- Home
- Entertainment
- TV Talk
- Amruthadhaare Serial: ದಿಯಾ ಜಯದೇವ್‌ನನ್ನು ಮದುವೆ ಆದ ಉದ್ದೇಶವೇ ಬೇರೆ; ಕಹಿಸತ್ಯ ಬಯಲು!
Amruthadhaare Serial: ದಿಯಾ ಜಯದೇವ್‌ನನ್ನು ಮದುವೆ ಆದ ಉದ್ದೇಶವೇ ಬೇರೆ; ಕಹಿಸತ್ಯ ಬಯಲು!
ಅಮೃತಧಾರೆ ಧಾರಾವಾಹಿಯಲ್ಲಿ ಬಂಗಾರದಂಥ ಮಲ್ಲಿಯನ್ನು ಬಿಟ್ಟು ಜಯದೇವ್ ಇನ್ನೊಂದು ಮದುವೆ ಆಗಿದ್ದಾನೆ. ದಿಯಾ ಉದ್ದೇಶ ಏನು? ದಿಯಾ ನನ್ನನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದಾಳಾ ಅಂತ ಅವನು ಎಂದಿಗೂ ತಿಳಿದುಕೊಳ್ಳಲೇ ಇಲ್ಲ. ಈಗ ಅದೇ ಅವನಿಗೆ ಮುಳುವಾಗಲಿದೆ.

ವಾರ್ನ್ ಮಾಡಿದ್ದರೂ ಜಯದೇವ್ ಹಿಂದೆ ಬಿದ್ದಳು
ದಿಯಾಗೆ ಈ ಮನೆ ಆಳಬೇಕು ಎನ್ನೋ ಉದ್ದೇಶ ಇತ್ತು. ಹೀಗಾಗಿ ಅವಳು ಜಯದೇವ್‌ನನ್ನು ಪ್ರೀತಿ ಮಾಡೋ ನಾಟಕ ಮಾಡಿದಳು. ಸಾಕಷ್ಟು ಬಾರಿ ಗೌತಮ್ ವಾರ್ನ್ ಮಾಡಿದರೂ ಅವಳು ಕೇಳದೆ, ಜಯದೇವ್ ಹಿಂದೆ ಬಿದ್ದಳು.
ಜಯದೇವ್ ಹಣೆಬರಹ ಗೊತ್ತಿತ್ತು
ನನ್ನ ಬಿಟ್ಟ ಹಾಗೆ ನಿಮ್ಮನ್ನು ಬಿಡ್ತಾರೆ, ನೋಡ್ತಿರಿ ಅಂತ ಮಲ್ಲಿ, ದಿಯಾಗೆ ವಾರ್ನ್ ಮಾಡಿದ್ದಳು. ಅದನ್ನು ಅವಳು ಕೇಳಲಿಲ್ಲ. ಮದುವೆ ಆಗಿರೋ ಜಯದೇವ್ ತನ್ನ ಹಿಂದೆ ಬಿದ್ದಿದ್ದಾನೆ, ಮಲ್ಲಿಯನ್ನು ಮದುವೆ ಆಗೋ ಮುನ್ನ ಅವನು ಮಲ್ಲಿಯನ್ನು ಪ್ರಗ್ನೆಂಟ್ ಮಾಡಿದ್ದ ಎನ್ನೋದು ಗೊತ್ತಿದ್ದೂ ಕೂಡ, ದಿಯಾ ಅವನನ್ನು ಮದುವೆ ಆದಳು.
ದುಡ್ಡು ಖಾಲಿ ಮಾಡ್ತಿರೋ ಜಯದೇವ್, ಶಕುಂತಲಾ
ಇನ್ನು ಶಕುಂತಲಾ ಹಾಗೂ ಜಯದೇವ್ ಮಾತ್ರ ಸ್ವಲ್ಪವೂ ದುಡಿಯದೆ, ಇರೋ ದುಡ್ಡನ್ನೆಲ್ಲ ಖಾಲಿ ಮಾಡುತ್ತಾರೆ. ನೀರು ಕೂಡ ಖಾಲಿಯಾಗುತ್ತದೆ ಎಂದು ತಿಳಿದು, ಖರ್ಚು ಮಾಡೋದುಂಟು. ಆದರೆ ಇಲ್ಲಿ ಅವರು ಬಟ್ಟೆ ಖರೀದಿ ಮಾಡುವಾಗ ಎಷ್ಟು ಬೆಲೆ ಆಗತ್ತೆ ಅಂತ ಕೇಳದೆ ಖರೀದಿ ಮಾಡ್ತಾರೆ.
ಪಾರ್ಥ, ಅಪೇಕ್ಷಾಗೆ ಬೇಸರ
ಈಗೊಂದು ಪಾರ್ಟಿ ಇಟ್ಟಿದ್ದಾರೆ. ಅದಕ್ಕೋಸ್ಕರ ಶಕುಂತಲಾ ಎಲ್ಲರಿಗೂ ಡಿಸೈನರ್ ಡ್ರೆಸ್ ರೆಡಿ ಮಾಡಿಸುತ್ತಿದ್ದಾಳೆ. ಮನೆಗೆ ಡಿಸೈನರ್‌ನ್ನು ಕರೆಸಿ ಡ್ರೆಸ್ ಸೆಲೆಕ್ಟ್ ಮಾಡುತ್ತಿದ್ದಾಳೆ. ರೇಟ್ ಎಷ್ಟಾದರೂ ಪರವಾಗಿಲ್ಲ, ನಮಗೆ ಡ್ರೆಸ್ ಬೇಕು ಎಂದು ಜಯದೇವ್ ಹೇಳಿದ್ದನು. ಈ ರೀತಿ ಹಣ ಖರ್ಚು ಮಾಡುವುದು ಅಪೇಕ್ಷಾ, ಪಾರ್ಥಗೆ ಸಿಟ್ಟು ತರಿಸಿದೆ.
ದಿಯಾಗೆ ಬೇಸರ!
ಶಕುಂತಲಾಳೇ ದಿಯಾಗೆ ಡ್ರೆಸ್ ಸೆಲೆಕ್ಟ್ ಮಾಡಿದ್ದಳು. ಆ ಡ್ರೆಸ್ ದಿಯಾಗೆ ಇಷ್ಟವಿರಲಿಲ್ಲ. ಶಕುಂತಲಾ ಡ್ರೆಸ್ ಸೆಲೆಕ್ಟ್ ಮಾಡಿರೋದು ದಿಯಾಗೆ ಸಿಟ್ಟು ತರಿಸಿದೆ. ಇದಾದ ಬಳಿಕ, ಅವಳು ಜಯದೇವ್ ಬಳಿ ಕಂಪ್ಲೆಂಟ್ ಮಾಡಿದ್ದಾಳೆ. “ನನಗೆ ಡ್ರೆಸ್ ಸೆಲೆಕ್ಟ್ ಮಾಡೋ ಸ್ವಾತಂತ್ರ್ಯ ಇಲ್ಲ” ಎಂದು ಹೇಳಿದ್ದಾಳೆ. ಆಗ ಜಯದೇವ್, “ನಮಗಿಂತ ದೊಡ್ಡವರು, ಹೀಗಾಗಿ ನಾವು ಗೌರವ ಕೊಡಬೇಕು. ನಾವು ಅವರ ಮಾತನ್ನು ಕೇಳಬೇಕಾಗುತ್ತದೆ, ಒಂದು ಡ್ರೆಸ್ ವಿಷಯ ಆಗಿದ್ದಕ್ಕೆ ಸುಮ್ಮನಿರು” ಎಂದು ಸಮಾಧಾನ ಮಾಡಿದ್ದಾರೆ.