Bhagyalakshmi Serial Episode: ಕಲರ್ಸ್‌ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ಗೆ ಎರಡನೇ ಮದುವೆ ಆಗಿದೆ, ಆದರೆ ಭಾಗ್ಯ ಕಥೆ ಏನು? ಅವಳು ಸಿಂಗಲ್‌ ಆಗಿ ಇರಬೇಕಾ? 

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ( Bhagyalakshmi Serial ) ನನ್ನ ಮಗ ತಾಂಡವ್‌ನಂತೂ ನಮ್ಮ ಹೊಟ್ಟೆ ಉರಿಸಿ, ಆ ಶ್ರೇಷ್ಠ ಜೊತೆ ಮದುವೆಯಾದ. ಈಗ ನಮ್ಮನ್ನು ಹೆತ್ತ ತಂದೆ-ತಾಯಿ ಎನ್ನುವ ಹಾಗೆ ನೋಡಿಕೊಳ್ತಿರೋ ಸೊಸೆ ಭಾಗ್ಯ, ಮುಂದೆ ಒಂಟಿಯಾಗೋದಿಲ್ವಾ ಎಂದು ಕುಸುಮಾಗೆ ಹೊಸ ಚಿಂತೆ ಶುರುವಾಗಿದೆ. ಹಾಗಾದರೆ ಅವಳ ಮುಂದಿನ ನಡೆ ಏನು?

ದೈಹಿಕ ಸುಖದಾಚೆ ಒಂದು ಬದುಕಿದೆ!

ಕುಸುಮ ಹಾಗೂ ಧರ್ಮರಾಜ್‌ಗೆ ಈಗಾಗಲೇ ವಯಸ್ಸಾಗಿದೆ. ತನ್ವಿ, ತನ್ಮಯ್‌ ಕೂಡ ಓದಿ ಮದುವೆ ಆಗುತ್ತಾರೆ, ಆಮೇಲೆ ಭಾಗ್ಯ ಏಕಾಂಗಿಯಾಗಿ ಇರಬೇಕಾ? ನಮಗೆ ವಯಸ್ಸಾಗುತ್ತದೆ, ಆಗ ಭಾಗ್ಯ ಏನು ಮಾಡಬೇಕು ಅಂತ ಕುಸುಮಾಗೆ ಚಿಂತೆ ಶುರು ಆಗಿದೆ. ಅನೇಕರು ಜೀವನದಲ್ಲಿ ಮದುವೆ ಆಗೋದು ದೈಹಿಕ ಸುಖಕ್ಕಲ್ಲ, ಬದಲಾಗಿ ಸ್ನೇಹಕ್ಕೆ, ಸಂಗಾತಿಗೋಸ್ಕರ. ಜೀವನದಲ್ಲಿ ಯಾರೇ ಇದ್ದರೂ ಕೂಡ

ಏನೇ ಆದರೂ, ಬಹುತೇಕರಿಗೆ ಸಂಗಾತಿಯ ಅಗತ್ಯ ಇರುತ್ತದೆ. ಈ ಬಗ್ಗೆ ಅನೇಕರು ಮಾತನಾಡಿದ್ದುಂಟು. ದೈಹಿಕ ಸುಖದ ಆಚೆಯೂ ಒಂದು ಬದುಕಿದೆ, ಸ್ನೇಹ ಇರುತ್ತದೆ. ಅದಕ್ಕೋಸ್ಕರ ಎರಡನೇ ಮದುವೆ ಆಗೋದುಂಟು.

ಕುಸುಮಾಗೆ ಭಾಗ್ಯ ಚಿಂತೆಯಾಗಿದೆ, ಈ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ ಮೂಲಕ ಉತ್ತರ ನೀಡಿದ್ದಾರೆ.

ಕುಸುಮ ಮನಸಲ್ಲೇ ಆದಿ-ಭಾಗ್ಯ ಜೋಡಿ ಆಗ್ಲಿ ಅಂಥ ಬಯಸುತ್ತಿದ್ದಾರೆ.

ನಮಗೂ ಕೂಡ ಇದೇ ಚಿಂತೆ ಕುಸುಮ ಅತ್ತೆ. ಇದರ ನಡುವೆ ಭಾಗ್ಯ ಅಕ್ಕ-ಆದಿ ನಡುವೆ ಪ್ರೀತಿ ಶುರುವಾಗುತ್ತದಾ? ಇಲ್ವ ಅನ್ನುವುದು ಇನ್ನೊಂದು ಚಿಂತೆ.

ಆದಿ ನಡುವಳಿಕೆ ನೋಡಿ ಕುಸುಮನೇ ಆದಿ-ಭಾಗ್ಯ ಮದುವೆ ಮಾಡಿಸೋಕೆ ಮುಂದಾದ್ರು ಆಗ್ತಾಳೆ, ಆದಿ ಕುಡ ಇಂಪ್ರೆಸ್ ಆಗ್ತಿದಾನೆ, ಭಾಗ್ಯ ಏನ್ ಮಾಡ್ತಾಳೆ ನೋಡೋಣ.

ಕುಸುಮ ಅವರಿಗೆ ಭಾಗ್ಯ ಒಂಟಿಯಾಗಿರುವುದೇ ಚಿಂತೆ ಬಂದಿದೆ ಎಂದರೆ ಆದಿ ಮತ್ತು ಭಾಗ್ಯ ಮದುವೆ ಆಗಬಹುದು.. ಅಂತ ಅನಿಸುತ್ತೆ.

ಕುಸುಮ ಅಮ್ಮಾವ್ರೇ ನಿಮಗೆ ಚಿಂತೆ ಆಗ್ತಾ ಇದೆಯಾ? ಒಂದು ಕೆಲಸ ಮಾಡಿ ನಿಮ್ಮ ಸೊಸೆಯನ್ನು ಆದಿಯ ಜೊತೆಗೆ ಮದುವೆ ಮಾಡಿ ಬಿಡಿ

ಧಾರಾವಾಹಿ ಕಥೆ ಏನು?

ತಾಂಡವ್‌ ಹಾಗೂ ಭಾಗ್ಯಗೆ ಮದುವೆಯಾಗಿ ಇಬ್ಬರು ಮಕ್ಕಳಿವೆ. ಆದರೆ ತಾಂಡವ್‌ ಮಾತ್ರ ಭಾಗ್ಯಳಿಗೆ ಕೈಕೊಟ್ಟು, ಶ್ರೇಷ್ಠಳನ್ನು ಮದುವೆ ಆಗಿದ್ದಾನೆ. ಈಗ ಪೂಜಾಗೆ ಕಿಶನ್‌ ಜೊತೆ ಮದುವೆ ಆಗಿದೆ. ಕಿಶನ್‌ ಅವರಿಗೆ ಆದೀಶ್ವರ್‌ ಕಾಮತ್‌ ಎಂಬ ಅಣ್ಣನಿದ್ದಾನೆ. ದಿನದಿಂದ ದಿನಕ್ಕೆ ಭಾಗ್ಯ ಮೇಲೆ ಆದಿಗೆ ಗೌರವ, ಅಭಿಮಾನ ಹೆಚ್ಚಾಗುತ್ತಿದೆ. ತಾಂಡವ್‌ಗಂತೂ ಮತ್ತೊಂದು ಮದುವೆಯಾಯ್ತು, ಭಾಗ್ಯ ಕತೆ ಏನು ಎನ್ನೋದು ಕುಸುಮಾ ಚಿಂತೆ. ವೀಕ್ಷಕರು ಆದಿ-ಭಾಗ್ಯ ಮದುವೆ ಆಗಲಿ ಅಂತ ಬಯಸ್ತಿದ್ದಾರೆ.

ತಾಂಡವ್‌, ಶ್ರೇಷ್ಠ ಸೇರಿಕೊಂಡು ಭಾಗ್ಯಗೆ ಒಂದಲ್ಲ ಒಂದು ಕಾಟ ಕೊಡ್ತಿದ್ದಾರೆ. ಇನ್ನೊಂದು ಕಡೆ ಪೂಜಾ ಮನೆಯಲ್ಲಿ ಕೆಲವರು ಭಾಗ್ಯ ಕಂಡರೆ ಉರಿದುಬೀಳ್ತಾರೆ. ಹಾಗಾದರೆ ಮುಂದೆ ಕಥೆ ಏನು? ಏನಾಗಬಹುದು?

ಪಾತ್ರಧಾರಿಗಳು

ಭಾಗ್ಯ- ಸುಷ್ಮಾ ಕೆ ರಾವ್‌

ತಾಂಡವ್-‌ ಸುದರ್ಶನ್‌ ರಂಗಪ್ರಸಾದ್

ಶ್ರೇಷ್ಠ-ಕಾವ್ಯಾ ಗೌಡ

ಆದೀಶ್ವರ್‌ ಕಾಮತ್-‌ ಹರೀಶ್‌ ರಾಜ್‌

ಕುಸುಮ-ಪದ್ಮಜಾ ರಾವ್‌