- Home
- Entertainment
- TV Talk
- BBK 12: ನಿಮ್ ಸಿನಿಮಾ ನೋಡಿ ನಮ್ ಮಕ್ಕಳು ಹಾಳಾಗ್ತಿದ್ದಾರೆ ಎಂದೋರಿಗೆ ಕಾಕ್ರೋಚ್ ಸುಧಿ ಕೊಟ್ಟ ಉತ್ತರ ಮಾತ್ರ..!
BBK 12: ನಿಮ್ ಸಿನಿಮಾ ನೋಡಿ ನಮ್ ಮಕ್ಕಳು ಹಾಳಾಗ್ತಿದ್ದಾರೆ ಎಂದೋರಿಗೆ ಕಾಕ್ರೋಚ್ ಸುಧಿ ಕೊಟ್ಟ ಉತ್ತರ ಮಾತ್ರ..!
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಾಕ್ರೋಚ್ ಸುಧಿ ಕೂಡ ಸ್ಪರ್ಧಿ. ಅವರೀಗ ದೊಡ್ಮನೆಯಲ್ಲಿದ್ದಾರೆ. ಆದರೆ ಕಾಕ್ರೋಚ್ ಅವರು ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಇವರ ಸಿನಿಮಾ ಪಾತ್ರ ನೋಡಿ ಬೈದಿದ್ದರಂತೆ, ಅದಕ್ಕೆ ಕಾಕ್ರೋಚ್ ಉತ್ತರವನ್ನು ಕೊಟ್ಟಿದ್ದರು.

ಸಮಾಜಕ್ಕೆ ಏನು ಸಂದೇಶ ಕೊಡ್ತೀರಿ?
ಕಾಕ್ರೋಚ್ ಸುಧಿ ಅವರು ‘ಮಾದೇವ’ ಸಿನಿಮಾದಲ್ಲಿ ನಟಿಸಿದ್ದರು. ಆ ಟೈಮ್‌ನಲ್ಲಿ ಅವರು ಧೂಮಪಾನ ಮಾಡುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದಕ್ಕೆ ಕೆಲವರು ನಿಮ್ಮ ಪಾತ್ರಗಳಿಂದ ಸಮಾಜಕ್ಕೆ ಏನು ಸಂದೇಶ ಎಂದು ಕೇಳಿದ್ದರಂತೆ. ಕಾಕ್ರೋಚ್ ಅವರು ಪ್ರತಿ ಕಾಮೆಂಟ್‌ಗೆ ಕಾಮೆಂಟ್ ಹಾಕುತ್ತಾರಂತೆ.
ವೀಕ್ಷಕರು ಹೇಳಿದ್ದೇನು?
“ಟಗರು ಸಿನಿಮಾ ಮಾಡುವಾಗ ಡಾಲಿ, ಕಾಕ್ರೋಚ್ ನೋಡಿ ನಮ್ಮ ಮಕ್ಕಳು ಹಾಳಾಗ್ತಾರೆ ಅಂತ ಕಾಮೆಂಟ್ ಮಾಡಿದ್ದರು. ಆಗ ನಾನು ಡಾಲಿ, ಕಾಕ್ರೋಚ್ ಯಾಕೆ ನೋಡ್ತೀಯಾ? ಟಗರು ಶಿವ ನೋಡು, ನಿಮ್ಮ ಮಗ ಎಸಿಪಿ ಆಗ್ತಾನೆ ಅಂತ ಹೇಳಿದ್ದೆ” ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ.
ಕಾಕ್ರೋಚ್ ಉತ್ತರ ಏನು?
“ಮಹಾಭಾರತ, ರಾಮಾಯಣ ಸೀರಿಯಲ್ ಹಾಕಿದಾಗ, ನಿನ್ನ ಮಗ ದುಶ್ಯಾಸನ, ಧುರ್ಯೋಧನನ್ನು ನೋಡಿದರೆ ಏನು ಮಾಡಲಿ? ನಿನ್ನ ಮಗ ಅರ್ಜುನ, ಭೀಮ, ಧರ್ಮರಾಯನನ್ನು ನೋಡಬೇಕು, ಅದರಲ್ಲಿ ನನ್ನ ತಪ್ಪೇನಿದೆ ಎಂದು ಹೇಳಿದ್ದೆ” ಎಂದು ಕಾಕ್ರೋಚ್ ಸುಧಿ ಹೇಳಿದ್ದರು.
ಕಾಕ್ರೋಚ್ ಏನು ಹೇಳಿದ್ರು?
“ಶಬರಿಮಲೆ ಸಿನಿಮಾ ಹಾಕಿದಾಗ ಮಹೇಶಿ ನೋಡಿದರೆ ಏನು ಮಾಡೋಣ? ನನ್ನ ಹೆಂಡ್ತಿ ಇದನ್ನು ನೋಡಿ ರಾತ್ರೋ ರಾತ್ರಿ ಗುಮ್ತಾಳೆ ಅಂದರೆ ಏನು ಮಾಡಲಿ? ತಪ್ಪಿದ್ದರೆ ತಾನೇ ಒಳ್ಳೆಯದು ತೋರಿಸೋಕೆ ಆಗತ್ತೆ” ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ.
ಬಿಗ್ ಬಾಸ್ ಮನೆ ಸ್ಪರ್ಧಿ
ಈಗಾಗಲೇ ಸಿನಿಮಾಗಳಲ್ಲಿ ಮಿಂಚಿರುವ ಸುಧಿ ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೇಗೆ ಆಟ ಆಡ್ತಾರೆ ಎಂದು ಕಾದು ನೋಡಬೇಕಿದೆ.