- Home
- Entertainment
- TV Talk
- BBK 12: ಧ್ರುವಂತ್ ಡ್ರಾಮಾ ಬಯಲು ಮಾಡಿದ ಕಾಕ್ರೋಚ್ ಸುಧಿ; Mallamma ಈಗಲಾದರೂ ಎಚ್ಚೆತ್ತುಕೊಳ್ತಾರಾ?
BBK 12: ಧ್ರುವಂತ್ ಡ್ರಾಮಾ ಬಯಲು ಮಾಡಿದ ಕಾಕ್ರೋಚ್ ಸುಧಿ; Mallamma ಈಗಲಾದರೂ ಎಚ್ಚೆತ್ತುಕೊಳ್ತಾರಾ?
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಯಾರು ಇನ್ನು ಆಟವನ್ನೇ ಶುರು ಮಾಡಿಲ್ಲ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಆಗ ಎಲ್ಲರೂ ಮಲ್ಲಮ್ಮ ಅವರ ಆಟಕ್ಕೆ ಧ್ರುವಂತ್ ಮುಳ್ಳಾಗಿದ್ದಾರೆ ಎಂದು ಹೇಳಿದ್ದಾರೆ.

ಆಟ ಶುರು ಮಾಡದ ಮಲ್ಲಮ್ಮ
ಆಗ ಗಿಲ್ಲಿ ನಟ ಅವರು ಕೂಡ ಮಲ್ಲಮ್ಮ, ಇನ್ನು ಆಟ ಶುರು ಮಾಡಿಲ್ಲ ಎಂದು ಹೇಳುತ್ತಾರೆ. ಹೀಗೆ ಪ್ರತಿಯೊಬ್ಬರು ಅವರವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆದರೆ ಕಾಕ್ರೋಚ್ ಸುಧಿ ಮಾತ್ರ, ಧ್ರುವಂತ್ ಬಗ್ಗೆ ದೊಡ್ಡ ದೂರು ಹೇಳಿದ್ದಾರೆ.
ಕಾಕ್ರೋಚ್ ಸುಧಿ ಬಯಲು ಮಾಡಿದ್ದೇನು?
ಕಾಕ್ರೋಚ್ ಸುಧಿ ಅವರು, “ಮಲ್ಲಮ್ಮ ಮುಗ್ಧೆ ಇರಬಹುದು, ಆದರೆ ಒಳ್ಳೆಯ ಆಟಗಾರ್ತಿ. ನಾನು ಟಿಫನ್ ಮಾಡಲು ಚಮಚ ಬೇಕು ಎಂದರೆ ಧ್ರುವಂತ್‌ಗೆ ಯಾರೋ ಚಮಚ ಎಂದು ಅನಿಸುತ್ತದೆ. ಮಲ್ಲಮ್ಮ ಇಲ್ಲಿ ಇಲ್ಲ ಅಂದ್ರೆ, ಮಲ್ಲಮ್ಮ ಇಲ್ಲ, ನಾನು ಆಟ ಆಡಲ್ಲ, ಹೊರಗಡೆ ಹೋಗ್ತೀನಿ ಅಂತ ಹೇಳ್ತಾರೆ, ಧ್ರುವಂತ್ ಎಮೋಶನಲ್ ಡ್ರಾಮಾ ಅನಿಸ್ತಿದೆ, ನಾಟಕ ಅನಿಸ್ತಿದೆ. ಆಚೆ ಮಲ್ಲಮ್ಮ, ಧ್ರುವಂತ್ ಸಿಕ್ಕಿದ್ರೆ ಈ ರೇಂಜ್‌ಗೆ ಆಡ್ತಿರಲಿಲ್ಲ ಅನಿಸುತ್ತದೆ” ಎಂದು ಹೇಳಿದ್ದಾರೆ.
ಬಕೆಟ್ ಹಿಡಿದು ಜೀವನ ಮಾಡಬೇಡಿ
“ಬಿಗ್ ಬಾಸ್ ಬಕೆಟ್ ಕೊಟ್ಟಿರೋದು ಸ್ನಾನ ಮಾಡೋಕೆ, ಬಕೆಟ್ ತಗೊಂಡು ಇಡೀ ಜೀವನ ಮಾಡಿ ಅಂತ ಕೊಟ್ಟಿಲ್ಲ” ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ. ಈ ಮಾತುಗಳು ಧ್ರುವಂತ್‌ಗೆ ಬೇಸರ ತಂದಿದೆ.
ಮೆಟ್ಟಿನಲ್ಲಿ ಹೊಡೆದಂಗಾಯ್ತು
ಹಾರ್ಟ್ ಯಾರಿಗೆ ಕೊಡಬೇಕು ಎಂದಾಗ ಮಲ್ಲಮ್ಮ ಸೂರಜ್ ಹೆಸರು ಹೇಳಿದರು, ನನಗೆ ಮೆಟ್ಟಿನಲ್ಲಿ ಹೊಡೆದಹಾಗೆ ಆಯ್ತು ಎಂದು ಧ್ರುವಂತ್ ಹೇಳಿಕೊಂಡು ಅತ್ತಿದ್ದರು. ಅದಾದ ಬಳಿಕ ಅವರು ಮಲ್ಲಮ್ಮ ಮಡಿಲಲ್ಲಿ ಮಲಗಿದ್ದರು. ಒಟ್ಟಿನಲ್ಲಿ ಧ್ರುವಂತ್ ಒಂದು ನಿರ್ಧಾರಕ್ಕೂ ಬದ್ಧರಲ್ಲ ಎನ್ನಲಾಗ್ತಿದೆ.
ಧ್ರುವಂತ್ ಏನ್ ಮಾಡ್ತಾರೆ?
ಈ ಬಾರಿ ಇಷ್ಟೆಲ್ಲ ಆರೋಪ ಬಂದಿರೋದಿಕ್ಕೆ ಧ್ರುವಂತ್ ಅವರು ಮುಂದಿನ ದಿನಗಳಲ್ಲಿ ಹೇಗೆ ಇರಲಿದ್ದಾರೆ? ಯಾವ ರೀತಿ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ. ವೈಲ್ಡ್‌ಕಾರ್ಡ್ ಎಂಟ್ರಿ ಆಗುತ್ತಿದ್ದಂತೆ, ಆಟದ ಸ್ವರೂಪ ಸ್ವಲ್ಪ ಬದಲಾದ ಹಾಗಿದೆ.