- Home
- Entertainment
- TV Talk
- ಕಂಟೆಂಟ್ ಕ್ರಿಯೇಟರ್ಸ್ಗೆ Bigg Boss ಭರ್ಜರಿ ಆಫರ್! ಟಿವಿಯಲ್ಲಿ ಮಿಂಚಲು ನಿಮಗೂ ಅವಕಾಶ
ಕಂಟೆಂಟ್ ಕ್ರಿಯೇಟರ್ಸ್ಗೆ Bigg Boss ಭರ್ಜರಿ ಆಫರ್! ಟಿವಿಯಲ್ಲಿ ಮಿಂಚಲು ನಿಮಗೂ ಅವಕಾಶ
ಬಿಗ್ಬಾಸ್ ಕನ್ನಡ ಸೀಸನ್ 12 ರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಕಂಟೆಂಟ್ ಕ್ರಿಯೇಟರ್ಸ್ಗಳ ಪ್ರತಿಭೆಯನ್ನು ಕಲರ್ಸ್ ಕನ್ನಡ ವಾಹಿನಿ ಗುರುತಿಸಿದೆ. ಅವರ ವಿಡಿಯೋಗಳನ್ನು ತಮ್ಮ ಪೇಜ್ನಲ್ಲಿ ಶೇರ್ ಮಾಡುವ ಕೊಲ್ಯಾಬೋರೇಷನ್ ಆಫರ್ ನೀಡಿದೆ. ಡಿಟೇಲ್ಸ್ ಇಲ್ಲಿದೆ…

ಹಲವಾರು ವಿಶೇಷತೆಗಳ ಬಿಗ್ಬಾಸ್
ಬಿಗ್ ಬಾಸ್ ಸೀಸನ್ 12 (Bigg Boss Season 12) ಹಲವಾರು ವಿಶೇಷತೆಗಳೊಂದಿಗೆ ವೀಕ್ಷಕರ ಮುಂದೆ ಬಂದಿದೆ. ಇದಾಗಲೇ ಶುರುವಾಗಿ ನಾಲ್ಕೈದು ದಿನಗಳಲ್ಲಿಯೇ ಓರ್ವ ಸ್ಪರ್ಧಿ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಇಲ್ಲಿಂದ ಹಿಡಿದು ದಿನದಿಂದ ದಿನಕ್ಕೆ ಈ ಸೀಸನ್ ಸಕತ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದಾಗಲೇ ಕೆಲವು ಸ್ಪರ್ಧಿಗಳು ನಾಮಿನೇಟ್ ಕೂಡ ಆಗಿದ್ದಾರೆ.
ಸ್ಪರ್ಧಿಗಳು ಮಾಡುವುದೇನು?
ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳ ಬಗ್ಗೆ ಅಭಿಮಾನಿಗಳು ಪ್ರಚಾರ ಮಾಡುತ್ತಲೇ ಇರುತ್ತಾರೆ. ಬಿಗ್ಬಾಸ್ ಒಳಗೆ ಹೋಗುವಾಗ ತಮ್ಮ ಪರವಾಗಿ ಪ್ರಚಾರ ಮಾಡಲು ಸ್ಪರ್ಧಿಗಳು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾವನ್ನು ಬೇರೆಯವರಿಗೆ ಕೊಟ್ಟು ಹೋಗಬೇಕು. ಅವರು ಸ್ಪರ್ಧಿಗಳೇ ಪ್ರಚಾರ ಮಾಡಿದಂತೆ ಪ್ರಚಾರ ಮಾಡುತ್ತಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ತಾವೇ ಸ್ವಂತ ಆಸಕ್ತಿಯಿಂದ ಪ್ರಚಾರ ಮಾಡುವುದು ಇದೆ.
ಬಿಗ್ಬಾಸ್ ನಕಲಿ ರೂಪ
ಇನ್ನೂ ಕೆಲವು ಕ್ರಿಯೇಟಿವ್ ಟ್ಯಾಲೆಂಟ್ ಇರುವವರು ತಾವೇ ಬಿಗ್ಬಾಸ್ ಅನ್ನು ಸೃಷ್ಟಿ ಮಾಡಿ ಅದನ್ನು ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ತಾವೇ ಬಿಗ್ಬಾಸ್ ಮನೆಯ ರೀತಿ ಕ್ರಿಯೇಟ್ ಮಾಡಿಕೊಂಡು, ಬಿಗ್ಬಾಸ್ ದನಿ ನೀಡುವ ಮೂಲಕ, ತಮ್ಮದೇ ಆದ ರೀತಿಯಲ್ಲಿ ಕಾಮಿಡಿ ಮಾಡಿ ಕಂಟೆಂಟ್ ಕ್ರಿಯೇಟ್ ಮಾಡುತ್ತಿದ್ದಾರೆ. ಇದು ಅವರ ಫಾಲೋವರ್ಸ್ಗೆ ಮಾತ್ರ ಕಾಣಿಸುತ್ತಿದೆ.
ಟ್ಯಾಲೆಂಟ್ಗಳಿಗೆ ಅದ್ಭುತ ಅವಕಾಶ
ಇದನ್ನು ನೋಡಿರುವ ಕಲರ್ಸ್ ಕನ್ನಡ ವಾಹಿನಿ, ಇಂದು ಟ್ಯಾಲೆಂಟ್ಗಳಿಗೆ ಅದ್ಭುತ ಅವಕಾಶವನ್ನು ನೀಡಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಲಾಗಿದೆ.
ಕಲರ್ಸ್ ವಾಹಿನಿ ಆಫರ್
ಅದರಲ್ಲಿ ಕ್ರಿಯೇಟಿವ್ ಮನಸ್ಸುಗಳೇ ಇಲ್ಲಿ ಕೇಳಿ. ನೀವು ಬಿಗ್ಬಾಸ್ ಕನ್ನಡ ಸೀಸನ್ 12ರ ಬಗ್ಗೆ ಅದ್ಭುತ ಕಂಟೆಂಟ್ ಮಾಡ್ತಿದ್ದೀರಾ ಎನ್ನುವುದು ನಮಗೆ ಗೊತ್ತು. ಕೇವಲ ನಿಮ್ಮ ಪೇಜ್ನಲ್ಲೇ ಯಾಕೆ? ನಮಗೂ ಕೊಲ್ಯಾಬೋರೇಷನ್ ರಿಕ್ವೆಸ್ಟ್ ಕಳುಹಿಸಿ. ನಿಮ್ಮ ವಿಡಿಯೋ ಇಷ್ಟವಾದ್ರೆ ಶೇರ್ ಮಾಡ್ತೀವಿ ಎಂದಿದ್ದಾರೆ.
ಕಂಟೆಂಟ್ ಕ್ರಿಯೇಟರ್ಸ್ ಮನವಿ
ಇದನ್ನು ಕೇಳಿ ಕಂಟೆಂಟ್ ಕ್ರಿಯೇಟರ್ಸ್ಗೆ ಖುಷಿಯಾದರೂ ಕಾಪಿ ರೈಟ್ ಮಾತ್ರ ಹಾಕಬೇಡಿ, ನಮಗೆ ಕಷ್ಟವಾಗುತ್ತದೆ ಎಂದು ಹೆಚ್ಚಿನವರು ಕಮೆಂಟ್ನಲ್ಲಿ ತಿಳಿಸಿದ್ದಾರೆ. ಏಕೆಂದರೆ ವಾಹಿನಿಯವರು ಕಾಪಿರೈಟ್ ಹಾಕಿಬಿಟ್ಟರೆ, ಅದು ವಾಹಿನಿಯ ಅಧಿಕೃತ ಸ್ವತ್ತಾಗುವ ಕಾರಣ, ಮೂಲ ಕಂಟೆಂಟ್ ಕ್ರಿಯೇಟರ್ಸ್ಗೆ ಅದರ ಹಕ್ಕು ಇರುವುದಿಲ್ಲ.ಮಾನಿಟೈಸೇಷನ್ ಎಲ್ಲಾ ಸಮಸ್ಯೆಯಾಗುವ ಕಾರಣ, ಈ ಮನವಿ ಮಾಡಿಕೊಂಡಿದ್ದಾರೆ.