಾಗಿ ಹೇಳಿದ್ದರು. ಮುಂದಿನ ದಿನಗಳಲ್ಲಿ ತಪ್ಪು ತಿದ್ದುಕೊಳ್ತೀವಿ ಎಂದು ಕೂಡ ಅಶ್ವಿನಿ ಗೌಡ ಹೇಳಿದ್ದರು.
ಕ್ಷಮೆ ಕೇಳಿದ್ರು
ರಕ್ಷಿತಾ ಶೆಟ್ಟಿಗೆ ಅವರು ನೇರವಾಗಿ ಕ್ಷಮೆ ಕೇಳಿದರೂ ಕೂಡ, ಮತ್ತೆ ಅವರ ವರ್ತನೆ ವೀಕ್ಷಕರಿಗೆ ಇಷ್ಟವಾಗಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ವಿರುದ್ಧ ಅನೇಕರು ಬೇಸರ ಹೊರಹಾಕುತ್ತಿದ್ದಾರೆ. ಈಗ ಊಟದ ವಿಷಯದಲ್ಲಿ ಜಾಹ್ನವಿ, ಅಶ್ವಿನಿ ಗೌಡ ನಡೆದುಕೊಂಡ ರೀತಿ ಕೇಳಿ ವೀಕ್ಷಕರು ಇನ್ನಷ್ಟು ಬೇಸರ ಹೊರಹಾಕಿದ್ದಾರೆ.
ರಕ್ಷಿತಾ ಶೆಟ್ಟಿ ಕೊಳಕು ಎಂದ್ರು
“ರಕ್ಷಿತಾ ಶೆಟ್ಟಿ ಫುಡ್ ವ್ಲಾಗರ್, ತುಂಬ ಚೆನ್ನಾಗಿ ಅಡುಗೆ ಮಾಡುತ್ತಿದ್ದಳು. ಹಾಗಲಕಾಯಿ ಫ್ರೈಯನ್ನು ಸಖತ್ ಆಗಿ ಮಾಡುತ್ತಿದ್ದನು. ಒಂದು ದಿನ ಅವಳು ಇಡೀ ಮನೆಗೆ ಅನ್ನ, ದಾಲ್ ಮಾಡಿದ್ದಳು. ರಕ್ಷಿತಾ ತಲೆ ಕೆರೆದುಕೊಳ್ತಾಳೆ, ತುಂಬ ಕೊಳಕು, ಕ್ಲೀನ್ ಇಲ್ಲ, ಅದೇ ಕೈಯಲ್ಲಿ ಅಡುಗೆ ಮಾಡುತ್ತಾಳೆ, ಅಸಹ್ಯ ಆಗಲ್ವಾ? ಅಂತ ಹೇಳಿ ಅವರು ಬೇರೆ ಚಪಾತಿ ಮಾಡಿಕೊಂಡು ತಿಂದರು. ಅದೇ ಹುಡುಗಿ ಫ್ರೈಯನ್ನು ಚಪ್ಪರಿಸಿಕೊಂಡು ತಿಂದ್ರಲ್ವಾ ಆಗ ಅಸಹ್ಯ ಆಗಲಿಲ್ಲವಾ” ಎಂದು ಮಂಜು ಭಾಷಿಣಿ ಅವರು ಹೇಳಿದ್ದಾರೆ.
ಎಲ್ರ ಮುಂದೆ ಮಾತಾಡಿದ್ರು
ಗಿಲ್ಲಿ ನಟ, ಮಂಜು ಭಾಷಿಣಿ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮುಂದೆ ಅಶ್ವಿನಿ ಗೌಡ, ಜಾಹ್ನವಿ ವಿರುದ್ಧ ಮಾತನಾಡಿದ್ದರು. ನೇರವಾಗಿಯೇ ಇವರು ಮಾಡೋದು ತಪ್ಪು ಎಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ಇವರಿಬ್ಬರು ಹೇಗೆ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.