- Home
- Entertainment
- TV Talk
- ಕಳೆದು ಹೋದ ಸಂಸಾರವನ್ನು Bigg Boss ಮನೇಲಿ ಹುಡುಕ್ತಿದ್ದಾರಾ ಧ್ರುವಂತ್? ಸುದ್ದಿಗೋಷ್ಠಿಯಲ್ಲಿ ಏನಂದ್ರು?
ಕಳೆದು ಹೋದ ಸಂಸಾರವನ್ನು Bigg Boss ಮನೇಲಿ ಹುಡುಕ್ತಿದ್ದಾರಾ ಧ್ರುವಂತ್? ಸುದ್ದಿಗೋಷ್ಠಿಯಲ್ಲಿ ಏನಂದ್ರು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ಮಾಳು ನಿಪನಾಳ ಅವರು ಮೊದಲ ಫಿನಾಲೆಯ ಫೈನಲಿಸ್ಟ್‌ಗಳಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇವರು ಪತ್ರಕರ್ತರಾಗಿ ಉಳಿದ ಸ್ಪರ್ಧಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಧ್ರುವಂತ್, ಕಾವ್ಯ ಶೈವ ಅವರಿಗೆ ಕೇಳಿದ್ದೇನು?

ಮಲ್ಲಮ್ಮ ಜೊತೆ ಜಾಸ್ತಿ ಸಮಯ ಕಳೆದ್ರಿ
ಉಸ್ತುವಾರಿಯಂತೆ ಹೋಗಿ ಸುಸ್ತು ಮಾಡಿಕೊಳ್ತೀರಿ, ಬ್ರೇವರಿ ಕಾಣಸ್ತಿಲ್ಲ
ನನಗೆ ಕೊಟ್ಟಂತಹ ಜವಾಬ್ದಾರಿಯನ್ನು ನಿಭಾಯಿಸಿ 99% ಫಲಿತಾಂಶ ತರಬೇಕಿತ್ತು. ಇದು ಸ್ಪರ್ಧಿಗಳ ಆಟದ ವೈಖರಿಂದ ಸ್ವಲ್ಪ ವ್ಯತ್ಯಾಸ ಆಗಿರಬಹುದು. ಆದರೆ ನನ್ನಿಂದ ಯಾವುದೇ ದೋಷ ಆಗಿಲ್ಲ.
ಮೊದಲ ವಾರ ಮಲ್ಲಮ್ಮ, ಆಮೇಲೆ ಮಲ್ಲಮ್ಮ, ರಕ್ಷಿತಾ, ಸಂಡೇ ಎಪಿಸೋಡ್ ಬಳಿಕ ಉಳಿದ ಸ್ಪರ್ಧಿಗಳ ಜೊತೆ ಎಲ್ಲರ ಜೊತೆ ಬೆರೆಯಬೇಕು ಅಂತ ಯಾಕೆ ಅನಿಸ್ತು?
ನನ್ನ ಜೊತೆ ಕಂಫರ್ಟ್ ಅಥವಾ ಖುಷಿ, ವಿಚಾರಗಳನ್ನು ಕೇಳಿ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಇತ್ತು ಅಂತ ಅನಿಸತ್ತೆ. ಹೀಗಾಗಿ ಇವರು ಜಾಸ್ತಿ ನನ್ನ ಜೊತೆ ಕಾಣಿಸಿಕೊಂಡಿದ್ದಾರೆ.
ಸ್ಪಂದನಾ ಟಾರ್ಗೆಟ್ ಮಾಡಿ ಮಾತಾಡಿದ್ರಿ
ನೀವು ಯಾವುದನ್ನು ತ್ಯಾಗ ಅಂತ ಹೇಳ್ತೀರೋ ಅದು ನಿಮಗೆ ತಂತ್ರ ಆದರೆ ಮನೆಯವರಿಗೆ ಅದು ಅಲರ್ಜಿ
ಇದನ್ನು ಕೆಲವರು ಸಿಂಪಥಿ, ತ್ಯಾಗ ಅಂತ ಹೇಳ್ತಾರೆ. ಇದು ನನಗೆ ಅವಶ್ಯಕತೆ ಇಲ್ಲ
ಸ್ಪಂದನಾ ಫೈನಲಿಸ್ಟ್ ಆದಾಗ ನೀವು ಮನೆಯವರಿಗೆ ಹೇಳಬೇಕಿದ್ದ ವಿಷಯವನ್ನು ಸ್ಪಂದನಾಗೆ ಟಾರ್ಗೆಟ್ ಮಾಡಿ ಹೇಳಿದಂತಾಗಿತ್ತು.
ಟಾಸ್ಕ್ ಇರಲೀ, ಬೇರೆಯದೇ ಇರಲಿ ಸ್ಪಂದನಾ ಅಷ್ಟು ಆಕ್ಟಿವ್ ಆಗಿರಲಿಲ್ಲ. ಹೀಗಾಗಿ ಬೇರೆಯವರಿಗೆ ಸಿಂಪಥಿ ಪದ ಬಳಸೋಕೆ ಆಗೋದಿಲ್ಲ.
ಸಂಸಾರ ಹುಡುಕುತ್ತಿದ್ದಾರಾ?
ನೀವು ಸ್ಟ್ರಾಂಗ್ ಆಗಿ ನಿಂತಿದ್ದಕ್ಕಿಂತ, ವೀಕ್ ಆಗಿ ಬಗ್ಗಿದ್ದು ಜಾಸ್ತಿ
ಯಾವುದು ಕರೆಕ್ಟ್ ಆಗಿದೆಯೋ ಅದಕ್ಕೆ ಸ್ಟ್ರಾಂಗ್ ಆಗಿ ಬಗ್ಗುವೆ.
ನೀವು ಈ ಮನೆಯಲ್ಲಿ ಕಳೆದು ಹೋದ ಸಂಸಾರವನ್ನು ಹುಡುಕುತ್ತಿದ್ದೀರಿ. ಮೊದಲ ವಾರ ತಾಯಿ, ಎರಡನೇ ವಾರ ತಂಗಿ, ಮೂರನೇ ವಾರ ತಂದೆಯನ್ನು ಹುಡುಕುತ್ತಿದ್ದೀರಿ.
ಸಂಬಂಧ ಹುಡುಕೋದಲ್ಲ, ಆಗೋದು.
ನಿಮ್ಮ ತಂತ್ರ ಏನು?
ಈ ವಾರ ನೀವಿದ್ದ ರೀತಿಯ ನಿಮ್ಮ ತಂತ್ರ ಏನು?
ಒಂಟಿ-ಜಂಟಿ ಟಾಸ್ಕ್ ಇದ್ದಾಗ ನಾನು ವೀಕ್ ಆದೆ ಕಾಣಿಸಿತು
ಅಶ್ವಿನಿ ಗೌಡ ಅವರ ಫಸ್ಟ್ ಕಾಫಿ ಎಂಬ ಮಾತಿದೆ
ಖಂಡಿತ ಇಲ್ಲ. ಕಿತ್ತಾಡೋಕೆ ಸಂದರ್ಭ ಸೃಷ್ಟಿ ಮಾಡ್ತಿಲ್ಲ
ಮನೆಯಲ್ಲಿ ಬಟ್ಟೆ ಚೇಂಜ್ ಮಾಡಿಕೊಂಡು ಇದ್ದೀರಾ ಅಷ್ಟೇ
ನಮ್ಮನ್ನು ಜನರು ನೋಡ್ತಾರೆ, ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ.
ಅಶ್ವಿನಿ ಗೌಡರಿಂದ ಬೇರೆಯವರ ಜೊತೆ ಇರೋಕೆ ಇಷ್ಟಪಡ್ತೀರಾ?
ಖಂಡಿತ ಇಲ್ಲ. ಮೊದಲ ಬಾರಿಗೆ ಅವರ ಜೊತೆ ಮಾತನಾಡಿದಾಗ ಒಂದೇ ದೋಣಿಯ ಪಯಣಿಗರು ಎನಿಸ್ತು
ಅಭಿಷೇಕ್ ಮಾತು ಕಮ್ಮಿ
ಅಭಿಷೇಕ್ ಶ್ರೀಕಾಂತ್ ಮೂರನೇ ವಾರ ಕಡಿಮೆ ಮಾತನಾಡಿದ್ರು..
ಎಲ್ಲೂ ಡೌನ್ ಆದೆ ಅಂತ ಅನಿಸಿಲ್ಲ. ಟಾಸ್ಕ್‌ನಲ್ಲಿ ಮಾತನಾಡಿದೀನಿ,ಇಷ್ಟ ಆದವರ ಜೊತೆ ಮಾತನಾಡಿದೆ
ತಂಡಕ್ಕೋಸ್ಕರ ಎರಡು ವಾರದಲ್ಲಿ ಅಭಿಷೇಕ್ ಒಂದು ಮ್ಯಾಚ್ ಗೆದ್ದಿಲ್ಲ
ಎಲ್ಲರ ಒಪ್ಪಿಗೆಯಿಂದ ನಾವು ಆಡಿದ್ದು
ಅಶ್ವಿನಿ ಆಳೋದಕ್ಕಿಂತ ಅತ್ತಿದ್ದೆ ಜಾಸ್ತಿ
ನಾನು ಏನು ಎಂದು ತೋರಿಸಿಕೊಳ್ಳಲು ಎಲ್ಲ ಪ್ರಯತ್ನ ಹಾಕಿದ್ದೇನೆ. ಕಣ್ಣೀರು ಹಾಕಿದ್ದು ನನಗೆ ನೆನಪಿಲ್ಲ.
ಈ ವಾರ ಸೇಫ್ ಆಗೋದು ಎಷ್ಟು ಮುಖ್ಯ?
ತುಂಬ ಮುಖ್ಯ. ಪ್ರತಿ ದಿನ ಮುಖ್ಯ. ತಪ್ಪು ತಿದ್ದುಕೊಂಡು ಮುನ್ನುಗ್ಗುತ್ತಿದ್ದೇನೆ.
ಯು ಕ್ಯಾನ್ ಅಂತೀರಾ, ಐ ಕ್ಯಾನ್ ಅಂತ ಯಾವಾಗ ಹೇಳ್ತೀರಿ?
ಐ ಕ್ಯಾನ್ ಅಂತ ಮನಸ್ಸಿನಲ್ಲಿ ಹೇಳಿಕೊಳ್ತೀನಿ
ನೀವು ನಾಮಿನೇಟ್ ಆಗೋಕೆ ಜಂಟಿ ಕಾರಣವೇ?
ಇಬ್ಬರೂ ಕಾರಣ
ಕಪಟನಾಟಕ ಸೂತ್ರಧಾರಿಣಿಯಾ?
ಈ ಮನೆಯಲ್ಲಿ ಆದ ಜಗಳದಲ್ಲಿ ನೀವು ಬೇರಂತೆ
ನನಗೆ ಕಪಟನಾಟಕ ಸೂತ್ರಧಾರಿಣಿ ಅಂತ ಸಹಸ್ಪರ್ಧಿಯೋರ್ವರು ಹೇಳಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ಆಡೋದು ಒಂದೇ ಅಲ್ಲದೆ, ನಾವು ಕೂಡ ಬೇರೆ ಆಟ ಆಡಬಹುದು ಅಂತಿದೆ.
ನೀವು ಬಿಗ್ ಬಾಸ್ ಮನೆಯ ಮುಂದಿನ ರಾಜಮಾತೆಯೇ?
ಭೂಮಿಯಲ್ಲಿ ಜಾಗ ಮಾಡ್ತೀನೋ ಇಲ್ಲವೋ ಜನರ ಮನಸ್ಸಿನಲ್ಲಿ ಜಾಗ ಮಾಡಬೇಕು
ಅಡುಗೆ ಮಾಡೋದು ಇಷ್ಟವೇ? ಆಟ ಆಡಬೇಕು ಅಂತಿದೆಯಾ?
ವೈಯಕ್ತಿಕವಾಗಿ, ದೈಹಿಕವಾಗಿ ಅಡೆತಡೆ ಇದ್ದರೂ ಕೂಡ ಬಿಗ್ ಬಾಸ್‌ನ ಎಲ್ಲ ಮಜಲುಗಳಲ್ಲಿ ತೊಡಗಿಸಿಕೊಳ್ತೀನಿ
ಜಾಸ್ತಿ ಮಾತನಾಡಲ್ಲ ಯಾಕೆ?
ಬಿಗ್ ಬಾಸ್ ಮನೆಯಲ್ಲಿ ಮೌನ ಮೆರೆಯಬೇಕಾ?
ಮಾತನಾಡಬೇಕು ಅಂದ್ರೆ ಕಡಿಮೆ ಮಾತನಾಡಬಹುದು, ಆದರೆ ಆ ಮಾತು ಜನರಿಗೆ ಸರಿಯಾಗಿ ಅರ್ಥ ಆಗಬೇಕು, ತಲುಪಬೇಕು
ಎಲ್ಲರ ಜೊತೆ ಚೆನ್ನಾಗಿರಬೇಕು ಅಂತ ಕಾರ್ಡ್ ಪ್ಲೇ ಮಾಡ್ತಿದೀರಾ?
ನಾನು ಎಲ್ಲರ ಜೊತೆ ಹೊರಗಡೆಯೂ ಚೆನ್ನಾಗಿದ್ದೆ
ಹೊರಗಡೆ ಹುಲಿ, ಒಳಗಡೆ ಇಲಿ
ಆ ಥರ ಏನಿಲ್ಲ, ಯಾರಿಗೆ ಏನು ಹೇಳಬೇಕೋ ನಾನು ಅದನ್ನು ಹೇಳಿದ್ದೇನೆ. ಯಾರನ್ನು ನೋಡಿ ನಾನು ಹೆದರೋದಿಲ್ಲ.
ಸ್ಪಂದನಾ ಸೋಮಣ್ಣ
ಮಾಳು ನಿಪನಾಳ ಅವರಿಂದ ನೀವು ಇಲ್ಲಿ ಇಷ್ಟುದಿನಗಳಿಂದ ಇದ್ದೀರಿ..
ಮಾಳು ಮಾತಾಡ್ತಿಲ್ಲ ಅಂತ ನಿಮ್ಮನ್ನು ನಾಮಿನೇಟ್ ಮಾಡಬೇಕು ಅಂತ ಇಲ್ಲಿಯವರೇ ಹೇಳಿದ್ದರು. ಆದರೆ ಅದನ್ನೇ ಉಲ್ಟಾ ಮಾಡಿ ಮಾತನಾಡ್ತಿದ್ದಾರೆ. ಇದು ಅವರ ವ್ಯಕ್ತಿತ್ವ.
ಮಾಳು ಇಂದು ಫೈನಲಿಸ್ಟ್. ನೀವು ಅವರಿಂದ ಇಷ್ಟುದಿನ ಇಲ್ಲಿ ಇದ್ದೀರಾ ಅಂತ ಅನಿಸಲ್ವಾ?
ಇಲ್ಲಿ ಬೇರೆ ಬೇರೆ ವಿಷಯಗಳು, ಟಾಸ್ಕ್‌ಗಳು ಇರುತ್ತವೆ. ಟಾಸ್ಕ್ ಆಡದೆ ಫೈನಲಿಸ್ಟ್ ಆಗಿರುವವರು ಇದ್ದಾರೆ.
ಕಾವ್ಯ ಶೈವ
ಗಿಲ್ಲಿಯನ್ನು ನೋಡಿ ಇನ್‌ಫ್ಲುಯೆನ್ಸ್ ಆಗ್ತಿದೀರಾ ಅಂತ ಅನಿಸತ್ತೆ.
ನಾನು ಒಂಟಿ ಆದಮೇಲೆ ಎಲ್ಲರ ಜೊತೆ ಮಾತನಾಡ್ತಿದ್ದೀನಿ, ಹೀಗಾಗಿ ಇನ್‌ಫ್ಲುಯೆನ್ಸ್ ಆಗಿದ್ದೀನಿ ಎನ್ನೋದು ತಪ್ಪು.
ನೀವು ಬಾತ್ರೂಮ್‌ನಲ್ಲಿ ಅತ್ತಿದ್ದೆ ಜಾಸ್ತಿ
ಎಲ್ಲಿ ಜನರು ಇರಲ್ಲವೋ ಅಲ್ಲಿ ನನ್ನ ಬೇಸರವನ್ನು ಹೊರಹಾಕಬೇಕು ಎನ್ನೋದು ನನ್ನ ಉದ್ದೇಶ ಆಗಿತ್ತು.
ಚಂದ್ರಪ್ರಭ
ಹೊರಗಡೆ ಚಂದ್ರನಂತೆ ಬೆಳಗಿದ್ರಿ, ಇಲ್ಲಿ ಮಂಕಾಗಿದ್ದೀರಿ
ಇಲ್ಲಿ ಚಂದ್ರ, ಸೂರ್ಯ ಯಾವಾಗ ಬರ್ತಾನೆ ಎನ್ನೋದು ಗೊತ್ತಾಗ್ತಿಲ್ಲ. ಬಿಗ್ ಬಾಸ್ ಆಟ ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ.
ನೀವು ಎಲ್ಲರ ಗಮನಸೆಳೆಯೋಕೆ, ತಪ್ಪು ಮುಚ್ಚು ಹಾಕಲು ಗ್ಲಾಸ್ ಒಡೆದಿರಿ, ಅತ್ತಿರಿ
ಇಲ್ಲ, ಅದು ಅವರ ಮನಸ್ಸಿಗೆ ಬಿಟ್ಟಿದ್ದು