Bigg Boss Kannada ಒಂದೇ ಸೀಸನ್‌ನಲ್ಲಿ ಭಾಗವಹಿಸಿದ ಕಿರುತೆರೆ ಜೋಡಿಗಳಿವು; PHOTOS
ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳು ಪ್ರಸಾರ ಆಗಿವೆ. ಈ ಧಾರಾವಾಹಿಯಲ್ಲಿ ನಟಿಸಿರುವ ಜೋಡಿಗಳು ಬಿಗ್ ಬಾಸ್ ಕನ್ನಡ ಶೋನ ಬೇರೆ ಬೇರೆ ಸೀಸನ್‌ನಲ್ಲಿ ಭಾಗವಹಿಸಿದ್ದಾರೆ. ಹಾಗಾದರೆ ಅವರು ಯಾರು? ಯಾರು? ಫೋಟೋ ಸಮೇತ ನೋಡಿ..

ರಾಧಾ ಕಲ್ಯಾಣ ಧಾರಾವಾಹಿ
ನಟ ಚಂದನ್ ಕುಮಾರ್ ಹಾಗೂ ಕೃತಿಕಾ ರವೀಂದ್ರ ಅವರು ಬಿಗ್ ಬಾಸ್ ಕನ್ನಡ ಸೀಸನ್ 3 ಶೋನಲ್ಲಿ ಭಾಗವಹಿಸಿದ್ದರು. ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ಚಂದನ್ ಅವರು ವಿಶಾಲ್ ಆಗಿ, ಕೃತಿಕಾ ಅವರು ರಾಧಿಕಾ ಪಾತ್ರದಲ್ಲಿ ನಟಿಸಿದ್ದರು.
ಶುಭ ವಿವಾಹ ಧಾರಾವಾಹಿ
ಶುಭ ವಿವಾಹ ಧಾರಾವಾಹಿಯಲ್ಲಿ ನಟಿಸಿದ್ದ ಭುವನ್ ಪೊನ್ನಣ್ಣ ಹಾಗೂ ಕಾವ್ಯಾ ಶಾಸ್ತ್ರೀ ಅವರು ಬಿಗ್ ಬಾಸ್ ಕನ್ನಡ ಸೀಸನ್ 4 ಶೋನಲ್ಲಿ ಭಾಗವಹಿಸಿದ್ದರು.
ಹರ ಹರ ಮಹಾದೇವ ಧಾರಾವಾಹಿ
ಹರ ಹರ ಮಹಾದೇವ ಧಾರಾವಾಹಿಯಲ್ಲಿ ವಿನಯ್ ಗೌಡ, ಸಂಗೀತಾ ಶೃಂಗೇರಿ ನಟಿಸಿದ್ದರು. ಇವರಿಬ್ಬರು ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಭಾಗವಹಿಸಿದ್ದರು. ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ ಆಡಿತ್ತು. ವಿನಯ್ ಗೌಡ ಅವರು ಶಿವನ ಪಾತ್ರ ಮಾಡಿದ್ದರೆ, ಸಂಗೀತಾ ಸತಿ ಪಾತ್ರ ನಿರ್ವಹಿಸಿದ್ದರು.
ಮುದ್ದುಲಕ್ಷ್ಮೀ ಧಾರಾವಾಹಿ
ಮುದ್ದುಲಕ್ಷ್ಮೀ ಧಾರಾವಾಹಿಯಲ್ಲಿ ಧ್ರುವಂತ್ ಪಾತ್ರದಲ್ಲಿ ಧ್ರುವಂತ್ ಅವರು, ಲಕ್ಷ್ಮೀ ಪಾತ್ರದಲ್ಲಿ ಅಶ್ವಿನಿ ನಟಿಸಿದ್ದರು. ಇವರಿಬ್ಬರು ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿದ್ದಾರೆ.
ದೀಪವು ನಿನ್ನದೆ ಗಾಳಿಯು ನಿನ್ನದೇ ಧಾರಾವಾಹಿ
ಜಗನ್ ಚಂದ್ರಶೇಖರ್ ಹಾಗೂ ಅನುಪಮಾ ಗೌಡ ಅವರು ದೀಪವು ನಿನ್ನದೆ ಗಾಳಿಯು ನಿನ್ನದೇ ಧಾರಾವಾಹಿಯಲ್ಲಿ ನಟಿಸಿದ್ದರು. ಇವರು ಬಿಗ್ ಬಾಸ್ ಕನ್ನಡ ಸೀಸನ್ 5 ಶೋನಲ್ಲಿ ಭಾಗವಹಿಸಿದ್ದರು.