MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ತಪ್ಪಲ್ಲ, ಅಪರಾಧ ಮಾಡಿದ ಭೂಮಿಕಾ; ಈ ಟೀಚರ್‌ಗೆ ಬುದ್ಧಿಯೇ ಇಲ್ಲ!

Amruthadhaare Serial: ತಪ್ಪಲ್ಲ, ಅಪರಾಧ ಮಾಡಿದ ಭೂಮಿಕಾ; ಈ ಟೀಚರ್‌ಗೆ ಬುದ್ಧಿಯೇ ಇಲ್ಲ!

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಈಗಾಗಲೇ ಆಕಾಶ್‌, ಗೌತಮ್‌ ಭೇಟಿಯಾಗಿದೆ. 5 ವರ್ಷದ ಬಳಿಕ ಮಗ, ಹೆಂಡ್ತಿಯನ್ನು ನೋಡಿರೋ ಗೌತಮ್‌ಗೆ ಈಗ ಅವರನ್ನು ಬಿಟ್ಟು ಹೋಗಲು ಮನಸ್ಸು ಮಾಡುತ್ತಿಲ್ಲ. ಇತ್ತ ಗೌತಮ್‌ನಿಂದ ನಾನು, ನನ್ನ ಮಗ ದೂರ ಇರಬೇಕು ಅಂತ ಭೂಮಿ ಫಿಕ್ಸ್‌ ಆಗಿದ್ದಾಳೆ. 

2 Min read
Author : Padmashree Bhat
Published : Sep 22 2025, 10:17 PM IST
Share this Photo Gallery
  • FB
  • TW
  • Linkdin
  • Whatsapp
15
ಶಕುಂತಲಾ ಧಮ್ಕಿಯೇ ಕಾರಣ
Image Credit : zee5

ಶಕುಂತಲಾ ಧಮ್ಕಿಯೇ ಕಾರಣ

“ನೀನು ಈ ಮನೆಯಿಂದ, ಈ ಮನೆಯವರಿಂದ ದೂರ ಆದರೆ ನಿನ್ನವರು ಚೆನ್ನಾಗಿ ಇರುತ್ತಾರೆ” ಅಂತ ಶಕುಂತಲಾ ವಾರ್ನ್‌ ಮಾಡಿದ್ದಳು. ಹೀಗಾಗಿ ಭೂಮಿ ಪುಟ್ಟ ಮಗನ ಜೊತೆ ಮನೆ ಬಿಟ್ಟು ಹೋಗಿದ್ದಳು. ಈ ವಿಷಯ ಮಲ್ಲಿ, ಶಕುಂತಲಾಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ.

25
ಮಗಳ ವಿಷಯ ಭೂಮಿಗೆ ಗೊತ್ತಿರಲಿಲ್ಲ
Image Credit : zee5

ಮಗಳ ವಿಷಯ ಭೂಮಿಗೆ ಗೊತ್ತಿರಲಿಲ್ಲ

ಭೂಮಿಕಾಗೆ ಅವಳಿ ಮಕ್ಕಳಾದರು. ಮೊದಲು ಮಗಳು ಹುಟ್ಟಿದಳು ಅಂತ ಅವಳಿಗೂ ಗೊತ್ತಿರಲಿಲ್ಲ. ಮಗು ಹುಟ್ಟಿದ ಹತ್ತು ನಿಮಿಷಕ್ಕೆ ಗೌತಮ್‌ ಮಲ ಸಹೋದರ ಜಯದೇವ್‌ ಕದ್ದು ಎತ್ತಿಕೊಂಡು ಹೋದನು, ಆಮೇಲೆ ಕಾಡಿನಲ್ಲಿ ಎಸೆದನು. ಈಗ ಆ ಮಗು ಬದುಕಿದೆಯೋ? ಇಲ್ಲವೋ ಎಂಬುದೇ ಗೊತ್ತಿಲ್ಲ. ಭೂಮಿ ಸ್ನೇಹಿತೆಯೊಬ್ಬಳು ಹೆಣ್ಣು ಮಗುವನ್ನು ದತ್ತು ತಗೊಂಡಿದ್ದಳು. ಈಗ ಆ ಮಗುವೇ ಭೂಮಿ ಮಗಳಾ ಎಂಬ ಪ್ರಶ್ನೆಯೂ ಎದ್ದಿದೆ.

Related Articles

Related image1
Amruthadhaare Serial:‌ ದಿಯಾ ಜಯದೇವ್‌ನನ್ನು ಮದುವೆ ಆದ ಉದ್ದೇಶವೇ ಬೇರೆ; ಕಹಿಸತ್ಯ ಬಯಲು!
Related image2
Amruthadhaare Serial: ಕೊನೆಗೂ ವೀಕ್ಷಕರ ಆಕ್ರೋಶಕ್ಕೆ ಮಣಿದ ಅಮೃತಧಾರೆ ಡೈರೆಕ್ಟರ್!‌ ಇದು ಆಗಬೇಕಿತ್ತು
35
ಭೂಮಿಯ ಮಹಾ ನಾಟಕ
Image Credit : zee5

ಭೂಮಿಯ ಮಹಾ ನಾಟಕ

“ನನಗೆ ಮಗಳು ಹುಟ್ಟಿರೋದು, ಕಿಡ್ನ್ಯಾಪ್‌ ಆಗಿರೋ ವಿಷಯವನ್ನು ಮುಚ್ಚಿಟ್ಟಿರಿ. ಒಂಭತ್ತು ತಿಂಗಳು ಹೊತ್ತು ಹೆತ್ತಿರೋ ನನಗೆ ಮಗಳ ಬಗ್ಗೆ ತಿಳಿದುಕೊಳ್ಳೋ ಹಕ್ಕು ಇಲ್ಲವಾ? ನಿಮಗೆ ನನ್ನ ಮೇಲೆ ನಿಜವಾದ ಪ್ರೀತಿ, ನಂಬಿಕೆ ಇದ್ದಿದ್ದರೆ ಸತ್ಯ ಹೇಳುತ್ತಿದ್ರಿ. ಆದರೆ ನೀವು ಮೋಸ ಮಾಡಿದ್ರಿ. ನನಗೆ ನಿಮ್ಮ ಮೇಲೆ ಲವ್‌ ಇಲ್ಲ, ಈಗ ದ್ವೇಷ ಮಾತ್ರ ಇದೆ” ಎಂದು ಗೌತಮ್‌ಗೆ ಭೂಮಿ ಹೇಳಿದಳು. ಇದನ್ನೇ ಗೌತಮ್‌ ನಂಬಿಕೊಂಡು ಕೂತಿದ್ದಾನೆ.

45
ಮಗನಿಗೆ ಬೈದ ಭೂಮಿ
Image Credit : zee5

ಮಗನಿಗೆ ಬೈದ ಭೂಮಿ

ಮಗ ಆಕಾಶ್‌, ಪ್ರಿನ್ಸಿಪಲ್‌ ಬಳಿ ಫೇಕ್‌ ಡ್ಯಾಡಿಯನ್ನು ಕರೆದುಕೊಂಡು ಹೋಗಿದ್ದಾನೆ ಅಂತ ಭೂಮಿಕಾಗೆ ಗೊತ್ತಾಗಿದೆ. ಮಗ ನಡೆದ ವಿಷಯವನ್ನು ಹೇಳಿದರೂ ಕೂಡ ಅವಳು ಕೇಳಲು ರೆಡಿ ಇಲ್ಲ. ಮಗ ಸುಳ್ಳು ಹೇಳಿದ ಎನ್ನೋದಕ್ಕಿಂತ ಯಾರನ್ನೋ ಅಪ್ಪ ಅಂತ ಕರೆದಿದ್ದು, ಭೂಮಿಗೆ ನಿಜಕ್ಕೂ ಸಿಟ್ಟು ತರಿಸಿತ್ತು. ಹೀಗಾಗಿ ಅವಳು ಮಗನಿಗೆ ಬೈಯ್ದಳು.

55
ಆಕಾಶ್-ಗೌತಮ್‌ ದೂರ ದೂರ..
Image Credit : zee5

ಆಕಾಶ್-ಗೌತಮ್‌ ದೂರ ದೂರ..

ಆಕಾಶ್‌ ಬರ್ತ್‌ಡೇ ದಿನ ಗೌತಮ್‌ ಅವನನ್ನು ಭೇಟಿ ಮಾಡಿದ್ದಾನೆ, ಗಿಫ್ಟ್‌ ನೀಡಿದ್ದಾನೆ, ಮುಂದಿನ ದಿನಗಳಲ್ಲಿ ಇವರಿಬ್ಬರು ಇನ್ನಷ್ಟು ಹತ್ತಿರ ಆಗಲೂಬಹುದು. ಇದೇನಾದರೂ ಭೂಮಿ ಕಣ್ಣಿಗೆ ಬಿದ್ದರೆ ಗೌತಮ್‌ನನ್ನು ಅವಳು ಸುಮ್ಮನೆ ಬಿಡೋದಿಲ್ಲ. ನೀವು ನನ್ನ ಮಗನಿಂದ ದೂರ ಇರಬೇಕು, ಇಲ್ಲ ಅಂದರೆ ಬೇರೆ ನಿರ್ಧಾರ ತಗೋತೀನಿ ಅಂತ ಅವಳು ಧಮ್ಕಿ ಹಾಕಲೂಬಹುದು. ಒಟ್ಟಿನಲ್ಲಿ ಗೌತಮ್‌, ಆಕಾಶ್‌ ದೂರ ಆಗೋಕೆ ಭೂಮಿ ಕಾರಣ ಆಗಲೂಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Lakshmi Nivasa Serial Twist: ಜಯಂತ್​ಗೆ 2ನೇ ಮದುವೆ ಆಫರ್​: ಅಳಿಯನ ಮದುವೆಗೆ ಮುಂದಾದ ಜಾಹ್ನವಿ ಅಪ್ಪ!
Recommended image2
ಅಂತರ್ಜಾತಿ ಮದುವೆ; ಮನೆಯಲ್ಲಿ ಕಿರುಕುಳ; ಅನ್ನ- ನೀರಿನ ಜೊತೆಗೆ ಯುಟ್ಯೂಬ್‌ ಬಿಟ್ಟ Bigg Boss ಸ್ಪರ್ಧಿ!
Recommended image3
ಫಸ್ಟ್‌ ಮದುವೆ ಯಾಕೆ ಮುರಿದು ಬಿತ್ತು? ಸತ್ಯ ಹೇಳಿದ Lakshmi Nivasa Serial ನಟಿ ಮಾನಸಾ ಮನೋಹರ್
Related Stories
Recommended image1
Amruthadhaare Serial:‌ ದಿಯಾ ಜಯದೇವ್‌ನನ್ನು ಮದುವೆ ಆದ ಉದ್ದೇಶವೇ ಬೇರೆ; ಕಹಿಸತ್ಯ ಬಯಲು!
Recommended image2
Amruthadhaare Serial: ಕೊನೆಗೂ ವೀಕ್ಷಕರ ಆಕ್ರೋಶಕ್ಕೆ ಮಣಿದ ಅಮೃತಧಾರೆ ಡೈರೆಕ್ಟರ್!‌ ಇದು ಆಗಬೇಕಿತ್ತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved