- Home
- Entertainment
- TV Talk
- Bhagyalakshmi Serial: ಬೇರೆಯವ್ರ ಸಂಸಾರ ಹಾಳ್ ಮಾಡೋಕೆ ಹೋದ್ರೆ ಇದೇ ಗತಿ ಬರೋದು ಶ್ರೇಷ್ಠ ಅವ್ರೇ..!
Bhagyalakshmi Serial: ಬೇರೆಯವ್ರ ಸಂಸಾರ ಹಾಳ್ ಮಾಡೋಕೆ ಹೋದ್ರೆ ಇದೇ ಗತಿ ಬರೋದು ಶ್ರೇಷ್ಠ ಅವ್ರೇ..!
bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಹಾಗೂ ಶ್ರೇಷ್ಠ ಮದುವೆಯಾಗಿದೆ. ಆದರೂ ಅವರಿಗೆ ನೆಮ್ಮದಿ ಇಲ್ಲದಂತಾಗಿದೆ. ಇದಕ್ಕೆ ಕಾರಣ ಏನು?

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳನ್ನು ಬಿಟ್ಟು ತಾಂಡವ್ ಹಾಗೂ ಶ್ರೇಷ್ಠ ಮದುವೆ ಆಗಿದ್ದಾರೆ. ಶ್ರೇಷ್ಠಳಿಗೆ ಸಾಕಷ್ಟು ಬಾರಿ ಬೇಡಿಕೊಂಡರೂ ಕೂಡ ಅವಳು ಮಾತ್ರ ಕೇಳದೆ ಮದುವೆ ಆಗಿದ್ದಾಳೆ. ಇಡೀ ಕುಟುಂಬ ಶ್ರೇಷ್ಠಳಿಗೆ ಎಚ್ಚರಿಕೆ ಕೊಟ್ಟರೂ, ಮನವಿ ಮಾಡಿದ್ರೂ ಅವಳು ಮಾತ್ರ ಸುಮ್ಮನಾಗಲಿಲ್ಲ.
ತಾಂಡವ್‌ನನ್ನು ಪ್ರೀತಿ ಮಾಡಿ ಮದುವೆಯಾಗಬೇಕು ಎನ್ನೋದಕ್ಕಿಂತ ಜಾಸ್ತಿ, ತಾಂಡವ್‌ನನ್ನು ಪಡೆದುಕೊಂಡು ಭಾಗ್ಯ, ಕುಸುಮಾಗೆ ಪಾಠ ಕಲಿಸಬೇಕು ಅಂತ ಶ್ರೇಷ್ಠ ಅವನನ್ನು ಮದುವೆಯಾದಳು. ಭಾಗ್ಯ, ಕುಸುಮಾ ಅವಮಾನ ಮಾಡಿದ್ದಕ್ಕೆ ತಕ್ಕ ಶಾಸ್ತಿ ಮಾಡಬೇಕು ಎನ್ನೋದು ಅವಳ ಮಹದಾಸೆಯಾಗಿತ್ತು.
ತಾಂಡವ್, ಶ್ರೇಷ್ಠ ಮದುವೆಯಾಗಿದೆ. ಇವರಿಬ್ಬರಿಗೂ ಭಾಗ್ಯ ಹಾಳಾಗಬೇಕು, ಅವಳು ಅವಮಾನ ಎದುರಿಸಬೇಕು ಅಂತ ದಿನವೂ ಪ್ಲ್ಯಾನ್ ಮಾಡೋದರಲ್ಲಿ ಸಮಯ ಕಳೆಯುತ್ತಾರೆ. ಒಟ್ಟಿನಲ್ಲಿ ಬೇರೆಯವರ ದುಃಖದಲ್ಲಿ ಖುಷಿಪಡುವ ಹಾಳು ಮನಸ್ಸು ಇವರದ್ದು.
ತಾಂಡವ್ ಹಾಗೂ ಭಾಗ್ಯ ಪದೇ ಪದೇ ಮುಖಾಮುಖಿಯಾಗುತ್ತಾರೆ. ತಾಂಡವ್ ಆಫೀಸ್‌ನಲ್ಲಿ ಕೆಲಸ ಮಾಡುವ ಆದೀಶ್ವರ್‌ಗೆ ಭಾಗ್ಯ ಕಂಡರೆ ಸಿಕ್ಕಾಪಟ್ಟೆ ಗೌರವ, ಅಭಿಮಾನ. ಭಾಗ್ಯಳನ್ನು ಎಲ್ಲರೂ ಹೊಗಳ್ತಾರೆ ಅಂತ ತಾಂಡವ್‌ಗೆ ಸಿಟ್ಟು. ಇನ್ನೊಂದು ಕಡೆ ಶ್ರೇಷ್ಠಗೆ ಅನುಮಾನ.
ಭಾಗ್ಯ ಹಾಗೂ ತಾಂಡವ್ ಮುಖಾಮುಖಿ ಆಗ್ತಿರೋದು ನೋಡಿ ಶ್ರೇಷ್ಠಗೆ ಚಿಂತೆ ಶುರು ಆಗಿದೆ. ಯಾವಾಗ ನೋಡಿದರೂ ಕೂಡ ನನ್ನನ್ನು ಅಸಡ್ಡೆಯಿಂದ ಕಾಣುವ ತಾಂಡವ್ ಮನಸ್ಸು ಬದಲಾಯಿಸಿ ಭಾಗ್ಯಳ ಜೊತೆ ಮತ್ತೆ ಸಂಸಾರ ಮಾಡ್ತಾನೆ ಎನ್ನುವ ಚಿಂತೆ ಅವಳಿಗೆ ಶುರುವಾಗಿದೆ. ಬೇರೆಯವರ ಮನೆ ಹಾಳು ಮಾಡಲು ಹೋಈದರೆ ನೆಮ್ಮದಿ ಇರೋದಿಲ್ಲ.