- Home
- Entertainment
- TV Talk
- BBK 12: ಮೂರನೇ ವಾರದ ಫಿನಾಲೆಯೊಳಗಡೆ ಎಲಿಮಿನೇಟ್ ಆಗೋರು ಯಾರು ಯಾರು? ಮಾಸ್ ಎಲಿಮಿನೇಶನ್ ಕಣ್ರೋ
BBK 12: ಮೂರನೇ ವಾರದ ಫಿನಾಲೆಯೊಳಗಡೆ ಎಲಿಮಿನೇಟ್ ಆಗೋರು ಯಾರು ಯಾರು? ಮಾಸ್ ಎಲಿಮಿನೇಶನ್ ಕಣ್ರೋ
Expect the unexpected ಥೀಮ್‌ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿದ್ದಕ್ಕೆ, ಈ ಬಾರಿ ಹೀಗೆ ಆಗುತ್ತದೆ ಎಂದು ಹೇಳಲು ಆಗೋದಿಲ್ಲ. ಹೀಗಿರುವಾಗ ಮೂರನೇ ವಾರ ಮೊದಲ ಫಿನಾಲೆ ಆಗಲಿದೆ, ಓರ್ವ ವಿನ್ನರ್ ಕೂಡ ಇರುತ್ತಾರೆ ಎಂದರೆ ನಂಬಲೇಬೇಕು. ಅಷ್ಟೇ ಅಲ್ಲದೆ ದೊಡ್ಡ ಸಂಖ್ಯೆಯ ಎಲಿಮಿನೇಶನ್ ಇದೆ.

ಫೈನಲಿಸ್ಟ್ ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಮೊದಲ ಫಿನಾಲೆಯಲ್ಲಿ ನಾಲ್ವರು ಫೈನಲಿಸ್ಟ್‌ಗಳಿದ್ದಾರೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ, ಸ್ಪಂದನಾ ಸೋಮಣ್ಣ ಅವರು ಫೈನಲಿಸ್ಟ್ ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ.
ಮಾಸ್ ಎಲಿಮಿನೇಶನ್ ನಡೆಯಲಿದೆ
ಬಿಗ್ ಬಾಸ್ ಮನೆಯಲ್ಲಿ ಈ ನಾಲ್ವರು ಫೈನಲಿಸ್ಟ್ ಬಿಟ್ಟು ಉಳಿದವರು ಎಲಿಮಿನೇಶನ್‌ಗೆ ನಾಮಿನೇಟ್ ಆಗಿದ್ದಾರೆ. ಮಾಸ್ ಎಲಿಮಿನೇಶನ್ ನಡೆಯಲಿದೆ ಎಂದು ಮೊದಲೇ ಹೇಳಿದ್ದರು. ಅದರಂತೆ ದೊಡ್ಡ ಸಂಖ್ಯೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯೂ ಆಗಲಿದೆ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ.
ಮೂರನೇ ವಾರ ಫಿನಾಲೆ
ಮೂರನೇ ವಾರ ಫಿನಾಲೆ ನಡೆಯಲಿದೆ, ಡ್ಯಾನ್ಸ್, ಸ್ಕಿಟ್, ಕಾಮಿಡಿ ಇರುತ್ತದೆ ಎಂದು ಸ್ಪರ್ಧಿಗಳು ಭಾವಿಸಿದ್ದರು. ಇದರ ಜೊತೆಗೆ ಮಾಸ್ ಎಲಿಮಿನೇಶನ್ ಇರುತ್ತದೆ, ಯಾವಾಗ ಬೇಕಿದ್ರೂ ಎಲಿಮಿನೇಶನ್ ಆಗಬಹುದು ಎಂದು ಬಿಗ್ ಬಾಸ್ ಶಾಕ್ ನೀಡಿದ್ದಾರೆ.
ಯಾರು ಹೊರಗಡೆ ಹೋಗ್ತಾರೆ?
ಹದಿನೇಳು ಸ್ಪರ್ಧಿಗಳಲ್ಲಿ ನಾಲ್ವರು ಫೈನಲಿಸ್ಟ್ ಆಗಿದ್ದು, ಉಳಿದವರು ಈಗ ರಾಜರೂ ಅಲ್ಲ, ಅಸುರರೂ ಅಲ್ಲ, ಜಂಟಿಯೂ ಅಲ್ಲ, ಒಂಟಿಯೂ ಅಲ್ಲ. ನಮ್ಮ ವ್ಯಕ್ತಿತ್ವ ಏನು ಎಂದು ಸ್ಪರ್ಧಿಗಳು ಈಗ ತೋರಿಸಬೇಕಿದೆ. ಹೀಗಾಗಿ ಯಾರು ಮನೆಯಿಂದ ಹೊರಗಡೆ ಹೋಗ್ತಾರೆ ಎಂದು ಕಾದು ನೋಡಬೇಕಿದೆ.
ವೈಲ್ಡ್ ಕಾರ್ಡ್ ಎಂಟ್ರಿ
ಮೂರನೇ ವಾರಕ್ಕೆ ಮಾಸ್ ಎಲಿಮಿನೇಶನ್ ನಡೆದರೂ ಕೂಡ, ಮಾಸ್ ವೈಲ್ಡ್ ಕಾರ್ಡ್ ಎಂಟ್ರಿ ಆಗಲಿದೆ. ಇಲ್ಲಿರುವ ವ್ಯಕ್ತಿತ್ವಗಳು ಹೇಗೆ ಎಂದು ನೋಡಿಕೊಂಡು, ಅದಕ್ಕೆ ತಕ್ಕಂತೆ ವೈಲ್ಡ್ ಕಾರ್ಡ್ ಎಂಟ್ರಿ ಆಗಲಿದೆ. ಒಟ್ಟಿನಲ್ಲಿ ಮುಂಬರುವ ಬಿಗ್ ಬಾಸ್ ನಿಜಕ್ಕೂ ಹಬ್ಬ ಎಂದು ಹೇಳಬಹುದು.