Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಕೊನೆಗೂ ವೀಕ್ಷಕರು ಕಾಯುತ್ತಿದ್ದ ಕ್ಷಣ ಬಂದಿದೆ. ಕುಶಾಲನಗರದಲ್ಲಿ ಗೌತಮ್‌ಗೆ ಸತ್ಯ ದರ್ಶನ ಆಗಿದೆ. ಹಾಗಾದರೆ ಮುಂದೇನು ಕಥೆ? ಒಟ್ಟಿನಲ್ಲಿ ಭಾರೀ ಕೂತೂಹಲ ಮೂಡಿಸಿದೆ. 

ಅಮೃತಧಾರೆ ಧಾರಾವಾಹಿಯಲ್ಲಿ ಕುಶಾಲನಗರಕ್ಕೆ ಗೌತಮ್‌ ಬಂದಾಗಿದೆ. ಐದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ಪತ್ನಿ ಭೂಮಿಕಾ ಹಾಗೂ ಮಗನನ್ನು ಹುಡುಕಿಕೊಂಡು ಗೌತಮ್‌ ಬಂದಿದ್ದಾನೆ. ಆಗ ತಾನೇ ಹುಟ್ಟಿದ್ದ ಮಗನನ್ನು ಕರೆದುಕೊಂಡು ಭೂಮಿ ಎಲ್ಲರಿಂದ ದೂರವಾಗಿದ್ದಳು. ಹೀಗಾಗಿ ಮಗ ಈಗ ಹೇಗಾಗಿದ್ದಾನೆ ಅಂತ ಗೌತಮ್‌ಗೆ ಗೊತ್ತಿಲ್ಲ.

ಗೌತಮ್‌ ಕಂಡ್ರೆ ಭೂಮಿಗೆ ಇಷ್ಟ ಇಲ್ಲ

ಕುಶಾಲನಗರದಲ್ಲಿ ಕೊನೆಗೂ ಗೌತಮ್‌ಗೆ ಭೂಮಿ ಸಿಕ್ಕಿದಳು. ಆದರೆ ಅವಳು ಅವನನ್ನು ಸ್ವೀಕರಿಸಲೇ ಇಲ್ಲ. “ನನ್ನ ಮಗಳು ಹುಟ್ಟಿದ್ದು, ಕಿಡ್ನ್ಯಾಪ್‌ ಆಗಿರೋ ವಿಚಾರವನ್ನು ನೀವು ಹೇಳಲೇ ಇಲ್ಲ. ನೀವು ನನಗೆ ಹೇಳಿ ಸಮಾಧಾನ ಮಾಡಬಹುದಿತ್ತು. ಈಗ ನನ್ನ ಮನಸ್ಸು ಮುರಿದಿದೆ. ನಿಮ್ಮ ಬಗ್ಗೆ ನನಗೆ ಈಗ ಪ್ರೀತಿ ಇಲ್ಲ, ದ್ವೇಷ ತುಂಬಿದೆ” ಎಂದು ಹೇಳಿದ್ದಾಳೆ.

ಶಕುಂತಲಾ ಕೆಲಸವಿದು

ಈ ಮನೆಯಿಂದ, ಈ ಮನೆಯವರಿಂದ ನೀನು ದೂರ ಆದರೆ ಮಾತ್ರ ನಿನ್ನವರು ಜೀವಂತವಾಗಿ ಉಳಿಯುತ್ತಾರೆ ಅಂತ ಶಕುಂತಲಾ, ಭೂಮಿಗೆ ಎಚ್ಚರಿಕೆ ಕೊಟ್ಟಿದ್ದಳು. ಹೀಗಾಗಿ ಭೂಮಿ ಈ ರೀತಿ ನಾಟಕ ಮಾಡುತ್ತಿದ್ದಾಳೆ. ತನ್ನನ್ನು ಶಕುಂತಲಾಳಿಂದ ಕಾಪಾಡಬೇಕು ಎಂದು ಭೂಮಿ ಈ ರೀತಿ ಸುಳ್ಳು ಹೇಳುತ್ತಿದ್ದಾಳೆ ಅಂತ ಇನ್ನೂ ಗೌತಮ್‌ಗೆ ಗೊತ್ತಿಲ್ಲ.

ಗೌತಮ್‌, ಆಕಾಶ್‌ ಭೇಟಿ

ಇನ್ನೊಂದು ಕಡೆ ಭೂಮಿಯನ್ನು ನೋಡಿದೆ, ಆದರೆ ಮಗ ಹೇಗಾಗಿದ್ದಾನೆ ಅಂತ ಗೊತ್ತಿಲ್ಲ ಅಂತ ಗೌತಮ್‌ ಒದ್ದಾಡುತ್ತಿದ್ದಾನೆ. ಇನ್ನೊಂದು ಕಡೆ ಗೌತಮ್‌ ಹಾಗೂ ಅವನ ಮಗನ ಮುಖಾಮುಖಿಯಾಗಿದೆ. ಆದರೆ ಅವನಿಗೆ ತನ್ನ ಮಗ ಇವನೇ ಎನ್ನೋದು ಗೊತ್ತಿಲ್ಲ. ಶಾಲೆಗೆ ಬಂದಿರೋ ಗೌತಮ್‌, ಅಪ್ಪುನನ್ನು ನೋಡ್ತಾನೆ. “ನನ್ನ ಮಗ ಈ ಸ್ಕೂಲ್‌ನಲ್ಲಿದ್ದಾನೆ, ಅವನನ್ನು ಹುಡುಕೋಕೆ ಸಹಾಯ ಮಾಡ್ತೀಯಾ?” ಅಂತ ಗೌತಮ್‌, ಆಕಾಶ್‌ ಬಳಿ ಕೇಳುತ್ತಾನೆ. ಆಗ ಆಕಾಶ್‌, “ನಾನು ಒಬ್ಬರಿಗೆ ಹೊಡೆದಿದ್ದೆ, ನನ್ನ ಫ್ರೆಂಡ್‌ ನಿನ್ನ ಅಪ್ಪ ಎಲ್ಲಿ ಅಂತ ರೇಗಿಸ್ತಾರೆ, ಪ್ಲೀಸ್‌ ನೀವು ನನ್ನ ತಂದೆಯಾಗಿ ನಾಟಕ ಮಾಡ್ತೀರಾ?” ಎಂದು ಕೇಳುತ್ತಾನೆ.

ಗೌತಮ್‌ಗೆ ಸತ್ಯದರ್ಶನ

ಆರಂಭದಲ್ಲಿ ಇದನ್ನು ತಿರಸ್ಕರಿಸಿದ ಗೌತಮ್‌ ಕೊನೆಗೂ ಒಪ್ಪುತ್ತಾನೆ. “ನೀವು ಈ ರೀತಿ ಟೀ ಶರ್ಟ್‌ ಅಲ್ಲಿ ಬಂದರೆ, ನನ್ನ ತಂದೆ ಅಂತ ಯಾರೂ ನಂಬೋದಿಲ್ಲ” ಎಂದು ಆಕಾಶ್‌ ಹೇಳುತ್ತಾನೆ. ಆಗ ಗೌತಮ್‌ ಸೂಟ್‌ನಲ್ಲಿ ಬರುತ್ತಾನೆ. ಅದನ್ನು ನೋಡಿ ಆಕಾಶ್‌, “ನಿಮಗೆ ಈ ಸೂಟ್‌ ಮ್ಯಾಚ್‌ ಆಗೋ ಥರ ಯಾರಿಗೂ ಆಗೋದಿಲ್ಲ” ಎಂದು ಹೇಳುತ್ತಾನೆ. ಇವರಿಬ್ಬರು ಪ್ರಿನ್ಸಿಪಲ್‌ ರೂಮ್‌ ಬಳಿ ಹೋಗುತ್ತಿರುತ್ತಾರೆ. ಅಲ್ಲಿ ಭೂಮಿ ಕೂಡ ನಡೆದುಕೊಂಡು ಹೋಗುತ್ತಿರುತ್ತಾಳೆ. ಅದನ್ನು ನೋಡಿ ಆಕಾಶ್‌, ನನ್ನ ಮಮ್ಮಿ ಅಂತ ಭಯಪಟ್ಟು ಬಚ್ಚಿಟ್ಟುಕೊಳ್ಳುತ್ತಾನೆ. ಆಗ ಗೌತಮ್‌ ಯಾರು ಎಂದು ನೋಡಿದಾಗ ಭೂಮಿ ಕಾಣಿಸುತ್ತಾಳೆ. “ಅವರು ನಿನ್ನ ಮಮ್ಮಿನಾ?” ಅಂತ ಗೌತಮ್‌ ಪ್ರಶ್ನೆ ಮಾಡಿದಾಗ, ಆಕಾಶ್‌, “ಹೌದು ಇವರೇ ನನ್ನ ರಿಯಲ್‌ ಮಮ್ಮಿ” ಅಂತ ಹೇಳುತ್ತಾನೆ.

ಇಷ್ಟುದಿನಗಳಿಂದ ಹುಡುಕುತ್ತಿದ್ದ ಮಗ ಇವನೇ ಎಂದು ಗೌತಮ್‌ ಖುಷಿಯಿಂದ ಮಗನನ್ನು ಅಪ್ಪಿಕೊಳ್ತಾನೆ, ಅಲ್ಲಿಗೆ ಅಪ್ಪ-ಮಗನ ಮಿಲನವಾಗುವುದು. ಆದರೆ ಆಕಾಶ್‌ಗೆ ಗೌತಮ್‌ ತನ್ನ ಅಪ್ಪ ಎಂದು ಗೊತ್ತಿಲ್ಲ.

ಪ್ರಿನ್ಸಿಪಲ್‌ ಬಳಿ ಹೋಗಿ, ಮಗನ ಪರವಾಗಿ ಗೌತಮ್‌ ಮಾತನಾಡಬಹುದು, ಅಪ್ಪ-ಮಗ ಇನ್ನೂ ಹತ್ತಿರ ಆಗಬಹುದು. ಅಷ್ಟೇ ಅಲ್ಲದೆ ಭೂಮಿಗೆ ಓರ್ವ ಮಂತ್ರಿ ತೊಂದರೆ ಕೊಡುತ್ತಿದ್ದಾನೆ, ಅವನನ್ನು ಗೌತಮ್‌ ಕೂಡ ಮಟ್ಟ ಹಾಕಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.