- Home
- Entertainment
- TV Talk
- Bigg Boss Kannada 12: ಸುಳ್ಳು ಹೇಳಿ ತಗ್ಲಾಕೊಂಡ ಗಿಲ್ಲಿಗೆ ಚಳಿ ಬಿಡಿಸಿದ ಮಲ್ಲಮ್ಮ; ಹಿಂದಿದ್ಯಾ ಧ್ರುವಂತ್ ಕೈವಾಡ?
Bigg Boss Kannada 12: ಸುಳ್ಳು ಹೇಳಿ ತಗ್ಲಾಕೊಂಡ ಗಿಲ್ಲಿಗೆ ಚಳಿ ಬಿಡಿಸಿದ ಮಲ್ಲಮ್ಮ; ಹಿಂದಿದ್ಯಾ ಧ್ರುವಂತ್ ಕೈವಾಡ?
ವೀಕೆಂಡ್ ಸಂಚಿಕೆಯಲ್ಲಿ ಧ್ರುವಂತ್ ಬಗ್ಗೆ ಗಿಲ್ಲಿ ನಟ ಹೇಳಿದ ಮಾತಿಗೆ ಮಲ್ಲಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಮಲ್ಲಮ್ಮ, ಗಿಲ್ಲಿ ನಟನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಅದು ತನ್ನ ಅಭಿಪ್ರಾಯ ಎಂದು ಗಿಲ್ಲಿ ನಟ ಸ್ಪಷ್ಟನೆ ನೀಡಿದ್ದಾರೆ.

ಗಿಲ್ಲಿ ನಟ Vs ಮಲ್ಲಮ್ಮ
ಸುಳ್ಳು ಹೇಳಿ ತಗ್ಲಾಕೊಂಡ ಗಿಲ್ಲಿ ನಟ ಅವರಿಗೆ ಮಲ್ಲಮ್ಮ ಚಳಿ ಬಿಡಿಸಿದ್ದಾರೆ. ಕೊನೆಗೆ ಕ್ಯಾಮೆರಾ ಮುಂದೆ ಬಂದ ಮಲ್ಲಮ್ಮ, ಬಿಗ್‌ಬಾಸ್ ಗಿಲ್ಲಿ ಹೇಳಿದ್ದು ಸುಳ್ಳು. ನಾನು ಹಾಗೆಯೇ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ಅದು ನನ್ನ ಅಭಿಪ್ರಾಯ ಆಗಿತ್ತು ಎಂದು ಹೇಳಿ ಮಲ್ಲಮ್ಮ ಅವರನ್ನು ಗಿಲ್ಲಿ ಸ್ಪಷಪಡಿಸಿದ್ದಾರೆ.
ನಾನು ಆ ರೀತಿಯೇ ಹೇಳಿಲ್ಲ
ದೂರ ಹೋಗು ಅಂತ ಮಲ್ಲಮ್ಮ ಹೇಳಿದರೂ ಧ್ರುವಂತ್ ಅವರ ಸುತ್ತವೇ ಸುತ್ತುತ್ತಿರುತ್ತಾರೆ ಎಂದು ವೀಕೆಂಡ್ ಸಂಚಿಕೆಯಲ್ಲಿ ಗಿಲ್ಲಿ ನಟ ಹೇಳಿದ್ದರು. ಈ ಹೇಳಿಕೆ ಕುರಿತು ಮಲ್ಲಮ್ಮ, ಧ್ರುವಂತ್ ನಡುವೆ ಚರ್ಚೆ ನಡೆದಿತ್ತು. ನಾನು ಆ ರೀತಿಯೇ ಹೇಳಿಲ್ಲ ಎಂದು ಮಲ್ಲಮ್ಮ ಹೇಳುತ್ತಾರೆ.
ತಮಾಷೆಯಾಗಿ ಸ್ಪಷ್ಟನೆ
ಗಿಲ್ಲಿ ನಟ ತಮ್ಮ ಮಾತುಗಳಿಗೆ ತಮಾಷೆಯಾಗಿ ಸ್ಪಷ್ಟನೆ ನೀಡಲು ಮುಂದಾಗುತ್ತಾರೆ. ಇದಕ್ಕೂ ಸಹ ಮಲ್ಲಮ್ಮ, ಇದೆಲ್ಲಾ ನನ್ನ ಬಳಿಯಲ್ಲಿ ನಡೆಯಲ್ಲ. ಧ್ರುವಂತ್ ಬಗ್ಗೆ ನಾನು ಆ ರೀತಿಯಲ್ಲಿ ಹೇಳಿಯೇ ಇಲ್ಲ ಎಂದಿದ್ದಾರೆ. ಮಲ್ಲಮ್ಮ ಅವರ ಕೋಪ ನೋಡಿ ಸಹ ಸ್ಪರ್ಧಿಗಳು ಸಹ ಒಂದು ಕ್ಷಣ ಶಾಕ್ ಆಗಿದ್ದರು.
ಧ್ರುವಂತ್
ಈ ಬಗ್ಗೆ ಪ್ರತಿಕ್ರಿಯಿಸಿರುವ ವೀಕ್ಷಕರು, ಮಲ್ಲಮ್ಮ ಮತ್ತು ಗಿಲ್ಲಿ ನಟ ನಡುವೆ ಜಗಳವಾಗಲು ಕಾರಣ ಧ್ರುವಂತ್. ಹಿಂದಿನ ಸಂಚಿಕೆಯ ಹೇಳಿಕೆ ಕುರಿತು ಮಲ್ಲಮ್ಮ ಅವರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ. ಮಲ್ಲಮ್ಮ ಅವರು ಸ್ವಂತಿಕೆಯಿಂದ ಆಟವಾಡುತ್ತಿಲ್ಲ. ಕಿಚ್ಚನ ಚಪ್ಪಾಳೆ ಸಿಕ್ಕಿದ್ದರಿಂದ ಮನೆ ಮಂದಿಯೆಲ್ಲಾ ಅಸೂಯೆಪಡುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: BBK 12: ಕೊಳಕು ಎಂದು ರಕ್ಷಿತಾ ಗೌಡ ಮಾಡಿದ್ದ ದಾಲ್ ಬಿಟ್ರು, ಫೈ ತಿಂದ್ರು; ಅಶ್ವಿನಿ ಗೌಡ ವಿರುದ್ಧ ಆಕ್ರೋಶ
ಕಿಚ್ಚನ ಚಪ್ಪಾಳೆ
ತಮ್ಮಿಂದಾಗಿ ಗಿಲ್ಲಿ ನಟನಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ ಎಂದು ಅಶ್ವಿನಿ ಗೌಡ, ಜಾನ್ವಿ ಮತ್ತು ಕಾಕ್ರೋಚ್ ಸುಧಿ ತಿಳಿದುಕೊಂಡಿದ್ದಾರೆ. ಹಾಗಾಗಿ ಈ ವಾರ ನಮ್ಮೆಲ್ಲರ ಗುರಿ ಕಿಚ್ಚನ ಚಪ್ಪಾಳೆ ಪಡೆದುಕೊಳ್ಳುವುದು ಎಂದು ಮಾತನಾಡಿಕೊಂಡಿದ್ದಾರೆ. ಇದೇ ವೇಳೆ ರಕ್ಷಿತಾ ನೀಡಿದ ಕೆಲವು ಹೇಳಿಕೆಗಳಿಗೆ ಅಶ್ವಿನಿ ಗೌಡ ಭಾವುಕರಾದರು.
ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಜ್ವಾಲೆ: ರಕ್ಷಿತಾ -ರಾಶಿಕಾ ನಡುವೆ ಮಹಾ ಕಾಳಗ!