ಎಲಿಮಿನೇಷನ್ ಶಾಕ್! ಬಿಗ್‌ಬಾಸ್ ಮನೆಯ ಮುಖ್ಯದ್ವಾರಕ್ಕೆ ಬಂದು ನಿಂತ ಮೂವರು ಸ್ಪರ್ಧಿಗಳು!
Bigg Boss Kannada Season 12: ಮೊದಲ ದಿನವೇ ಎಲಿಮಿನೇಷನ್ ಪ್ರಕ್ರಿಯೆ ಆರಂಭಿಸಿ ಸ್ಪರ್ಧಿಗಳಿಗೆ ಬಿಗ್‌ಬಾಸ್ ಶಾಕ್ ನೀಡಿದ್ದಾರೆ. ಸ್ಪಂದನಾ ಸೋಮಣ್ಣ, ಮಾಳು ನಿಪನಾಳ ಮತ್ತು ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದು, ಇವರಲ್ಲಿ ಯಾರು ಮನೆಯಿಂದ ಹೊರಹೋಗಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ
ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭವಾಗಿ ಒಂದು ದಿನವೂ ಕಳೆದಿಲ್ಲ. ಮನೆಗೆ ಬಂದ ಅಭ್ಯರ್ಥಿಗಳನ್ನು ಸ್ವಾಗತ ಮಾಡಿಕೊಳ್ಳುವ ಬದಲು, ಇವತ್ತು ಯಾರು ಇಲ್ಲಿಂದ ಹೋಗುತ್ತೀರಿ ಎಂದು ಬಿಗ್‌ಬಾಸ್ ಕೇಳಿದ್ದಾರೆ. ಬಿಗ್‌ಬಾಸ್ ಹೀಗೆ ಹೇಳುತ್ತಿದ್ದಂತೆ ಸ್ಪರ್ಧಿಗಳೆಲ್ಲಾ ಶಾಕ್ ಆಗಿದ್ದಾರೆ.
ಸ್ಪಂದನಾ ಸೋಮಣ್ಣ, ಮಾಳು ನಿಪನಾಳ ಮತ್ತು ರಕ್ಷಿತಾ ಶೆಟ್ಟಿ
ಇಂದು ಬೆಳಗ್ಗೆ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಎಲ್ಲರೂ ಚರ್ಚಿಸಿ ಒಮ್ಮತದಿಂದ ಹೆಸರು ಹೇಳಬೇಕೆಂದು ಸೂಚಿಸಿದ್ದರು. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ಪ್ರಕಾರ, ಸ್ಪಂದನಾ ಸೋಮಣ್ಣ, ಮಾಳು ನಿಪನಾಳ ಮತ್ತು ರಕ್ಷಿತಾ ಶೆಟ್ಟಿ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆದಂತೆ ಕಂಡು ಬರುತ್ತಿದೆ. ಮೂವರ ಫೋಟೋ ಹಂಚಿಕೊಂಡಿರುವ ವಾಹಿನಿ, ಮೊದಲ ದಿನವೇ ವಿದಾಯ ಹೇಳೋದ್ಯಾರು? ಎಂದು ಬರೆದುಕೊಂಡಿದೆ.
ಇದು ಬಿಗ್‌ಬಾಸ್ ಆಟ
ಬೆಳಗ್ಗೆ ಪ್ರೋಮೋ ನೋಡಿದ ಜನರು, ಇದು ತಮಾಷೆಯಾಗರುತ್ತೆ ಎಂದು ಕಮೆಂಟ್ ಮಾಡಿದ್ದರು. ಕೆಲವರು ಬಿಗ್‌ಬಾಸ್ ಅಂದ್ರೆ ಹೀಗೆ. ಮನೆಯೊಳಗೆ ಎಲ್ಲರೂ ಬಂದ ಮರುಕ್ಷಣವೇ ಆಟ ಶುರು. ಇನ್ನೇನಿದ್ರೂ ಬಿಗ್‌ಬಾಸ್ ಆಟ ಎಂದು ಹೇಳಿದ್ದರು. ಸ್ಪರ್ಧಿಗಳು ಕೆಲವೊಂದು ಕಾರಣಗಳನ್ನು ನೀಡಿ ಎಲಿಮಿನೇಟ್ ಮಾಡಬೇಕಾಗುತ್ತದೆ.
ಇದನ್ನೂ ಓದಿ: ರಕ್ಷಿತಾ ಮಾತು ಕೇಳಿ ಮೀನಿಗೆ ಮಸಾಲೆ ಹಾಕೋದರಲ್ಲಿ ಕಳೆದು ಹೋದ ಸುದೀಪ್
ಅಭಿಪ್ರಾಯ ಹೇಳಿದ ಜಾನ್ವಿ ಮತ್ತು ಅಶ್ವಿನಿ ಗೌಡ
ನಿರೂಪಕಿ ಜಾನ್ವಿ, ತಪ್ಪು ಮಾತಾಡಿ ಫೇಮಸ್ ಆಗೋದು ಬೇರೆ ತರಹ ಅಂತ ಹೇಳಿದ್ದಾರೆ. ಇನ್ನು ಅಶ್ವಿನಿ ಗೌಡ, ಹೊರಗೆ ಇನ್ನು ಹೆಚ್ಚು ಅವಕಾಶಗಳು ನಿಮಗೆ ಸಿಗಬಹುದು ಎಂದು ಹೇಳಿದ್ದರು. ಇದೀಗ ಇದು ಸ್ಪಂದನಾ ಸೋಮಣ್ಣ ಅವರ ಕುರಿತು ಹೇಳಿರೋದು ದೃಢವಾಗಿದೆ. ಗಾಯಕ ಮಾಳು, ಎರಡ್ಮೂರು ದಿನವಾದ್ರೂ ಬಿಗ್‌ಬಾಸ್ ಮನೆಯಲ್ಲಿರಬೇಕು ಅಂತ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: ಅದ್ದೂರಿ ಅರಮನೆಗೆ ಸ್ಟಾರ್ ನಟನ ಆಗಮನ? ಮೊದಲ ದಿನವೇ ಸ್ಪರ್ಧಿಗಳಲ್ಲಿ ನಡುಕ ಹುಟ್ಟಿಸಿದ ಬಿಗ್‌ಬಾಸ್
ಮೊದಲ ದಿನವೇ ಎಲಿಮಿನೇಷನ್
ಮನೆಗೆ ಬಂದ ಮೊದಲ ದಿನವೇ ಎಲಿಮಿನೇಷನ್ ಅಂತ ಕೇಳಿ ಎಲ್ಲಾ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಈ ನಡುವೆ ಬಿಗ್‌ಬಾಸ್ ಮನೆಗೆ ಕಾಂತಾರಾ ಚಾಪ್ಟರ್ 1 ಚಿತ್ರತಂಡ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಎಲಿಮಿನೇಟ್ ಆಗಿರುವ ರಕ್ಷಿತಾ ಶೆಟ್ಟಿ ಮನೆಯ ಕಿರಿಯ ಸ್ಪರ್ಧಿಯಾಗಿದ್ದಾರೆ.
ಇದನ್ನೂ ಓದಿ: ಯಾವುದೇ ಹಿಂಜರಿಕೆಯಿಲ್ಲದೇ ಮಲ್ಲಮ್ಮ ಜೊತೆ ಸುಂದರ ಒಪ್ಪಂದ ಮಾಡಿಕೊಂಡ ಕಿಚ್ಚ ಸುದೀಪ್